UNIVERSAL LIBRARY ೧೧ OU 19862 AdVddl | IVSHAINN |? ಸವಾ ್‌ಪಲ್ಟಾ್ಮ ನರಿಯ ಬಾಲ ಮ by ಬ್ಯ Ks ( ೫) # ತ್ರ NG ನ್‌್‌ ಇಕೆ ಮಾ ಮಾ ಅಜ ಬ ತ್ನ | ಸ KO ಸ | ಬ್ಲ ಬಿ. ಬಿ. ಡಿ ಪನರ್‌ ಪ್ರೆಸ್‌ | 2 ಬೆಂಗಳೂರು ನಗರ ನರಿಯ ಬಾಲ ಬಿ. ಬಿ. ಡಿ. ಪವರ್‌ ಪ್ರೆಸ್‌ ಬೆಂಗಳೂರು ನಗರ ೧೯೪೧ ಪೌತೋಪರ ಗ್ರಂಥ ಭಾಂತಾಕ ಧಾರವಾಡ [ಈ ಪುಸ್ತಕದ ಎಲ್ಲಾ ಹಕ್ಕೂ ಗ್ರಂಥಕರ್ತರದು] ರತ್ನನ ಶಿಶುಸಾಹಿತ್ಯ ತುತ್ತೂರಿ ಕಡಲೆಪುರಿ ಚುಟಿಕ ಗುಲಗಂಜಿ ಫೆನೆಹಾಲು ಕಲ್ಲು ಸಕ್ಕರೆ ಕೋಳಿಕಳ್ಳ. ರತ್ನನ ಬಾಲಸಾಹಿತ್ಯ ಗೌತಮ ಬುದ್ಧ ಯೇಸು ಕ್ರಿಸ್ತ ಶ್ರೀ ರಾಮಚಂದ್ರ ನರಿಯ ಬಾಲ ಅಶೋಕ ಮೌರ್ಯ ದಾನವೀರ ವಿಶ್ವಂತರ ಶ್ರೀ ಹರ್ಷ ಪಂಚಾಯುಧ ದೊರೆಯುವ ಸ್ಥಳಗಳು ಸತ್ಯಶೋಧನ ಪುಸ್ತ ಕ ಭಂಡಾರ, ಕೋಟೆ ಬೆಂಗಳೂರು. ಪ್ರೋಗ್ರೆಸ್‌ ಬುಕ್‌ಸ್ಟಾಲ್‌, ಮೈಸೂರು. ಜೀವನ ಪುಸ್ತಕಾಲಯ, ಧಾರವಾಡ. ಅರಿಕೆ ಜಗತ್ತಿನ ಬಾಲಸಾಹಿತ್ಯದಲ್ಲಿರುವ ಅತ್ಯುತ್ತಮವಾದ ಕತೆಗಳನ್ನು ನಮ್ಮ ಕನ್ನಡದ ಮಕ್ಕಳಿಗೆ ಒದಗಿಸಬೇಕೆಂಬುದು ನನಗಿರುವ ಸಣ್ಣ ಪುಟ್ಟ. ಕನಸುಗಳಲ್ಲಿ ಸಖಿ ಈ ಕನಸಿನಲ್ಲಿ ಕಂಡುದನ್ನು ಕಣ್ಣಾರೆ ಕಾಣುವುದಕ್ಕೆ ಈ ಪುಸ್ತಕದಲ್ಲಿ ಮೊದಲುಮಾಡಿದ್ದೇನೆ. ಇದರಲ್ಲಿಯ ನಾಲ್ಕು ಕತೆಗಳೂ ಇಂಗ್ಲಿಷು ಬಾಲಸಾಹಿತ್ಯದಲ್ಲಿ ಬಹಳ ಪ್ರಸಿದ್ಧ ವಾದುವು. ಇವುಗಳಲ್ಲಿ ನೊದಲಿನ ಎರಡೂ " ಗ್ರಿಮ್ಸ್‌ ಫೇರಿ ಟೀಲ್‌ ಇಂದ ತೆಗೆದುನು. ಮೂರನೆಯದು, ಸಗ, ಹೈಂಡ್‌ ಆಫ್‌ ದಿಫ ಫಾರೆಸ್ಟ್‌ ಎಂಬುದರ ರೂಪಾಂತರ. ಕಡೆಯದು" ಕೇನಾರ್ಡ್‌'ನಿ ಫಾಕ್ಸ್‌” ಎಂಬುದರ ಕನ್ನಡರೂಸ. ಈ ಪುಸ್ತಕವೂ ಇದರ ಜೊತೆಗೆ ಬಂದಿರುವ ಇತರ ಬಾಲ ಸಾಹಿತ್ಯವೂ ಮಕ್ಕಳ ಕೈಯಲ್ಲಿ ಬೆಳೆಯಲೆಂದು ಬಯಸುತ್ತೇನೆ. ಆ ಬಯಕೆಯಿಂದಲೇ ಈ " ಬಾಲಸಾಹಿತ್ಯ?ವನ್ನು ನಮ್ಮ ಕನ್ನಡನಾಡಿನ ಮಕ್ಕಳಿಗೆ ವಿಶ್ವಾಸದಿಂದ ಒಪ್ಪಿಸುತ್ತೇನೆ. ಮಾರ್ಚ್‌, ೧೯೪೧ ಮಲ್ಲೇಶ್ವರಂ | ರಾಜರತ್ನಂ, lo ವಿವರ ನರಿಯ ಬಾಲ ಇಬ್ಬರು ಸಜೋದರರು ಹರಿಣೀ ರಾಯನರಿ ಪ್ರಟ ೧೨ ಷಲ ೬ಡಿ ೧. ನರಿಯ ಬಾಲ ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಂದು ಸೊಗಸಾದ ತೋಟವಿತ್ತು. ಆ ತೋಟದಲ್ಲಿ ಚಿನ್ನದ ಸೇಬಿನ ಹಣ್ಣಿನ ಒಂದು ಮರವಿತ್ತು. ಆ ಮರದ ಸೇಬುಗಳನ್ನು ಯಾರೂ ಕದಿಯದ ಹಾಗೆ ರಾಜನು ಅವುಗಳನ್ನು ದಿನವೂ ಎಣಿಸುತ್ತಿದ್ದನು. ಆದರೆ ಅವು ಹಣ್ಣಾಗುವ ಕಾಲ ಬಂದಾಗ ಪ್ರತಿರಾತ್ರಿಯೂ ಒಂದೊಂದು ಸೇಬು ಮಾಯವಾಗುತ್ತಿತ್ತು. ಅದಕ್ಕಾಗಿ ರಾಜನು ಬಹಳ ಕೋಪಗೊಂಡು, ರಾತ್ರಿಯೆಲ್ಲಾ ಮರದ ಕೆಳಗೆ ಕಾವಲಿರಬೇಕೆಂದು ತೋಟಗಾರನಿಗೆ ಹೇಳಿದನು. | ತೋಟಗಾರನು ತೋಟದ ಕಾವಲಿಗೆ ತನ್ನ ದೊಡ್ಡ ಮಗನನ್ನು ನೇಮಿಸಿದನು. ಆದರೆ ರಾತ್ರಿ ಹೆನ್ನೆರಡು ಗಂಟೆಯ ಸುಮಾರಿಗೆ ಅವನು ನಿದ್ದೆ ಹೋದನು. ಬೆಳಗಿನ ವೇಳೆಗೆ ಒಂದು ಸೇಬು ಮಾಯವಾಗಿತ್ತು. ಅನಂತರ ಎರಡನೆಯ ಮಗನನ್ನು ಕಾವಲಿಗೆ ನೇಮಿಸಿದನು. ಅವನೂ ಮಧ್ಯರಾತ್ರಿಯ ವೇಳೆಗೆ ನಿದ್ದೆ ಹೋದನು. ಬೆಳಗಾಗುವ ಹೊತ್ತಿಗೆ ಇನ್ನೊಂದು ಸೇಬು ಇಲ್ಲವಾಗಿತ್ತು. ಬಳಿಕ ಮೂರನೆಯ ಮಗನು ತಾನು ಕಾವಲಿರುವೆನೆಂದು ಬೇಡಿ ದನು. ಆದರೆ ಅವನಿಗೆ ಏನಾದರೂ ಕೇಡಾಗಬಹುದೆಂಬ ಭಯದಿಂದ ತೋಟ ಗಾರನು ಅವನಿಗೆ ಅಪ್ಪಣೆಕೊಡಲು ಇಷ್ಟ ಪಡಲಿಲ್ಲ. ಹುಡುಗನು ಬಹಳ ಕೇಳಿದ ಮೇಲೆ, ಕೊನೆಗೆ ಒಪ್ಪಿ ದನು. ಮೂರನೆಯ ಮಗನು ಕಾವಲಿರಬೇಕಾದ ಮರದ ಕೆಳಗೆ ಮಲಗಿದನು. ಗಡಿಯಾರದಲ್ಲಿ ಹನ್ನೆರಡು ಹೊಡೆಯಿತು. ಗಾಳಿಯಲ್ಲಿ ಏನೋ ಗಳಗಳ ಶಬ್ದ ಕೇಳಿ ಬಂತು. ಒಂದು ಹಕ್ಕಿ ಹಾರುತ್ತಾ ಬಂದು ಸೇಬಿನ ಮರದ ಮೇಲೆ ಕುಳಿತುಕೊಂಡಿತು. ಆ ಹಕ್ಕಿಯ ರಿಕ್ಕೆಗಳು ಅಪ್ಪಟ ಚಿನ್ನ ದಿಂದಾಗಿತ್ತು. ಅದು ತನ್ನ ಕೊಕ್ಕಿನಿಂದ ಒಂದು ಸೇಬನ್ನು ಫಕ್ಕನೆ ಕಚ್ಚುತ್ತಿದ್ದಾಗ, ತೋಟಗಾರನ ಮಗನು ಮೇಲೆದ್ದು ಅದರ ಕಡೆಗೆ ಒಂದು ಬಾಣ ಬಿಟ್ಟಿ ನು. ಆದರೆ ಆ ಬಾಣದಿಂದ ಆ ಹಕ್ಕಿಗೆ ೨ ನರಿಯ ಬಾಲ ಏನೂ ಕೇಡಾಗಲಿಲ್ಲ. ಅದು ತನ್ನ ಪಕ್ಕದಿಂದ ಒಂದು ಚಿನ್ನದ ಗರಿ ಯನ್ನು ಮಾತ್ರ ಬೀಳಿಸಿ, ಹಾರಿಹೋಯಿತು: ಅವನು ಆ ಚಿನ್ನದ ಗರಿಯನ್ನು ರಾಜನ ಹತ್ತಿರ ತಂದನು. ಪರಿ ವಾರದವರೆಲ್ಲ ಸುತ್ತಲೂ ಬಂದರು. ಅಂತಹ ಅಂದವಾದ ಗರಿಯನ್ನು ಅದುವರೆಗೆ ಅವರು ಯಾರೂ ಕಂಡಿರಲಿಲ್ಲ. ಅದು ಬಹಳ ಬೆಲೆ ಬಾಳ ತಕ್ಕುದೆಂದು ಎಲ್ಲರೂ ಒಪ್ಪಿಕೊಂಡರು. ಆದರೆ ರಾಜನು ಮಾತ್ರ ಒಂದು ಗರಿಯಿಂದ ನನಗೆ ಏನು ಉಪಯೋಗ? ನಾನು ಪೂರ್ಣ ಪಕ್ಷಿಯನ್ನೇ ಪಡೆಯಬೇಕು. ಪಡೆದೇ ಪಡೆಯುತ್ತೇನೆ” ಎಂದನು. ತೋಟಗಾರನ ಹಿರಿಯ ಮಗನು ಚಿನ್ನದ ಹಕ್ಕಿಯನ್ನು ಹುಡು ಕಲು ಹೊರಟನು. ಅದನ್ನು ಕಾಣುವುದು ಬಹಳ ಸುಲಭವೆಂದು ಅವನು ತಿಳಿದುಕೊಂಡಿದ್ದನು. ಸ್ವಲ್ಪ ದೂರ ಹೋಗುವುದರಲ್ಲಿ ಒಂದು ಕಾಡು ಸಿಕ್ಕಿತು. ಅದರ ಒಂದು ಪಕ್ಕದಲ್ಲಿ ಒಂದು ನರಿ ಕುಳಿತಿತ್ತು. ಹಿರಿ ಯವನಿಗೆ ಇನ್ನೂ ಹುಡುಗಾಟ. ತನ್ನ ಬಿಲ್ಲನ್ನು ಎಳೆದು ಅದರ ಕಡೆಗೆ ಬಾಣ ಹೊಡಿದನು. ನರಿ ಅದನ್ನು ಕಂಡು “ ಅಯ್ಯಾ, ಅಯ್ಯಾ, ನನ್ನನ್ನು ಹೊಡೆಯ ಬೇಡ. ನಾನು ನಿನಗೆ ಒಳ್ಳೆಯ ಸಲಹೆ ಕೊಡುತ್ತೇನೆ. ನೀನು ಹೊರಟರುವ ಕೆಲಸವೇನೆಂಬುದು ನನಗೆ ಗೊತ್ತು. ನೀನು ಚಿನ್ನದ ಹಕ್ಕಿಯನ್ನು ಕಾಣಬೇಕೆಂದು ಬಯಸುತ್ತೀಯೆ. ಈ ದಿನ ಸಂಜೆ ನೀನು ಒಂದು ಹಳ್ಳಿಯನ್ನು ತಲಪುತ್ತೀಯೆ. ಆ ಹಳ್ಳಿಯಲ್ಲಿ, ರಸ್ತೆಯ ಎರಡು ಪಕ್ಕ ಗಳಲ್ಲಿಯೂ ಕಟ್ಟಿರುವ ಎರಡು ಅನ್ರಸತ್ರಗಳನ್ನು ಕಾಣು ತ್ತ್ರೀಯೆ. ಬಲಗಡೆಯಲ್ಲಿರುವುದು ನೋಟಕ್ಕೆ ಅಂದವಾಗಿ ಮನೋಹರ ವಾಗಿದೆ; ಆದರೆ ಅದರ ಒಳಗೆ ಹೋಗಬೇಡ. ಇನ್ನೊಂದು ಪಾಳು ಪಾಳಾಗಿ ಬಡಕಲಾಗಿ ಕಂಡುಬಂದರೂ ರಾತ್ರಿ ಅಲ್ಲಿಯೇ ವಿಶ್ರಮಿಸಿಕೊ” ಎಂದು ಕೂಗಿ ಹೇಳಿತು. ಆದರೆ ಅನನು ಅದರ ಮಾತನ್ನು ಗಮನಿಸಲಿಲ್ಲ. «ಈ ವಿಚಾರ ಗಳು ಇಂತಹ ಪ್ರಾಣಿಗೆ ಏನು ಗೊತ್ತು?” ಎಂದು ಆ ತಿಳಿಗೇಡಿ ತನ್ನ ನರಿಯ ಬಾಲ ಕ ಬಿಲ್ಲನ್ನು ನರಿಯ ಕಡೆ ತಿರುಗಿಸಿ ಬಾಣ ಬಿಟ್ಟಿ ನು. ನರಿ ಪಕ್ಕಕ್ಕೆ ನೆಗೆದು ತಪ್ಪಿಸಿಕೊಂಡಿತು. ತಪ್ಪಿಸಿಕೊಂಡು, ಅವನ ಕಡೆ ನೋಡಿ ನಗುತ್ತಾ ತನ್ನ ಬಾಲವನ್ನು ಬೆನ್ನಮೇಲೆ ಹಾಕಿಕೊಂಡು ಕಾಡಿನೊಳಕ್ಕೆ ಓಡಿ ಹೋಯಿತು. ಯುವಕನು ತನ್ನ ದಾರಿಹಿಡಿದನು. ಸಂಜೆಯ ವೇಳೆಗೆ ಎರಡು ಅನ್ನಸತ್ರ ಗಳಿದ್ದ ಹಳ್ಳಿಗೆ ಬಂದನು. ಬಲಗಡೆಯದರಲ್ಲಿ ಜನರು ಹಾಡುತ್ತಾ ಸಂತೋಷಪಡುತ್ತಿದ್ದರು. ಇನ್ನೊಂದು ಬಹಳ ಕೊಳಕುಕೊಳಕಾಗಿತ್ತು. “ಇಂತಹ ಮನೋಹರವಾದ ಸತ್ರವನ್ನು ಬಿಟ್ಟು ಈ ಪಾಳಿಗೆ ಹೋಗು ವುದಕ್ಕೆ ನನಗೇನೂ ಬುದ್ದಿ ಕೆಟ್ಟ ಲ್ಲ? ಎಂದುಕೊಂಡು ಅವನು ಆ ಬಲ ಗಡೆಯ ಸತ್ರಕ್ಕೆ ಹೋದನು. ಅಲ್ಲಿ ಬೇಕಾದ ಹಾಗೆ ತಿಂದನು, ಕುಡಿ ದನು. ತನ್ನ ದೇಶವನ್ನೂ ತಾನು ಹಕ್ಕಿ ಹುಡುಕುತ್ತ ಬಂದುದನ್ನೂ ಮರೆತು, ಅಲ್ಲಿಯೇ ನೆಲಸಿದನು. ಕೊಂಚ ಕಾಲ ಕಳೆಯಿತು. ತೋಟಗಾರನ ಹಿರಿಯಮಗ ಹಿಂದಿರುಗಲೂ ಇಲ್ಲ, ಅವನ ಸುದ್ದಿ ತಿಳಿದುಬರಲೂ ಇಲ್ಲ. ಅದರಿಂದ ಎರಡನೆಯ ಮಗ ತಾನೂ ಹೊರಟನು. ಅವನಿಗೂ ಮೊದಲನೆಯವನಿಗೆ ಆದಂತೆಯೇ ಆಯಿತು. ಕಾಡುದಾರಿಯ ಪಕ್ಕದ ನರಿ ಅವನಿಗೂ ಎದು ರಾಯಿತು. ಅವನ ಅಣ್ಣನಿಗೆ ಹೇಳಿದ ಬುದ್ಧಿವಾದವನ್ನೇ ಅವನಿಗೂ ಹೇಳಿತು. ಅವನೂ ಆ ಎರಡು ಅನ್ನಸತ್ರಗಳ ಹಳ್ಳಿಗೆ ಬಂದನು. ಅವನ ಅಣ್ಣ ಬಲಗಡೆಯ ಮನೆಯ ಕಿಟಿಕಿಯ ಹೆತ್ತಿರ ನಿಂತಿದ್ದನು. ತಮ್ಮನನ್ನು ಕಂಡು ಒಳಗೆ ಕರೆದನು. ತಮ್ಮನು ಅಲ್ಲಿಗೆ ಹೋಗಬೇಕೆಂಬ ಆಸೆಯನ್ನು ಎದುರಿಸಲಾರದೆ ಒಳೆಗೆ ಹೋದನು. ಅಲ್ಲಿ ಇದ್ದವರ ಜೊತೆ ಯಲ್ಲಿ ತಿಂದೂ ಕುಡಿದೂ ಅವರಂತೆಯೇ ತನ್ನ ದೇಶವನ್ನೂ ತಾನು ಚಿನ್ನದ ಪಕ್ಷಿಗಾಗಿ ಬಂದುದನ್ನೂ ಮರೆತನು. ಇನ್ನೂ ಕೊಂಚ ಕಾಲ ಕಳೆದೆ ಬಳಿಕ್ಕ ಚಿನ್ನದ ಹಕ್ಕಿಯನ್ನು CERN ಬರುವುದಕ್ಕೋಸ್ಟರ ಹೋಗಬೇಕೆಂದು ಕಡೆಯ ಮಗನೂ ಆಸೆಪಟ್ಟ ನು. ಆದರೆ ತಂದೆಗೆ ಅವನನ್ನು ಕಂಡರೆ ಬಹಳ ಪ್ರೀತಿ. ¢ ನರಿಯ ಬಾಲ ಆದ್ದರಿಂದ ಅವನಿಗೂ ಏನಾದರೂ ಕೇಡು ತಾಗಿ ಅವನೂ ಹಿಂದಿರುಗದಿರ ಬಹುದೆಂಬ ಭಯದಿಂದ ಬಹಳಕಾಲ ಅವನ ಪ್ರಾರ್ಥನೆಗೆ ಕಿವಿಗೊಡಲಿಲ್ಲ. ಆದರೆ ಕಡೆಯಲ್ಲಿ ಮಗನ ಹಟವೇ ಗೆದ್ದಿತು. ಅವನಿಗೆ ಮನೆಯಲ್ಲಿ ಸಮಾಧಾನವಿಲ್ಲದುದನ್ನು ಕಂಡು ತಂದೆಯು ಅವನನ್ನು ಕಳುಹಿಸಲು ಒಪ್ಪಿದನು. ಮೂರನೆಯ ಮಗನು ಹಿಂದಿನವರು ದಾಟದ ಕಾಡಿಗೆ ತಾನೂ ಬಂದಾಗ, ಅವನ ಅಣ್ಣಂದಿರಿಗೆ ಒಳ್ಳೆಯ ಬುದ್ಧಿವಾದವನ್ನು ಹೇಳಿದ ನರಿ ಅವನಿಗೂ ಎದುರಾಯಿತು. ಆದರೆ ಅವನು ಮಾತ್ರ ನರಿಯ ಬುದ್ದಿ ವಾದಕ್ಕೆ ಕೃತಜ್ಞ ನಾಗಿ, ತನ್ನ ಅಣ್ಣಂದಿರು ಮಾಡಿದ ಹಾಗೆ ಅದರ ಕ ಬಾಣ ಬಿಡಲಿಲ್ಲ. ನರಿ ಅದನ್ನು ಕಂಡು “ ನನ್ನ ಬಾಲದ ಮೇಲೆ ಕುಳಿತುಕೊ. ನೀನು ಬಹು ವೇಗವಾಗಿ ಪ್ರಯಾಣಮಾಡಬಹುದು * ಎಂದಿತು. ಅವನು ಹಾಗೆಯೇ ಅದರ ಬಾಲದ ಮೇಲೆ ಕುಳಿತನು. ನರಿ ಓಡತೊಡಗಿತು. ಅದು ಓಡಿದ ರಭಸಕ್ಕೆ ಅವನ ಕೂದಲು ಗಾಳಿಯಲ್ಲಿ ಭಕ್ರಿಂದು ಆಡುತ್ತಿತ್ತು. ಹಾಗೆಯೇ ಅವರು ತಗ್ಗು ತಿಟ್ಟುಗಳನ್ನು ದಾಟ ದೂರ ಹೋದರು. ನರಿಯೂ ಮೂರನೆಯ ಮಗನೂ ಆ ಎರಡು ಸತ್ರಗಳ ಹಳ್ಳಿಗೆ ಬಂದರು. ನರಿಯ ಬುದ್ಧಿವಾದವನ್ನು ಅನುಸರಿಸುವಷ್ಟು ಬುದ್ಧಿ ಅವನಿಗೆ ಇತ್ತು. ಬಲಗಡೆಯ ಅನ್ನಸತ್ರದ ಕಡೆ ತಿರುಗಿ ಕೂಡ ನೋಡದೆ ಎಡ ಗಡೆಯ ಪಾಳುಸತ್ರಕ್ಕೆ ಹೋಗಿ ರಾತ್ರಿಯೆಲ್ಲಾ ಬೇಕಾದಂತೆ ವಿಶ್ರಮಿಸಿ ಕೊಂಡನು. ಬೆಳಗಾಗುವ ಹೊತ್ತಿಗೆ ನರಿ ಪುನಃ ಬಂದಿತು. ಬಂದು, ಅವನು ಪ್ರಯಾಣಕ್ಕೆ ಸಿದ್ಧವಾಗುತ್ತಿರುವಾಗ “ ಮುಂದೆ ಒಂದು ಅರಮನೆ ಸಿಕ್ಕು ತ್ತದೆ. ಅಲ್ಲಿ ಒಂದು ದೊಡ್ಡಸೇನೆ ಗೊರಕ್ಕೆ ಬಿಡುತ್ತ ಮಲಗಿರುತ್ತದೆ. ಆ ಸೇನೆಯನ್ನು ನೀನು ಗಮನಿಸಬೇಡ. ನೇರವಾಗಿ ಅರಮನೆಯೊಳಕ್ಕೆ ಹೋಗು. ಒಂದು ಮರದ ಪಂಜರದಲ್ಲಿ ಆ ಚಿನ್ನದ ಹಕ್ಕಿ ಯಿರುವ ಕೋಣೆ ಸಿಕ್ಕುವ ವರೆಗೂ ಹೋಗು. ಆ ಮರದ ಪಂಜರದ ಬಳಿ ಯಲ್ಲಿಯೇ ಒಂದು ಅಂದವಾದ ಚಿನ್ನದ ಪಂಜರವಿದೆ, ಆದರೆ ಆ ಹಕ್ಕಿ ನರಿಯ ಬಾಲ ೫ ಯನ್ನು ಮರದ ಪಂಜರದಿಂದ ತೆಗೆದು ಚಿನ್ನದ ಪಂಜರದಲ್ಲಿ ಇಡಲು ಯತ್ನಿಸಬೇಡ. ಹಾಗೆ ಮಾಡಿದರೆ, ಆಮೇಲೆ ದುಃಖಸಡುತ್ತೀಯೆ” ಎಂದು ಹೇಳಿ, ಪುನಃ ತನ್ನ ಬಾಲವನ್ನು ಚಾಚಿತು. ಹುಡುಗನು ಅದರ : ಮೇಲೆ ಕುಳಿತುಕೊಂಡನು. ಅವರು ಪುನಃ ತಗ್ಗು ತಿಟ್ಟುಗಳನ್ನು ದಾಟ ದೂರಹೋದರು. ಅರಮನೆಯ ಬಾಗಿಲಿನ ಮುಂದೆ ಎಲ್ಲವೂ ನರಿಯು ಹೇಳಿದ ಹಾಗೆಯೆ ಇತ್ತು. ಹುಡುಗನು ಒಳಗೆ ಹೋದನು. ಮರದ ಪಂಜರ ದಲ್ಲಿ ಚಿನ್ನದ ಹಕ್ಕಿಯಿದ್ದ ಕೊಠಡಿಯನ್ನು ಸೇರಿದನು. ಕೆಳಗೆ ಚಿನ್ನದ ಪಂಜರವಿತ್ತು. ಪಕ್ಕ ದಲ್ಲಿ, ತೋಟದಿಂದ ಕಳೆದುಹೋಗಿದ್ದ ಮೂರು ಚಿನ್ನದ ಸೇಬುಗಳು ಬಿದ್ದಿದ್ದುವು. ಅವನು “ ಇಂಥ ಅಂದವಾದ ಹಕ್ಕಿ ಯನ್ನು ಇಂಥ ದರಿದ್ರ ಪಂಜರದಲ್ಲಿ ಒಯ್ಯುವುದು ನಗೆಗೀಡು” ಎಂದು ಚಿಂತಿಸಿ, ಮರದ ಪಂಜರದ ಬಾಗಿಲು ತೆಗೆದು ಹಕ್ಕಿಯನ್ನು ಹಿಡಿದು ಚಿನ್ನದ ಪಂಜರದಲ್ಲಿರಿಸಿದನು. ಒಡನೆ ಆ ಹಕ್ಕಿ ಕಿರಿಚಿಕೊಂಡಿತು. ಆ ಕೂಗು ಕೇಳಿ ಸೈನಿಕರೆಲ್ಲ ಎದ್ದರು. ಅವನನ್ನು ಸೆರೆಹಿಡಿದು ರಾಜನ ಬಳಿಗೆ ಒಯ್ದರು. ಮರುದಿನ ರಾಜನ ಪರಿವಾರ ವಿಚಾರಣೆಗೆ ಕುಳಿತುಕೊಂಡಿತು. ವಿಚಾರಣೆಯಾಯಿತು. “ ಹುಡುಗನು ಗಾಳಿಯಂತೆ ವೇಗವಾದ ಚಿನ್ನದ ಕುದುರೆಯನ್ನು ತರಬೇಕು. ತರದಿದ್ದರೆ ಸಾಯಬೇಕು. ತಂದರೆ ಅವನಿಗೆ ಚಿನ್ನದ ಹಕ್ಕಿಯನ್ನು ಕೊಡಬೇಕು” ಎಂದು ತೀರ್ಮಾನವಾಯಿತು. ಹುಡುಗನು ತನ್ನ ಆಸೆ ಹಾಳಾದುದಕ್ಕೆ ದುಃಖಪಡುತ್ತ ನಿಟ್ಟು ಸಿರುಬಿಡುತ್ತ ಮುಂದೆ ಹೊರಟನು. ದಾರಿಯಲ್ಲಿ ಅವನಿಗೆ ಬುದ್ಧಿ ಹೇಳಿದ ನರಿ ಸಿಕ್ಕಿತು. ಅವನನ್ನು ಕುರಿತು “ಅಯ್ಯಾ, ಒಳ್ಳೆಯ ಕೆಲಸ ಮಾಡಿದೆ! ನನ್ನ ಸಲಹೆಗೆ ಕಿವಿ ಕೊಡದುದರಿಂದ ಏನೇನು ಸಂಭವಿಸಿತ್ಕು ನೋಡು. ಈಗಲಾದರೂ ನಾನು ಹೇಳುವುದನ್ನು ಕೇಳು. ಚಿನ್ನದ ಕುದುರೆ ಹೇಗೆ ದೊರಕುವುದೆಂಬುದನ್ನು ಹೇಳಿಕೊಡುತ್ತೇನೆ. ಮುಂದೆ ಒಂದು ಅರ ಮನೆ ಸಿಕ್ಕುತ್ತದೆ. ಅಲ್ಲಿಯ ಲಾಯದಲ್ಲಿ ಆ ಕುದುರೆ ನಿಂತಿರುತ್ತದೆ. ನೆಟ್ಟಗೆ ಅದರ ಬಳಿಗೆ ಹೋಗು. ಅದರ ಪಕ್ಕದಲ್ಲಿ ಕಾವಲುಗಾರನು ೬ ನರಿಯ ಬಾಲ ಗೊರಕೆಬಿಡುತ್ತ. ಮಲಗಿರುತ್ತಾನೆ. ಕುದುರೆಯನ್ನು ಮೆಲ್ಲಗೆ ಕರಿದು ಕೊಂಡು ಬಂದು ಬಿಡು. ಆದರ್ಕೆ ಜೋಕೆ. ಅದರ ಬೆನ್ನಮೇಲಿರುವ ಹಳೆಯ ಚಕ್ಕಳದ ಜೀನು ತೆಗೆಯಬೇಡ, ಅದರ ಹತ್ತಿರವಿರುವ ಚಿನ್ನದ ಜೀನು ಹಾಕಬೇಡ” ಎಂದಿತು. ಹುಡುಗನು ಹಾಗೆಯೇ ಆಗಲೆಂದು ಅದರ ಬಾಲದ ಮೇಲೆ ಕುಳಿತುಕೊಂಡನು. ಅವರು ಪುನಃ ತಗ್ಗು ತಿಟ್ಟು ಗಳನ್ನು ದಾಟ ದೂರ ಹೋದರು. ಎಲ್ಲವೂ ನರಿ ಹೇಳಿದಂತೆಯೆ ಇತ್ತು. ಕಾವಲುಗಾರನು ತನ್ನ ಕೈಯನ್ನು ಚಿನ್ನದ ಜೀನಿನ ಮೇಲಿಟ್ಟುಕೊಂಡು ಗೊರಕೆ ಹೊಡೆಯುತ್ತ ಮಲಗಿದ್ದನು. ಕುದುರೆಯನ್ನು ನೋಡಿದಾಗ ಅದನ್ನು ಹಾಗೆಯೇ ಚಕ್ಕಳದ ಜೀನಿನೊಡನೆ ಕರೆತರುವುದಕ್ಕೆ ಮನಸ್ಸು ಬರಲಿಲ್ಲ. "ಇದಕ್ಕೆ ಒಳ್ಳೆಯ ಜೀನು ಹಾಕುತ್ತೇನೆ. ಚಿನ್ನದ ಜೀನೇ ಇದಕ್ಕೆ ಯೋಗ್ಯ ವಾದುದು? ಎಂದುಕೊಂಡು ಚಿನ್ನದ ಜೀನನ್ನು ತೆಗೆದುಕೊಂಡಾಗ ಕಾವಲುಗಾರನಿಗೆ ಎಚ್ಚರವಾಯಿತು. ಅವನ ಕೂಗು ಕೇಳಿ ಉಳಿದ ಕಾವಲುಗಾರರೆಲ್ಲರೂ ಓಡಿಬಂದು ಅವನನ್ನು ಸಿರೆಹಿಡಿದರು. ಮಾರನೆಯ ಬೆಳಗ್ಗೆ ಅವನನ್ನು ವಿಚಾರಿಸುವುದಕ್ಕಾಗಿ ರಾಜನ ಪರಿವಾರ ಸೇರಿತು. ಪುನಃ ಅವನಿಗೆ ಮರಣದಂಡನೆ ವಿಧಿಯಾಯಿತು. ಆದರೆ ಅವನು ಸುಂದರರಾಜಕುಮಾರಿಯನ್ನು ಕರೆದುತಂದರೆ, ತಾನೂ ಜೀವದಿಂದ ಉಳಿದು ಕುದುರೆಯನ್ನೂ ಕೊಂಡುಹೋಗಬಹುದೆಂದು ತೀರ್ಮಾನಿಸಿ ದರು. ಹುಡುಗನು ಪುನಃ ವ್ಯಸನಪಡುತ್ತ ತನ್ನ ದಾರಿ ತಾನು ಹಿಡಿದನು. ಪುನಃ ಅದೇ ನರಿ ಅವನಿಗೆ ದಾರಿಯಲ್ಲಿ ಎದುರಾಯಿತು. “ನೀನು ಏಕೆ ನನ್ನ ಮಾತು ಕೇಳಲಿಲ್ಲ? ನನ್ನ ಮಾತು ಕೇಳಿದ್ದಿದ್ದರೆ, ಕುದುರೆ ಯನ್ನೂ ಪಕ್ಷಿಯನ್ನೂ ಎರಡನ್ನೂ ಸಡೆಯಬಹುದಾಗಿತ್ತು. ಆದರೂ ಪುನಃ ನಿನಗೆ ಸಲಹೆ ಕೊಡುತ್ತೇನೆ. ನೇರವಾಗಿ ಹೋಗು. ಸಂಜೆ ಒಂದು ಅರಮನೆಗೆ ಬರುತ್ತೀಯೆ. ಅಲ್ಲಿ ರಾತ್ರಿ ಹೆನ್ನೆರಡು ಗಂಟಿಗೆ ಆ ರಾಜಕುಮಾರಿ ಸ್ನಾನಕ್ಕೆ ಹೋಗುತ್ತಾಳೆ. ಅವಳು ಹಾಯ್ದು ಹೋಗುವಾಗ ಅವಳ ಹತ್ತಿರ ಹೋಗಿ ಕೈಹಿಡಿದುಕೊ. ಅವಳು ನಿನ್ನೊಡನೆ ನರಿಯ ಬಾಲ ೭ ಬಂದು ಬಿಡುತ್ತಾಳೆ. ಆದರೆ ಅವಳು ಎಷ್ಟೇ ಕೇಳಿಕೊಂಡರೂ ತನ್ನ ತಂದೆತಾಯಿಗಳಿಗೆ ಹೇಳಿ ಬರಲು ಬಿಡಬೇಡ” ಎಂದು ಹೇಳಿ, ಪುನಃ ತನ್ನ ಬಾಲವನ್ನು ಹರಡಿತು. ಪುನಃ ಅವನು ಅದರ ಮೇಲೆ ಕುಳಿತನು. ಪುನಃ ಅವರು ತಗ್ಗು ತಿಟ್ಟುಗಳನ್ನು ದಾಟ ದೂರಹೋದರು. ಅರಮನೆಯ ಹತ್ತಿರ ಬಂದಾಗ ಎಲ್ಲವೂ ನರಿ ಹೇಳಿದಂತೆಯೆ ಆಯಿತು. ಹೆನ್ನೆರಡು ಗಂಟಿಗೆ ರಾಜಕುಮಾರಿ ಸ್ನಾನಕ್ಕೆ ಬಂದಾಗ ಅವನು ಅವಳ ಕೈಹಿಡಿದನು. ಅವಳು ಅವನೊಡನೆ ಹೋಗಲು ಒಪ್ಪಿದಳು. ಆದರೆ ತನ್ನ ತಂದೆತಾಯಿಗಳನ್ನು ನೋಡಿಕೊಂಡು ಬರ ಬೇಕೆಂದು ಬಹಳ ಅತ್ತು ಬೇಡಿಕೊಂಡಳು. ಮೊದಲುಮೊದಲು ಅವನು ಎಷ್ಟೋ ಬೇಡವೆಂದನು. ಅದರೆ ಅವನು ಒಪ್ಪ್ಪುವನರೆಗೂ ಅವಳು ಸುಮ್ಮನಾಗಲಿಲ್ಲ. ಅವನ ಕಾಲಿಗೆ ಬಿದ್ದಳು, ಅತ್ತು ಅತ್ತು ಬೇಡಿದಳು. ಕಡೆಗೆ ಅವನ ಒಪ್ಪಿಗೆ ಪಡೆದು ಅವಳು ತನ್ನ ತಂದೆಯ ಅರಮನೆಯ ಬಾಗಿಲಿಗೆ ಬಂದ ಒಡನೆಯೇ ಕಾವಲಿನವರು ಎದ್ದರು. ಅವನನ್ನು ಸೆರೆ ಹಿಡಿದರು. ಅಲ್ಲಿಯ ಅರಸನ ಮುಂದೆ ಕರೆದುತಂದರು. ಆ ರಾಜನು “ನನ್ನ ಕಿಟಕಿಯಿಂದ ಹೊರಗೆ ಈ ಗುಡ್ಡ ಅಡ್ಡ ವಾಗಿದೆ. ಈ ಗುಡ್ಡವನ್ನು ಇನ್ನು ಎಂಟು ದಿನಗಳೊಳಗೆ ನೀನು ಅಗೆದು ಹಾಕಿದ ಹೊರತು ನೀನು ನನ್ನ ಮಗಳನ್ನು ಪಡೆಯುವಂತಿಲ್ಲ” ಎಂದನು. ಆ ಗುಡ್ಡ ಪ್ರಪಂಚದ ಜನರೆಲ್ಲ ಅಗೆದರೂ ಮುಗಿಯದಷ್ಟು ದೊಡ್ಡ ದಾಗಿತ್ತು. ಅವನು ಏಳು ದಿವಸ ಕೆಲಸ ಮಾಡಿದರೂ ಗುಡ್ಡ ಸ್ವಲ್ಪವೂ ಕರಗಿರಲಿಲ್ಲ. ಆಗ ನರಿ ಬಂದು, "ಹೋಗು, ಮಲಗಿ ಥಿದ್ದೆಮಾಡು. ನಾನು ನಿನಗಾಗಿ ಕೆಲಸಮಾಡುತ್ತೇನೆ ಎಂದಿತು. ಅವನು ಬೆಳಗ್ಗೆ ಏಳುವ ವೇಳೆಗೆ ಗುಡ್ಡ ಮಾಯವಾಗಿತ್ತು. ಅವನು ಅದನ್ನು ಕಂಡು ಬಹಳ ಉಲ್ಲಾಸದಿಂದ ರಾಜನ ಹತ್ತಿರ ಹೋಗಿ ರಾಜಕುಮಾರಿಯನ್ನು ಕೊಡಬೇಕೆಂದು ಕೇಳಿದನು. ರಾಜನು ತಾನು ಆಡಿದ ಮಾತನ್ನು ನಡೆಸಬೇಕಾಯಿತು. ರಾಜಕುಮಾರಿಯು ಆ ಹುಡುಗನ ಜೊತೆಯಲ್ಲಿ ಹೊರಟಳು. ೮ ನರಿಯ ಬಾಲ ಪುನಃ ನರಿ ಅವನ ಎದುರಿಗೆ ಬಂದಿತು. ಅವನನ್ನು ಕುರಿತು “ ಇದು ಇಷ್ಟೇ ಸಾಲದು. ನಾವು ರಾಜಕುಮಾರಿ, ಕುದುರೆ ಪಕ್ಷಿ ಈ ಮೂರನ್ನೂ ಪಡೆಯಬೇಕು? ಎಂದಿತು. ©“ ಅದು ಹೇಗೆ ಸಾಧ್ಯ? ” ಎಂದು ಹುಡುಗನು ಕೇಳಿದನು. ನರಿಯು ನಾನು ಹೇಳಿದ ಹಾಗೆ ನೀನು ಕೇಳಿದರೆ ಮಾತ್ರ ಅದು ಸಾಧ್ಯ. ಚಿನ್ನದ ಕುದುರೆಯಿರುವ ರಾಜನ ಅರಮನೆಗೆ ಬಂದಾಗ 6 ಸುಂದರರಾಜಕುಮಾರಿಯೆಲ್ಲಿ?' ಎಂದು ಅವನು ಕೇಳುತ್ತಾನೆ. " ಇಲ್ಲಿ ಇದ್ದಾಳೆ” ಎಂದು ನೀನು ಹೇಳು. ಅವನು ಸಂತೋಷಸಟ್ಟು ಅವಳನ್ನು ಎಡುರುಗೊಳು ವುದಕ್ಕೆ ಹೋದಾಗ, ಅವರು ಕೊಡುವ ಚಿನ್ನದ ಕುದುರೆಯನ್ನು ತ ಏರು. ಹೊರಡುವಾಗ ಎಲ್ಲರನ್ನೂ ಮಾತನಾಡಿಸುತ್ತ, ಕಡೆಗೆ ನಡನ ಹತ್ತಿರ ಬಂದಾಗ, ಅವಳನ್ನು ಎತ್ತಿ ನ ಮೇಲೆ ಕೂರಿಸಿಕೊಂಡು, ಓಡಿಹೋಗಿಬಿಡು” ಎಂದು ಹೇಳಿಕೊಟ್ಟ ತು. ಹುಡುಗನು ಈ ಬಾರಿ ನರಿ ಹೇಳಿದಂತೆ ನಡೆದುಕೊಂಡನು. ಕುದುರೆಯ ಮೇಲೆ ರಾಜಕುಮಾರಿಯನ್ನು ಕರೆದೊಯ್ಯುವಾಗ ನರಿ ಪುನಃ ಎದುರಿಗೆ ಬಂದಿತು. ಚಿನ್ನದ ಪಕ್ಷಿಯಿರುವ ಅರಮನೆಗೆ ನೀನು ಬಂದಾಗ, ರಾಜಕುಮಾರಿಯೂ ನಾನೂ ಬಾಗಿಲ ಹೊರಗೆ ನಿಲ್ಲುತ್ತೇವೆ. ನೀನು ಒಳಗೆ ಹೋಗಿ ರಾಜನ ಹತ್ತಿರ ಮಾತನಾಡು. ಅವನು ಅದೇ ಚಿನ್ನದ ಪಕ್ಷಿಯನ್ನು ಹೊರಗೆ ತಂದಾಗ, ನೀನು ಇನ್ನೂ ಕುದುರೆಯ ಮೇಲೆಯೆ ಕುಳಿತುಕೊಂಡು, "ಇದು ನಿಜವಾದ ಚಿನ್ನದ ಪಕ್ಷಿ ಹೌದೋ ಅಲ್ಲವೋ ನೋಡಬೇಕು? ಎಂದು ಹೇಳು. ಅವನು ಅದನ್ನು ನಿನ್ನ ಕೆ ಯಲ್ಲಿ ಕೊಟ್ಟಾಗ, ಕುದುರೆಯನ್ನು ಓಡಿಸಿಕೊಂಡು ಬಂದುಬಿಡು ? ಫು ಎಂದಿತು. ಪುನಃ ಎಲ್ಲವೂ ನರಿ ಹೇಳಿದಂತೆಯೆ ನಡೆಯಿತು. ಅವನು ಪಕ್ಷಿ ಯನ್ನೂ ರಾಜಕುಮಾರಿಯನ್ನೂ ಎತ್ತಿಕೊಂಡು ಕಾಡಿಗೆ ಬಂದನು. ಅಲ್ಲಿ ಅವನ ಹಳೆಯ ಸ್ನೇಹೆದ ನರಿ ಪುನಃ ಎದುರಿಗೆ ಬಂದಿತು. ಬಂದ್ಳು 4 ದಯೆಮಾಡಿ ನನ್ನನ್ನು ಕೊಲ್ಲು. ನನ್ನ ತಲೆಯನ್ನೂ ಬಾಲವನ್ನೂ ಕತ್ತರಿಸಿ ಹಾಕು” ಎಂದು ಬೇಡಿಕೊಂಡಿತು. ಇಷ್ಟು ಉಪಕಾರ ನರಿಯ ಜಾಲ ೯ ಮಾಡಿದ ನರಿಯನ್ನು ಹೀಗೆ ಕೊಲ್ಲಲು ಹುಡುಗನಿಗೆ ಮನಸ್ಸು ಬರಲಿಲ್ಲ. ಕಡೆಗೆ ನರಿ “ ಹೋಗಲಿ ಬಿಡು. ಆದರೆ ನನ್ನ ಬುದ್ಧಿವಾದವನ್ನು ಕೇಳು. ಮರಣದಂಡನೆಗೆ ಗುರಿಯಾದ ಯಾರನ್ನೂ ಬಿಡಿಸಬೇಡ. ಹರಿಯುವ ಕಾಲುವೆಯ ಪಕ್ಕದಲ್ಲಿ ಕುಳಿತುಕೊಳ್ಳ ಬೇಡ. ಮರೆತೀಯೆ, ಜೋಕೆ? ಎಂದು ಎಚ್ಚರಿಸಿ ಹೋಯಿತು. ಈ ಬುದ್ಧಿವಾದವನ್ನು ನಡಸುವುದು ಏನೂ ಕಷ್ಟವಲ್ಲವೆಂದು ಅವನು ರಾಜಕುಮಾರಿಯೊಡನೆ ಮುಂದೆ ಹೋದನು. ಕೊನೆಗೆ ತನ್ನ ಇಬ್ಬರು ಅಣ್ಣಂದಿರು ಇದ್ದ ಹಳ್ಳಿಗೆ ಬಂದನು. ಅಲ್ಲಿ ಏನೋ ಬಹಳ ಗದ್ದಲವಾಗುತ್ತಿತ್ತು. ಆದು ಏನೆಂದು ಅವನು ವಿಚಾರಿಸಿ ದಾಗ, ಇಬ್ಬರು ಕಳ್ಳರನ್ನು ಗಲ್ಲಿಗೆ ಏರಿಸುತ್ತಿರುವರೆಂದು ತಿಳಿದುಬಂದಿತು. ಹತ್ತಿರ ಹೋದಾಗ ಆ ಕಳ್ಳರು ತನ್ನ ಇಬ್ಬರು ಅಣ್ಣಂದಿರೆಂದು ಕಂಡು ಬಂದಿತು. ಅವರ ದುರವಸ್ಥೆಯನ್ನು ಅವನು ನೋಡಲಾರದೆ, ಅವರನ್ನು ಬದುಕಿಸಬೇಕೆಂದು ಬಹಳವಾಗಿ ಪೇಚಾಡಿದನು. ತನ್ನ ಹತ್ತಿರ ಇದ್ದ ಹಣವನ್ನೆಲ್ಲಾ ಆ ನೀಚರಿಗೋಸ್ಕರ ವೆಚ್ಚಮಾಡಿ, ಅವರ ಬಿಡುಗಡೆ ಯನ್ನು ಪಡೆದನು. ಆ ಹಳ್ಳಿ ಯವರು ಕೇಳಿದುದನ್ನೆಲ್ಲ ಅವರಿಗೆ ಕೊಟ್ಟು, ಅಣ್ಣಂದಿರನ್ನು ಕರೆದುಕೊಂಡು ಮುಂದೆ ಹೋದನು. ದಾರಿಯಲ್ಲಿ ಬರುವಾಗ ಬಿಸಿಲು ಹೆಚ್ಚಾಯಿತು. ಅವರು ನರಿ ಯನ್ನು ಮೊದಲು ಕಂಡ ಕಾಡಿಗೆ ಬಂದಾಗ, ಅಲ್ಲಿ ಹರಿಯುತ್ತಿದ್ದ ಒಂದು ಕಾಲುವೆಯ ಪಕ್ಕದಲ್ಲಿ ಮರಗಳ ಕೆಳಗೆ ತಂಪಾದ ನೆರಳನ್ನು ಕಂಡರು. “ ಈ ಕಾಲುವೆಯ ಪಕ್ಕದ ನೆರಳಿನಲ್ಲಿ ಕುಳಿತು ನಿಶ್ರಮಿಸಿಕೊಳ್ಳೋಣ. ತಿಂದು ಹಸಿವನ್ನೂ ಕುಡಿದು ದಾಹವನ್ನೂ ಕಳೆದುಕೊಳ್ಳೋಣ? ಎಂದು ಆ ಇಬ್ಬರು ಅಣ್ಣಂದಿರೂ ಆಗ ತಮ್ಮನಿಗೆ ಹೇಳಿದರು. ತಮ್ಮನು ಹಾಗೆಯೇ ಆಗಲೆಂದು ಒಪ್ಪಿದನು. ನರಿ ಹೇಳಿದ್ದುದನ್ನು ಮರೆತು ಕಾಲುವೆಯ ಪಕ್ಕದಲ್ಲಿ ಕುಳಿತುಕೊಂಡನು. ಅವನು ತನಗೆ ಏನಾದರೂ ಕೇಡಾಗಬಹುದೆಂಬ ಯೋಚನೆ ಯನ್ನೇ ಮಾಡದೆ ಕುಳಿತಿರುವಾಗ, ಆ ಇಬ್ಬರೂ ಅವನ ಹಿಂದೆ ಮೆಲ್ಲಗೆ ಬಂದು, ಅವನನ್ನು ದಡದಿಂದ ಕೆಳಗೆ ತಳಿ ಬಿಟ್ಟರು. ಅನಂತರ ರಾಜ ೧೦ ನರಿಯ ಬಾಲ ಕುಮಾರಿಯನ್ನೂ ಕುದುರೆ ಹೆಕ್ಕಿಗಳನ್ನೂ ಜೊತೆಯಲ್ಲಿ ಕರೆದುಕೊಂಡು ತಮ್ಮ ಯಜಮಾನನಾದ ರಾಜನ ಮನೆಗೆ ಹೋಗಿ, “ ಇವೆಲ್ಲವನ್ನೂ ನಾವು ನಮ್ಮ ಸ್ಪಂತ ದೇಹಬಲದಿಂದಲೂ ಬುದ್ಧಿ ಬಲದಿಂದಲೂ ಪಡೆದು ಬಂದಿದ್ದೇವೆ? ಎಂದರು. ರಾಜನು ಅವರ ಕಾರ್ಯಕ್ಕೆ ಸಂತೋಷಪಟ್ಟು ದೊಡ್ಡ ಹೆಬ್ಬ ಮಾಡಿಸಿದನು. ಆ ಉಲ್ಲಾಸದ ಉತ್ಸವದಲ್ಲಿ ಎಲ್ಲರೂ ಭಾಗವಹಿಸಿದರು. ಆದರೆ ಕುದುರೆಯು ತಿನ್ನಲು ಇಷ್ಟಪಡಲಿಲ್ಲ. ಹಕ್ಕೆ ಹಾಡಲು ಬಾಯಿ ತೆರೆಯಲಿಲ್ಲ. ರಾಜಕುಮಾರಿಯಂತೂ ಸುಮ್ಮನೆ ಅಳುತ್ತ ಕೊಠಡಿಯಲ್ಲಿ ಕುಳಿತುಬಿಟ್ಟಳು. ಮೂರನೆಯ ಮಗನನ್ನು ಅಣ್ಣಂದಿರು ಕಾಲುವೆಯ ಬಳಿ ಕೆಳಗೆ ತಳ್ಳಿ ದರಷ್ಟೆ. ಅವನು ಬಿದ್ದಕಡೆ ನೀರು ಹೆಚ್ಚಾಗಿರಲಿಲ್ಲ. ಆದರೂ ಅವನ ಮೂಳೆಗಳೆಲ್ಲ ಮುರಿದಹಾಗಾಯಿತು. ಅಲ್ಲದೆ, ಮೇಲೆ ಹತ್ತಿ ಬರುವುದಕ್ಕೆ ದಡವು ಬೇರೆ ಕಡಿದಾಗಿತ್ತು. ಏನು ಮಾಡಬೇಕೋ, ಅವ ನಿಗೆ ಗೊತ್ತಾಗಲಿಲ್ಲ. ತನ್ನ ಹಣೆಯಬರಹನೇ ಹೀಗೆಂದು ಗೋಳಾಡುತ್ತ ಕುಳಿತನು. ಆ ವೇಳೆಗೆ ಅವನ ಹೆಳೆಯ ಸ್ನೇಹಿತನಾದ ನರಿ ಬಂದು, ಅವ ನನ್ನು ನೋಡುತ್ತ ದಡದಲ್ಲಿ ಕುಳಿತುಕೊಂಡಿತು. ತಾನು ಹೇಳಿದ ಮಾತು ಕೇಳದೆ ತನ್ನ ಸಲಹೆಯನ್ನು ಮೂಲೆಗೆ ಒತ್ತಿದುದಕ್ಕಾಗಿ ಗದರಿಸಿ ಕೊಂಡಿತು. "ಆದರೂ, ನೀನು ತಿಳಿಗೇಡಿಯಾಗಿರುವುದರಿಂದ ನಾನು ನಿನ್ನನ್ನು ಇಲ್ಲಿ ಕೈ ಬಿಡಲಾಗದು. ಆದ್ದರಿಂದ, ಇದೊ, ಈ ನನ್ನ ಬಾಲ ವನ್ನು ಬಿಗಿಯಾಗಿ ಹಿಡಿ” ಎಂದಿತು. ತನ್ನ ಬಾಲದ ಬಲದಿಂದ ಅವ ನನ್ನು ದಡಕ್ಕೆ ಎಳೆಯಿತು. ಅವನು ದಡವನ್ನು ಮುಟ್ಟಿದ ಮೇಲೆ “ ನೀನು ಹಿಂದಿರುಗುವುದನ್ನು ಕಂಡರೆ ನಿನ್ನ ಅಣ್ಣಂದಿರು ನಿನ್ನನ್ನು ಕೊಲ್ಲಲು ಯತ್ನಿಸುತ್ತಾರೆ. ಆದುದರಿಂದ ಒಬ್ಬ ಬಡ ನೀಪಿಯೂದುವವ ನಂತೆ ವೇಷ ಮರೆಸಿಕೊಂಡು ರಾಜನ ಅರಮನೆಗೆ ಹೋಗು” ಎಂದು ಹೇಳಿಕೊಟ್ಟ ತು. ಅವನು ಹಾಗೆಯೆ ಹೋದನು. ಅವನು ಅರಮನೆಯ ಬಾಗಿಲಿಗೆ ಬರುವುದು ತಡ, ಕುದುರೆ ತಿನ್ನಲು ತೊಡಗಿತು, ಹಕ್ಕಿ ಹಾಡ ತೊಡಗಿತ್ತು ರಾಜಕುಮಾರಿ ಅಳುವುದನ್ನು ನಿಲ್ಲಿಸಿ ಬಿಟ್ಟಳು. ನರಿಯ ಬಾಲ ೧೧ ಅರಮನೆಯ ಅಂಗಳದಲ್ಲಿ ರಾಜನ ಪರಿವಾರದವರೆಲ್ಲರೂ ದೊಡ್ಡ ಹಬ್ಬ ಮಾಡುತ್ತಿದ್ದರು. ಮೂರನೆಯ ಮಗನು ಅಲ್ಲಿಗೆ ಬಂದನು. ನೆಟ್ಟಿನೆ ರಾಜನ ಸಮೀಪಕ್ಕೆ ಹೋಗಿ, ತನ್ನ ಅಣ್ಣಂದಿರ ಮೋಸವೆಲ್ಲ ವನ್ನೂ ಅವನಿಗೆ ತಿಳಿಸಿದನು. ರಾಜನು ಅವರ ಮೋಸಕ್ಕೆ ಕೋಪ ಗೊಂಡು ಅವರನ್ನು ಹಿಡಿದು ಶಿಕ್ಷಿಸಿದನು. ರಾಜಕುಮಾರಿಯನ್ನು ಪುನಃ ಮೂರನೆಯವನಿಗೇ ಒಪ್ಪಿಸಿದನು. ಅವನು ಅವಳನ್ನು ಮದುವೆ ಯಾದನು. ರಾಜನು ಸತ್ತ ಬಳಿಕ ಅವನೇ ರಾಜನಾದನು. ಮದುವೆಯಾದ ಮೇಲೆ ಒಂದು ದಿನ ಮೂರನೆಯ ಮಗನು ಕಾಡಿ ನಲ್ಲಿ ತಿರುಗಾಡಲು ಹೋದನು. ಅಲ್ಲಿ ಆ ಹಳೆಯ ನರಿ ಪುನಃ ಅವನ ಎದುರಿಗೆ ಬಂದಿತು. ಬಂದು, ಕಣ್ಣುತುಂಬ ನೀರು ತುಂಬಿಕೊಂಡು ನನ್ನ ತಲೆಯನ್ನೂ ಬಾಲವನ್ನೂ ಕತ್ತರಿಸು” ಎಂದು ಬಹು ವಿಧದಿಂದ ಬೇಡಿಕೊಂಡಿತು. ಮೂರನೆಯ ಮಗನು ಮನಸ್ಸಿಲ್ಲದ ಮನಸ್ಸಿನಿಂದ ಅದರ ತಲೆಬಾಲಗಳನ್ನು ಕತ್ತರಿಸಿದರು. ಆ ಕ್ಷಣದಲ್ಲಿ ಆ ನರಿ ಒಬ್ಬ ರಾಜಕುಮಾರನಾಗಿ ಬದಲಾವಣೆ ಹೊಂದಿತು. ಬಹಳ ವರ್ಷಗಳ ಹಿಂದೆ ಕಳೆದುಹೋಗಿದ್ದ ತನ್ನ ಸ್ವಂತ ಸಹೋ ದರನೇ ಅವನೆಂದು ರಾಜಕುಮಾರಿಗೆ ತಿಳಿಯಿತು. ಒಂದು ಹೊಟ್ಟೆಯ ಕಿಚ್ಚಿನ ದೇವತೆ “ನೀನು ನರಿಯಾಗು. ಯಾರಾದರೂ ಚಿನ್ನದ ಪಕ್ಷಿ ಯನ್ನು ಸಂಪಾದಿಸಿ ನಿನ್ನ ತಲೆಬಾಲಗಳನ್ನು ಕತ್ತರಿಸಿದರೆ, ನೀನು ಪುನಃ ರಾಜಕುಮಾರನಾಗು” ಎಂದು ಮಂತ್ರಿಸಿತ್ತು. ಮೂರನೆಯ ಮಗನು ಆ ಮಂತ್ರವನ್ನು ಮುರಿದನು. ಆ ಮೇಲೆ ಎಲ್ಲರೂ ಸುಖದಿಂದಿದ್ದರು. ೨. ಇಬ್ಬರು ಸಹೋದರರು ಹಿಂದೆ ಇಬ್ಬರು ಸಹೋದರರು ಇದ್ದರು. ಅವರಲ್ಲಿ ಅಣ್ಣನು ಬಹಳ ಹಣವಂತ್ಕ ತಮ್ಮನು ತೀರ ಬಡವ. ಆ ಹಣವಂತ ತುಂಬ ಕೆಟ್ಟ ವನು, ಬಡವನು ಬಹಳ ಒಳ್ಳೆ ಯವನು. ಅಣ್ಣನು ಅಕೃಸಾಲೆಯ ಕೆಲಸ ಮಾಡುತ್ತಿದ್ದ. ತಮ್ಮನು ಕಸಬರಿಗೆಗಳನ್ನು ಕಟ್ಟ ಮಾರುತ್ತಿದ್ದ. ಬಡತಮ್ಮನಿಗೆ ಇಬ್ಬರು ಅವಳಿಮಕ್ಕಳು. ಆ ಮಕ್ಕಳು ತಮ್ಮ ದೊಡ್ಡಪ್ಪನ ಮನೆಗೂ ಹೋಗುತ್ತಿದ್ದರು, ಅವರು ತಟ್ಟಿಯಲ್ಲಿ ತಿಂದು ಮಿಕ್ಳುದನ್ನು ತಿಂದು ಬರುತ್ತಿದ್ದರು. ಒಂದು ದಿನ ಬಡತಮ್ಮನು ಪೊರಕೆಕಡ್ಡಿ ಗಳನ್ನು ಆರಿಸಲು ಕಾಡಿಗೆ ಹೋದಾಗ್ಯ ಅಲ್ಲಿ, ಹಿಂದೆ ಎಂದೂ ಕಾಣದೆ ಇದ್ದಂಥ ಒಂದು ಸೊಗಸಾದ ಹಕ್ಕಿಯನ್ನು ನೋಡಿದನು. ಅದರ ಕಡೆಗೆ ಒಂದು ಸಣ್ಣ ಕಲ್ಲು ಹೊಡೆ ದನು. ಆದರೆ ಹಕ್ಕಿ ಬೀಳಲಿಲ್ಲ, ಅದರ ಒಂದು ಗರಿ ಮಾತ್ರ ಬಿತ್ತು. ಹಕ್ಕಿ ಹಾರಿಹೋಯಿತು. ಅನನು ಆ ಗರಿಯನ್ನು ಎತ್ತಿಕೊಂಡನು. ಅದು ಚಿನ್ನೈದ ಗರಿಯಾಗಿತ್ತು. ಅದನ್ನು ತನ್ನ ಅಣ್ಣನ ಹತ್ತಿರ ತೆಗೆದು ಕೊಂಡುಹೋದನು. ಅಣ್ಣನು ಅದನ್ನು ಪರೀಕ್ಷೆಮಾಡಿ, ಅದು ಒಳ್ಳೆಯ ಚಿನ್ನವೆಂದು ತಿಳಿದು ಅವನಿಗೆ ಹೆಣಕೊಟ್ಟು ಕಳುಹಿಸಿದರು. ಮರುದಿವಸ ಬೆಳಗ್ಗೆ ಬಡತಮ್ಮನು ಕಾಡಿನಲ್ಲಿ ಒಂದು ಮರದ ರೆಂಬೆಗಳನ್ನು ಕತ್ತರಿಸುತ್ತಿರುವಾಗ ಅದೇ ಪಕ್ಷಿ ಅವನ ಮುಂದೆ ಹಾದು ಹೋಯಿತು. ಅವನು ಅದನ್ನು ಹುಡುಕುತ್ತಾ ಹೋದನು. ಒಂದು ಚಿನ್ನದ ಮೊಟ್ಟೆ ಇಟ್ಟಿದ್ದೆ ಗೂಡು ಸಿಕ್ಕಿತು. ತಮ್ಮನು ಆ ಮೊಟ್ಟೆಯನ್ನು ತೆಗೆದುಕೊಂಡು ಹೋಗಿ ಅಣ್ಣನಿಗೆ ತೋರಿಸಿದನು. ಅವನು ಅದು ಒಳ್ಳೆಯ ಚಿನ್ನವೆಂದು ಕಂಡುಕೊಂಡು ಪುನಃ ಅವನಿಗೆ ಹಣಕೊಟ್ಟು ಕಳುಹಿಸಿ ದನು. ಕಳುಹಿಸುವಾಗ “ಈ ಗರಿ, ಮೊಟ್ಟೆ ಮಾತ್ರ ತಂದರೆ ಸಾಲದು. ನನಗೆ ಆ ಹಕ್ಕಿಯೇ ಬೀಕು” ಎಂದನು. ತಮ್ಮನು ಪುನಃ ಕಾಡಿಗೆ ಹೋದನು. ಹಕ್ಕಿ ಈ ಸಲ ಮರದ ಮೇಲೆ ಕುಳಿತಿತ್ತು. ಅವನು ಅದರ ಕಡೆಗೆ ಕಲ್ಲು ಎಸೆದನು. ಹಕ್ಕಿ ಇಬ್ಬರು ಸಹೋದರರು ೧೩ ಕೆಳಗೆ ಬಿತ್ತು. ತಮ್ಮನು ಅದನ್ನು ಕೊಂಡುಹೋಗಿ ಅಣ್ಣನಿಗೆ ಕೊಟ್ಟನು. ಅಣ್ಣನು ಅವನಿಗೆ ದೊಡ್ಡ ಹಣದ ರಾಶಿಯನ್ನು ಕೊಟ್ಟು ಆ ಹಕ್ಕಿಯನ್ನು ತೆಗೆದುಕೊಂಡನು. ಬಡ ಕಸಬರಿಗೆಯವನು ಸಂತೋಷಪಡುತ್ತ “ ಇನ್ನು ನಾನು ಅಭಿವೃದ್ಧಿಯಾಗಬಹುದು » ಎಂದು ಮನೆಗೆ ಹೋದನು. ಅಕ್ಕ ಸಾಲೆಯಲ್ಲಿ ಬುದ್ಧಿ ಮಾತ್ರವಲ್ಲ ಮೋಸವೂ ತುಂಬಿತ್ತು. ತಾನು ಪಡೆದ ಹೆಕ್ಕಿ ಎಂತಹದೆಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನು ತನ್ನ ಹೆಂಡತಿಯನ್ನು ಕರೆದು, " ಈ ಹಕ್ಕಿಯ ಒಂದು ಚೂರೂ ಹಾಳಾಗದ ಹಾಗೆ ಇದನ್ನು ತುಪ್ಪದಲ್ಲಿ ಕರಿ. ಆ ಮೇಲೆ ಬಂದು ನಾನು ಒಬ್ಬನೇ ಇದನ್ನು ತಿನ್ನುತ್ತೇನೆ” ಎಂದು ಹೇಳಿದನು. ಆ ಹಕ್ಕಿ ಸಾಧಾ ರಣ ಹಕ್ಕಿಯಲ್ಲ. ಅದರ ಹೃದಯವನ್ನೂ ನಿತ್ತಕೋಶವನ್ನೂ ಯಾರಾ ದರೂ ತಿಂದರೆ, ಅವರ ತಲೆದಿಂಬಿನ ಕೆಳಗೆ ಎರಡು ಚಿನ್ನದ ಬಿಲ್ಲೆ ಪ್ರತಿ ದಿನ ಬೆಳಗ್ಗೆ ಸಿಕ್ಕುತ್ತಿತ್ತು. ಅಂತಹ ಹಕ್ಕಿ ಅದು! ಮನೆಯಾಕೆ ಹಕ್ಕಿಯನ್ನುಕರಿದಳು. ಗರಿಗರಿಯಾಗಲೆಂದು ಅದನ್ನು ಒಂದು ಸಲಾಕಿಗೆ ಚುಚ್ಚಿ, ಬೆಂಕಿಯ ಮುಂದೆ ಇಟ್ಟು, ಬೇರೆಯ ಕೆಲಸದ ಮೇಲೆ ಅಡುಗೆಯ ಮನೆಯಿಂದ ಆಚೆ ಹೋದಳು. ಅವಳು ಅಲ್ಲಿ ಇಲ್ಲ ದಿದ್ದಾಗ ಬಡಕಸಬರಿಗೆಯವನ ಇಬ್ಬರು ಅವಳಿಮಕ್ಕಳು ಒಳಗೆ ಬಂದರು, ಒಲೆಯ ಮುಂದಿ ಇದ್ದ ಸಲಾಕಿಯನ್ನು ತಿರುಗಿಸತೊಡಗಿದರು. ಹಾಗೆ ತಿರುಗಿಸುವಾಗ ಆ ಹಕ್ಕಿಯ ಮೈಯಿಂದ ಏನೋ ಎರಡು ಚೂರು ಕೆಳಗೆ ಬಿತ್ತು. ಆ ಮಕ್ಕಳಲ್ಲಿ ಒಬ್ಬನು "ಈ ಎರಡು ಚೂರನ್ನೂ ನಾವು ತಿನ್ನೋಣ. ನನಗೆ ಬಹಳ ಹಸಿವಾಗಿದೆ. ಎರಡು ಚಿಕ್ಕ ಚೂರು ತಾನೆ, ಯಾರಿಗೂ ಗೊತ್ತಾಗುವುದಿಲ್ಲ” ಎಂದನು. ಇಬ್ಬರೂ ಆ ಚೂರುಗಳನ್ನು ತಿಂದುಬಿಟ್ಟರು. | ಆ ವೇಳಗೆ ಸರಿಯಾಗಿ ಮನೆಯಾಕೆ ಅಲ್ಲಿಗೆ ಬಂದಳು. ಅವರು ಬಾಯಾಡಿಸುವುದನ್ನು ಕಂಡು, ಏನು ತಿಂದಿರೆಂದು ಕೇಳಿದಳು. ಹಕ್ಕಿ ಯಿಂದ ಬಿದ್ದ ಎರಡು ಚೂರುಗಳನ್ನು ಅವರು ತಿಂದರೆಂದು ಹೇಳ್ಲಿ ಆಕೆಗೆ ಹೆದರಿಕೆಯಾಯಿತು. ಅವರು ಹೃದಯ ಪಿತ್ತ ಕೋಶಗಳನ್ನುತಿಂದದ್ದು ತನ್ನ ಗಂಡನಿಗೆ ತಿಳಿಯಬಾರದೆಂದು, ಕೂಡಲೆ ಒಂದು ಕೋಳಿಯನ್ನು ಕೊಂದು ದಿಳ ಇಬ್ಬರು ಸಹೋದರರು ಅದರ ಹೃದಯವನ್ನೂ ಪಿತ್ತಕೋಶವನ್ನೂ ಆ ಹೆಕ್ಕಿಯ ಹೊಟ್ಟೆ ಯಲ್ಲಿ ಮುಚ್ಚಿಟ್ಟಳು. ಅಕ್ಕ ಸಾಲೆಯು ಮನೆಗೆ ಬಂದೊಡನೆಯೇ ಒಂಡು ಚೂರೂ ಬಿಡದೆ ಹೆಕ್ಕಿಯೆಲ್ಲವನ್ನೂ ತಾನೊಬ್ಬನೇ ತಿಂದು ಮುಗಿಸಿದನು. ಮಾರನೆಯ ಬೆಳಗ್ಗೆ ಚಿನ್ನದ ನಾಣ್ಯವನ್ನು ಹೊಂದುವೆನೆಂಬ ಆಸೆಯಿಂದ ದಿಂಬಿನ ಕೆಳಗೆ ಹುಡುಕಿದನು. ಅವನಿಗೆ ನಾಣ್ಯ ಸಿಕ್ಕಲಿಲ್ಲ. ಅತ್ತ, ಬಡತಮ್ಮನ ಮಕ್ಕಳು ತಮಗೆ ಸಂಭವಿಸಿದ ಅದೃಷ್ಟವನ್ನು ಅರಿಯದೆ ಇದ್ದರು. ಮಾರನೆಯ ಬೆಳಗ್ಗೆ ಅವರು ಹಾಸಿಗೆಯಿಂದ ಏಳು ವಾಗ ರುಣ್ಣೆಂದು ಶಬ್ದಮಾಡುತ್ತ ಏನೋ ನೆಲದ ಮೇಲೆ ಬಿದ್ದಿತು. ಅವರು ಅದೇನೆಂದು ನೋಡಿದರು. ಎರಡು ಚಿನ್ನದ ನಾಣ್ಯ ಸಿಕ್ಕಿತು. ಅದನ್ನು ಅವರು ತಂದೆಗೆ ತಂದು ತೋರಿಸಿದರು. ಅವನಿಗೂ ಅದು ಅರ್ಥವಾಗಲಿಲ್ಲ, ಹೆದರಿಕೆಯಾಯಿತು. ಹೀಗೆಯೇ ಪ್ರತಿದಿನ ಬೆಳಗ್ಗೆ ಚಿನ್ನದ ನಾಣ್ಯಗಳು ದೊರಕು ತ್ರಿರಲು, ಬಡತಮ್ಮನು ಆ ಆಶ್ಚರ್ಯವನ್ನು ಅಣ್ಣ ಸಿಗೆ ತಿಳಿಸಿದನು. ಆಗ ಅಕ್ಕಸಾಲೆ ಏನು ನಡೆದಿರಬೇಕೆಂಬುದನ್ನು ಊಜಹಸಿದರು. ಆ ಹುಡು ಗರು ಹೇಗೋ ಹಕ್ಕಿಯ ಹೃದಯ ನಿತ್ತಕೋಶಗಳನ್ನು ತಿಂದಿರಬೇಕೆಂದು ತಿಳಿದನು. ಅವನಿಗೆ ಮೊದಲೇ ಕೆಟ್ಟಮನಸ್ಸು, ಹೊಟ್ಟೆಯ ಕಿಚ್ಚು. ಈಗಂತೂ ಆ ಮಕ್ಕಳ ಮೇಲೆ ಅವನಿಗೆ ದ್ವೇಷವೇ ಹುಟ್ಟಿತು. ಆಗ ತನ್ನ ಹಗೆಯನ್ನು ತೀರಿಸಿಕೊಳ್ಳುವುದಕ್ಕಾಗಿ “ ನಿನ್ನ ಮಕ್ಕಳಿಗೆ ಪಿಶಾಚಿ ಮೆಟ್ಟಿ ಕೊಂಡಿದೆ. ಆ ನಿಶಾಚಿಯೇ ಹೀಗೆ ದಿಂಬಿನ ಕೆಳಗೆ ನಾಣ್ಯಗಳನ್ನು ಇಡು ತ್ತಿದೆ. ನೀನು ಆ ನಾಣ್ಯಗಳನ್ನು ಮುಟ್ಟ ಬೇಡ, ದ್ರ ಮಕ್ಕಳನ್ನೂ ಮನೆ ಯಲ್ಲಿಟ್ಟು ಕೊಳ್ಳ ಬೇಡ. ಪಿಶಾಚಿ ನಿನ್ನನ್ನು ಕೂಡ ಕಾಡಬಹುದು” ಎಂದು ತಮ್ಮನನ್ನು ಹೆದರಿಸಿದನು. ತಮ್ಮನೂ ಹೆದರಿಕೊಂಡು, ಮನಸ್ಸಿ ನಲ್ಲಿಯೇ ಕೊರಗುತ್ತ ಮಕ್ಕಳನ್ನು ಕಾಡಿನಲ್ಲಿ ದೂರವಾಗಿ ಕರೆದು ಕೊಂಡುಹೋಗಿ ಬಿಟ್ಟು ಬಂದನು. ಮನೆಯ ದಾರಿಯನ್ನು ಕಾಣದೆ, ಪಾಪ, ಆ ಮಕ್ಕಳು ಕಾಡಿನಲ್ಲಿ ಸುಮ್ಮನೆ ಸುತ್ತಾಡಿದರು. ಸುತ್ತಿದಷ್ಟೂ ದಾರಿ ತಪ್ಪಿದರು, ಇನ್ನೂ ಇಬ್ಬರು ಸಹೋದರರು ೧೫ ಕಾಡಿನ ಒಳಕ್ಕೆ ಹೋದರು. ಅಲ್ಲಿ ಒಬ್ಬ ಬೇಟಿಗಾರನು ಅವರನ್ನು ಕಂಡು, “ ನೀವು ಯಾರ ಮಕ್ಕಳು? ಎಂದು ಕೇಳಿದನು. “ ನಾವು ಒಬ್ಬ ಬಡ ಕಸಬರಿಗೆಮಾಡುವವನ ಮಕ್ಕಳು. ಪ್ರತಿ ದಿನ ಬೆಳಗ್ಗೆ ತಮ್ಮ ತಲೆದಿಂಬಿನ ಕೆಳಗೆ ಚಿನ್ನದ ನಾಣ್ಯಗಳು ಸಿಕ್ಕು ತ್ತಿದ್ದುದರಿಂದ ನಮ್ಮ ತಂದೆ ನಮ್ಮನ್ನು ಕಾಡಿನಲ್ಲಿ ಬಿಟ್ಟುಹೋದನು ಎಂದರು. ಅದಕ್ಕೆ ಆ ಬೇಟಿಗಾರನು “ ಪ್ರತಿದಿನ ಬೆಳಗ್ಗೆ ತಲೆದಿಂಬಿನ ಈಳಗೆ ಚಿನ್ನದ ನಾಣ್ಯ ಸಿಕ್ಕುವುದರಿಂದ ಏನೂ ಕೇಡಾಗುವುದಿಲ್ಲ. ಆದರೆ ಆ ಹಣವನ್ನು ಒಳ್ಳೆಯ ಮಾರ್ಗದಲ್ಲಿ ಉಪಯೋಗಿಸಬೇಕು. ಹಣ ಸಿಕ್ಕಿ ತೆಂದು ಸೋಮಾರಿಗಳಾಗಬಾರದು. ಅಷ್ಟೆ” ಎಂದು ಹೇಳಿ, ತನಗೆ ಸ್ಪಂತ ಮಕ್ಕಳಿಲ್ಲದುದರಿಂದ ತಾನು ಅವರಿಗೆ ತಂದೆಯಾಗುವೆನೆಂದು ಹೇಳಿ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಅಲ್ಲಿ ಅವ ರಿಗೆ ಬೇಟೆಗಾರರು ತಿಳಿದಿರಬೇಕಾದುದೆಲ್ಲವನ್ನೂ ಕಲಿಸಿದನು. ಅವರಿಗೇ ಮುಂದೆ ಬೇಕಾಗುವುದೆಂದ್ಕು ಅವರ ತಲೆದಿಂಬಿನ ಕೆಳೆಗೆ ಕಾಣುತ್ತಿದ್ದ ಹಣವನ್ನು ಒಂದು ಕಡೆ ಕೂಡಿಟ್ಟಿ ನು. ಆ ಮಕ್ಕಳಿಬ್ಬರೂ ಬೆಳೆದು ಜೊಡ್ಡವರಾದರು. ಆಗ ಒಂದು ದಿನ ಅವರ ಸಾಕುತಂದೆ ಅವರನ್ನು ಕಾಡಿಗೆ ಕರೆದುಕೊಂಡುಹೋದನು. ಅವರು ಬೇಟೆಗಾರ ವೃತ್ತಿಯನ್ನು ಎಷ್ಟುಮಟ್ಟಗೆ ಕಲಿತಿರುವರೊ ಪರೀಕ್ಷಿಸಬೇಕೆಂದು ಅವನಿಗೆ ಮನಸ್ಸಿತ್ತು. ಅವನ ಆಜ್ಞೆಯಂತೆ ಅವ ರಿಬ್ಬರೂ ಬಾಣ ಬಿಡಲು ಸಿದ್ಧರಾಗಿ ನಿಂತರು. ಬಾಣ ಬಿಡುವುದಕ್ಕೆ ಗುರಿ ಯಾವುದೂ ಕಾಣಲಿಲ್ಲ. ಕೊನೆಗೆ ಹೆಂಸಗಳ ಒಂದು ಗುಂಪು ತ್ರಿಕೋಣಾಕಾರದಲ್ಲಿ ಮೇಲೆ ಹಾರುತ್ತಿದ್ದುದು ಕಂಡುಬಂದಿತು. ಆಗ ಬೇಟೆಗಾರನು ಒಬ್ಬನನ್ನು ಕುರಿತು, «ಈ ಗುಂಪಿನ ಒಂದೊಂದು ಮೂಲೆ ಯಿಂದ ಒಂದೊಂದು ಹಂಸವನ್ನು ಹೊಡೆ” ಎಂದನು. ಯುವಕನು ಹಾಗೆಯೆ ಹೊಡೆದು ಜಯಪಡೆದನು. ಕೆಲವು ನಿಮಿಷಗಳು ಕಳೆದ ಮೇಲೆ ಇನ್ನೊಂದು ಹಂಸಗಳ ಗುಂಪು "2' ಅಂಕೆಯ ಆಕಾರದಲ್ಲಿ ಮ ಮೇಲೆ ಹಾರಿಬಂತು. ಬೇಟಿಗಾರನು ಇನ್ನೊಬ್ಬ ಸಹೋದರನಿಗೂ ೧೬ ಇಬ್ಬರು ಸಹೋದರರು ಹಾಗೆಯೆ ಆಜ್ಞೆ ಮಾಡಿದನು. ಅವನೂ ಒಂದೊಂದು' ಕೊನೆಯಿಂದ ಒಂದೊಂದು ಹೆಂಸವನ್ನು ಇಳಿಸಿ ಜಯಶೀಲನಾದನು. ಅನಂತರ ಆ ಇಬ್ಬರು ಸೋದರರೂ ಕಾಡಿಗೆ ಹೋಗಿ ತಾವು ಮುಂದೆ ಏನು ಮಾಡಬೇಕೆಂಬುದನ್ನು ಆಲೋಚಿಸಿದರು. ಆ ರಾತ್ರಿ ಊಟಕ್ಕೆ ಕುಳಿತಾಗ ತಮ್ಮ ಸಾಕುತಂಜೆಯ ಹತ್ತಿರ “ನಮ್ಮ ಬಿನ್ನಹವನ್ನು ನೀನು ಕೇಳಬೇಕು. ನೀನು ಕೇಳುವವರೆಗೂ ಒಂದು ತುತ್ತು ಅನ್ನವನ್ನೂ ನಾವು ಮುಟ್ಟುವುದಿಲ್ಲ” ಎಂದರು. “ನಿಮ್ಮ ಬಿನ್ನಹವೇನು?” ಎಂದು ಬೇಟಿಗಾರನು ಕೇಳಿದನು. “ನಾವು ಬೇಟೆಯಾಡುವುದರಲ್ಲಿ ಪಂಡಿತರಾಗಿದ್ದೇವೆ. ಲೋಕದಲ್ಲಿ ಸಂಚಾರಮಾಡಿ ಅನುಭವ ಪಡೆಯಲು ನಮಗೆ ಅಪ್ಪಣೆಕೊಡಬೇಕು” ಎಂದು ಆ ಸೋದರರು ಕೇಳಿಕೊಂಡರು. “ನೀವು ಹುಟ್ಟು ಬೇಟಿಗಾರರಂತೆ ಮಾತನಾಡುತ್ತಿದ್ದೀರಿ. ನಿಮ್ಮ ಇಷ್ಟವೇ. ನನ್ನ ಇಷ್ಟ. ಮುಂದೆ ನಿಮಗೆ ಒಳ್ಳೆಯದಾಗಲಿ ಎಂದು ಆ ಮುದಿ ಬೇಟೆಗಾರನು ಸಂತೋಷದಿಂದ ಅಪ್ಪಣೆ ಕೊಟ್ಟಿ ನು. ಆ ಸಹೋದರರಿಗೂ ಸಂಶೋಷವಾಯಿತು. ಆ ಸಹೋದರರು ತಮ್ಮ ಸಾಕುತಂದೆಯನ್ನು ಅಗಲುವ ದಿವಸ ಬಂತು. ಆಗ ಅವನು ಅವರಿಬ್ಬರಿಗೂ ಒಂದೊಂದು ಒಳ್ಳೆಯ ತುಪಾಕಿ ಯನ್ನು ಕೊಟ್ಟು ಅವರಿಗೆಂದೆ! ಕೂಡಿಟ್ಟಿದ್ದ ಹಣದಿಂದ ಬೇಕಾದಷ್ಟನ್ನು ತೆಗೆದುಕೊಳ್ಳಲು ಅಪ್ಪಣೆ ಕೊಟ್ಟಿನು. ಅವರ ಸಂಗಡ ಕೊಂಚ ದೂರ ಹೋಗಿ, ಅವರನ್ನು ಕಳುಹಿಸಿಕೊಡುವ ಮೊದಲು ಅವರಿಗೆ ಒಂದು ಹೊಳೆ ಹೊಳೆಯುವ ಚಾಕುವನ್ನು ಕೊಟ್ಟಿನು. ಕೊಟ್ಟು, "ಮುಂದೆ ನೀವು ಒಬ್ಬರನ್ನು ಒಬ್ಬರು ಅಗಲಬೇಕಾಗಿ ಬಂದಾಗ, ಅಗಲುವ ಕವಲುದಾರಿ ಯಲ್ಲಿರುವ ಮರಕ್ಕೆ ಈ ಚಾಕುವನ್ನು ತೂಗುಹಾಕಿರಿ. ನಿಮ್ಮಲ್ಲಿ ಯಾರಿ ಗಾದರೂ ಇನ್ನೊಬ್ಬನ ಯೋಗಕ್ಷೇಮವನ್ನು ತಿಳಿಯಬೇಕೆನ್ಸಿ ಸಿದರೆ, ಅವನು ಹೋದ ಕಡೆಗಿರುವ ಅಲಗಿನ ಮುಖವನ್ನು ನೋಡಿರಿ. ಅವನು ಇಬ್ರ ರು ಸಹೋದರೆರು ೧೬ ಸತ್ತುಹೋಗಿದ್ದರೆ,` ಅಲಗು ತುಕ್ಕು ಹಿಡಿದಿರುತ್ತದೆ. ಅವನು ಬದುಕಿ ದ್ದರೆ ಅಲಗು ಹೊಳೆಹೊಳೆಯುತ್ತಿರುತ್ತದೆ” ಎಂದು ಹೇಳಿದನು. ಅನಂತರ ಆ ಸೋದರರು ಹೊರಟರು. ಒಂದು ದೊಡ್ಡ ಕಾಡಿಗೆ ಬಂದರು. ತಮ್ಮ ಚೀಲದಲ್ಲಿ ತಂದಿದ್ದುದನ್ನೇ ತಿಂದು ರಾತ್ರಿ ಅಲ್ಲಿಯೇ ತಂಗಿದರು. ಮಾರನೆಯ ದಿವಸ ಕೂಡ ಅವರು ಕಾಡನ್ನು ದಾಟಲು ಆಗಲಿಲ್ಲ. ತಂದಿದ್ದ ಆಹಾರ ತೀರಿಹೋದುದರಿಂದ ಅವರು ಬೇಟಿ ಯಾಡಬೇಕಾಯಿತು. ಸೋದರರಲ್ಲಿ ಒಬ್ಬನು ತುಪಾಕಿಯನ್ನು ಎತ್ತಿ ಒಂದು ಮುದಿಮೊಲಕ್ಕೆ ಹೊಡೆಯಲು ಗುರಿಯಿಟ್ಟನು. “ಅಯ್ಯಾ, ಅಯ್ಯಾ, ಬೇಟಿಗಾರ, ನನ್ನನ್ನು ಕೊಲ್ಲಬೇಡ. ನನ್ನ ಎರಡು ಚಿಕ್ಕಮರಿಗಳನ್ನು ಕೊಡುತ್ತೇನೆ” ಎಂದು ಆ ಮೊಲ ಕೂಗಿಕೊಂಡು ಪಕ್ಕದ ಪೊದೆಗೆ ಹಾರಿ ತನ್ನ ಎರಡು ಮರಿಗಳನ್ನು ತಂದು ಒಪ್ಪಿಸಿತು. ಆದರೆ ಆ ಮರಿಗಳು ಮುದ್ದಾಗಿ ಕುಣಿದಾಡುವುದನ್ನು ಕಂಡು, ಆ ಸಹೋ ದರರಿಗೆ ಅದನ್ನು ಕೊಲ್ಲಲು ಮನಸ್ಸು ಬರಲಿಲ್ಲ. ಆ ಮರಿಗಳನ್ನು ಹಿಂದೆ ಕರೆದುಕೊಂಡು ಅವರು ಮುಂದೆ ಹೋದರು. ದಾರಿಯಲ್ಲಿ ಒಂದು ನರಿ ಅಡ್ಡ ಬಂದಿತು. ಅದನ್ನು ಕೊಲ್ಲಬೇಕೆಂದು ಕೋವಿಯೆತ್ತಿದಾಗ, “ಅಯ್ಯಾ ಬೇಟೆಗಾರರೇ, ನನ್ನನ್ನು ಕೊಲ್ಲಬೇಡಿ. ನನ್ನ ಎರಡು ಮರಿಗಳನ್ನು ಕೊಡುತ್ತೇನೆ” ಎಂದು ಆ ನರಿ ತನ್ನೆರಡು ಮರಿಗಳನ್ನು ತಂದೊಫ್ಬಿಸಿತು. ಅವುಗಳನ್ನು ಕೊಲ್ಲುವುದಕ್ಕೂ ಆ ಸೋದರ ರಿಗೆ ಮನಸ್ಸು ಬರಲಿಲ್ಲ. ಮೊಲಗಳ ಜೊತೆಯಲ್ಲಿ ಅವುಗಳನ್ನೂ ಕರೆದು ಕೊಂಡು ಹೋದರು. ದಾರಿಯಲ್ಲಿ, ಪೊದೆಯಿಂದ ಒಂದು ತೋಳ ಹೊರಗೆ ಹಾರಿತು. ಸೋದರರು ಅದಕ್ಕೆ ಗುರಿಯಿಟ್ಟೊಡನೆ ಅದು “ಅಯ್ಯಾ, ಅಯ್ಯಾ, ನನ್ನನ್ನು ಕೊಲ್ಲಬೇಡಿ. ನನ್ನ ಎರಡು ಮರಿಗಳನ್ನು ಕೊಡುತ್ತೇನೆ” ಎಂದು ತನ್ನ ಎರಡು ಚಿಕ್ಕಮರಿಗಳನ್ನು ತಂದು ಒಪ್ಪಿಸಿತು. ಅವರಿಗೆ ಅವುಗಳನ್ನು ಕೊಲ್ಲಲೂ ಮನಸ್ಸು ಬರಲಿಲ್ಲ. ಮಿಕ್ಕ ಪ್ರಾಣಿಗಳ ಜೊತೆಗೆ ಆ ಚಿಕ್ಕ ತೋಳಗಳನ್ನೂ ಕರೆದುಕೊಂಡು ಹೋದರು. 2 ಹಿಟ್ರೆ ಇಬ್ಬರು ಸಹೋದರರು ಮುಂದೆ ಒಂದು ಕರಡಿ ಕಾಣಿಸಿಕೊಂಡಿತು. ಅದು ಕೂಡ ಅವರು ತನ್ನ ಕಡೆಗೆ ತುಪಾಕಿ ತಿರುಗಿಸಿದುದನ್ನು ಕಂಡು “ ಅಯ್ಯಾ, ಅಯ್ಯಾ, ನನ್ನನ್ನು ಜೀವನದೊಂದಿಗೆ ಬಿಟ್ಟರೆ ನನ್ನ ಎರಡು ಕರಡಿ ಮರಿಗಳನ್ನು ಕೊಡು ತ್ತೇನೆ ಎಂದು ತಂದು ಒಪ್ಪಿಸಿತು. ಉಳಿದ ಆರು ಪ್ರಾಣಿಗಳ ಜೊತೆ ಯಲ್ಲಿ ಆ ಕರಡಿಮರಿಗಳೂ ಆ ಸೋದರರನ್ನು ಹಿಂಬಾಲಿಸಿದುವು. ಕಟ್ಟಕಡೆಗೆ ಬಾಲವಾಡಿಸುತ್ತ ಒಂದು ಸಿಂಹೆ ಬಂದಿತು. ಆ ಸೋದರರು ಭಯಪಡದೆ ಅದನ್ನು ಕೊಲ್ಲಲು ಯತ್ನಿಸಿದಾಗ, ಅದು ಕೂಡ ತನ್ನೆರಡು ಮರಿಗಳನ್ನು ತಂದು ಒಪ್ಪಿಸಿ ತನ್ನ ಜೀವ ಉಳಿಸಿ ಕೊಂಡಿತು. ಹೀಗೆ, ಎರಡು ಮರಿಸಿಂಹ್ಯ, ಎರಡು ಮರಿಕರಡಿ, ಎರಡು ಮರಿತೋಳ, ಎರಡು ಮರಿನರಿ, ಎರಡು ಮರಿಮೊಲಗಳನ್ನು ಹಿಂದೆ ಕರೆದು ಕೊಂಡು ಆ ಸೋದರರು ಮುಂದೆ ಹೋದರು. ಆ ಸೋದರರಿಗೆ ಹಸಿವು ಇನ್ನೂ ಹೆಚ್ಚಾಗಿತ್ತು. ಅವರು ತಮ್ಮೊಡನೆ ಬಂದ ನರಿಗಳನ್ನು ಕುರಿತು “ನೀವು ಜಾಣನರಿಗಳು. ನಮಗೆ ತಿನ್ನಲು ಏನನ್ನಾದರೂ ತರುವಿರ?” ಎಂದು ಕೇಳಿದರು. ಅದಕ್ಕೆ ಆ ನರಿಗಳು “ಇಲ್ಲಿಗೆ ಸಮೀಪದಲ್ಲಿ ಒಂದು ಹಳ್ಳಿಯಿದೆ. ಅಲ್ಲಿ ನಾವು ಎಷ್ಟೋ ಸಣ್ಣ ಕೋಳಿಗಳನ್ನು ಕದ್ದಿದ್ದೇವೆ. ಆ ಹಳ್ಳಿಗೆ ನಾವು ದಾರಿ ತೋರಿಸಬಲ್ಲೆವು? ಎಂದುವು. ಅದರಂತೆ ಆ ಸೋದರರು ಆ ಹಳ್ಳಿಗೆ ಹೋಗಿ, ತಮಗೂ ತಮ್ಮ ಜೊತೆಯ ಪ್ರಾಣಿಗಳಿಗೂ ಬೇಕಾದ ಆಹಾರವನ್ನು ಕೊಂಡು ಕೊಂಡು ಮುಂದೆ ಸಾಗಿದರು. ನರಿಗಳಿಗೆ ಕೋಳಿ ಕದ್ದೂ ಕದ್ದೂ ಸುತ್ತ ಮುತ್ತಲೂ ಆಹಾರ ಸಿಕ್ಕುವ ಸ್ಪಳಗಳೆಲ್ಲ ಚೆನ್ನಾಗಿ ತಿಳಿದಿತ್ತು. ಅವು ಗಳಿಂದ ಆ ಸೋದರರಿಗೆ ಬಹಳ ಉಪಯೋಗವಾಯಿತು. ಅವರಿಬ್ಬರೂ ಹೀಗೆಯೇ ಕೆಲಕಾಲ ಸುತ್ತಾಡಿದರು. ಇಬ್ಬರಿಗೂ ಏನೂ ಕೆಲಸ ದೊರಕಲಿಲ್ಲ. “ಇನ್ನೇನು ಮಾಡುವುದು? ಇಬ್ಬರೂ ನಮ್ಮ ನಮ್ಮ ದಾರಿ ಹಿಡಿಯೋಣ” ಎಂದು ಅವರು ಆ ಸಿಂಹೆ, ಕರಡಿ, ತೋಳ, ನರಿ, ಮೊಲಗಳಲ್ಲಿ ಒಂದೊಂದನ್ನು ಸಮನಾಗಿ ಹಂಚಿಕೊಂಡರು. ಬಳಿಕ ಜಬ್ಬರಿಗೊಬ್ಬರು ನಮಸ್ಕಾರ ಮಾಡಿದರು. ಸಾಯುವವರೆಗೂ ಬ ಒಬ್ಬರನ್ನೊಬ್ಬರು ಪ್ರೀತಿಸುವುದಾಗಿ ಪ್ರಮಾಣಮಾಡಿದರು. ಅನಂತರ ಇಬ್ಬರು ಸಹೋದರರು ೧೯ ತಮ್ಮ ಸಾಕುತಂದಿ ಕೊಟ್ಟಿ ಚಾಕುವನ್ನು ಆ ಕವಲುದಾರಿಯ ಮರಕ್ಕೆ ನೇತುಹಾಕಿದರು. ಆಮೇಲೆ ಒಬ್ಬನು ಪೂರ್ವಕ್ಕೆ ಹೋದನು, ಇನ್ನೊ ಬ್ಬನು ಪಶ್ಚಿಮಕ್ಕೆ ಹೋದನು. ಅವರಿಬ್ಬರಲ್ಲಿ ಚಿಕ್ಕವನು ತನ್ನ ಪ್ರಾಣಿಗಳನ್ನು ಕರೆದುಕೊಂಡು ಒಂದು ಪಟ್ಟಣಕ್ಕೆ ಬಂದನು. ಅಲ್ಲೆಲ್ಲಿ ನೋಡಿದರೂ ಕಪ್ಪು ಬಟ್ಟಿ ಗಳನ್ನು ತೂಗುಹಾಕಿದ್ದರು. ಚಿಕ್ಕವನು ಅಲ್ಲಿ ಒಂದು ಛತ್ರದಲ್ಲಿ ಇಳಿ ದನು. ತನಗೂ ತನ್ನ ಪ್ರಾಣಿಗಳಿಗೂ ಸ್ಥಳ ಕೇಳಿದನು. ಛತ್ರದ ಯಜಮಾನನು ಆ ಪ್ರಾಣಿಗಳಿಗೆ ಒಂದು ಕೊಟ್ಟಿಗೆಯಲ್ಲಿ ಸಳೆ ಕೊಟ್ಟನು. ಆ ಕೊಟ್ಟಿಗೆಯ ಗೋಡೆಯಲ್ಲಿ ಒಂದು ರಂಧ್ರವಿತ್ತು. ರಂಧ್ರದಿಂದ ಹೊರಕ್ಕೆ ನುಸುಳಿ ಹೋಗಿ ಮೊಲ ಒಂದು ಕೋಸುಗೆಡ್ಡೆ ಹುಡುಕಿ ತಂದು ತಿಂದಿತು, ನರಿ ಒಂದು ಕೋಳಿಮರಿಯನ್ನು ಕದ್ದು ತಂದು ತಿಂದಿತು. ಆದರೆ ತೋಳ, ಕರಡಿ, ಸಿಂಹ ಮಾತ್ರ ಹಾಗೆ ನುಸುಳಿ ಹೋಗುವಷ್ಟು ಸಣ್ಣವಾಗಿರಲಿಲ್ಲ. ಛತ್ರದ ಯಜಮಾನನು ಒಂದು ಹಸುವನ್ನು ತಂದು ಹಾಕದಿದ್ದರೆ ಅವು ಹಸಿದುಕೊಂಡೇ ಇರ ಬೇಕಾಗಿತ್ತು. ಚಿಕ್ಕವನು ಹೀಗೆ ತನ್ನ ಪ್ರಾಣಿಗಳ ಹೊಟ್ಟಿ ಯಪಾಡನ್ನು ವಿಚಾ ರಿಸಿಕೊಂಡ ಬಳಿಕ, ನಗರದಲ್ಲಿ ಕಪ್ಪು ಬಟ್ಟೆಗಳನ್ನು ಇಳಿಯಬಿಟ್ಟುದಕ್ಕೆ ಕಾರಣ ಕೇಳಿದನು. “ಈ ಊರಿನ ರಾಜನಿಗೆ ಒಬ್ಬಳೇ ಮಗಳು. ಅವಳು ನಾಳೆ ಸಾಯ ಬೇಕಾಗಿದೆ. ಅದಕ್ಕಾಗಿ ಊರವರೆಲ್ಲ ದುಃಖಪಡುತ್ತ ಹೀಗೆ ಕಪ್ಪು ಬಟ್ಟಿ ಇಳಿಯಬಿಟ್ಟದ್ದಾರೆ” ಎಂದು ಛತ್ರದ ಯಜಮಾನನು ಹೇಳಿದನು. «ಅವಳು ನಾಳೆ ಏಕೆ ಸಾಯಬೇಕು? ಅವಳಿಗೆ ಗುಣಪಡಿಸಲಾಗ ದಂತಹ ಕಾಯಿಲೆಯಾಗಿದೆಯೆ?? ಎಂದು ಅವನು ಕೇಳಿದನು. "ಇಲ್ಲ, ಅವಳಿಗೇನೂ ಕಾಯಿಲೆಯಿಲ್ಲ. ಅವಳು ಆರೋಗ್ಯವಾಗಿ ದ್ಹಾಳೆ, ಆದರೂ ಅವಳು ನಾಳೆ ಸಾಯಬೇಕಾಗಿದೆ.? ೨೦ ಇಬ್ಬರು ಸಹೋದರರು “ಆದು ಏಕೆ?” « ಪ ಪಟ್ಟಣದ ಆಜೆ ಒಂದು ದೊಡ್ಡ ಪರ್ವತವಿದೆ. ಅದರ ಮೇಲೆ ಒಂದು ಘಟಸರ್ಪವಿದೆ. ಪ್ರತಿವರ್ಷವೂ ಅದಕ್ಕೆ ಒಂದು ಹೆಣ್ಣನ್ನು ಅರ್ಪಿಸಬೇಕು. ಇಲ್ಲದಿದ್ದರೆ, ಅದು ನಟ್ಟಣವನ್ನೆಲ್ಲಾ ನಾಶ ಮಾಡುತ್ತದೆ. ಈಗ ಊರಿನ ಹೆಣ್ಣುಮಕ್ಕಳೆಲ್ಲ ಮುಗಿದುಹೋದರು. ರಾಜನ ಮಗಳೊಬ್ಬಳೆ ಉಳಿದಿದ್ದಾಳೆ. ಆದ್ದರಿಂದ ಬೇರೆ ಉಪಾಯ ವಿಲ್ಲ. ಅವಳನ್ನು ಆ ಘಟಸರ್ಪಕ್ಕೆ ನಾಳೆ ಒಪ್ಪಿಸಲೇಬೇಕು.? "ಆ ಘಟಸರ್ಪವನ್ನು ಯಾರೂ ಕೊಲ್ಲುವುದಿಲ್ಲವೇಕೆ? ” “ ಘಟಸರ್ಪವನ್ನು ಕೊಂದನರಿಗೆ ನನ್ನ ಮಗಳನ್ನು ಮದುವೆಮಾಡಿ ಕೊಡುತ್ತೇನೆ, ಅರ್ಧರಾಜ್ಯ ಕೊಡುತ್ತೇನೆ ಎಂದು ಜಸ ಹೇಳಿ ದ್ದಾನೆ. ಅದಕ್ಕಾಗಿ ಅನೇಕ ವೀರರು ಪ್ರಯತ್ನಿಸಿ ಜೀವ ಕಳೆದು ಕೊಂಡಿದ್ದಾರೆ.” ಚಿಕ್ಕವನು ಮುಂದೆ ಮಾತಾಡಲಿಲ್ಲ. ಮಾರನೆಯ ಬೆಳಗ್ಗೆ ತನ್ನ ಪ್ರಾಣಿಗಳ ಸಮೇತ ಊರಾಜೆಯ ಪರ್ವತದ ಮೇಲೆ ಹತ್ತಿದನು. ತುದಿ ಯ ಒಂದು ಸಣ್ಣ ದೇವಸ್ಥಾ ನ ಕಂಡುಬಂದಿತು. ಒಳಗಿನ ಬಲಿಪೀಠದ ಮೇಲೆ ಪಾನಕ ತುಂಬಿದ ಮೂರು ಬಟ್ಟ ಲುಗಳಿದ್ದುವು. ಆ ಬಟ್ಟ ಲುಗಳ ಮೇಲೆ “ಇದರೊಳಗಿನ ಪಾನಕವನ್ನು ಸ್‌] ಅತ್ಯಂತ 6 ಗಳಾಗುತ್ತಾರೆ. ದೇವಸ್ಥಾನದ ಮೆಟ್ಟಲುಗಳ ಬಳಿ ಹೂಳಿರುವ ಕತ್ತಿ ಯನ್ನು ಹಿಡಿದು ತಿರುಗಿಸಲು ಸಮರ್ಥರಾಗುತ್ತಾರೆ” ಎಂಬ ಮಾತು ಕೆತ್ತಿತ್ತು. ಚಿಕ್ಕವನು ಆ ಪಾನಕವನ್ನು ಆಗಲೇ ಕುಡಿಯದೆ, ಮೆಟ್ಟಲ ಬಳಿ ಹೊತಿದ್ದ ಕತ್ತಿ ಯನ್ನು ಅಲ್ಲಾಡಿಸಲು ನೋಡಿದನು. ಅದು ಅವನ ಕೈ ಲಾಗಲಿಲ್ಲ. ಆಗ ನೀವಸ್ನಾ ನಕ್ಕೆ ಬಂದು ಮೂರೂ ಬಟ್ಟ ಲುಗಳ ಪಾನಕವನ್ನು ಕುಡಿದನು. ಅನಂತರ ಕ್ರ ಯನ್ನು ಎತ್ತುವುದು ಕನ್ನ ವಾಗ ಲಿಲ್ಲ. ಅದನ್ನು ಸುಲಭವಾಗಿ ಎತ್ತಿ ತಿರುಗಿಸಿದರು. ರಾಜನ ಮಗಳನ್ನು ಘಟಸರ್ಪಕ್ಕೆ ಅರ್ಪಿಸುವ ಹೊತ್ತು ಬಂದಿತು. ಅವಳ ತಂದೆ, ಸೇನಾಧಿಪತಿ ಮತ್ತು ಇತರ ರಾಜಪರಿವಾರದವರು ಅವ ಇಬ್ಬರು ಸಹೋದರರು ೨೧ ಳೊಡನೆ ಬೆಟ್ಟದ ಬುಡದವರೆಗೂ ಬಂದರು. ಅವಳು ಕೆಳಗಿನಿಂದಲೇ ಮೇಲೆ ನೋಡಿ, ತುದಿಯಲ್ಲಿದ್ದ ಬೇಟೆಗಾರನನ್ನು ತನಗಾಗಿ ಕಾದಿರುವ ಘಟಸರ್ಪವೆಂದು ಭಾವಿಸಿ, ಹತ್ತಿ ಹೋಗಲು ಹಿಂಜರಿದಳು. ಸ್ವಲ್ಪ ವೇಳೆ ಯಾದ ಮೇಲೆ, ತಾನು ಹೋಗದಿದ್ದರೆ ಪಟ್ಟಿ ಇವೆಲ್ಲವೂ ನಾಶವಾಗುವು ದೆಂದು ಹೆದರಿ ಧೈರ್ಯ ತಂದುಕೊಂಡು ಒಂದೊಂದೇ ಮೆಟ್ಟಿ ಲಾಗಿ ಮೇಲೆ ಹತ್ತಿದಳು. ರಾಜನೂ ಪರಿವಾರದವರೂ ದುಃಖದಿಂದ ಹಿಂದಿರು ಗಿದರು. ಸೈನ್ಯಾಧಿಪತಿ ಮಾತ್ರ ಹಿಂದೆ ಉಳಿದನು. ಕೊನೆಯವರೆಗೂ ಅಲ್ಲಿದ್ದು ನೋಡುವುದು ಅವನ ಕರ್ತವ್ಯವಾಗಿತ್ತು. ರಾಜಕುಮಾರಿ ಪರ್ವತದ ನೆತ್ತಿಯನ್ನು ಸೇರಿದಳು. ಅವಳು ಎಂದುಕೊಂಡಿದ್ದಂತೆ ಅಲ್ಲಿ ಘಟಸರ್ಪವಿರಲಿಲ್ಲ. ಅದಕ್ಕೆ ಬದಲ್ಕು ತನ್ನನ್ನು ಕಾಪಾಡುವೆನೆಂದು ಪ್ರತಿಜ್ಞಿಮಾಡಿದ ಒಬ್ಬ ಯುವಕನನ್ನು ಆಕೆ ಅಲ್ಲಿ ಕಂಡಳು. ಅವನು ಅವಳನ್ನು ಅಲ್ಲಿಯ ದೇವಸ್ಥಾನದೊಳಕ್ಕೆ ಕಳುಹಿಸಿ ಬಾಗಿಲಿಗೆ ಬೀಗ ಹಾಕಿದನು. ಸ್ವಲ್ಪ ಹೊತ್ತಿನಲ್ಲಿಯೇ ಭಯಂಕರವಾದ ಗುಡುಗು ಕೇಳಿಸಿತು. ಏಳು ತಲೆಗಳ ಮಹಾ ಘಟಸರ್ಪ ತನ್ನ ಕಡೆಗೆ ಬರುವುದನ್ನು ಚಿಕ್ಕವನು ಕಂಡನು. ಅದು ಅವನನ್ನೆ ನೋಡುತ್ತ, “ ಇಲ್ಲಿ ಈ ಬೆಟ್ಟದ ಮೇಲೆ ನೀನೇನು ಮಾಡುನೆ2” ಎಂದ ಆಶ್ಚರ್ಯವಾಗುವಂತೆ ಕೂಗಿಕೊಂಡಿತು. 4 ನಾನು ನಿನ್ನೊಡನೆ ಯುದ್ಧಮಾಡಲು ಬಂದಿದ್ದೇನೆ” ಎಂದು ಚಿಕ್ಕನನು ಧೈರ್ಯದಿಂದ ಉತ್ತರಕೊಟ್ಟು. “ಓಹೋ! ಅನೇಕ ವೀರಾಧಿವೀರರು ಹೀಗೆಯೇ ಹೇಳಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ನಾನು ಇಂದು ನಿನ್ನನ್ನು ಕೊನೆಗಾಣಿಸು ತ್ರೇನೆ ಎಂದು ಆ ಘಟಸರ್ಪವು ಕಿರಿಚಿಕೊಂಡಿತು. ಅದರ ಏಳು ದಾಡೆ ಗಳಿಂದಲೂ ಬೆಂಕಿ ಬಂದು, ಸುತ್ತಲೂ ಇದ್ದ ಹುಲ್ಲೆಲ್ಲ ಹತ್ತಿ ಉರಿದು ಹೋಯಿತು. ಆ ಶಾಖದಿಂದಲೂ ಹೊಗೆಯಿಂದಲೂ ಚಿಕ್ಕವನಿಗೆ ಉಸಿರು ೨೨ ಇಬ್ಬರು ಸಹೋದರರು ಕಟ್ಟಿ ಕೊಂಡಿತು. ಆದರೆ ಅವನ ಪ್ರಾಣಿಗಳು ಓಡಿಬಂದು ಆ ಬೆಂಕಿಯನ್ನು ತುಳಿದು ಆರಿಸಿದುವು. ಘಟಸರ್ಪಕ್ಕೆ ರೋಷ ಬಂದಿತು. ಅದು ಚಿಕ್ಕವನ ಮೇಲೆ ಹಾರಿತು. ಅವನು ತನ್ನ ಕತ್ತಿಯನ್ನು ಅದರ ಕಡೆ ಬೀಸಿ ಅದರ ಮೂರು ತಲೆಗಳನ್ನು ಕತ್ತರಿಸಿದನು. ಘಟಸರ್ಪವು ಪುನಃ ಕೋಪದಿಂದ ಮೇಲೆದ್ದು, ಅವನ ಕಡೆಗೆ ಬೆಂಕಿಯ ಜ್ವಾಲೆಗಳನ್ನು ಎರಚಿ, ಮೇಲೆ ಬೀಳುವುದರಲ್ಲಿತ್ತು. ಆಗ ಚಿಕ್ಕವನು ಅದರ ಇನ್ನೂ ಮೂರು ತಲೆಗಳನ್ನು ಕಡಿದನು. ಕಡೆಯ ಹೊಡೆತ ಹೊಡೆದು ಅದರ ಬಾಲವನ್ನು ಕತ್ತರಿಸಿದನು. ಅವನಿಗೆ ಆ ವೇಳೆಗೆ ಶಕ್ತಿ ಕುಂದಿದ್ದುದರಿಂದ ತನ್ನ ಪ್ರಾಣಿಗಳನ್ನು ಕರೆದನು. ಅವು ಬಂದು ಆ ಘಟಸರ್ಪವನ್ನು ಚೂರುಚೂರು ಮಾಡಿದುವು. ಯುದ್ಧವೆಲ್ಲಾ ಮುಗಿದ ಮೇಲೆ ಚಿಕ್ಕವನು ದೇವಸ್ಥಾನದ ಬಾಗಿ ಲನ್ನು ತೆರೆದನು. ಯುದ್ಧ ನಡೆಯುತ್ತಿದ್ದಾಗ ರಾಜಕುಮಾರಿಯು ಭಯ ಗೊಂಡು ಮೂರ್ಛೆ ಹೋಗಿದ್ದಳು. ಚಿಕ್ಕವನು ಅವಳನ್ನು ಹೊರಗೆ ಎತ್ತಿ ಕೊಂಡು ಬಂದನು. ಅವಳಿಗೆ ಜಾನ ಬಂದು ಅವಳು ಕಣ್ಣು ತೆರೆದಾಗ, ಚೂರುಚೂರಾಗಿದ್ದ ಆ ಸರ್ಪವನ್ನು ಅವಳಿಗೆ ತೋರಿಸಿದನು. ರಾಜ ಕುಮಾರಿಯು ಸಂತೋಷಪಟ್ಟು, “ ಘಟಸರ್ಪವನ್ನು ಕೊಂದವರಿಗೆ ನನ್ನನ್ನು ಮದುವೆಮಾಡಿಕೊಡುವುದಾಗಿ ನಮ್ಮ ತಂಜಿ ಹೇಳಿದ್ದನು. ಅದ ರಂತೆ ನಾನು ನಿನ್ನನ್ನು ವರಿಸುತ್ತೇನೆ” ಎಂದಳು. ಪ್ರಾಣಿಗಳು ಮಾಡಿದ ಉಪಕಾರಕ್ಕೆ ಬಹುಮಾನವಾಗಿ ತನ್ನ ಹವಳದ ಸರವನ್ನು ತೆಗೆದು ಅವು ಗಳಿಗೆ ಹೆಂಚಿಕೊಟ್ಟಳು. ಆ ಸರದ ಚಿನ್ನದ ಕೊಂಡಿಯನ್ನು ಸಿಂಹಕ್ಕೆ ಕೊಟ್ಟಳು. ತನ್ನ ಹೆಸರು ಹಾಕಿದ ಕರವಸ್ತ್ರವನ್ನು ಚಿಕ್ಕವನಿಗೆ ಕೊಟ್ಟಳು. ಅವನು ಘಟಸರ್ಪದ ಏಳು ನಾಲಗೆಗಳನ್ನು ಕತ್ತರಿಸಿ ಅದರಲ್ಲಿ ಸುತ್ತಿ ಇರಿಸಿಕೊಂಡನು. ಬಿಸಿಲಿನಲ್ಲಿ ಯುದ್ಧಮಾಡಿ ದಣಿದಿದ್ದುದರಿಂದ ಚಿಕ್ಕವನೂ ರಾಜ ಕುಮಾರಿಯೂ ಆಯಾಸಪರಿಹಾರಕ್ಕಾಗಿ ಅಲ್ಲಿಯೆ ಮಲಗಿಕೊಂಡರು. ಮಲಗುವುದಕ್ಕೆ ಮುಂಜಿ ಚಿಕ್ಕವನು ಸಿಂಹವನ್ನು ಕರೆದು “ ಮಲಗಬೇಡ. ಎಚ್ಚರವಾಗಿದ್ದು ನೋಡಿಕೊ” ಎಂದು ಆಜ್ಞೆ ಮಾಡಿದನು. ಇಬ್ಬರು ಸಹೋದರರು ೨.4 .ಸಿಂಹಕ್ಕೆ ಆಯಾಸವಾಗಿತ್ತು. ಅದು ಕರಡಿಯನ್ನು ಕೂಗಿ « ಮಲಗಬೇಡ. ಎಚ್ಚರವಾಗಿದ್ದು ನೋಡಿಕೊ” ಎಂದು ಆಜ್ಞೆ ಮಾಡಿ ತಾನು ಮೆಲಗಿಕೊಂಡಿತು. ಕರಡಿಗೂ ಆಯಾಸನಾಗಿತ್ತು. ಅದು ತೋಳಕ್ಕೆ ಹೇಳಿ ನಿದ್ದೆ ಹೋಯಿತು. ತೋಳ ನರಿಗೆ ಹೇಳಿತು. ನರಿ ಮೊಲಕ್ಕೆ ಹೇಳಿತು. ಮೊಲಕ್ಕೂ ಆಯಾಸವಾಗಿತ್ತು. ಆದರೆ ಅದು ಯಾರಿಗೂ ಆಜ್ಞೆ ಮಾಡುವಂತಿರಲಿಲ್ಲವಾದ್ದರಿಂದ ಅದು ಯಾರಿಗೂ ಹೇಳ ದೆಯೆ ನಿದ್ದೆಮಾಡಿಬಿಟ್ಟಿತು. ಅದುವರೆಗು ಸೈನ್ಯಾಧಿಪತಿಯು ಕೆಳಗೇ ಕುಳಿತಿದ್ದನು. ಬೆಟ್ಟದ ಮೇಲೆ ಏನೂ ಸದ್ದು ಕೇಳಿಸದಿರಲ್ಲು, ಧರ್ಯ ತಂದುಕೊಂಡು ಮೇಲೇರಿ ದನು. ಅಲ್ಲಿ ಚೂರುಚೂರಾಗಿ ಬಿದ್ದಿದ್ದ ಘಟಿಸರ್ಪದ ಹೆಣವನ್ನು ಕಂಡನು. ಅಲ್ಲಿಯೆ ಹತ್ತಿರದಲ್ಲಿ ರಾಜಕುಮಾರಿಯೂ ಚಿಕ್ಕವನೂ ಅವನ ಪ್ರಾಣಿಗಳೂ ಗಾಢನಿದ್ರೆಯಲ್ಲಿದ್ದರು. ಸೇನಾಧಿಪತಿಯು ಬಹಳ ಕಟ ಮನುಷ್ಯ. ಅವನು ಚಿಕ್ಕವನ ತಲೆ ಕಡಿದನು. ರಾಜಕುಮಾರಿಯನ್ನು ಎತ್ತಿಕೊಂಡು ಬೆಟ್ಟವಿಳಿದನು. ಅವಳಿಗೆ ಎಚ್ಚರವಾಯಿತು. ಭಯದಿಂದ ಕೂಗಿಕೊಂಡಳು. ಸೇನಾಧಿಪತಿ ಅವಳ ಬಾಯಿ ಮುಚ್ಚಿ, “ ನೀನು ಈಗ ನನ್ನ ಕೈವಶವಾಗಿರುವೆ. ಘಟಸರ್ಪವನ್ನು ನಾನೇ ಕೊಂದೆನೆಂದು ಎಲ್ಲ ರಿಗೂ ಹೇಳಬೇಕು. ಇಲ್ಲದಿದ್ದರೆ ನಿನ್ನನ್ನು ಇಲ್ಲಿಯೇ ಕೊಂದುಬಿಡುನೆನು” ಎಂದು ಗದರಿಸಿದನು. ರಾಜಕುಮಾರಿಯು ಹೆದರಿ ಅವನ ಆಜ್ಞೆಯಂತೆ ನಡೆಯುವೆನೆಂದು ಒಪ್ಪಿದಳು. ಸೇನಾಧಿಸತಿಯು ಅವಳನ್ನು ಅರಮನೆಗೆ ಕರೆದುಕೊಂಡು ಹೋದನು. ಅವಳನ್ನು ಘಟಸರ್ಪ ತಿಂದು ಬಿಟ್ಟಿ ರಬೇಕೆಂದು ದುಃಖ ಪಡುತ್ತಿದ್ದ ರಾಜನು ಅವಳನ್ನು ಕಣ್ಣಾರೆ ಕಂಡು ಸಂತೋಷನಟ್ಟನು. ಆ ಸಂತೋಷದಲ್ಲಿ ಏನು ಮಾಡಬೇಕು ಎಂಬುದೇ ಅವನಿಗೆ ತಿಳಿಯದೆ ಹೋಯಿತು. ಸೈನ್ಯಾಧಿಪತಿಯು ರಾಜನ ಹತ್ತಿರ ಬಂದು, ತಾನೇ ಘಟಸರ್ಪವನ್ನು ಕೊಂದು ರಾಜಕುಮಾರಿಯನ್ನು ಬದುಕಿಸಿದೆನೆಂದು ಹೇಳಿಕೊಂಡನು. ೨೪ ಇಬ್ಬ ರು ಸಹೋದರರು. “ ಇದು ನಿಜವೆ? ಎಂದು ರಾಜನು ಮಗಳನ್ನು ಕೇಳಿದನು. « ಹೌದು. ನಿಜವೆಂದೇ ಕಾಣುತ್ತದೆ. ಆದರೆ ಒಂದು ವರುಷದ ಮೇಲೆ ಒಂದು ದಿವಸ ಕಳೆಯುವವಕರೆಗೂ ನಾನು ಮದುವೆಮಾಡಿ ಕೊಳ್ಳಲು ಒಪ್ಪುವುದಿಲ್ಲ” ಎಂದು ಅವಳು ಹೇಳಿದಳು. ತಾನು ಮದುವೆ ಮಾಡಿಕೊಳ್ಳುವುದಾಗಿ ಮಾತುಕೊಟ್ಟ ಬೇಟೆಗಾರನ ವಿಷಯವೇನಾ ದರೂ ಅಷ್ಟರೊಳಗೆ ತಿಳಿದುಬರಬಹುದೆಂದು ಅವಳಿಗೆ ಆಸೆಯಿತ್ತು. ಇತ್ತ ಬೆಟ್ಟದ ಮೇಲೈ, ಪ್ರಾಣಿಗಳಲ್ಲವೂ ತಮ್ಮ ಯಜಮಾನನು ಸತ್ತುದನ್ನು ತಿಳಿಯದೆ ಇನ್ನೂ ನಿದ್ದೆ ಮಾಡುತ್ತಿದ್ದುವು. ಆಗ ಒಂದು ದೊಡ್ಡ ಜೇನುಹುಳು ಬಂದು ಮೊಲದ ಮೂಗಿನ ಮೇಲೆ ಕುಳಿತು ಕೊಂಡಿತು. ಮೊಲ ಅದನ್ನು ತನ್ನ ಮುಂಗಾಲಿನಿಂದ ಓಡಿಸಿ ಪುನಃ ಮಲಗಿಕೊಂಡಿತು. ಜೇನುಹುಳು ಎರಡನೆಯ ಸಲ ಬಂದು ಕುಳಿತು ಕೊಂಡಿತು. ಮೊಲ ಎರಡನೆಯ ಸಲವೂ ಅದನ್ನು ಓಡಿಸಿತು. ಮೂರ ನೆಯ ಸಲ ಜೇನು ಬಂದು ಮೊಲದ ಮೂಗಿನ ಮೇಲೆ ಕುಳಿತು ಕಚ್ಚಿ ದಾಗ ಅದಕ್ಕೆ ಎಚ್ಚರವಾಯಿತು. ಮೊಲ ತಾನು ಎದ್ದು ನರಿಯನ್ನು ಎಬ್ಬಿಸಿತು. ನರಿ ತೋಳವನ್ನು ಎಬ್ಬಿಸಿತು. ತೋಳ ಕರಡಿಯನ್ನು ಎಬ್ಬಿಸಿತು. ಕರಡಿ ಸಿಂಹವನ್ನು ಎಬ್ಬಿಸಿತು. ಸಿಂಹ ಎದ್ದು ರಾಜಕುಮಾರಿ ಅಲ್ಲಿ ಇಲ್ಲದುದನ್ನೂ ತಮ್ಮ ಯಜಮಾನನು ಸತ್ತಿದ್ದುದನ್ನೂ ಕಂಡು ಭಯಂಕರವಾಗಿ ಗರ್ಜಿಸಿತು. ಗರ್ಜಿಸಿ, "ಇದು ಯಾರು ಮಾಡಿದ ಕೆಲಸ? ಕರಡಿ, ನೀನೇಕೆ ನನ್ನನ್ನು ಎಬ್ಬಿಸಲಿಲ್ಲ?” ಎಂದು ಕೂಗಿಕೊಂಡಿತು. ಕರಡಿ ತೋಳದ ಮೇಲೆ ತಿರುಗಿತು. ತೋಳ ನರಿಯ ಮೇಲೆ ತಿರುಗಿತು. ನರಿ ಬಡಪಾಯಿ ಮೊಲದ ಮೇಲೆ ತಿರುಗಿತು. ಮೊಲಕ್ಕೆ, ಪಾಸ, ಉತ್ತರ ಕೊಡಲು ತೋಚಲಿಲ್ಲ. ತಪ್ಪು ಅದರ ಮೇಲೆಯೆ ಬಿದ್ದಿತು. ಎಲ್ಲ ಪ್ರಾಣಿಗಳೂ ಅದನ್ನು ಕೊಲ್ಲಲು ಎದ್ದುವು. ಆಗ ಮೊಲ “ ನನ್ನನ್ನು ಕೊಲ್ಲಬೇಡಿ. ನಮ್ಮ ಯಜಮಾನ ಪುನಃ ಜೀವಿಸುವಂತೆ ಮಾಡುತ್ತೇನೆ. ಒಂದು ತರಹ ಬೇರು ಇದೆ. ಅದನ್ನು ಇಬ್ಬರು ಸಹೋದರರು ೨೫ ತುಟಿಗೆ ಸೋಕಿಸಿದರ್ಕೆ ಎಂತಹ ಗಾಯವಾಗಲಿ ಕಾಯಿಲೆಯಾಗಲಿ ವಾಸಿ ಯಾಗಿಬಿಡುವುದು. ಆ ಬೇರು ಸಿಕ್ಕುವ ಬೆಟ್ಟಿ ನನಗೆ ಗೊತ್ತು. ಅದು ಇಲ್ಲಿಂದ ಇನ್ನೂರು ಹರಿದಾರಿ ದೂರವಿದೆ? ಎಂದಿತು. “ ಇನ್ನು ಇಪ್ಪತ್ತನಾಲ್ಫು ಗಂಟೆಗಳೊಳಗೆ ನೀನು ಆ ಬೇರನ್ನು ತೆಗೆದುಕೊಂಡು ಬರಬೇಕು” ಎಂದು ಸಿಂಹ ಆಜ್ಞೆ ಮಾಡಿತು. ಮೊಲವು ತಡಮಾಡದೆ ಓಡಿಹೋಗಿ, ಇಪ್ಪತ್ತನಾಲ್ಕು ಗಂಟೆಗಳೊಳಗೆ ಬೇರನ್ನು ತಂದು ಕೊಟ್ಟಿ ತು. ಸಿಂಹ ತನ್ನ ಯಜಮಾನನ ತಲೆಯನ್ನು ದೇಹಕ್ಕೆ ಜೋಡಿಸಿತು. ಮೊಲ ಬೇರನ್ನು ಅವನ ತುಟಿಗೆ ಸೋಕಿಸಿತು. ಒಡನೆಯೆ ತಲೆ ದೇಹಕ್ಕೆ ಅಂಟಿಕೊಂಡಿತು, ಅವನಿಗೆ ಪ್ರಾಣ ಬಂದಿತು. ಬೇಟಿಗಾರನು ಎಚ್ಚರ ಗೊಂಡು, ರಾಜಕುಮಾರಿ ಅಲ್ಲಿ ಇಲ್ಲದುದನ್ನು ಕಂಡು, “ನನ್ನನ್ನು ಮದುನೆ ಯಾಗಲು ಮನಸ್ಸಿಲ್ಲದೆ ನಾನು ಮಲಗಿದ್ದಾಗ ಹೇಳದೆ ಹೊರಟುಹೋಗಿ ದ್ದಾ ಳೆ” ಎಂದುಕೊಂಡು ಸುಮ್ಮನಾದನು. ಸಿಂಹ ತನ್ನ ಅವಸರದಲ್ಲಿ ಅವನ ತಲೆಯನ್ನು ಹಿಂದುಮುಂದಾಗಿ ಇಟ್ಟು ಬಿಟ್ಟಿತ್ತು. ರಾಜಕುಮೂರಿಯ ಯೋಚನೆಯಲ್ಲಿದ್ದುದರಿಂದ ಅವ ನಿಗೆ ಅದು ಮೊದಲು ಗೊತ್ತಾಗಲಿಲ್ಲ. ಮಧ್ಯಾಹ್ನ ಊಟಮಾಡುವಾಗ ತಿಳಿಯಿತು. “ ನನ್ನ ತಲೆ ಹೀಗೇಕ ತಿರುಗಿದೆ? ನಾನು ಮಲಗಿರುವಾಗ ಏನಾಯಿತು?” ಎಂದು ಅವನು ಆ ಪ್ರಾಣಿಗಳನ್ನು ಕೇಳಿದನು. ಸಿಂಹ ನಡೆದ ಸಮಾಜಾರವನ್ನೆಲ್ಲ ಅವನಿಗೆ ತಿಳಿಸಿತು. ಅವನ ತಲೆಯನ್ನು ಸರಿ ಪಡಿಸುನೆನೆಂದು ನಂಬಿಕೆ ಹೇಳಿ, ಪುನಃ ಅವನ ತಲೆಯನ್ನು ಕತ್ತರಿಸಿತು. ಈ ಸಲ ಸರಿಯಾಗಿ ನೋಡಿ ಇಟ್ಟತು. ಮೊಲ ತಂದ ಬೇರಿನಿಂದ ತಲೆ ಪುನಃ ಮೈಗೆ ಸೇರಿಕೊಂಡಿತು. ರಾಜಕುಮಾರಿಯನ್ನು ಕಳೆದುಕೊಂಡ ದುಃಖದಿಂದ ಆ ಬೇಟಿ ಗಾರನು ಊರೂರು ಸುತ್ತುತ್ತ ಹೋದನು. ತನ್ನ ಪ್ರಾಣಿಗಳನ್ನು ಜನರ ಮುಂದೆ ಕುಣಿಸಿ ಅನ್ನ ಸಂಪಾದಿಸಿದನು. ೨೬ ಇಬ್ಬರು ಸಹೋದರರು ಒಂದು ವರ್ಷ ಹೀಗೆಯೇ ಸಂಚಾರ ಮಾಡುತ್ತ, ವರ್ಷದ ಕೊನೆ ಯಲ್ಲಿ ತಾನು ಘಟಸರ್ಪವನ್ನು ಕೊಂದ ಊರಿಗೇ ಪುನಃ ಬಂದನು. ಆದರೆ ಈ ಸಲ ಊರನ್ನೆಲ್ಲ ಕೆಂಪು ಬಣ್ಣದಿಂದ ಅಲಂಕರಿಸಿದ್ದರು. ಅವನು ಪುನಃ ಛತ್ರದ ಯಜಮಾನನನ್ನು ಕುರಿತು “ಇದೇನು? ಒಂದು ವರ್ಷದೆ ಹಿಂದೆ ನಾನು ಇಲ್ಲಿ ಬಂದಾಗ ಪಟ್ಟಣದಲ್ಲೆಲ್ಲ ಕಪ್ಪು ಕವಿದಿತ್ತು. ಈ ದಿವಸ ಏನು ಕೆಂಪಿನಿಂದ ಅಲಂಕರಿಸಿರುವರಲ್ಲ?” ಎಂದು ಕೇಳಿದನು. "ಒಂದು ವರುಷದ ಹಿಂದೆ ನಮ್ಮ ಸೇನಾಧಿಪತಿಯು ಇಲ್ಲಿಯ ಘಟಸರ್ಪದೊಡನೆ ಕಾದಾಡಿ, ಅದನ್ನು ಕೊಂದ ರಾಜಕುಮಾರಿಯನ್ನು ಕಾಪಾಡಿದನು. ನಾಳೆ ಅವರ ಮದುನೆ ನಡೆಯುತ್ತದೆ. ಆ ದಿವಸ ನಮ್ಮ ನಗರದಲ್ಲಿ ದುಃಖನಿದ್ದುದಕ್ಕೂ ಈ ದಿನ ಸಂತೋಷವಿರುವುದಕ್ಕೂ ಇದೇ ಕಾರಣ” ಎಂದು ಛತ್ರದ ಯಜಮಾನನು ಹೇಳಿದನು. ಮದುವೆಯ ದಿವಸ, ಊಟಕ್ಕೆ ಕೂತುಕೊಳ್ಳುವ ವೇಳೆಯಲ್ಲಿ ಬೇಟೆಗಾರನು ಛತ್ರದ ಯಜಮಾನನನ್ನು ಕರೆದು, “ಈ ದಿನ ರಾಜನು ಅರಮನೆಯಲ್ಲಿ ತಿನ್ನುವ ರೊಟ್ಟಿಯನ್ನು ನಾನು ನಿನ್ನ ಮನೆಯಲ್ಲಿ ತಿನ್ನುನೆ ನೆಂದರೆ ನೀನು ನಂಬುವೆಯೋ?” ಎಂದು ಕೇಳಿದನು. “ಇದು ಆಗದ ಕೆಲಸ. ಇದನ್ನು ನೀನು ನಡೆಸಿದರೆ ಒಂದುನೂರು ಹೊನ್ನು ಕೊಡುತ್ತೇನೆ” ಎಂದು ಛತ್ರದ ಯಜಮಾನನು ನೂರು ಹೊನ್ನಿನ ಚೀಲವನ್ನು ಮುಂದಿಟ್ಟನು. ಬೇಟಿಗಾರನು ಆ ಪಂಥವನ್ನು ಒಪ್ಪಿ ಕೊಂಡು, ತನ್ನ ಮೊಲವನ್ನು ಕರೆದು “ಮುದ್ದುಮೊಲನೆ, ಹೋಗಿ, ರಾಜನು ಅರಮನೆಯಲ್ಲಿ ತಿನ್ನುವ ರೊಟ್ಟಿಯ ಒಂದು ಚೂರು ತಾ” ಎಂದನು. “ನಾನು ಹೋದರೆ ದಾರಿಯಲ್ಲಿ ಕಟುಕರ ನಾಯಿಗಳು ನನ್ನ ಬೆನ್ನಟ್ಟುತ್ತವೆ” ಎಂದು ನಡುಗುತ್ತಲೇ ಮೊಲ ಹೊರಟತು. ಅದು ಹೆದರಿಕೊಂಡಿದ್ದಂತೆಯೆ ನಾಯಿಗಳು ಅದರ. ಬೆನ್ನು ಹತ್ತಿ ಅದನ್ನು ಸೀಳಲು ಯತ್ನಿಸಿದುವು. ಆದರೆ ಮೊಲ ಅರಮನೆಯ ಬಾಗಿಲಿಗೆ ಇಬ್ಬರು ಸಹೋದರರು ೨೭ ಬಂದೊಡನೆಯೆ ಕಾವಲಿನ ಸಿಪಾಯಿಗೆ ತಿಳಿಯದಂತೆ ಒಂದು ಹಾರು ಹಾರಿ ಅವನ ಗೂಡಿನಲ್ಲಿ ಅವಿತುಕೊಂಡಿತು. ನಾಯಿಗಳು ಅದು ಅವಿತು ಕೊಂಡುದನ್ನು ಕಂಡು ಅದನ್ನು ಹೊರಗೋಡಿಸಜೇಕೆಂದು ಪ್ರಯತ್ನಿಸಿ ದುವು. ಆದರೆ ಪಹರೆಯವನು ಅವುಗಳನ್ನು ಅಟ್ಟ ಓಡಿಸಿದನು. ನಾಯಿಗಳ ಶಬ್ದ ನಿಂತಮೇಲೆ ಮೊಲ ಅರಮನೆಯ ಕಡೆ ಹಾರಿತು. ಒಳಗಡೆ ರಾಜನ ಮಗಳು ಕುಳಿತಿದ್ದ ಸ್ಥಳಕ್ಕೆ ಹೋಗಿ, ಅವಳ ಕುರ್ಚಿಯ ಅಡಿಯಲ್ಲಿ ನುಸುಳಿ ಅವಳ ಕಾಲು ಈ*ೆರೆಯಿತು. ಅವಳು ಅದನ್ನು ತನ್ನ ನಾಯಿಯೆಂದು ತಿಳಿದು ಆಚೆ ಹೋಗಹೇಳಿದಳು. ಅದು ಮೂರು ಸಲ ಕೆರೆದರೂ ಅವಳು ಅದರ ಕಡೆ ನೋಡಲಿಲ್ಲ. ಇನ್ನೊಂದು ಸಲ ಮೊಲ ಕಾಲು ಕೆರೆಯಿತು. ಆಗ ಅವಳು ತಿರುಗಿನೋಡಿ ಮೊಲವನ್ನು ಅದರ ಕೊರಳಪಟ್ಟಿ ಯಿಂದ ಗುರುತಿಸಿದಳು. ಅದನ್ನು ತೋಳುಗಳಲ್ಲಿ ಎತ್ತಿ ಕೊಂಡು ಅದಕ್ಕೇನುಬೇಕೆಂದು ಕೇಳಿದಳು. ಘಟಸರ್ಪವನ್ನು ಕೊಂದ ವನು ಊರಿಗೆ ಬಂದಿರುವನೆಂದು ಕೇಳಿ ಅವಳಿಗೆ ಸಂತೋಷವಾಯಿತು. ಅವನು ಕೇಳಿದ ರೊಟ್ಟಿಯನ್ನು ಕಳುಹಿಸಲು ಒಪ್ಪಿದಳು. ನಾಯಿಗಳು ಮೊಲವನ್ನು ಹಿಂಸಿಸದ ಹಾಗೆ ಅದನ್ನು ಎತ್ತಿಕೊಂಡುಹೋಗಲು ಒಬ್ಬ ಅಡುಗೆಯವನನ್ನು ಕಳುಹಿಸಿದಳು. ಅವನು ಮೊಲವನ್ನೂ ರೊಟ್ಟಿಯನ್ನೂ ಆ ಬೇಟೆಗಾರರು ತಂಗಿದ್ದ ಛತ್ರದ ಬಾಗಿಲಿನವರೆಗೂ ಒಯ್ದನು. ಅಲ್ಲಿಂದ ಮುಂದೆ ಮೊಲ ರೊಟ್ಟಿ ಯನ್ನು ಕೊಂಡುಹೋಗ್ಟಿ ತನ್ನ ಯಜಮಾನನಿಗೆ ಕೊಟ್ಟಿ ತು. “ನೋಡಿದೆಯ, ಅಯ್ಯ! ಈ ನೂರು ಹೊನ್ನು ನನ್ನದು” ಎಂದು ಬೇಟೆಗಾರನು ಛತ್ರದವನಿಗೆಂದನು. ಅವನಿಗೆ ಆಶ್ಚರ್ಯವಾಯಿತು. ಅದರಂತೆಯೇ ಬೇಟೆಗಾರನು ನರಿ ತೋಳ, ಕರಡಿ ಸಿಂಹೆಗಳನ್ನೂ ಕ್ರಮವಾಗಿ ಕಳುಹಿಸಿ ರಾಜನು ಉಪಯೋಗಿಸುವ ಮಾಂಸ್ಕ ತರಕಾರಿ ಮಿಠಾಯಿ, ದ್ರಾಕ್ಸಾರಸಗಳನ್ನೂ ತರಿಸಿದನು. ಬೇಟಿಗಾರನು ತಾನು ಅರಮನೆಯಿಂದ ತರಿಸಿದುದನ್ನೆಲ್ಲ ತನ್ನ ಪ್ರಾಣಿಗಳಿಗೂ ಕೊಟ್ಟು ತಾನೂ ತಿಂದನು. ತಿಂದ ಬಳಿಕ “ನಾನು ೨೮ ಇಬ್ಬರು ಸಹೋದರರು ರಾಜನು ತಿನ್ನುವ ಹಾಗೆಯೆ ತಿಂದಿದ್ದೇನೆ. ಈಗ ಅರಮನೆಗೆ ಹೋಗಿ ರಾಜನ ಮಗಳನ್ನು ಮದುವೆಯಾಗುತ್ತೇನೆ? ಎಂದನು. “ಮೊದಲೇ ಒಂದು ಗಂಡು ಗೊತ್ತಾಗಿದೆ. ಮದುವೆ ಈ ದಿವಸವೇ ನಡೆಯಬೇಕಾಗಿದೆ. ಇದು ಹೇಗೆ ಸಾಧ್ಯ?” ಎಂದು ಛತ್ರದ ಯಜ ಮಾನನೆಂದನು. ಬೇಟೆಗಾರರು ರಾಜಕುಮಾರಿ ಕೊಟ್ಟ ಕರವಸ್ತ್ರದಲ್ಲಿದ್ದ ಘಟ ಸರ್ಪದ ಏಳು ನಾಲಗೆಗಳನ್ನು ಮುಟ್ಟಿ ಕೊಂಡು, “ಇದರ ಸಹಾಯದಿಂದ ಮದುವೆಯಾಗುತ್ತೇನೆ? ಎಂದನು. ಛತ್ರದವನನು ಆ ಕರವಸ್ತ್ರದ ಕಡೆ ನೋಡಿದನು. “ ಇದು ಹೊರತು, ಬೇರೇನು ಆದರೂ ನಂಬಿಯೇನು. ನೀನು ನಿನ್ನ ಮಾತು ಉಳಿಸಿಕೊಂಡರೆ ನನ್ನ ಮನೆ ಹೊಲ ಎಲ್ಲಾ ನಿನಗೆ ಕೊಡುತ್ತೇನೆ” ಎಂದನು. ಬೇಟೆಗಾರನು ಅದಕ್ಕೆ ಒಪ್ಪಿ, ತಾನು ಸೋತರೆ ಒಂದು ಸಾವಿರ ಹೊನ್ನು ಕೊಡುವೆನೆಂದು ಸಾವಿರದ ಚೀಲವನ್ನು ಮುಂದಿಟ್ಟನು. ಬೇಟೆಗಾರನ ಪ್ರಾಣಿಗಳು ಹೀಗೆ ಛತ್ರದಿಂದ ಅರಮನೆಗೂ ಅರ ಮನೆಯಿಂದ ಛತ್ರಕ್ಕೂ ಹೋಗಿಬಂದುವು. ಅವು ಅರಮನೆಗೆ ಬಂದು ಹೋದುದನ್ನು ರಾಜನು ಕಂಡು, "ಆ ಪ್ರಾಣಿಗಳಿಗೆ ನಿನ್ನ ಹತ್ತಿರ ಏನು ಕೆಲಸವಿತ್ತು?” ಎಂದು*ತನ್ನ ಮಗಳನ್ನು ಕೇಳಿದನು. “ ಅದನ್ನು ನಿನಗೆ ನಾನು ಹೇಳಲಾರೆ. ಆ ಪ್ರಾಣಿಗಳ ಯಜಮಾನ ನನ್ನು ಬರಮಾಡು. ಅವನು ತಿಳುಹಿಸಬಹುದು” ಎಂದು ರಾಜಕುಮಾರಿ ಹೇಳಿದಳು. ಅದರಂತೆ ಅರಸನು ಆ ಪ್ರಾಣಿಗಳ ಯಜಮಾನನನ್ನು ಬರಹೇಳಿ ಒಬ್ಬ ಆಳನ್ನು ಅಟ್ಟಿ ದನು. ಆಳು ಛತ್ರಕ್ಕೆ ಬಂದಾಗ್ಯ ಆ ಬೇಟೆಗಾರನು " ರಾಜನ ಉಡುಗೆತೊಡುಗೆಗಳನ್ನೂ ಆರುಕುದುರೆಗಳ ಒಂದು ರಥವನ್ನೂ ತೆಗೆದುಕೊಂಡು ಬಾ. ಹಾಗೆಯೇ ಕೆಲವರು ಸೇವಕರನ್ನೂ ಕಳುಹಿಸು ವಂತೆ.ರಾಜನಿಗೆ ಹೇಳು” ಎಂದನು. ಇಬ್ಬ ರು ಸಹೋದರರು ೨೯ ರಾಜನು ಅವನು ಕಳುಹಿಸಿದ ಉತ್ತರವನ್ನು ಕೇಳಿ ಮಗಳ ಕಡೆ ತಿರುಗಿ, “ ಇದಕ್ಕೆ ಏನು ಮಾಡಬೇಕು?” ಎಂದು ಕೇಳಿದನು. ಅವನ ಇಷ್ಟದಂತೆ ಕಳುಹಿಸುವುದೆ ಒಳ್ಳೆಯದೆಂದು ಅವಳು ಹೇಳಿದಳು. ರಾಜನು ಹಾಗೆಯೆ ಮಾಡಿದನು. ಬೇಟಿಗಾರನು ರಾಜನ ಉಡುಗೆತೊಡುಗೆಗಳನ್ನು ಹಾಕಿಕೊಂಡು, ಘಟಸರ್ಪದ ನಾಲಿಗೆಗಳಿದ್ದ ಕರವಸ್ರವನ್ನು ತೆಗೆದು ಕೊಂಡು ಆರುಕುದುರೆಗಳ ರಥದಲ್ಲಿ ಅರಮನೆಗೆ ಹೋದನು. ಅವನು ಬರುವುದನ್ನು ರಾಜನು ಕಂಡನು. “ ಇವನನ್ನು ಹೇಗೆ ಎದುರುಗೊಳ್ಳಬೇಕು? ” ಎಂದು ಮಗಳನ್ನು ಕೇಳಿದನು. “ನೀನೇ ಎದ್ದು ಹೋಗಿ ಅವನನ್ನು ಕರೆದುಕೊಂಡು ಬಾ” ಎಂದು ಅವಳು ಹೇಳಿ ದಳು. ರಾಜನು ತಾನೇ ಎದ್ದು ಹೋಗಿ ಅವನನ್ನು ಅವನ ಪ್ರಾಣಿ ಗಳೊಡನೆ ಊಟದ ಮನೆಗೆ ಕರೆದುಕೊಂಡು ಬಂದನು. ಅವನನ್ನು ತನ್ನ ಮಗಳ ಸಮೀಪದಲ್ಲಿ ಕುಳ್ಳಿರಿಸಿದನು. ಸೇನಾಧಿಪತಿಯು ಮದುವಣಿಗ ನಾಗಿ ಅಲ್ಲಿಯೆ ಕುಳಿತಿದ್ದನು. ಆದರೂ ಅವನಿಗೆ ಬೇಟೆಗಾರನ ಗುರುತು ಗೊತ್ತಾಗಲಿಲ್ಲ. ರಾಜನು ಘಟಸರ್ಪದ ಏಳು ತಲೆಗಳನ್ನು ಅಲ್ಲಿ ನೆರೆದಿದ್ದವರಿಗೆಲ್ಲ ತೋರಿಸಿ, “ಇವು ನಮ್ಮ ಸೇನಾಧಿಪತಿ ಕಡಿದ ತಲೆಗಳು. ಈ ಸಾಹಸಕ್ಕೆ ಪ್ರತಿಫಲವಾಗಿ ನಾನು ನನ್ನ ಮಗಳನ್ನು ಇವನಿಗೆ ಮದುವೆಮಾಡಿಕೊಡು ವೆನು” ಎಂದನು. ಆಗ ಬೇಟಿಗಾರನು ಎದ್ದು ನಿಂತ ಆ ಏಳು ತಲೆಗಳ ಬಾಯಿ ಬಿಡಿಸಿ, “ಇದರೊಳಗಿನ ನಾಲಿಗೆಗಳು ಎಲ್ಲಿ?” ಎಂದು ಕೇಳಿದನು. ಸೇನಾಧಿಪತಿಗೆ ನಡುಕ ಹತ್ತಿಕೊಂಡಿತು. ಏನು ಉತ್ತರ ಕೊಡು ವುದಕ್ಕೂ ಅವನಿಗೆ ತೋಚಲಿಲ್ಲ. ಕಡೆಗೆ ಗಾಬರಿಯಿಂದ “ಘಟಸರ್ಪ ಗಳಿಗೆ ನಾಲಿಗೆಗಳಿಲ್ಲ” ಎಂದನು. “ಸುಳ್ಳಾಡುವವರಿಗೆ ನಾಲಿಗೆಗಳಿಲ್ಲ” ಎಂದು ಬೇಟಿಗಾರನು ಕೂಗಿ ದನು. "ಘಟಸರ್ಪದ ನಾಲಿಗೆಗಳು ಗೆದ್ದವನ ಹೆಸರಿಗೆ ಜಯದ ಗುರುತು” ಎಂದು ತಾನು ತಂದಿದ್ದ ಕರವಸ್ತ್ರವನ್ನು ಬಿಚ್ಚಿ, ಏಳು ನಾಲಿಗೆ ತಿಂ ಇಬ್ಬರು ಸಹೋದರರು ಗಳನ್ನು ತೆಗೆದು ಘಟಿಸರ್ವದ ಒಂದೊಂದು ಬಾಯಿಯಲ್ಲಿ ಒಂದೊಂದು ಇಟ್ಟನು. ನಾಲಿಗೆಗಳು ಅಲ್ಲಿ ಅಂಟಿಕೊಂಡವು. ರಾಜಕುಮಾರಿಯ ಹೆಸರು ಹಾಕಿದ್ದ ಕರವಸ್ತ್ರವನ್ನು ಅವಳಿಗೆ ತೋರಿಸಿ “ಇದು ನೀನು ಯಾರಿಗೆ ಕೊಟ್ಟಿದ್ದು ?” ಎಂದು ಕೇಳಿದನು. “ಘಟಸರ್ಪವನ್ನು ಕೊಂದ ವನಿಗೆ” ಎಂದು ಅವಳು ಉತ್ತರಕೊಟ್ಟಳು. ಅನಂತರ ತನ್ನ ಪ್ರಾಣಿ ಗಳನ್ನು ಕರೆದು, ಅವುಗಳ ಕತ್ತಿನಿಂದ ಸರಗಳನ್ನೂ ಸಿಂಹದ ಕತ್ತಿನಿಂದ ಚಿನ್ನದ ಕೊಂಡಿಯನ್ನೂ ತೆಗೆದು ತೋರಿಸಿ, "ಇವು ಯಾರವು?” ಎಂದನು. “ಸರ ಮತ್ತು ಕೊಂಡಿ ನನ್ನವು. ಘಟಸರ್ಪವನ್ನು ಕೊಲ್ಲಲು ಸಹಾಯ ಮಾಡಿದ ಪ್ರಾಣಿಗಳಿಗೆ ಅವನ್ನು ನಾನು ಹಂಚಿಕೊಟ್ಟಿ? ಎಂದು ಅವಳು ಹೇಳಿದಳು. ಆಗ ಬೇಟಿಗಾರನು “ನಾನು ಯುದ್ಧಮಾಡಿದ ಬಳಿಕ ದಣಿದು ವಿಶ್ರಾಂತಿಗಾಗಿ ಮಲಗಿರುವಾಗ ಈ ಸೇನಾಧಿಪತಿ ನನ್ನ ತಲೆಯನ್ನು ಕತ್ತರಿಸಿದರು. ರಾಜಕುಮಾರಿಯನ್ನು ಹೆದರಿಸಿ ಎತ್ತಿಕೊಂಡು ಹೋಗಿ, ತಾನೇ ಘಟಸರ್ಪವನ್ನು ಕೊಂದವನೆಂದು ಸುಳ್ಳು ಹೇಳಿದನು. ಅವನು ಸುಳ್ಳು ಹೇಳಿದುದಕ್ಕೆ ಈ ನಾಲಗೆಗಳೂ ಈ ಕರವಸ್ತ್ರವೂ ಈ ಸರವೂ ಸಾಕ್ಷಿ” ಎಂದು ತಿಳಿಸಿ, ತನ್ನ ಪ್ರಾಣಿಗಳು ತನ್ನನ್ನು ಬದುಕೆಸಿದುದನ್ನೂ ತಾನು ಒಂದು ವರ್ಷಕಾಲ ಸುತ್ತಾಡುತ್ತಾ ಪುನಃ ಅದೇ ಪಟ್ಟಣಕ್ಕೆ ಬಂದು ಸೇನಾಧಿಪತಿಯ ದ್ರೋಹವನ್ನು ಛತ್ರದ ಯಜಮಾನನಿಂದ ತಿಳಿದುದನ್ನೂ ವಿವರಿಸಿದನು. ರಾಜಕುಮಾರಿ ಅವನು ಹೇಳಿದುದನ್ನು ನಿಜವೆಂದು ತಾನು ಒಪ್ಪಿ ib ಇದಕ್ಕೋಸ್ಕರವೇ ನಾನು ಒಂದು ವರುಷದ ಮೇಲೆ ಒಂದು ದಿನ ವಾಗುವವರೆಗೂ ಮದುನೆಮಾಡಿಕೊಳ್ಳುವುದಿಲ್ಲವೆಂದು ಹೇಳಿದ್ದುದು” ಎಂದಳು. ಆಗ ರಾಜನು ತನ್ನ ಮಂತ್ರಿಗಳನ್ನು ಕರೆಯಿಸಿದನು. ಅವರು ಬಂದು ಸೇನಾಧಿಪತಿಗೆ ಶಿಕ್ಷೆ ವಿಧಿಸಿದರು. ಅವನನ್ನು ಕಾಡುಕೋಣಗಳ ಕಾಲಿಗೆ ಕಟ್ಟಿ ಎಳೆಸಿದರು. ಅವನು ಮಾಡಿದುದಕ್ಕೆ ತಕ್ಕ ಶಿಕ್ಷೆ ಅವನಿಗೆ ಆಯಿತು. ಇಬ್ಬರು ಸಹೋದರರು ೩೧ ಬೇಟೆಗಾರನು ರಾಜನ ಮಗಳನ್ನು ಮದುವೆಯಾದನು. ರಾಜ್ಯಕ್ಕೆ ಅವನೇ ಒಡೆಯನಾದನು, ಚಿಕ್ಕರಾಜನಾದನು. ಮದುವೆ ಬಹಳ ಸಂಭ್ರಮದಿಂದ ನಡೆಯಿತು. ಚಿಕ್ಕರಾಜನು ತನ್ನ ತಂದೆಯನ್ನೂ ಸಾಕು ತಂದೆಯನ್ನೂ ಕರೆಯಿಸಿ,ಅವರಿಗೆ ಬೇಕಾದಷ್ಟು ಹಣ ಕೊಟ್ಟು ಕಳುಹಿಸಿ ದನು. ಅವನು ಛತ್ರದ ಯಜಮಾನನನ್ನೂ ಮರೆಯಲಿಲ್ಲ. ಅವನ ಮನೆ ಹೊಲಗಳ ಜೊತೆಗೆ ತನ್ನ ಸಾವಿರ ಹೊನ್ನಿನ ಚೀಲವನ್ನೂ ಅವನಿಗೇ ಕೊಟ್ಟನು. ಚಿಕ್ಕರಾಜನೂ ರಾಣಿಯೂ ಸಂತೋಷದಿಂದ ರಾಜ್ಯವಾಳು ತ್ತಿದ್ದರು. ಊರ ಹೊರಗೆ ಒಂದು ಕಾಡು. ಅದು ಬಹಳ ಕೆಟ್ಟ ಕಾಡು. ಯಾರಾದರೂ ಒಂದು ಸಲ ಒಳಗೆ ಹೋಗಿಬಿಟ್ಟರೆ ಪುನಃ ಸುಲಭವಾಗಿ ಹೊರಗೆ ಬರುವಂತಿರಲಿಲ್ಲ. ಆ ಕಾಡಿನಲ್ಲಿ ಒಬ್ಬಳು ಮಂತ್ರಗಾತಿ ಯಿದ್ದಳು. ಚಿಕ್ಕರಾಜನಿಗೆ ಆ ಕಾಡನ್ನು ನೋಡುವ ಆಸೆ ಹತ್ತಿತು. ಅವನು ಆ ಕಾಡಿನಲ್ಲಿ ಹೋಗಿ ಬೇಟೆಯಾಡಲು ಮುದಿರಾಜನ ಅಪ್ಪಣೆ ಯನ್ನು ಕಾಡಿ ಬೇಡಿ ಸಡೆದನು. ಬೇಟಿಗೆ ಹೋಗುವಾಗ ದೊಡ್ಡ ಸೈನ್ಯ ವನ್ನು ಜೊತೆಯಲ್ಲಿ ಕರೆದುಕೊಂಡು ಹೋದನು. ಅವನು ಕಾಡಿನ ಅಂಚಿಗೆ ಬರುವ ವೇಳೆಗೆ ಸರಿಯಾಗಿ ಮರಗಳ ನಡುವೆ ಒಂದು ಬಿಳಿಯ ಪಾರಿವಾಳನಿದ್ದುದನ್ನು ಕಂಡನು. ಕಂಡು ತನ್ನ ಸರಿವಾರವನ್ನು ಕರೆದು, " ನಾನು ಈ ಸುಂದರವಾದ ಹಕ್ಕಿಯ ಹಿಂದೆ ಹೋಗುತ್ತೇನೆ. ನಾನು ಹಿಂದಿರುಗುವವರೆಗೂ ನೀವು ಇಲ್ಲಿಯೇ ಇರಿ” ಎಂದು ಹೇಳಿ, ತನ್ನ ಪ್ರಾಣಿಗಳ ಸಮೇತನಾಗಿ ಕಾಡಿನೊಳಕ್ಕೆ ಹೋದನು. ಅವನ ಪರಿವಾರದವರು ಸಾಯಂಕಾಲದ ವರೆಗೂ ಕಾದು ಕೊಂಡಿದ್ದರು. , ಸಾಯಂಕಾಲವಾದರೂ ರಾಜನು ಹಿಂದಿರುಗದಿರಲು, ತಮ್ಮ ರಾಣಿಯ ಬಳಿಗೆ ಬಂದು " ಚಿಕ್ಕರಾಜನು ಒಂದು ಬಿಳಿಯ ಪಾರಿ ವಾಳನನ್ನು ಬೇಟೆಯಾಡುವುದಕ್ಟೋಸ್ಟರ ಮಂತ್ರಗಾತಿಯ ಕಾಡಿಗೆ ಹೋದವನು ಹಿಂದಿರುಗಲಿಲ್ಲ” ಎಂದು ತಿಳಿಸಿದರು. ರಾಣಿ ಅದನ್ನು ಕೇಳಿ ಚಿಂತೆಗೊಳಗಾದಳು. ೩೨ ಇಬ್ಬ ರು ಸಹೋದರರು ಈ ನಡುನೆ ಚಿಕ್ಕರಾಜನು ಬಿಳಿಯ ಪಾರಿವಾಳದ ಬೆನ್ನಟ್ಟಿ ಹೋಗಿದ್ದನು. ಆದರೆ ಅದು ಅವನ ಕೈಗೆ ಸಿಕ್ಕಲಿಲ್ಲ. ಇನ್ನೇನು ಸಿಕ್ಕಿತು ಎನ್ನುವ ನೇಳೆಗೆ ಅದು ತಪ್ಪಿಸಿಕೊಂಡು ಮಾಯವಾಗುತ್ತಿತ್ತು. ಹೀಗೆ ಬಹಳ ದೂರ ಅದರ ಹಿಂದೆ ಹೋದ ಬಳಿಕ ತಾನು ಏಕಾಕಿಯಾದುದು ಅವನಿಗೆ ತಿಳಿಯಿತು. ಆಗ ತನ್ನ ಕೊಂಬನ್ನು ತೆಗೆದು ಊದಿದನು. ಅವನ ಪರಿವಾರವು ಬಹಳ ದೂರದಲ್ಲಿ ಇದ್ದು ದರಿಂದ ಅವನಿಗೆ ಉತ್ತರ ಬರಲಿಲ್ಲ. ಆ ವೇಳೆಗೆ ರಾತ್ರಿಯಾಯಿತು. ಅಜೇ ರಾತ್ರಿ ಕಾಡಿನಿಂದ ಹೊರಗೆ ಹೋಗುವುದು ಅಸಾಧ್ಯವೆಂದು ತಿಳಿದು ಚಿಕ್ಕ ರಾಜನು ಅಲ್ಲಿಯೇ ಕುದುರೆಯಿಂದ ಇಳಿದು, ಒಂದು ಮರದ ಕೆಳಗೆ ಬೆಂಕಿಯನ್ನು ಹತ್ತಿಸಿ ಶುಳಿತುಕೊಂಡನು. ಅವನು ತನ್ನ ಪ್ರಾಣಿಗಳೊಡನೆ ಬೆಂಕಿಯ ಹತ್ತಿರ ಕುಳಿತಿದ್ದಾಗ ಅವನಿಗೆ ಒಂದು ಮನುಷ್ಯಧ್ವನಿ ಕೇಳಿಬಂದ ಹಾಗಾಯಿತು. ಸುತ್ತಲೂ ನೋಡಿದನು, ಏನೂ ಕಾಣಿಸಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಏನೋ ನರಳುವ ಸದ್ದು ತಲೆಯ ಮೇಲೆ ಕೇಳಿಬಂದಿತು. ತಲೆಯೆತ್ತಿ ನೋಡಿದರೆ, ಅಲ್ಲಿ ಒಬ್ಬಳು ಮುದುಕಿ “ ಅಯ್ಯೋ! ಚಳಿ! ಚಳಿ! ಎಂದು ನಡುಗು ತ್ತಿದ್ದಳು. ಅಷ್ಟು ಚಳಿಯಾದರೈೆ ಕೆಳಗೆ ಬಂದು ಬೆಂಕಿಯ ಹತ್ತಿರ ಕಾಯಿಸಿಕೊ ಎಂದು ಚಿಕ್ಕರಾಜನು ಅವಳನ್ನು ಕರೆದನು. ಅದಕ್ಕೆ ಆ ಮುದುಕಿ “ಇಲ್ಲ ಇಲ್ಲ. ನಾನು ಕೆಳಗೆ ಬಂದರೆ, ನಿನ್ನ ಪ್ರಾಣಿಗಳು ನನ್ನನ್ನು ಕಚ್ಚುತ್ತವೆ. ನನಗೆ ಹೆದರಿಕೆಯಾಗುತ್ತದೆ” ಎಂದಳು. 4 ಇಲ್ಲ. ಅವು ನಿನ್ನನ್ನು ಕಚ್ಚುವುದಿಲ್ಲ, ಮುದುಕ. ಬಾ” ಎಂದು ಅವನು ಕರೆದರೂ ಅವಳು ಬರಲಿಲ್ಲ. ಅವಳಿಗೆ ನಿಜವಾಗಿ ಹೆದರಿಕೆಯೌಗಿರಲಿಲ್ಲ. ಆ ಮುದುಕಿಯೆ ಆ ಕಾಡಿನಲ್ಲಿದ್ದ ಮಂತ್ರ ಗಾತಿ. ಆದರೂ ಅವಳು ಹೆದರಿದಂತೆ ನಟಸಿ, 4 ನಾನು ಒಂದು ಸಣ್ಣ ಕಡ್ಡಿ ಎಸೆಯುತ್ತೇನೆ.. ಅದರಿಂದ ನೀನು ಅವು ಇಬ್ಬರು ಸಹೋದರರು ೩೩ ಗಳ ಬೆನ್ನ ಮೇಲೆ ಒಂದು ಸಣ್ಣ ಏಟು ಕೊಡು. ಆಗ ಅವು ನನ್ನ ತಂಟಿಗೆ ಬರುವುದಿಲ್ಲ” ಎಂದು ಹೇಳುತ್ತಾ ತನ್ನ ಮಂತ್ರದ ಕಡ್ಡಿಯನ್ನು ಎಸೆದಳು. ಅವನು ಅದರಿಂದ ಪ್ರತಿಯೊಂದು ಪ್ರಾಣಿಗೂ ಒಂದೊಂದು ಸಣ್ಣ ಏಟು ಕೊಟ್ಟನು. ಆ ಕಡ್ಡಿ ಮುಟ್ಟದ ಕೂಡಲೇ ಪ್ರತಿಯೊಂದು ಪ್ರಾಣಿಯೂ ಕಲ್ಲಾಯಿತು. ಆಗ ಆ ಮುದುಕಿ ನಿರ್ಭಯವಾಗಿ ಕೆಳಗೆ ದುಮುಕಿ, ತನ್ನ ಕೈಯಲ್ಲಿದ್ದ ಮತ್ತೊಂದು ಕಡ್ಡಿಯಿಂದ ಚಿಕ್ಕರಾಜನನ್ನು ಮುಟ್ಟಿ ದಳು. ಅವನೂ ಒಡನೆಯೆ ಕಲ್ಲಾ ದನು. ಆಗ ಅವಳು ಸಂತೋಷದಿಂದ ಅಂಥವೇ ಕಲ್ಲುಗಳು ಬೇಕಾದ ಹಾಗೆ ತುಂಬಿದ್ದ ಒಂದು ಹಳ್ಳ ದಲ್ಲಿ ಅವುಗಳನ್ನೂ ಎಸೆದಳು. ಚಿಕ್ಕರಾಜನ ಇನ್ನೊಬ್ಬ ಸಹೋದರನು ಹಿಂದೆ ಪಶ್ಚಿಮದ ಕಡೆಗೆ ಪ್ರ ಯಾಣಮಾಡಿದ್ದ ನಷ್ಟೆ. ಅವನು ಕೂಡ, ಎಲ್ಲಿಯೂ ಏನೂ ಉದ್ಯೋಗ ಸಿಕ್ಕದೆ ತನ್ನ ಜೊತೆಯ ಪ್ರಾಣಿಗಳನ್ನು ಜನರ ಮುಂದೆ ಕುಣಿಸುತ್ತ, ಒಂದು ದಿವಸ್ಕ ತನ್ನ ಸಹೋದರನ ಯೋಗಕ್ಷೇಮ ವನ್ನು ತಿಳಿಯಬೇಕೆಂದು ತೂಗುಹಾಕಿದ್ದ ಚಾಕುವನ್ನು ನೋಡಲು ಹೋದನು. ಅಲ್ಲಿಗೆ ಹೋಗಿ, ತನ್ನ ಸಹೋದರನು ಪ್ರಯಾಣಮಾಡಿದ ಕಡೆಗೆ ತಿರುಗಿಕೊಂಡಿದ್ದ ಅಲುಗಿನ ಮುಖವನ್ನು ನೋಡಿದನು. ಅದರ ಅರ್ಧಭಾಗ ಫಳಫಳನೆ ಹೊಳೆಯುತ್ತಿತ್ತು, ಉಳಿದ ಅರ್ಧಕ್ಕೆ ತುಕ್ಕು ಹಿಡಿದಿತ್ತು. ಅವನು ಅದನ್ನು ನೋಡಿ ಭಯಗೊಂಡು, “ ನನ್ನ ಸಹೋ ದರನಿಗೆ ಏನೋ ಕೇಡು ಆಗಿರಬೇಕು. ಆದರೆ ಅಲಗಿನ ಅರ್ಧ ಭಾಗ ಇನ್ನೂ ಹೊಳೆಯುತ್ತಿರುವುದರಿಂದ ನಾನು ಅವನನ್ನು ಕಾಪಾಡಬಹುದು? ಎಂದು ಸಮಾಧಾನ ತಂದುಕೊಂಡು, ತನ್ನ ಪ್ರಾಣಿಗಳನ್ನೂ ಕರೆದು ಕೊಂಡು ಪಶ್ಚಿಮದ ಕಡೆಗೆ ಹೋದನು. ಹಾಗೆಯೇ ಹೋಗಿ, ತನ್ನ ಸಹೋದರನು ಘಟಸರ್ಪವನ್ನು ಕೊಂದು ಚಿಕ್ಕರಾಜನಾದ ಊರಿಗೆ ಬಂದನು. ಅವನು ಊರಬಾಗಿಲಿಗೆ ಬಂದಾಗ ಅಲ್ಲಿಯ ಕಾವಲುಗಾರನು ಅವನನ್ನು ಚಿಕ್ಕರಾಜನೆಂದೇ ಭ್ರಮಿಸಿದನು. ಏಕೆಂದರೆ ಅವನೂ ಅವನ 3 ಕ್ಲಿಳಿ ಇಬ್ಬರು ಸಹೋದರರು ಸಹೋದರನೂ ಅವಳಿಮಕ್ಕಳು; ಅಲ್ಲದೆ ಇಬ್ಬರ ಹತ್ತಿರದಲ್ಲೂ ಒಂದೇ ತೆರದ ಪ್ರಾಣಿಗಳಿದ್ದುವು. ಆಗ ಆ ಕಾವಲುಗಾರನು ಅವನನ್ನು ಮರ್ಯಾದೆಯಿಂದ ಸ್ವಾಗತಿಸಿ, “ ನೀನು ಕಾಡಿನಲ್ಲಿ ಮೃತನಾದೆಯೆಂದು ರಾಣಿ ಬಹಳ ಚಿಂತೆಪಡುತ್ತಿದ್ದಾಳೆ. ನೀನು ಬಂದುದನ್ನು ಆಕೆಗೆ ತಿಳಿ ಸಲೆ?” ಎಂದು ಕೇಳಿದನು. ಕಾವಲುಗಾರನು ತನ್ನನ್ನು ತನ್ನ ಸಹೋ ದರನೆಂದು ತಿಳಿದುದು ಚಿಕ್ಕರಾಜನ ಸೋದರನಿಗೆ ಅರ್ಥವಾಯಿತು. “ ಇದರಿಂದ ನನ್ನ ಸೋದರನಿಗೆ ಸಹಾಯಮಾಡುವುದು ಸುಲಭವಾಗ ಬಹುದು” ಎಂದುಕೊಂಡು, ತಾನೇ ರಾಜನೆಂದು ಸುಳ್ಳು ಹೇಳಿದನು. ಕಾವಲುಗಾರನು ಅವನನ್ನು ಅರಮನೆಗೆ ಕರೆದುಕೊಂಡುಹೋದನು. ಅಲ್ಲಿ ಎಲ್ಲರೂ ಅವನನ್ನು ಹರ್ಷದಿಂದ ಬರಮಾಡಿಕೊಂಡರು. ರಾಣಿ ಕೂಡ ಅವನನ್ನು ತನ್ನ ಗಂಡನೆಂದೇ ಭಾವಿಸಿ, “ಏಕೆ ಇಷ್ಟು ದಿನ ನಿಂತು ಬಿಟ್ಟಿದ್ದೆ? >» ಎಂದು ಕೇಳಿದಳು. ಅದಕ್ಕೆ ಅವನು “ ಕಾಡಿನಲ್ಲಿ ದಾರಿ ತನ್ಪಿದುದರಿಂದ ಬೇಗ ಬರಲಾಗಲಿಲ್ಲ? ಎಂದನು. ಮುಂದಿನ ಕೆಲವು ದಿನಗಳಲ್ಲಿ, ಅವನು ತನ್ನ ಸಹೋದರನು ಹೋಗಿ ಮಾಯವಾದ ಮಂತ್ರಗಾತಿಯ ಕಾಡಿನ ವಿಷಯವನ್ನೆಲ್ಲಾ ವಿಚಾರಿಸಿ ತಿಳಿದುಕೊಂಡನು. ಕಡೆಗೆ ಒಂದು ದಿನಸ ತಾನೂ ಅಲ್ಲಿಗೆ ಬೇಟಿ ಯಾಡಲು ಹೋಗಬೇಕೆಂದು ಹೊರಟನು. ಅವನನ್ನು ಹೊರಡದಂತೆ ತಡೆಯಲು ಮುದಿರಾಜನೂ ಚಿಕ್ಕರಾಣಿಯೂ ಏನೇನೋ ಮಾಡಿದರು. ಆದರೂ ಅವನು ತನ್ನ ಪರಿವಾರದೊಡನೆ ಕಾಡಿಗೆ ಹೊರಟೀ ಹೊರಟನು. ಕಾಡಿನ ಅಂಚಿಗೆ ಬಂದಾಗ ಮರದ ಮೇಲೆ ಒಂದು ಬಿಳಿಯ ಪಾರಿವಾಳ ಕಂಡುಬಂದಿತು. ಆಗ ಆ ಸಹೋದರನು ಪರಿವಾರದವರನ್ನು ಅಲ್ಲಿಯೆ ಇರಹೇಳಿ, ತಾನು ತನ್ನ ಪ್ರಾಣಿಗಳ ಸಮೇತ ಕಾಡಿನೊಳಕ್ಕೆ ಹೋದನು. ಅಲ್ಲಿ ಪಾರಿವಾಳವನ್ನು ಹಿಡಿಯಲಾರದೆ, ರಾತ್ರಿಯಾಗಲು ಅಲ್ಲಿಯೆ ಬೆಂಕಿಯನ್ನು ಹತ್ತಿಸಿ ಕುಳಿತುಕೊಂಡನು. ಆ ಹೊತ್ತಿಗೆ ಸರಿಯಾಗಿ “ಅಯ್ಯೋ! ಚಳಿ! ಚಳಿ!” ಎಂಬ ಕೂಗು ಕೇಳಿಬಂದಿತು. ಹಾಗೆ ಕೂಗಿಕೊಂಡ ಮುದುಕಿ ಮಂತ್ರಗಾತಿ ಇಬ್ಬರು ಸಹೋದರರು ಪಿಜಿ ಯನ್ನು ಆ ಸಹೋದರನು ನೋಡಿದನು. ಕೆಳಗೆ ಬಂದು ಬೆಂಕಿ ಕಾಯಿಸಿ ಕೊಳ್ಳಲು ಕರೆದನು. “ನಿನ್ನ ಪ್ರಾಣಿಗಳು ನನ್ನನ್ನು ಕಚ್ಚುವುವೆಂದು ನನಗೆ ಹೆದರಿಕೆ. ನಾನು ಒಂದು ಸಣ್ಣ ಕಡ್ಡಿ ಎಸೆಯುತ್ತೇನೆ. ಅದರಿಂದ ಅವುಗಳಿಗೆ ಒಂದೊಂದು ಸಣ್ಣ ಏಟು ಹಾಕು. ಅವು ನನ್ನ ತಂಟಿಗೆ ಬರುವುದಿಲ್ಲ” ಎಂದು ಆ ಮುದುಕಿಯೆಂದಳು. ಅದಕ್ಕೆ ಆ ಸಹೋದರನು “ನಾನು ನನ್ನ ಪ್ರಾಣಿಗಳನ್ನು ಹೊಡೆ ಯುವುದಿಲ್ಲ. ನೀನು ಕಳಗೆ ಬಾ. ಇಲ್ಲದಿದ್ದರೆ, ನಾನು ಹತ್ತಿ ಬಂದು ಇಳಿಸುತ್ತೇನೆ” ಎಂದನು. ಆಗ ಆ ಮುದುಕಿ “ ನೀನು ಮೇಲೆ ಬರಬೇಡ. ನೀನು ನನ್ನನ್ನು ಮುಟ್ಟ ಬೇಡ” ಎಂದು *ಿರಿಚಿಕೊಂಡಳು. ನೀನು ಕೆಳಗೆ ಬರದಿದ್ದರೆ ನಾನು ನಿನ್ನನ್ನು ಈ ಬಂದೂಕದಿಂದ ಹೊಡೆಯುತ್ತೇನೆ? ಎಂದು ಅವನು ತನ್ನ ಬಂದೂಕದಲ್ಲಿ ಮೂರು ಬೆಳ್ಳಿಯ ಗುಂಡುಗಳನ್ನು ತುಂಬಿ ಹೊಡೆದನು. ಅವನು ಹಾಗೆ ಹೊಡೆದುದು ಅವಳಿಗೆ ತಾಕಿತು. ಅವಳು ಕೆಳಗೆ ಬಿದ್ದಳು. ಬಿದ್ದೊಡನೆಯೆ ಅವನು ಅವಳನ್ನು ಕಾಲಿನಿಂದ ಅದುಮಿ ಮುದಿ ಮಾಟಗಾತಿ, ನನ್ನ ಸಹೋದರನು ಎಲ್ಲಿ? ಹೇಳು. ಬೇಗ ಹೇಳ ದಿದ್ದರೆ ನಿನ್ನನ್ನು ಬೆಂಕಿಯಲ್ಲಿ ಸುಡುತ್ತೇನೆ” ಎಂದನು. ಅವಳು ಭಯದಿಂದ ನಡುಗುತ್ತ ©“ ಅವನು ಕಲ್ಲಾಗಿ ಆ ಹಳ್ಳದಲ್ಲಿ ಬಿದ್ದಿದ್ದಾನೆ? ಎಂದಳು. ಪುನಃ ಅವನು “ ಅವನನ್ನು ತಿರುಗಿ ಜೀವದೊಂದಿಗೆ ತರದಿದ್ದರೆ ನಿನ್ನನ್ನು ಬೆಂಕಿಯಲ್ಲಿ ಹಾಕುತ್ತೇನೆ” ಎಂದು ಹೆದರಿಸಲ್ಕು ಅವಳು ತನ್ನ ಕಡ್ಡಿಯಿಂದ ಆ ಕಲ್ಲುಗಳನ್ನು ಮುಟ್ಟಿದಳು. ಚಿಕ್ಕರಾಜನೂ ಅವನ ಪ್ರಾಣಿಗಳೂ ಇನ್ನೂ ಅನೇಕರೂ ಬದುಕಿಬಂದರು, ೩೬ ಇಬ್ಬರು ಸಹೋದರರು ಸಹೋದರರು ಒಬ್ಬರನ್ನೊಬ್ಬರು ಕಂಡು ಸಂತೋಷದಿಂದ ತಬ್ಬಿ ಕೊಂಡರು. ಆ ಮಂತ್ರ ಗಾತಿಯನ್ನು ಜೀವದೊಂದಿಗೆ ಬಿಡಬಾರದೆಂದು ಅವಳನ್ನು ಬೆಂಕಿಯಲ್ಲಿ ಸುಟ್ಟರು. ಆಗ ಕಾಡೆಲ್ಲ ಕಳಕಳಿಸಿತು, ಮೂರು ಹೆರಿದಾರಿ ದೂರದಲ್ಲಿ ಅರಮನೆ ಗೋಚರವಾಯಿತು. ಸೋದರರಿಬ್ಬರೂ ಮನೆಗೆ ಹೊರಟರು. ಆಗ ಚಿಕ್ಕವನು " ನಾವು ಇಬ್ಬರೂ ಆಕಾರದಲ್ಲಿ ಒಂದೇ ಆಗಿದ್ದೇವೆ. ಇಬ್ಬರೂ ಊರಿನ ಬೇರೆ ಬೇರೆ ಬಾಗಿಲಿನಿಂದ ಹೋಗಿ ಒಂದೇ ವೇಳೆಯಲ್ಲಿ ರಾಜನ ಎದುರಿಗೆ ನಿಲ್ಲೋಣ? ಎಂದನು. ಅದರಂತೆಯೇ ಅವರಿಬ್ಬರೂ ಬೇರೆಯಾದರು. ಊರಿನ ಬೇರೆ ಬೇರೆ ಬಾಗಿಲುಗಳಿಂದ ಪ್ರವೇಶಿಸಿದರು. ಆಗ ಎರಡು ಬಾಗಿಲುಗಳ ಕಾವಲುಗಾರರೂ ಒಂದೇ ಸಮಯದಲ್ಲಿ ರಾಜನ ಎದುರಿಗೆ ಬಂದು, “ ಚಿಕ್ಕರಾಜನು ತನ್ನ ಪ್ರಾಣಿಗಳೊಡನೆ ಬಂದಿದ್ದಾನೆ? ಎಂದು ತಿಳಿಸಿದರು. “ ಇದು ಸಾಧ್ಯವಿಲ್ಲ. ಊರಿನ ಎರಡು ಹೆಬ್ಬಾಗಿಲುಗಳೂ ಹರಿದಾರಿ ದೂರದಲ್ಲಿವೆ. ಚಿಕ್ಕರಾಜನು ಎರಡು ಹೆಬ್ಬಾಗಿಲುಗಳಲ್ಲೂ ಒಂದೇ ಕಾಲ ದಲ್ಲಿ ಬರುವುದು ಅಸಾಧ್ಯ” ಎಂದು ರಾಜನು ಹೇಳಿದನು. ಆದರೆ ಅವನು ಹಾಗೆ ಹೇಳುತ್ತಿರುವಾಗಲ್ಲೆ ಅರಮನೆಯ ಒಂದೊಂದು ಬಾಗಿಲಿನಿಂದ ಒಬ್ಬೊಬ್ಬ ಸಹೋದರನು ಪ್ರವೇಶಿಸಿ ರಾಜನ ಎದುರಿಗೆ ಬಂದು ನಿಂತುಕೊಂಡನು. ರಾಜನು ತನ್ನ ಮಗಳ ಕಡೆ ತಿರುಗಿ, “ ನಿನ್ನ ಗಂಡನು ಯಾರೆಂಬು ದನ್ನು ನನಗೆ ತಿಳಿಸು” ಎಂದು ಕೇಳಿದನು. | ತಾನು ಪ್ರಾಣಿಗಳಿಗೆ ಕೊಟ್ಟಿದ್ದ ಸರವನ್ನು ಗಮನಿಸುವವರೆಗೂ ಅವಳಿಗೇ ಯಾರು ಯಾರೆಂಬುದನ್ನು ಗೊತ್ತಾಗಿ ಹೇಳಲು ಸಾಧ್ಯೈವಾಗ ಲಿಲ್ಲ. ಕುತ್ತಿಗೆಯಲ್ಲಿ ಚಿನ್ನದ ಕೊಂಡಿಯನ್ನು ಹಾಕಿಕೊಂಡಿದ್ದ ಸಿಂಹ ವನ್ನು ತೋರಿಸಿ, " ಈ ಸಿಂಹ ಯಾರನ್ನು ಹಿಂಬಾಲಿಸುತ್ತದೋ ಅವನೇ ನನ್ನ ಗಂಡ” ಎಂದಳು. ಇಬ್ಬ ರು ಸಹೋದರರು ಫಿ೭ ಆಗ ಚಿಕ್ಕರಾಜನು ನಕ್ಕು ಅವಳ ಬುದ್ಧಿಯನ್ನು ಕೋಡಾಡಿದನು. ಆಮೇಲೆ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ತಿಂದರು, ಕುಡಿದರು, ಹಬ್ಬ ಮಾಡಿದರು. ಅದೇ ಸಂಜೆ ಚಿಕ್ಕರಾಜನು ತನ್ನ ಸಹೋದರನು ತಾನಿಲ್ಲದಿರುವಾಗ ಎಷ್ಟು ಒಳ್ಳೆಯವೆನೂ ಸತ್ಯವಂತನೂ ಆಗಿದ್ದನೆಂಬುದನ್ನು ತನ್ನ ಹೆಂಡತಿ ಯಿಂದ ತಿಳಿದನು. ಅಂದಿನಿಂದ ತನ್ನ ಸೋದರನನ್ನು ಇನ್ನೂ ಹೆಚ್ಚಾಗಿ ಬ್ರೀತಿಸತೊಡಗಿದನು. ಆ ಮೇಲೆ ಎಲ್ಲರೂ ಸುಖವಾಗಿದ್ದರು. ಪಿ. ಹರಿಣೀ ಒಂದೆ ಇಬ್ಬರು ರಾಜರಾಣಿಯರಿದ್ದರು. ಅವರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಪ್ರಜೆಗಳು ಅವರನ್ನು ಗೌರವಿಸುತ್ತಿದ್ದರು. ರಾಣಿಗೆ ಇದ್ದ ಒಂದೇ ಕೊರತೆಯೆಂದರೈೆ ಅವಳಿಗೆ ಮಕ್ಕಳು ಇಲ್ಲದ್ದೆ. ಅವಳು ತನಗೆ ಮಕ್ಕಳಿಲ್ಲವೆಂದು ಕೊರಗುತ್ತಿದ್ದುದನ್ನು ನೋಡಿ ವೈದ್ಯರು 4 ನೀನು ಊರಿನಾಜೆಯ ವನಕ್ಕೆ ಹೋಗಿ ವಿಶ್ರಮಿಸಿಕೊ, ಅಲ್ಲಿ ಒಂದು ಸೊಗಸಾದ ನೀರಿನ ಬುಗ್ಗೆ ಯಿದೆ” ಎಂದು ಸಲಹೆಕೊಟ್ಟರು. ರಾಣಿ ಅದರಂತೆಯೆ ಆ ತೋಟಕ್ಕೆ ಹೋದಳು. ಅಲ್ಲಿ ನೀರು ಬೀಳುತ್ತಿದ್ದ ಕಲ್ಲಿನ ಬೋಗುಣಿಯ ಪಕ್ಕ ದಲ್ಲಿ ಕುಳಿತು, “ ನೀವೆಲ್ಲರೂ ನನ್ನನ್ನು ಬಿಟ್ಟು ಹೋಗಿ. ನಾನು ಸ್ವಲ್ಪ ಒಂಟಿಯಾಗಿರಬೇಕು” ಎಂದು ತನ್ನ ಸಖಿಯರನ್ನು ಕೇಳಿಕೊಂಡಳು. ಅವರು ತನ್ನನ್ನು ಬಿಟ್ಟು ಹೋದ ಬಳಿಕ, ತನಗೆ ಮಕ್ಕಳಿಲ್ಲವೆಂಬ ಕೊರತೆಯಿಂದ ಯಾವಾಗಲೂ ಅಳುವಂತೆ ಅಂದೂ ಅಳತೊಡಗಿದಳು. ಹಾಗೆಯೇ ಅಳುತ್ತಿದ್ದಾಗ ಅವಳ ಕಣ್ಣೀರಿನ ಪಟದ ಆಚೆ ಒಂದು ಏಡಿ ಕಾಣಿಸಿಕೊಂಡಿತು. ಅದನ್ನು ಕಂಡು ರಾಣಿಗೆ ಆಶ್ಚರ್ಯವಾಯಿತು. ಆ ಏಡಿ ತನ್ನನ್ನು ಮಾತನಾಡಿಸಿದಾಗ ಅವಳ ಆಶ್ಚರ್ಯ ಇನ್ನೂ ಅಧಿಕವಾಯಿತು. ಆ ಏಡಿ " ಮಹಾರಾಣಿ, ನಿನ್ನ ಆಸೆ ಕೈಗೂಡುತ್ತದೆ. ಆದರೆ ಮೊದಲು ನೀನು ಗಂಧರ್ವಕನ್ಯೆಯರ ಅರಮನೆಗೆ ಹೋಗಬೇಕು. ನಾನು ಅಲ್ಲಿಗೆ ದಾರಿ ತೋರಿಸುತ್ತೇನೆ. ಆ ಅರಮನೆ ಪ್ರಸಿದ್ಧವಾದುದಾದರೂ ಮನುಷ್ಯರ ಕಣ್ಣಿಗೆ ಕಾಣದಂತೆ ಮೋಡಗಳು ಅದನ್ನು ಮುಚ್ಚಿವೆ? ಎಂದಿತು. ರಾಣಿಗೆ ಸಂತೋಷವಾಯಿತು. ಅರಮನೆಯ ಮಾರ್ಗವನ್ನು ತೋರಿಸುವಂತೆ ಆ ಏಡಿಯನ್ನು ಹೇಳಿಕೊಂಡಳು. ಅದೇ ಕ್ಸಣದಲ್ಲಿ ಏಡಿ ಒಂದು ಸಾಮಾನ್ಯ ಸ್ತ್ರೀಯ ರೂಪವನ್ನು ತಾಳಿ ರಾಣಿಯ ಸಮಾಸದಲ್ಲಿ ನಿಂತಿತು. ನೀರು ಆ ಸ್ತ್ರೀಯ ಗಲ್ಲದವರೆಗೆ ಬಂದರೂ ಅವಳ ಬಟ್ಟೆ ಇಷ್ಟೂ ಒದ್ದೆಯಾಗಿರಲಿಲ್ಲ. ಹರಿಣೀ ೩೯ ಅವಳು ರಾಣಿಗೌತಲೆಬಾಗಿ ದಾರಿ ತೋರಿಸಿದಳು. ರಾಣಿ ಊರ ಹೊರಗಿನ ಕಾಡಿನಲ್ಲಿ ಚಿಕ್ಕಂದಿನಿಂದ ತಿರುಗಾಡಿದ್ದಳು. ಆದರೂ ಆ ಸ್ತ್ರೀ ತೋರಿಸಿದ ದಾರಿ ಅವಳಿಗೆ ಹೊಸದಾಗಿತ್ತು. ಮುಂದೆ ಗಂಧರ್ವ ಕನ್ಯೆ ಯರ ಅರಮನೆ ಸಿಕ್ಕಿತು. ಅದರ ಗೋಡೆಗಳಿಗೂ ಮೇಲುಭಾವಣಿಗೂ ವಜ್ರ ಉಪಯೋಗಿಸಿದ್ದರು. ಅಂಥ ನೋಟವನ್ನು ರಾಣಿ ಎಂದೂ ಕಂಡಿರಲಿಲ್ಲ. ಅವಳಿಗೆ ಆಶ್ಚರ್ಯವೂ ಆನಂದವೂ ಒಂದೇ ಕಾಲದಲ್ಲಿ ಉಂಟಾಯಿತು. ಅವರಿಬ್ಬರೂ ಅರಮನೆಯ ಬಾಗಿಲನ್ನು ಸೇರಿದಾಗ ಆರು ಜನ ಗಂಧರ್ವಕನ್ಯೆಯರು ಹೊರಗೆ ಬಂದು ಅವರನ್ನು ವಂದಿಸಿದರು. ಅವರಲ್ಲಿ ಶ್ರತಿಯೊಬ್ಬಳೂ ರಾಣಿಗೆ ಬಗ್ಗಿ ನಮಸ್ಕಾರಮಾಡಿ ಒಂದೊಂದು ಹೂವು ಕೂಟ್ಟಿಳು. ಮಲ್ಲಿಗೆ, ಜಾಜಿ, ಸಂಪಿಗೆ ಪಾದರಿ, ಕಮಲ, ಗುಲಾಬಿ ಎಂಬ ಈ ಆರು ಹೂಗಳು ರಾಣಿಯ ಕೈತುಂಬ ತುಂಬಿದುವು. ಹೀಗೆ ಅವಳ ಕ್ಸೈತುಂಬ ಹೂ ತುಂಬಿ, ಆ ಗಂಧರ್ವಕನೈಯರು “ ಅಮ್ಮಾ ಇಷ್ಟರಲ್ಲಿಯೇ ನೀನು ಒಬ್ಬ ಮುದ್ದು ಮಗಳನ್ನು ಪಡೆಯುವೆ ಯೆಂದು ತಿಳಿಸಲು ನಮಗೆ ಸಂತೋಷವಾಗುತ್ತದೆ. ನೀನು ಅವಳನ್ನು ಬಹಳ ಕಾಲದಿಂದ ಇಚ್ಛಿಸುತ್ತಿರುವೆಯಾಗಿ, ಅವಳಿಗೆ ಇಚ್ಛಾದೇವಿ ಯೆಂದ ಹೆಸರಿಡು. ಅದು ಕಾಮದೇವನ ಹೆಂಡತಿಯ ಹೆಸರು. ಅವಳಿಗೆ ಸಕಲ ಸದ್ಗುಣಗಳನ್ನು ಅನುಗ್ರಹಿಸಬೇಕೆಂದು ನಮಗೆ ಇಷ್ಟವಿದೆ. ಆದುದರಿದ ಮಗು ಹುಟ್ಟಿದ ದಿವಸ ನಮ್ಮನ್ನು ಕರೆ. ನೀನು ಸುಮ್ಮನೆ ನಮ್ಮನ್ನು ಕೆನೆಸಿಕೊಂಡು ನಿನ್ನ ಬೊಗಸೆಯಲ್ಲಿರುವ ಒಂದೊಂದು ಹೊವಿನ ಹೆಸರನ್ನೂ ಕೇಳು. ನಾವು ಅಲ್ಲಿ ಪ್ರತ್ಯಕ್ಸವಾಗುತ್ತೇವೆ? ಎಂದರು. ರಾಣಿರು ಚುಳ್‌ ಪಾರನೆ ಇರಲಿಲ್ಲ. ಅವಳು ಒಬ್ಬೊಬ್ಬ ಗಂಥರ್ವಕನ್ಯೆಯನ್ನೂ ಸ್ನೇಹದಿಂದ ಆಲಿಂಗಿಸಿಕೊಂಡಳು. ಬಳಿಕ ಅವರು ಅವಳನ್ನ ತಮ್ಮ ಹೂ ಹಣ್ಣಿನ ತೋಟದ ಸುತ್ತ ತಿರುಗಾಡಿ ಸಿದರು. ಹೀಗೆ ಸಂಥರ್ವಕನ್ಯೈಯರೊಂದಿಗೆ ಕೆಲವು ಸಮಯ ಕಳೆದ ಬಳಿಕ್ಕ ಸ್ತ್ರೀ ರೂಪಕನ್ನು ತಾಳಿದ್ದ ಏಡಿ ರಾಣಿಯನ್ನು ಪುನಃ ಬುಗ್ಗೆಯ ಬಳಿಗೇ ಕರೆದುತಂದ: ಬಿಟ್ಟು, ಮಾಯವಾಯಿತು. ೪೦ ಹರಿಣೀ ಕೆಲವು ಕಾಲದಲ್ಲೇ ಇಚ್ಛಾದೇನಿ ಜನಿಸಿದಳು. ರಾಣಿಯು ಆ ಗಂಧರ್ವ ಕನ್ಯೆಯರು ಹೇಳಿದ್ದಂತೆ ಅವರನ್ನು ನೆನೆದು ಅವರು ಕೊಟ್ಟಿದ್ದ ಹೂಗಳ ಹೆಸರನ್ನು ಜನಿಸಿದಳು. ಆ ಗಂಧರ್ವಕನೈಯರು ಅಲ್ಲೆ ಪ್ರ ಸ್ರ ತ್ಯಕ್ಸ ವಾದರು. ಪ ್ರ ತೃ ವಾದವರು ರಾಣಿಗೆ ನಮಸ್ಕಾರ ಮಾಡಿ ಮಗುವನ್ನು ನೋಡಲು ಹೊರಟರು. ಮಗುವಿಗೆ 28 ಬಾಳುವ Pe ಬಹುಮಾನಗಳನ್ನು ಕೊಟ್ಟರು. ಅವರು ಮಗುವಿಗೆ ಕೊಟ್ಟಿ ಬಹುಮಾನಗಳನ್ನು ರಾಣಿಯು ಆನಂದ ದಿಂದಲೂ ಕೃತಜ್ಞತೆಯಿಂದಲೂ ಸ್ವೀಕರಿಸಿದಳು. ಅದರಲ್ಲೂ ಆ ಗಂಧರ್ವ ಕನ್ಯೆಯರು ಒಂದು ತೊಟ್ಟಿಲನ್ನು ಮುಂದಿಟ್ಟಾಗ ರಾಣಿಯ ಆನಂದ ಇನ್ನೂ ಅಧಿಕವಾಯಿತು. ಆ ತೊಟ್ಟಿಲನ್ನು ಬಹಳ ಬೆಲೆಬಾಳುವ ಮರದಿಂದ ಮಾಡಿದ್ದರು. ಅದರ ನಾಲ್ಕು ಮೂಲೆಗಳ ಕಂಬಗಳಲ್ಲೂ ವಜ್ರ ಕೆಂಪುಗಳಿಂದ ಮನ್ಮಥರನ್ನು ಕೆತ್ತಿದ್ದರು. ಮಗು ಅತ್ತಾಗಲೆಲ್ಲ ತೊಟ್ಟಿಲು ತಾನಾಗಿಯೆ ತೂಗುತ್ತಿತ್ತು. ಅನಂತರ ಮಗುವನ್ನು ಪ್ರತಿಯೊಬ್ಬ ಗಂಧರ್ವಕನ್ಯೆಯೂ ತೊಡೆಯ ಮೇಲೆ RE ಮುತ್ತಿಟ್ಟು 'ನುಗುವಿಗೆ ಅನೇಕ ಗುಣ ಗಳನ್ನು ಕೋರಿದರು. ಒಬ್ಬ ಳು ಚೆಲುವನ್ನೂ ಇನ್ನೊ ಬ್ಬ ಳು ಆರೋಗ್ಯ ವನ್ನೂ ಮತ್ತೊಬ್ಬಳು ಸ ಸ ಣವನ್ನೂ ಬೇರೊಬ್ಬ Fe " ಬುದ್ಧಿಮೆನ್ನೂ ಉಳಿದವಳು ಕೈಗೊಂಡ ಕೆಲಸ ನನ್ನು ಮುಗಿಸುವ ಶಕ್ತ ಯನ್ನೂ ಆನುಗ್ರಹಿ ಸಿದರು. ಅವರು ತನ್ನ ಚಿಕ್ಕ ಮಗಳಿಗೆ ತೋರಿಸುತಿ ತ್ತಿದ್ದ ಅನುಸ್ರಹಕ್ಕಾಗಿ ರಾಣಿಯು ಅವರಿಗೆ ಕೃತಜ್ಞ 000 ವಂದಿಸುತ್ತಿದಳು. ನ್ದ ವ" ಆ ವೇಳೆಗೆ ಒಂದು ದೊಡ್ಡ ಏಡಿ ಅಲ್ಲಿ ಕಾಣಿಸಿಕೊಂಥು, “ ರಾಣಿ, ನಿನ್ನದು ಎಂಥ ಕ್ಷ ೈತಫ್ಲತೆ ! ಬುಗ್ಗೆ ಯ ಬಳಿ ಕಂಡವಳನ್ನು' ಇಷ್ಟು ಬೇಗ ಮರೆತುಬಿಟ್ಟಿ ಯಲ್ಲ! ನೀನು ನನ್ನ ಸಹೋದರಿಯರಿಗೆ: ಹೇಳಿಕಳುಹಿಸಿ ದರೂ ನನಗೆ ಹೇಳಿಕಳುಹಿಸಲಿಲ್ಲ. ಸ ನಿನ್ನನ್ನು ಅರ ಬಳಿಗೆ ಕರೆದು ಕೊಂಡುಹೋದುದರಿಂದ ನೀನು ನನಗೆ ಹೆಚ್ಚು ಖಣಿಯಾಗಿರ ಬೇಕಲ್ಲವೆ?” ಎಂದು ಅಸಮಾಧಾನದಿಂದ ಗದರಿಕ್ಕೆ/ಡಿತು. ಹರಿಣೀ ೪೧ ರಾಣಿ ತಾನು ಮಾಡಿದುದು ತಪ್ಪಾಯಿತೆಂದು ಎಷ್ಟೋ ಬೇಡಿ ಕೊಂಡಳು. ಏಡಿಯ ಅಸಮಾಧಾನವನ್ನು ಶಾಂತಿಗೊಳಿಸಲು ಗಂಧರ್ವೆ ಕನ್ಯೆಯರು ತಮ್ಮ ಕೈಲಾದುದನ್ನೆಲ್ಲ ಮಾಡಿದರು. ಸ್ರ್ರೀರೂಪವನ್ನು ತಾಳಿ ತಮ್ಮ ಜೊತೆಯಲ್ಲಿ ಆಟಪಾಟಗಳಿಗೆ ಸೇರಬೇಕೆಂದು ಕೇಳಿ ಕೊಂಡರು. ಆದರೂ ಆ ಏಡಿಯ ಅಸಮಾಧಾನ ಬಹಳ ಹೊತ್ತಿನವರೆಗೂ ಇಳಿಯಲಿಲ್ಲ. ಕಡೆಗೆ ಅವರೆಲ್ಲರ ಮಾತಿನಿಂದ ಮನಸ್ಸು ಕರಗಿ, ಮಗುವಿಗೆ ಶಾಪ ಕೊಡುವುದನ್ನು ಬಿಟ್ಟು, " ನಾನು ಮೊದಲು ಯೋಚಿಸಿದಂಥ ಶಾಪವನ್ನು ಈಗ ಇವಳಿಗೆ ಹಾಕುವುದಿಲ್ಲ. ಆದರೆ, ಹೆದಿನ್ನೆ ದು ವಯಸ್ಸು ತುಂಬುವುದಕ್ಕೆ ಮುಂಚೆ ಇವಳು ಸೂರ್ಯನ ಬೆಳಕು ಕಂಡಾಳು, ಜೋಕೆ! ಆಮೇಲೆ ಸಂಕಟಿಪಡಬೇಕಾದೀತು! ” ಎಂದಳು. ರಾಣಿ ಎಷ್ಟೋ ಅತ್ತಳು. ಗಂಧರ್ವ ಕನ್ಯೈಯರು ಎಷ್ಟೋ ಬೇಡಿ ಕೊಂಡರು. ಆದರೂ ಅವಳು ತನ್ನ ನಿಷ್ಕರ್ಜ್ಷೆಯನ್ನು ಬದಲಾಯಿಸಲಿಲ್ಲ. ಹಾಗೆಯೇ ಏಡಿಯ ಆಕಾರದಲ್ಲಿಯೇ ಮೆಲ್ಲನೆ ಕೊಟಡಿಯಿಂದ ಹೊರಗೆ ಹೋದಳು. ಏಡಿಯ ಶಾಪದಿಂದ ತನ್ನ ಮಗುವನ್ನು ಕಾಪಾಡುವುದು ಹೇಗೆಂದು ರಾಣಿ ಆ ಗಂಧರ್ವಕನ್ಯೆಯರನ್ನು ಕೇಳಿದಳು. ಮೇಲೆ ಬಾಗಿಲು ಕಿಟಕಿಗಳು ಯಾವುದೂ ಇಲ್ಲದ ಒಂದು ಅರಮನೆಯನ್ನು ನೆಲದ ಕೆಳಗೆ ಕಟ್ಟಬೇಕು, ರಾಜಕುಮಾರಿ ಹದಿನೈದು ತುಂಬುವ ತನಕ ಅಲ್ಲಿಯೆ ಬೆಳೆಯಬೇಕು ಎಂದು ಅವರು ನಿಶ್ಚಯಿಸಿದರು. ಹೀಗೆ ನಿಶ್ಚಯಮಾಡಿಕೊಂಡು ಪ್ರತಿಯೊಬ್ಬರೂ ತಮ್ಮ ಕೈಕೋಲುಗಳಿಂದ ನೆಲದ ಮೇಲೆ ಮೂರು ಸಲ ಕುಟ್ಟಿ ದರು. ಕುಟ್ಟ ದೊಡನೆ ಅರಮನೆ ಸಿದ್ಧವಾಗಿಹೋಯಿತು. ಅರಮನೆಯ ಗೋಡೆಗಳೆಲ್ಲ ಅಮೃತಶಿಲೆ ಯಿಂದಾಗಿತ್ತು. ನೆಲವೂ ಮೇಲುಭಾವಣಿಯೂ ವಜ್ರ ಪಚ್ಚೆಗಳಿಂದ ಕೆತ್ತಿ ಆಗಿತ್ತು. ಅರಮನೆಗೆ ಕಟಕಿಗಳಿಲ್ಲದಿದ್ದರೂ ಒಳಗೆ ದೀಪಗಳು ಬೆಳಗುತ್ತಿ ದ್ದು ವು. ದೀಪಗಳ ಬೆಳಕು ಹೆಗಲುಬೆಳಕಿಕಂತೆಯೆ ಚಮತ್ಯಾರವಾಗಿತ್ತು. ೪೨ ಹರಿಣೀ ಇಂತಹ ಅರಮನೆಯಲ್ಲಿ ರಾಜಕುಮಾರಿ ಬೆಳೆದಳು. ಗಂಧರ್ವಕನ್ಯೆಯರು ದಯಪಾಲಿಸಿದ ವರಗಳಿಂದ ರಾಜಕುಮಾರಿ ಸಹಜವಾಗಿ ಬುದ್ಧಿವಂತೆ ಯಾಗಿದ್ದರೂ ಸಕಲ ವಿದ್ಯೆಗಳಲ್ಲಿಯೂ ಪ್ರನೀಣರಾದ ಉಪಾಧ್ಯಾಯರು ಅವಳಿಗೆ ಕಲಿಸುತ್ತಿದ್ದರು. ಆರು ಜನ ಗಂಧರ್ವಕನ್ಯೆಯರೂ ಆಗಾಗ ಬಂದು ಇಚ್ಛಾದೇವಿ ಯನ್ನು ನೋಡಿಕೊಂಡು ಹೋಗುತ್ತಿದ್ದರು. ಇಚ್ಛಾ ದೇವಿ ಜೆಲುವೆಯಾಗಿ ಬೆಳೆದಳು. ರಾಜರಾಣಿಯರು ತಾವು ರಾಜ್ಯವಾಳುವ ಹೊತ್ತು ಹೊರತು ಉಳಿದೆಲ್ಲಾ ಸಮಯವನ್ನು ಅವಳೊಡನೆ ಕಳೆಯುತ್ತಿ ದ್ದರು. ಗಂಧರ್ವ ಕನ್ಯೆಯರೆಲ್ಲರಿಗೂ ಇಚ್ಛಾ ಜೀವಿ ಪ್ರಿ ಯಳಾಗಿದ್ದರೂ ಕ್ಸಿಗೆ ಹೂವಿನ ಮಲ್ಲಿಕಾದೇವಿಗೆ ಅವಳ ಮೇಲೆ ಜ್‌ | ್ರೀತಿಯಿತ್ತು. ಇಚ್ಛಾ ಡೀವಿ ಹೆಗಲುಬೆಳಕನ್ನು ಕಾಣದ ಹಾಗೆ ಎಚ್ಚರದಿಂದಿರ ಬೇಕೆಂದು ಅವಳು ರಾಣಿಗೆ ಆಗಾಗ್ಗೆ ನೆನಪುಕೊಡುತ್ತಿದ್ದಳು. ಮಲ್ಲಿಕಾ ದೇವಿಗೆ ಬುಗ್ಗೆಯ ಬಳಿಯ ಏಡಿ ಎಷ್ಟು ಕ್ರೂರಿಯೆಂಬುದು ಚೆನ್ನಾಗಿ ತಿಳಿದಿತ್ತು. ರಾಜಕುಮಾರಿಯ ಹದಿನಾಲ್ಕನೆಯ ವರ್ಥಂತಿ ನಡೆಯಿತು. ಅದು ಆದ ಒಡನೆಯೆ ರಾಣಿ ತನ್ನ ಪಟ್ಟಣದಲ್ಲಿದ್ದ ಪ್ರಖ್ಯಾತ ಚಿತ್ರಕಾರ ನನ್ನು ಕರೆಯಿಸಿ ತನ್ನ ಮಗಳ ಚಿತ್ರಗಳನ್ನು ಬರೆಯಿಸಿದಳು. ಅವನು ಬರೆದು ಮುಗಿಸಿದ ಮೇಲೆ ಅವುಗಳನ್ನು ಜಗತ್ತಿನ ಅನೇಕ ವೀರ ರಾಜಕುಮಾರರಿಗೆ ಕಳುಹಿಸಿಕೊಟ್ಟಳು. ಚಿತ್ರವನ್ನು ನೋಡಿದವರೆಲ್ಲರೂ ಇಚ್ಛಾ ದೇವಿಯಲ್ಲಿ ಮೋಹೆಗೊಂಡರು. ಆದರೆ ಮಹಾಶೂರನೆಂದು ಅನ್ವರ್ಥವಾಗಿ ಹೆಸ ರು ಪಡೆದಿದ್ದ ರಾಜಕುಮಾರನೊಬ್ಬನು ಇಜಾ ದೇವಿಯ ಚಿತ್ರವನ್ನು ಕಂಡು ಹುಚ ತೃ ನಂತಾದನು. ತನ್ನ ಕೋಣೆಯಲ್ಲಿ ತಾನೊಬ್ಬ ನೇ ಕುಳಿತು ಸುಮ್ಮನೆ ಚಿತ್ರದೊಂದಿಗೆ ಮಾತನಾಡುವನು, ಡುವ, ಆ ಚಿತ್ರ ತ್ರಕ್ಕೆ ಸತ್ರ ಬರೆಯುವನು. ಆಯಾ ತೆ ಮಗನನ್ನು ಅನೇಕ ದಿವಸಗಳಾದರೂ ಕಾಣದೆ, ತನ್ನ ಪರಿವಾರದವರನ್ನು ಕೇಳಿದನು. " ಮಹಾರಾಜ, ಕಳೆದ ಹರಿಣೀ ೪ ಯುದ್ದದಲ್ಲಿ ಅವನ ಮೆದುಳಿಗೆ ನಿನೋ ಏಟು ಬಿದ್ದಿ ರಬೇಕೆಂದು ತೋರು ತ್ತದೆ. ಅವನು ಕೋಣೆಯಲ್ಲಿ ಒಬ್ಬ ನೇ ಕುಳಿತು, ಹಗಲೂ ರಾತ್ರಿ ಯಾರೋ ಹೆಂಗುಸಿನೊಡನೆ ಫಿ ಡುವೂತೆ ಮಾತನಾಡುತ್ತಾ 3 ಹಾಡುತ್ತಾನೆ? ಎಂದು ಹೇಳಿದರು. ಮಹಾರಾಜನಿಗೆ ಏನು ಮಾಡಲೂ ತೋಚಲಿಲ್ಲ. ಮಗನನ್ನು ಕರೆಕಳುಹಿಸಿದನು. ಅವನು ಕಳೆಗುಂದಿದ್ದುದನ್ನು ನೋಡಿದನು. ಕುಮಾರರ ದುಃಖಕ್ಕೆ ಕಾರಣವೇನೆಂದು ಕೇಳಿದನು. ಕುಮಾರನು ತಂದೆಯ ಕಾಲುಗಳ ಮೇಲೆ ಬಿದ್ದು, ಅಪ್ಪ, ಆ ಅಚ್ಚಕರಿಯ ಕೃಷ್ಣಾ ಕುಮಾರಿಯನ್ನು ನಾನು ಮದುವೆಯಾಗಬೇಕೆಂದು ನೀನು ಇಷ್ಟ ಪಡು ವುದಾದರೂ ನನ್ನ ಮನಸ್ಸೆಲ್ಲಾ ಇಚ್ಛಾದೇವಿಯ ಮೇಲಿದೆ. ನಾನು ಅವಳನ್ನು ಹೊರತು ಇನ್ನು ಯಾರನ್ನೂ ಮದುವೆಯಾಗುವುದಿಲ್ಲ” ಎಂದನು. ತನ್ನ ಮಗನು ಒಂದು ಚಿತ್ರಕ್ಕೆ ಮೋಹಗೊಂಡು ಹೀಗೆಲ್ಲ ಆಡುವುದು ನೋಡಿ ಮಹಾರಾಜನು ನಕ್ಕನು. ಆದರೆ ಅದರಿಂದ ಏನೂ ಕುಮಾರನ ಮನಸ್ಸು ಬದಲಾಗಲಿಲ್ಲ. ಅವನು ತನ್ನ ಕೋಣೆಗೆ ಹೋಗಿ ಇಚ್ಛಾ ದೇವಿಯ ಚಿತ್ರವನ್ನು ತಂದು ತಂದೆಗೆ ತೋರಿಸಿದನು. ರಾಜನು ಅಷ್ಟು. ಚೆಲುವಾದ ಚಿತ್ರವನ್ನು ಅದಕ್ಕೆ ಮೊದಲು ನೋಡಿರಲಿಲ್ಲ. ಅವನು ಆಶ್ಚರ್ಯದಿಂದ ಕಾಸು ಕೊಂಚ ನೇಳೆಯಾದ ಬಳಿಕ ಮಹಾರಾಜನು ಕುಮಾರನನ್ನು ಕುರಿತು, “ ನಿನ್ನ ಇಷ್ಟವೇ ನನ್ನ ಇಷ್ಟ. ನಾವು ಯುದ್ಧಮಾಡಬೇಕಾಗಿ ಬರಬಹುದಾದರೂ ಸರಿಯೆ, ಕೃಷ್ಣಾ ಕುಮಾರಿಯ ಕ್ಸ ಬೇಡಿ ಕಳುಹಿಸಿ ರುವ ರಾಯಭಾರಿಯನ್ನು ಹಿಂದಕ್ಕೆ ಕರೆಸಬೇಕು. ಇಚಾ ದೇವಿಯನ್ನು ಮದುವೆಮಾಡಿಕೊಡಬೇಕೆಂದು ಬೇಡುವುದಕ್ಕಾಗಿ ಇನ್ನೊಬ್ಬ ಜು ಭಾರಿಯನ್ನು ಕಳುಹಿಸ ಬೇಕು? ಎಂದನು. ತಂದೆಯು ಕೊಟ್ಟ ನಂಬಿಕೆಯನ್ನು ಕಿವಿಯಾರೆ ಕೇಳಿ ಕುಮಾರನ ಮುಖ ಆನಂದದಿಂದ ಅರಳಿತು. ರಾಯಭಾರಿಯನ್ನು ಕಳುಹಿಸುವು ೪೪ ಹರಿಣೀ ದಾದರೆ ಬೇಗ ಕಳುಹಿಸಬೇಕೆಂದು ಕೇಳಿಕೊಂಡನು. ಅವನ ಇಷ್ಟದಂತೆ ಮಹಾರಾಜನು ಒಬ್ಬ ರಾಯಭಾರಿಯನ್ನು ಆಗಲೇ ಹೋಗಹೇಳಿ ಆಜ್ಞೆಮಾಡಿದನು. ಆ ರಾಯಭಾರಿಗಾಗಿ ಇಪ್ಪತ್ತುನಾಲ್ಕು ಉತ್ತಮ ರಥಗಳನ್ನು ಅಲಂಕರಿಸಿ ತಂದರು. ಜೊತೆಗೆ ಐವತ್ತು ಸಾಧಾರಣ ರಥ ಗಳೂ ಹೊರಟವು. ಇಪ್ಪತ್ತುನಾಲ್ಕು ಸಾವಿರ ಸೈನಿಕರು ರಾಯಭಾರಿಯ ಪರಿವಾರವಾಗಿ ಹೊರಟರು. ಮಹಾಶೂರನು ಇಚ್ಛಾದೇನಿಗೆ ಅನೇಕ ಬಹುಮಾನಗಳನ್ನು ಕಳುಹಿಸಿದನು. ಅವುಗಳ ಜೊತೆಗೆ ತನ್ನದೂ ಒಂದು ಚಿತ್ರವನ್ನು ಕಳುಹಿಸಿದನು. ರಾಯಭಾರಿ ಬಂದ ಸುದ್ದಿ ಇಚ್ಛಾದೇವಿಯ ತಾಯಿತಂದೆಗೆ ತಿಳಿಯಿತು. ಅವರು ತಮ್ಮ ಮಗಳನ್ನು ಅವನಿಗೆ ತೋರಿಸಬೇಕೆಂದು ಆತುರಷಟ್ಟಾಗ್ಯ “ಶೀಗೆ ಮಾಡತಕ್ಕುದಲ್ಲ. ಅವಳ ಹದಿನೈದನೆಯ ವರ್ಧಂತಿ ಆಗುವ ವರೆಗೂ ಅವಳು ತನ್ನ ಅರಮನೆಯಿಂದ ಕದಲಲಾಗದು” ಎಂದು ಮಲ್ಲಿಕಾದೇವಿ ಬಂದು ತಡೆದಳು. ರಾಣಿ ಅದಕ್ಕೆ ಒನ್ಬಿ, ರಾಯಭಾರಿ ಬಂದುದನ್ನು ರಾಜಕುಮಾರಿಗೆ ತಿಳಿಸಕೂಡದೆಂದು ಆಜ್ಞೆ ಮಾಡಿದಳು. ರಾಯಭಾರಿಯ ಮೆರವಣಿಗೆ ಬಹಳ ಉದ್ದವಾಗಿತ್ತು. ಮೆರವಣಿಗೆ ಪಟ್ಟಣದ ಬಾಗಿಲುಗಳನ್ನು ಹಾಯಲು ಇಪ್ಪತ್ತುಮೂರು ಗಂಟೆಗಳ ಕಾಲ ಹಿಡಿಯಿತು. ರಾಯಭಾರಿ ರಾಜರಾಣಿಯರ ಬಳಿಗೆ ಬಹಳ ಸಂಭ್ರಮದಿಂದ ಬಂದನು. ಅನೇಕ ದಿನಗಳ ವರೆಗೆ ಅವನಿಗೆ ಬೇಕಾದ ಹಾಗೆ ಊಟ ಉಪಚಾರ ನಡೆಯಿತು. ಕಡೆಗೆ ರಾಯಭಾರಿ ಇಚ್ಛಾ ದೇವಿಯನ್ನು ಕಾಣಲು ಬಯಸಿದನು. ಆದರೆ ಅವಳನ್ನು ಕಾಣುವುದು ಅಸಾಧ್ಯವೆಂದು ಕೇಳಿ ತಿಳಿದು ವಿಸ್ಮಿತನಾದನು. ರಾಯಭಾರಿಯು ರಾಜದಂಪತಿಗಳಿಗೆ ಮಹಾಶೂರನ ಚಿತ್ರವನ್ನು ತೋರಿಸಿದನು. ಅವರು ಅದನ್ನು ನೋಡಿ ನೋಡಿ ಮರುಳಾದರು. ರಾಣಿ ಆ ಚಿತ್ರವನ್ನು ತೆಗೆದುಕೊಂಡು ಹೋಗಿ ಮಗಳಿಗೆ ತೋರಿಸಿ, “ ಇಂಥ ಯುವಕನನ್ನು ಮದುವೆಯಾಗುವುದರಲ್ಲಿ. ನಿನ್ನ ಅಭಿಪ್ರಾಯ ಹರಿಣೀ ೪೫ ನೇನು?” ಎಂದು ಕೇಳಿದಳು. ಇಚ್ಛಾದೇವಿ ತನ್ನ ಮದುವೆಗೆ ಸಿದ್ಧತೆ ಯಾಗುತ್ತಿದೆಯೆಂದು ತಿಳಿದು, ಏನೂ ಹೇಳದೆ, ಸುಮ್ಮನೆ ಲಜ್ಜೆಯಿಂದ ತಲೆ ತಗ್ಗಿಸಿದಳು. “ನಿಜವಾಗಿಯೂ ಇಂಥ ಯುವಕನನ್ನು ವರಿಸಿದರೆ ನಿನಗೆ ಸಂತೋಷವಾಗುವುದಲ್ಲವೆ?? ಎಂದು ರಾಣಿ ಪುನಃ ಕೇಳಿದಳು. ಲಜ್ಜೆಯಿಂದ ರಾಜಕುಮಾರಿಯ ತಲೆ ಇನ್ನೂ ಕುಸಿಯಿತು. ವಿಧೇಯ ಳಾದ ಮಗಳಂತೆ “ನೀವು ಯಾರನ್ನು ಆರಿಸಿದರೂ ನನಗೆ ಸಂತೋಷವೇ? ಎಂದು ಇಚ್ಛಾದೇವಿ ಉತ್ತರಕೊಟ್ಟಳು. ಆಗ ರಾಣಿ ರಾಯಭಾರಿಯ ಆಗಮನವನ್ನು ತಿಳಿಸಿದಳು ಅವನು ತಂದ ಬಹುಮಾನಗಳನ್ನೆಲ್ಲ ತೋರಿಸಿದಳು. ಆದರೆ ಇಚ್ಛಾ ದೇವಿಯ ಗಮನವೆಲ್ಲಾ ಮಹಾಶೂರನ ಚಿತ್ರದ ಮೇಲಿತ್ತು. ರಾಯಭಾರಿ ಬಂದ ದಾರಿ ಹಿಡಿದು ಹಿಂದಿರುಗಿದನು. “ಇನ್ನೂ ಮೂರು ತಿಂಗಳು ಕಳೆಯುವವರೆಗೂ ರಾಜಕುಮಾರಿ ತನ್ನ ಅರಮಕೆ ಯನ್ನು ಬಿಟ್ಟು ಬರುವಂತಿಲ್ಲ” ಎಂದು ಮಹಾಶೂರನಿಗೆ ತಿಳಿಸಿದನು. ಇಚ್ಛಾದೇವಿ ತನಗೆ ದೊರೆತಳೆಂದು ಅವನಿಗೆ ಮಹದಾನಂದವಾಯಿತು. ಆದರೆ ಇನ್ನೂ ಮೂರು ತಿಂಗಳು ಅವಳಿಗಾಗಿ ಕಾಯಬೇಕೆಂದು ಕೇಳಿ ಅವನಿಗೆ ಮಹಾದುಃಖವಾಯಿತು. ಅವನು ಒಂಟಿಯಾಗಿ ಕುಳಿತು ಅವಳ ಚಿತ್ರದೊಂದಿಗೆ ಸುಮ್ಮನೆ ಮಾತನಾಡುವನು, ಹಾಡುವನು. ಊಟಮಾಡುತ್ತಿರಲಿಲ್ಲ, ನಿದ್ದೆಮಾಡುತ್ತಿರಲಿಲ್ಲ. ಹೀಗಾಗಿ, ಸ್ವಲ್ಪ ಕಾಲದಲ್ಲಿಯೇ ಅವನು ನಿಶೃಕ್ಷನಾದ, ರೋಗಿಯಾದ. ವೈದ್ಯರು ಕೊಟ್ಟ ಮದ್ದು ಅವನ ಮೈಗೆ ಅಂಟಲಿಲ್ಲ. ಅವನು ಸತ್ತುಹೋಗಬಹುದೆಂದು ಎಲ್ಲರೂ ಹೆದರಿದರು. ಮಹಾಶೂರನ ತಂದೆಯು ಇಚ್ಛಾದೇವಿಯ ತಂದೆಯ ಬಳಿಗೆ ತಾನೇ ಹೋಗಿ ಅವಳನ್ನು ಕಳುಹಿಸಲು ಪ್ರಾರ್ಥಿಸಬೇಕೆಂದು ನಿಶ್ಚಯಿಸಿ ದನು. ಅವಳಿಗೆ ಹೆಚ್ಚು ಕಡಿಮೆ ಹದಿನೈದು ವರ್ಷ ತುಂಬಿದ್ದುದರಿಂದ ಹೆಚ್ಚಿನದೇನೂ ಕೇಡಾಗಲಾರದೆಂದು ಅವನು ನಂಬಿದ್ದನು. ಆದರೆ ಕುದುರೆಯ ಮೇಲೆ ಪ್ರಯಾಣಮಾಡಲು ಅವನಿಗೆ ಶಕ್ತಿಯಿರಲಿಲ್ಲ. ಗಾಡಿಯಲ್ಲಿ ಹೋದರೆ ಬಹಳ ನಿದಾನವಾಗುವುದು ಎಂದು ತಾನು ೪೬ ಹೆರಿಣೀ ಹೇಳಬೇಕಾದುದೆಲ್ಲವನ್ನೂ ಕಾಗದದಲ್ಲಿ ಮನಸ್ಸಿಗೆ ಮುಟ್ಟುವಂತೆ ಬರೆದು ರಾಯಭಾರಿಯ ಕೈಯಲ್ಲಿ ಕಳುಹಿಸಿಕೊಟ್ಟನು. ಈ ನಡುನೆ ಕೃಷ್ಣಾಕುಮಾರಿಯ ಬಳಿಗೆ ಹೋದ ರಾಯಭಾರಿಗೆ ಹೆದರಿಕೆಯಿಂದ ಪ "ಜೀವವಾಗಿತ್ತು. ಮಹಾಶೂರನು ತನ್ನನ್ನು ನಿರಾಕರಿಸಿದನೆಂಬ ಸುದ್ದಿ ಕೇಳಿ ಅವಳು ಸಿಟ್ಟಾಗಿದ್ದಳು. ಆ ಸಿಟ್ಟನ್ನು ರಾಯಭಾರಿಯ ಮೇಲೆ" ತಿರುಗಿಸಿ, “ನಾನೇನು ಚೆಲುವಿನಲ್ಲಿ ಕಡಿಮೆಯೆ? ಐಶ್ವರ್ಯದಲ್ಲಿ ಕಡಿಮೆಯೆ? ನನ್ನ ಮೈಯಿನ ಕಪ್ಪು ಬಣ್ಣ ನೋಡು. ಈ ದಪ್ಪ ತುಟಗಳು ನೋಡು. ಈ ಅಗಲವಾದ ಮೂಗು ನೋಡು. ನನ್ನ ರಾಜ್ಯದಲ್ಲಿ ಸುತ್ತಾಡಿ ಇಲ್ಲಿಯ ಐಶ್ವರ್ಯ ನೋಡು” ಎಂದು ಕೂಗಾಡಿ ದಳು. ರಾಯಭಾರಿ ಅವಳ ಸಿಂಹಾಸನದ ಮುಂದೆ ಮೂರು ಸಲ ಅಡ್ಡ ಬಿದ್ದು, “ಅಮ್ಮಾ, ಪ್ರಜೆಯೊಬ್ಬನು ತನ್ನ ರಾಜನನ್ನು ಆಕ್ಷೇಪಿಸಬಹು ದಾದರೆ ನಾನು ನಮ್ಮ ರಾಜನನ್ನು ಆಕ್ಲೇಪಿಸುತ್ತೇನೆ. ನನಗೊಂದು ರಾಜ್ಯವೂ ಸಿಂಹಾಸನವೂ ಇದ್ದಿ ದ್ದರೆ ನಾನು ಅದನ್ನು ತಮ್ಮಡಿಗೆ ಸಮರ್ಪಿಸುವವರೆಗೆ ಶಾಂತಿಯಿಂದಿರುತ್ತಿರಲಿಲ್ಲ ಎಂದು ನಯವಾಗಿ ಮಾತನಾಡಿದನು. ಅವನ ಹೊಗಳಿಕೆಯ ಮಾತುಗಳಿಂದ ಕೃಷ್ಣಾಕುಮಾರಿಯ ಕೋಪ ಕೊಂಚ ಇಳಿಯಿತು. ರಾಜನಿಗೆ ಬದಲಾಗಿ ರಾಯಭಾರಿಯನ್ನು ಶಿಕ್ಷಿಸಬೇಕೆಂದಿದ್ದವಳು, ಅವನನ್ನು ಮನ್ನಿಸಿ . ಮನೆಗೆ ಕಳುಹಿಸಿದಳು. ಅನನು ತನ್ನನ್ನು ಬಿಟ್ಟುದೆ ಸಾಕೆಂದು ಬೇಗಬೇಗ ತನ್ನ ದೇಶಕ್ಕೆ ಹೋಗಿ ಸೇರಿಕೊಂಡನು. ಆದರೆ ಕೃಷ್ಣಾ ಕುಮಾರಿಗೆ ಮಹಾಶೂರನ ಮೇಲೆ ಮಾತ್ರ ಕೋಪ ಕಡಿಮೆಯಾಗಿರಲಿಲ್ಲ. ಅವನಿಗೆ ತಕ್ಕ ಶಿಕ್ಷೆ ಮಾಡಿಸಬೇಕೆಂದು ಅವಳು ತನ್ನನ್ನು ಬಹುವಾಗಿ ಪ ಪ್ರೀತಿಸುತ್ತಿದ್ದ. ಬುಗ್ಗೆಯ ಬಳಿಯ ಏಡಿಯನ್ನು ನೆನೆದಳು. ಗಂಟಿಗೆ ಹತ್ತು. ಹರಿದಾರಿ ಓಡುವ ರಥದಲ್ಲಿ ಅವಳಲ್ಲಿ ಹೋದಳು. ಹೋಗಿ, ತನಗೆ ಮೆಹಾಶೂರನಿಂದಾದ ಅವಮಾನವನ್ನು ಹರಿಣೀ ೪೭ ಹೇಳಿಕೊಂಡಳು. ಏಡಿ ಒಂದು ಕ್ಷಣಕಾಲ ಧ್ಯಾನಮಾಡಿ, ಮಹಾ ಶೂರನು ಕೃಷ್ಣಾಕುಮಾರಿಯನ್ನು ತಿರಸ್ಕರಿಸಿದುದಕ್ಕೆ ಕಾರಣವನ್ನು ಕಂಡಿತು. ಅದುವರೆಗೆ ಅದಕ್ಕೆ ಇಚ್ಛಾದೇನಿಯ ಸಂಗತಿಯೆ ಮರೆತು ಹೋಗಿತ್ತು. ಅವಳು ಹುಟ್ಟದ ದಿನ ತನಗಾದ ಅವಮಾನವನ್ನು ಜ್ಞಾಸಿಸಿಕೊಂಡಿತು. ಅದರ ಮ್ಫೆ ಉರಿಯಿತು. ಮಹಾಶೂರನು ಇಚ್ಛಾ ದೇವಿಯ ಮೇಲಿನ ಪ್ರೀತಿಯಿಂದಲೇ ಕೃಷ್ಣಾ ಕುಮಾರಿಯನ್ನು ಕಡೆ ಗಣಿಸಿದುದರಿಂದ, ಏನಾದರೂ ಮಾಡಿ ಅವರಿಗೆ ತೊಂದರೆ ಕೊಡುವೆನೆಂದು ಅದು ನಿಶ್ಚಯಮಾಡಿತು. ಅದನ್ನೇ ಕೃಷ್ಣಾಕುಮಾರಿಗೂ ತಿಳಿಸಿ, ಅವಳನ್ನು ಸಂತೈಸಿ ಕಳುಹಿಸಿತು. ಇತ್ತ ಇಚ್ಛಾದೇನಿ ಮೂರುಹೊತ್ತೂ ಮಹಾಶೂರನ ಚಿತ್ರ ದಲ್ಲಿಯೇ ಮುಳುಗಿರುತ್ತಿದ್ದಳು. ಈ ಸಂಗತಿ ಎಲ್ಲರಿಗೂ ತಿಳಿದಿತ್ತು. ಅದರಲ್ಲೂ ಅವಳ ಸಖಿಯರಾದ ಸುಶೀಲೆ ಮತ್ತು ಕೃಶಾಂಗಿ ಎಂಬವರಿಗೆ ಅವಳ ಮನಸ್ಸು ಇನ್ನೂ ಚೆನ್ನಾಗಿ ತಿಳಿದಿತ್ತು. ಸುಶೀಲೆಗೆ ತನ್ನ ಒಡತಿಯ ಮೇಲೆ ತುಂಬಾ ಪ್ರೀತಿ. ಆದರೆ ಕೃಶಾಂಗಿಗೆ ಇಚ್ಛಾದೇವಿಯ ಸೌಂದರ್ಯವನ್ನು ಕಂಡು ಸಹಿಸಲಾರದ ಹೊಟ್ಟಿ ಕಿಚ್ಚು. ಕೈಲಾದರೆ ಅವಳಿಗೆ ಕೇಡು ಮಾಡಬೇಕೆಂದು ಕಾಯುತ್ತಿದ್ದಳು. ಮಹಾಶೂರನ ತಂದೆ ಕಳುಹಿಸಿದ ಕಾಗದಗಳನ್ನು ತೆಗೆದುಕೊಂಡು ಹೊರಟ ರಾಯಭಾರಿ ಇಚ್ಛಾದೇವಿಯ ಊರಿಗೆ ಬೇಗ ಬೇಗ ಬಂದನು. ಬಂದ ಒಡನೆಯೆ, ಆಕೆಯ ತಾಯಿತಂದೆಯ ಕಾಲಿಗೆ ಬಿದ್ದು, " ಬೇಗನೆ ರಾಜಕುಮಾರಿಯನ್ನು ಕಾಣದಿದ್ದರೆ ನನ್ನ ಯಜಮಾನನು ಸತ್ತೇ ಹೋಗುತ್ತಾನೆ? ಎಂದು ಅಳುತ್ತಾ ರಾಜಕುಮಾರನ ಸ್ಥಿತಿಯನ್ನು ತಿಳಿಸಿ ದನು. “ಏಡಿಯ ಶಾಪ ಮುಗಿಯುವುದಕ್ಕೆ ಇನ್ನು ಮೂರೇ ತಿಂಗಳು ಮಿಕ್ಕಿರುವುದರಿಂದ ಅಂತಹ ಕೇಡೇನೂ ಆಗದು? ಎಂದನು. “ ಅಲ್ಲದೆ ನಿಮ್ಮಂತಹ ಮಹಾರಾಜರು ಒಂದು ಸಾಧಾರಣ ಏಡಿಯ ಮಾತಿಗೆ ಹೀಗೆ ಭಯಪಡಬಾರದು? ಎಂದು ಸೂಚಿಸಿದನು. ಆದರೂ ರಾಜನಿಗೆ ಮಗಳನ್ನು ಕಳುಹಿಸುವ ಥೈರ್ಯಬರಲಿಲ್ಲ. ೪೮ ಹರಿಣೀ ರಾಜಕುಮಾರನು ಕಾಯಿಲೆಯೆಂಬ ಸುದ್ದಿಯನ್ನು ರಾಣಿ ತನ್ನ ಮಗಳಿಗೆ ತಾನೇ ತಿಳಿಸಿದಳು. ಮಗಳು ಕಣಿ ನ್ಲೀರಿಟ್ಟುದು ಕಂಡು, “ಅಳ ಬೇಡವಮ್ಮ. ಅವನ ರೋಗವನ್ನು ಪರಿಹರಿಸುವುದು ನಿನ್ನ ಕ್ಸ ಯಲ್ಲೆ ಇದೆ. ಆದರೆ ನೀನು ಅವನ ಹತ್ತಿ ಕ ಹೋಗುವಾಗ ಏಡಿ ಬ ಕೇಡುಮಾಡಬಹುದೆಂದು ಹೆದರುತ್ತೇನೆ” ಎಂದಳು. ಅದಕ್ಕೆ ರಾಜಕುಮಾರಿ ಬಾಗಿಲು ಕಟಕಿಗಳು ಏನೂ ಇಲ್ಲದ ಗಾಡಿಯಲ್ಲಿ ನಾನು ಪ್ರಯಾಣ ಮಾಡಬಹುದಲ್ಲ. ರಾತ್ರಿ ಮಾತ್ರ ಗಾಡಿ ಯಿಂದ ಹೊರಗೆ ಬರುತ್ತೇನೆ. ಹಗಲೆಲ್ಲಾ ಪ್ರಯಾಣಮಾಡಿ ನಾವು ರಾಜಕುಮಾರನನ್ನು ಸೇರಬಹುದಲ್ಲ” ಎಂದಳು. ಅವಳ ತಾಯಿತಂದೆಗೆ ಅದು ಒಳ್ಳೆಯ ಆಲೋಚನೆಯೆನ್ನಿ ಸಿತು. ಈ ಇಚ್ಛಾದೇವಿ ಈ ದಿವಸವೇ ಹೊರಡುವಳೆಂದು ರಾಜಕುಮಾರನಿಗೆ ತಿಳಿಸು” ಎಂದು ಅವರು ರಾಯಭಾರಿಯನ್ನು ಕಳುಹಿಸಿಕೊಟ್ಟರು. ಕೂಡಲೆ ಅರಮನೆಯ ಕೆಲಸಗಾರನನ್ನು ಕರೆಸಿ ರಾಜಕುಮಾರಿಯ ಪ್ರಯಾಣಕ್ಕೆ ಅನುಕೂಲವಾದ ರಥವನ್ನು ಸಿದ್ಧ ಮಾಡಹೇಳಿದರು. ಆ ರಥ ಪೆಟ್ಟಿಗೆ ಇದ್ದಂತೆ ಇತ್ತು. ಅದಕ್ಕೆ ಬಾಗಿಲುಗಳಿದ್ದರೂ, ಬಾಗಿಲು ಗಳಿಗೆ ಬಿಗಿಯಾದ ಬೀಗ ಹಾಕಿತ್ತು. ಬೀಗದಕ್ಕೆಗಳು ಒಬ್ಬ ವಿಶೇಷ ರಾಯಭಾರಿಯ ವಶದಲ್ಲಿದ್ದುವು. ಇಚ್ಛಾದೇವಿ ಆ ರಥದಲ್ಲಿ ಹೊರಟಾಗ ಸುಶೀಲೆಯೂ ಕೃಶಾಂಗಿಯೂ ಅವಳೊಡನೆ ಹೊರಟರು. ಜೊತೆಯಲ್ಲಿ ಕೃಶಾಂಗಿಯ ತಾಯಿ ತಾನೂ ಹೊರಟಳು. ಅವಳು ಚಿಕ್ಕಂದಿನಿಂದ ಇಚ್ಛಾದೇವಿಯ ದಾದಿಯಾಗಿದ್ದವಳು. ಇತರ ಅನಶ್ಯವಾದ ಪರಿ ವಾರವೂ ಅವರೊಡನೆ ಹೊರಟಿತು. ಮಹಾಶೂರನ ಚಿತ್ರ ಇಚ್ನಾದೇವಿಯ ವಶಕ್ಕೆ ಬಂದಾಗಿನಿಂದ ಕ.ಶಾಂಗಿಗೆ`ಅವಳ ಮೇಲೆ ಹೊಟ್ಟೆ ಯುರಿ ಹೆಚ್ಚಿ ತ್ತು. ಅವಳು ರಾಜ ಕುಮಾರನನ್ನು ತಾನೇ ನೋಹಿಸ ತೊಡಗಿದ್ದ ಚ ಅವನಿಗೆ ಇಚ್ಛಾದೇವಿ ಯೊಡನೆ ಮದುವೆಯಾದರೆ ತಾರು ಜೀವ ಕಳೆದುಕೊಳು ವುದಾಗಿ ತಾಯಿ ಯೊಡನೆ ಹೇಳಿಕೊಂಡಳು. ಆ: ತಾಯಿ, ಮಗಳ ಮೇಲಿನ ಮೋಹದಿಂದ, ಹರಿಣೀ ೪೯ ಏನಾದರೂ ಮಾಡಿ ಆ ಮದುವೆ ನಡೆಯದಂತೆ ತಡೆಯುನೆನೆಂದು ಸಮಾ ಧಾನಪಡಿಸಿದಳು. ಆದರೆ ಇಚ್ಛಾ ದೇವಿಯ ತಾಯಿತಂದೆಗೆ ಆ ದಾದಿಯ ಮೇಲೆ ಹೆಚ್ಚು ನಂಬಿಕೆ. ಅವರು ಅವಳನ್ನು ಅನೇಕ ವರ್ಷಗಳಿಂದ ನೋಡಿದ್ದರು. ಮುಂದಿನ ಮೂರು ತಿಂಗಳ ಕಾಲ ಮಗಳ ಯೋಗಕ್ಷೇಮದ ಭಾರವನ್ನು ಅವಳಿಗೇ ವಹಿಸಿದರು. ರಾಣಿಯು ಅವಳನ್ನು ಕರೆದು, "ರಾಜಕುಮಾರಿ ಹಗಲುಬೆಳಕನ್ನು ನೋಡದಂತೆ ಜಾಗರೂಕತೆಯಿಂದಿರು. ಇದು ಏಕೆಂಬುದು ಆ ರಾಯಭಾರಿಗೂ ಗೊತ್ತು. ಅವಳಿಗೆ ಹೆದಿನ್ಫೈೆದು ವರ್ಷ ತುಂಬುವವರೆಗು ಬರಿಯ ಮೇಣದಬತ್ತಿಯ ಬೆಳಕಿನಲ್ಲಿ ಮಾತ್ರ ಇರುವಂತೆ ನೋಡಿಕೊ” ಎಂದು ಪುನಃಪುನಃ ಹೇಳಿದಳು. ದಾದಿ ಅವಳ ಆಜ್ಞೆಯನ್ನು ಚಾಚೂ ತಪ್ಪದೆ ನಡೆಸುವುದಾಗಿ ಭರವಸೆ ಕೊಟ್ಟಳು. ರಾಜರಾಣಿಯರು ಅವರನ್ನು ಕಳುಹಿಸಿಕೊಟ್ಟರು. ಪ್ರಯಾಣ ಹೊರಟ ಕಾಲದಿಂದ ಕೃಶಾಂಗ್ಕಿ ಏನಾದರೂ ಮಾಡಿ ರಾಜಕುಮಾರಿ ರಾಜಕುಮಾರನನ್ನು ಕಾಣುವುದು ತಫ್ಪ್ಬಿಸೆಂದು ತನ್ನ ತಾಯಿಯನ್ನು ನೀಡಿಸತೊಡಗಿದಳು. ಅವಳ ಪೀಡೆಯನ್ನು ತಡೆಯ ಲಾರದೆ, ಆ ದಾದಿ ಮಾರನೆಯ ಬೆಳಗ್ಗೆ ಒಂದು ಹರಿತವಾದ ಚೂರಿಯನ್ನು ತೆಗೆದುಕೊಂಡು ಗಾಡಿಯ ಪಕ್ಕದಲ್ಲಿ ಒಂದು ದೊಡ್ಡ ರಂಧ್ರ ಕತ್ತರಿಸಿ ದಳು. ಸೂರ್ಯನ ಬೆಳಕು ಗಾಡಿಯೊಳಕ್ಕೆ ನುಗ್ಗಿತು. ಇಚ್ಛಾದೇವಿ ಅದುವರೆಗೆ ಸೂರ್ಯನ ಬೆಳಕನ್ನು ಕಂಡಿರಲಿಲ್ಲ. ಆಗ ಕಂಡ್ಕು ಅಯ್ಯೋ ಎಂದು ಕೂಗಿಕೊಂಡಳು. ಒಡನೆಯೆ ಒಂದು ಜಿಂಕೆ ಯಾಗಿ ಹೊರಕ್ಕೆ ಹಾರಿಹೋದಳು. ಅದನ್ನು ಕಂಡ ಪರಿವಾರದವರು ಅವಳನ್ನು ಹಿಡಿಯಲು ಬೆನ್ನಟ್ಟದರು. ಅದೇ ಸಮಯವನ್ನು ಕಾಯುತ್ತಿದ್ದ ಏಡಿ ಒಂದು ದೊಡ್ಡ ಬಿರುಗಾಳಿಯನ್ನು ಎಬ್ಬಿಸಿತು. ಅದರಿಂದ ಪರಿ ವಪಾರದವರು ಜಿಂಕೆಯ ಹಿಂದೆ ಹೋಗಲಾರದೆಹೋದರು. ಅವ ರೆಲ್ಲರೂ ಅಲೆದೂ ಅಲೆದೂ ರಾಜಕುಮಾರಿಯ ರಥದಿಂದ ದೂರ ವಾದರು. 4 ೫೦ ಹರಿಣೀ ರಥದ ಹತ್ತಿರ ಉಳಿದವರು ರಾಜಕುಮಾರಿಯ ಸಖಿಯರು ಇಬ್ಬರು, ಅವಳ ದಾದಿಯೊಬ್ಬಳು. ಅವರಲ್ಲೂ ಸುಶೀಲೆ ತಾನೂ ತನ್ನಒಡತಿಯನ್ನು ಹುಡುಕುತ್ತ ಹೋದಳು. ಅದರಿಂದ ಕೃಶಾಂಗಿಯೂ ಅವಳ ತಾಯಿಯೂ ಮಾತ್ರ ಅಲ್ಲಿಯೆ ಉಳಿದರು. ಕೃಶಾಂಗಿ ತನ್ನ ಒಡತಿಯ ಉಡುಪು ಒಡವೆಗಳನ್ನು ತಾನೇ ಉಟ್ಟು ತೊಟ್ಟು ಕೊಂಡಳು. ತನ್ನ ತಾಯಿಯನ್ನೂ ಕರೆದುಕೊಂಡು ಮಹಾಶೂರನ ಪಟ್ಟಣಕ್ಕೆ ಹೋದಳು. ಅವರಿಬ್ಬರೂ ಪಟ್ಟಣದ ಹತ್ತಿರ ಬಂದಾಗ, ರಾಜನ ಪರಿವಾರ ದವರು ಬಂದು ಅವರನ್ನು ಎದುರುಗೊಂಡರು. ಎದುರುಗೊಂಡು, ಕುದುರೆ ಗಳಿಂದ ಇಳಿದು ಕೃಶಾಂಗಿಗೂ ಅವಳ ತಾಯಿಗೂ ನಮಸ್ಕರಿಸಿದರು. ಅವರು ಕೃಶಾಂಗಿಯನ್ನೇ ಇಚ್ಛಾದೇವಿಯೆಂದು ತಿಳಿದು ಮರ್ಯಾದೆ ಮಾಡಿದರು. ಸ್ವಲ್ಪ ದೂರದಲ್ಲಿ ಊರಿನ ಕಡೆಯಿಂದ ಎರಡು ಪಲ್ಲಕ್ಕಿ ಗಳು ಬರುತ್ತಿದ್ದು ವು. ಕೃಶಾಂಗಿ ಅದನ್ನು ಗಮನಿಸಿ “ಆ ಪಲ್ಲಕ್ಕಿ ಗಳಲ್ಲಿ ಬರುತ್ತಿರು ವವರು ಯಾರು?” ಎಂದು ಕೇಳಿದಳು. ಅದಕ್ಕೆ ಸರಿವಾರದವರು “ರಾಜಕುಮಾರಿಯನ್ನುಎದುರುಗೊಳ್ಳಲು ಮಹಾಶೂರನೂ ಅವನ ತಂದೆಯೂ ಬರುತ್ತಿರುವರು” ಎಂದು ತಿಳಿಸಿದರು. "ಹಾಗಾದರೆ, ಹೋಗಿ, ಇಚ್ಛಾದೇವಿ ಬಂದಿರುವಳೆಂದು ತಿಳಿಸಿ. ದಾರಿಯಲ್ಲಿ ಬಿರುಗಾಳಿಯೆದ್ದು ನನ್ನ ಪರಿವಾರವೆಲ್ಲ ಜಿದರಿಹೋಯಿತು. ನನ್ನ ಜೊತೆಯಲ್ಲಿ ಉಳಿದು ಬಂದವಳು ಈ ನನ್ನ ದಾದಿಯೊಬ್ಬಳ” ಎಂದು ಕೃಶಾಂಗಿ ತನ್ನ ತಾಯಿಯನ್ನು ತೋರಿಸಿದಳು. | ಸೈನಿಕರು ಒಡನೆ ಹೋಗಿ ರಾಜನಿಗೂ ರಾಜಕುಮಾರನಿಗೂ ಅವಳು: ಬಂದುದನ್ನು ತಿಳಿಸಿದರು. ಅವಳು ಅಷ್ಟು ಹಗಲಿನಲ್ಲಿ ಕಾಲು ನಡೆಯಿಂದ ಬಂದಳೆಂದು ಕೇಳಿ ರಾಜಕುಮಾರನಿಗೆ ಆಶ್ಚರ್ಯವಾಯಿತು. ಅವನು ಆಗ ಆತುರದಿಂದ “ಹೇಳಿ, ಹೇಳಿ. ಅವಳಿಗಿಂತ ಸುಂದರಿ ಯಾದವಳನ್ನು ನೀವು ಕಂಡುದುಂಟಿ?” ಎಂದು ಸೈನಿಕರನ್ನು ಕೇಳಿದನು. ಹೆರಿಣೇ ೫೧ ಅವರೆಲ್ಲರೂ ಏನೂ ಉತ್ತರ ಕೊಡದೆ ಸುಮ್ಮನಿರಲು, “ನೀವು ಮೌನ ದಿಂದಿರುವುದಕ್ಕೆ ನನಗೆ ಕಾರಣ ಗೊತ್ತು. ಅವಳನ್ನು ಹೊಗಳುವುದಕ್ಕೆ ಹೇಗೆ ಪ್ರಾರಂಭಿಸಬೇಕೆಂಬುದನ್ನು ನೀವು ತಿಳಿಯದಷ್ಟು ಚೆಲುವಾಗಿ ದ್ದಾಳೆ ಅವಳು” ಎಂದನು. ಅದಕ್ಕೆ ಒಬ್ಬ ಮುದಿ ಸೈನಿಕನು “ ಸ್ವಾಮಿ ಯವರು ತಾವೇ ಅವಳನ್ನು ನೋಡಬೇಕು. ದೂರಪ್ರಯಾಣದಿಂದಲೂ ಬಿರುಗಾಳಿಯ ಬಾಧೆಯಿಂದಲೂ ಸ್ವಲ್ಪ ಕಂಗೆಟ್ಟ ರುವಂತೆ ಕಾಣುತ್ತದೆ” ಎಂದನು. ಆ ವೇಳೆಗೆ ಅವರು ಕೃಶಾಂಗಿಯಿದ್ದಲ್ಲಿಗೆ ಬಂದರು. ಕೃಶಾಂಗಿ ಯನ್ನು ಕಂಡು ರಾಜನಿಗೆ ದಿಗ್ಭಾ ,ಂತಿಯಾಯಿತು. ಕೃಶಾಂಗಿಯ ತಾಯಿ ಅವನ ಮನಸ್ಸಿನಲ್ಲಿರುವುದನ್ನು ಊಹಿಸುತ್ತಾ “ ಇವಳೇ ಇಚ್ಛಾ ದೇವಿ, ಮಹಾರಾಜ. ರಾಜರಾಣಿಯರ ಕಾಗದಗಳು ಇಲ್ಲಿವೆ. ರಾಜ ಕುಮಾರಿಯ ಒಡವೆಪೆಟ್ಟಿ ಗೆಯೂ ಇಲ್ಲೇ ಇದೆ” ಎಂದಳು. ರಾಜನಿಗೆ ಮಾತನಾಡಲು ಬಾಯೇ ಬರಲಿಲ್ಲ. ಸುಮ್ಮನೆ ಕೃಶಾಂಗಿಯನ್ನು ನೋಡುತ್ತಾ ನಿಂತುಬಿಟ್ಟಿನು. ನಿಜವಾಗಿ ಅವಳ ಇರುವಿಕೆ ವಿಚಿತ್ರವಾ ಗಿತ್ತು. ಇಚ್ಛಾದೇನಿಯ ಉಡುಪು ಅವಳ ಮೈಗೆ ಸಡಿಲವಾಗಿತ್ತು. ಕೃಶಾಂಗಿ ಮೈಯೆಲ್ಲ ಮೂಳೆ ಬಿಟ್ಟುಕೊಂಡಿದಳು. ರ್‌ ಟೆ ಎ ರಾಜಕುಮಾರನು ಕೂಡ ಅವಳನ್ನು ಕಂಡೊಡನೆಯೆ “ ಅಪ್ಪ, ನಾನು ಮೋಸಹೋದೆ. ನನಗೆ ಕಳುಹಿಸಿದ ಚಿತ್ರದಲ್ಲಿನ ಹೆಂಗುಸು ಇವ ಳಲ್ಲ. ನಮಗೆ ವಂಚನೆಮಾಡಿದ್ದಾರೆ” ಎಂದನು. ಕೃಶಾಂಗಿ ಅವನ ಮಾತಿಗೆ ಏನೂ ಹೆದರದೆ, “ ಹಾಗೆಂದರೇನು? ಯಾರು ನಿನ್ನನ್ನು ವಂಚಿಸಿದವರು? ನನ್ನನ್ನು ಮದುವೆಯಾಗುವುದರಿಂದ ನಿನಗೇನೂ ಮೋಸವಾಗುವುದಿಲ್ಲ” ಎಂದು ಗಂಡುಬೀರಿಯಂತಾಡಿದಳು. ಕೃಶಾಂಗಿಯ ತಾಯಿ ಕೂಡ ಸ್ವಲ್ಪವೂ ಲಜ್ಜೆ ಯಿಲ್ಲದೆ 4 ಚೆನ್ನಾ ಯಿತು, ರಾಜಕುಮಾರಿ. ನಾವು ಎಂತಹ ಪಟ್ಟಣಕ್ಕೆ ಬಂದ ಹಾಗಾ ಯಿತು! ರಾಜಮನೆತನದನರನ್ನು ಹೀಗೆಯೆ ಬರಮಾಡಿಕೊಳ್ಳು ವುದು? ಇದು ನಿಮ್ಮ ತಂದೆಗೆ ತಿಳಿಯಲಿ, ತಕ್ಕದ್ದು ಮಾಡುತ್ತಾನೆ” ಎಂದಳು. ೫೨ ಹರಿಣೀ ಅದಕ್ಕೆ ಮಹಾಶೂರನು “ ತಕ್ಕದ್ದು ಮಾಡಬೇಕಾದವರು ನಾವು. ಚೆಲುವಾದ ರಾಜಕುಮಾರಿಯನ್ನು ಕಳುಹಿಸುನೆನೆಂದು ಮಾತು ಕೊಟ್ಟು, ನಿಮ್ಮ ರಾಜನು ಒಂದು ಅಸ್ಥಿ ನಂಜರವನ್ನು ಕಳುಹಿಸಿದ್ದಾನೆ. ಇಂತಹ ಅಪೂರ್ವವಾದ ವಸ್ತುವನ್ನು ಹದಿನೈದು ವರ್ಷಗಳಿಂದ ಬಚ್ಚಿಟ್ಟಿದ್ದುದ ರಲ್ಲಿ ಏನೂ ಆಶ್ಚರ್ಯವಿಲ್ಲ” ಎಂದು ಕೋಪದಿಂದ ತನ್ನ ಪಲ್ಲಕ್ಕಿಯನ್ನು ಹತ್ತಿ ಹೊರಟನು. ರಾಜನೂ ಮಗನ ಹಿಂದೆಯೆ ಹೋದನು. ಸೈನಿಕರು ಆ ಇಬ್ಬರು ಹೆಂಗುಸರನ್ನೂ ಸೆರೆಮನೆಗೆ ಸೇರಿಸಿದರು. ಮಹಾಶೂರನ ದುಃಖ ಮಿತಿಮೀರಿತು. ಚಿತ್ರವನ್ನು ನೋಡು ತ್ಲಿದ್ದಷ್ಟೂ ಅವನ ದುಃಖ ಬೆಳೆಯುತ್ತಿತ್ತು. ಕಡೆಗೆ ತಾನು ಬದುಕಿರುವ ವರೆಗೂ ವನವಾಸಮಾಡಲು ನಿಶ್ಚಯಿಸಿದನು. ಮನಸ್ಸು ಸಿಮಿತವಾದರೆ ಪುನಃ ಹಿಂದಿರುಗುವುದಾಗಿ ತಂದೆಗೆ ಕಾಗದ ಬರೆದಿಟ್ಟು, ಮಹಾಶೂರನು ರಾಯಭಾರಿಯನ್ನೂ ಕರೆದುಕೊಂಡು ಮನೆಬಿಟ್ಟುಹೋದನು. ಅಷ್ಟರಲ್ಲಿ ಇಚ್ಛಾದೇವಿ ಕಾಡಿಗೆ ಓಡಿಹೋಗಿ, ತನಗೆ ಆದ ಬದಲಾವಣೆಯನ್ನು ಅಲ್ಲಿ ಒಂದು ಕೆರೆಯಲ್ಲಿ ನೋಡಿಕೊಂಡಳು. ಅವಳಿಗೆ ದುಃಖ ಒತ್ತಿಬಂದಿತು. ಕಾಡುಮೃಗಗಳ ಕೈಗೆ ಸಿಕ್ಕದೆ ಅವಳು ಬದುಕು ವುದು ಹೇಗೆ? ಅವಳು ಮಲಗುವುದು ಎಲ್ಲಿ? ಅವಳು ತಿನ್ನುವುದು ಏನು? ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ತಾನಾಗಿಯೆ ಬಂದಿತು. ತಾನು ಏನು ಮಾಡುತ್ತಿರುವೆನೆಂಬುದರ ಅರಿವು ಕೂಡ ಇಲ್ಲದೆ ರಾಜಕುಮಾರಿ ಹುಲ್ಲು ತಿನ್ನಲು ಮೊದಲುಮಾಡಿದಳು. ಹುಲ್ಲು ರುಚಿಯಾಗಿತ್ತು. ಹಗಲೆಲ್ಲಾ ಅಲೆದಾಡಿ ರಾತ್ರಿ ವಿಶ್ರಾಂತಿಗಾಗಿ ಹುಲ್ಲುಗಾವಲಿನಲ್ಲಿ ಮಲಗಿದಳು. ತೋಳಗಳೂ ಸಿಂಹಗಳೂ ಕೂಗುತ್ತಿದ್ದುದರಿಂದ ಅವಳಿಗೆ ನಿದ್ರೆ ಹತ್ತಲಿಲ್ಲ. ಅನೇಕಸಲ ಭಯದಿಂದ ಬೆದರಿ ಎದ್ದಳು. ಮನುಷ್ಯ ರಂತೆ ಮರ ಹತ್ತಲು ಹೋದಳು. ಹೀಗೆಯೇ ರಾತ್ರಿ ಕಳೆಯಿತು. ಮಾರನೆಯ ಬೆಳಗ್ಗೆ ಒಂದು ಏಕಾಕಿಯಾದ ಚಿಕ್ಕ ಜಿಂಕೆ ಸೂರ್ಯೋ ದಯವನ್ನು ನೋಡುತ್ತಾ ನಿಂತಿತ್ತು. ಅದೇ ಕಾಡಿನಲ್ಲಿ ಇನ್ನೊಬ್ಬಳು ದುಃಖದಿಂದ ದಿಕ್ಕುದಿಕ್ಕು ದಿಟ್ಟಿಸಿ ನೋಡುತ್ತಿದ್ದಳು. ಅವಳೇ ಹಗಲೂ ರಾತ್ರಿ ತನ್ನ ಒಡತಿಯನ್ನು ಹುಡುಕುತ್ತಿದ್ದ ಸುಶೀಲೆ. ಹರಿಣೀ ೫೩ ಇಚ್ಛಾದೀವಿಯ ಮೇಲೆ ಅಮಿತವಾದ ಪ್ರೀತಿಯನ್ನಿಟ್ಟಿದ್ದ ಗಂಧರ್ವಕನ್ಯೆಯಾದ ಮಲ್ಲಿಕಾದೇವಿಗೆ ರಾಣಿ ತನ್ನ ಬುದ್ಧಿವಾದವನ್ನು ಕೇಳಲಿಲ್ಲವೆಂದು ವ್ಯಸನವಾಯಿತು. ಇಚ್ಛಾ ದೇವಿಯೂ ಸುಶೀಲೆಯೂ ಕಾಡಿನಲ್ಲಿ ಗೋಳಾಡುವುದು ಕಂಡು ಅವಳ ಹೃದಯ ಕರಗಿತು. ಅವಳು ಅವರಿಬ್ಬರೂ ಒಟ್ಟು ಗೂಡುವಂತೆ ಮಾಡಿದಳು. ಜಿಂಕೆ ಸುಶೀಲೆಯನ್ನು ಕಂಡು ಸಂತೋಷದಿಂದ ಚಿಗಿದುಬಂದು ನಾಲಗೆಯಿಂದ ಅವಳ ಮುಖ ಕೈಗಳನ್ನು ನೆಕ್ಕತೊಡಗಿತು. ಸುಶೀಲೆಗೆ ಆ ಜಿಂಕೆಯೇ ಏಡಿಯ ಶಾಪಕ್ಕೆ ಒಳಗಾದ ತನ್ನ ಒಡತಿಯಿರಬೇಕೆಂದು ಎನ್ನಿಸಿತು. ತಾನು ಅದರ ಜೊತೆಯಲ್ಲಿಯೇ ಸದಾ ಇರುವೆನೆಂದು ಸುತೀಲೆ ಆ ಜಿಂಕೆಗೆ ಮಾತುಕೊಟ್ಟಳು. ಜಿಂಕೆ ಆನಂದದಿಂದ ಕುಣಿದಾಡಿತು. ಅವರು ಹೆಗಲೆಲ್ಲಾ ಕಾಡಿನಲ್ಲಿ ಒಟ್ಟಿಗೆ ಸುತ್ತಾಡಿದರು. ರಾತ್ರಿಯಾದಾಗ ಅವರಿಗೆ ಭಯ ಹತ್ತಿ ಕೊಂಡಿತು. ಸುಶೀಲೆ “ನಾವು ಮಲಗುವುದು ಎಲ್ಲಿ? ಇಲ್ಲಿಯೇ ಇದ್ದರೆ ಕಾಡು ಮೃಗಗಳು ನಮ್ಮನ್ನು ತಿಂದುಬಿಡುತ್ತ ವೆ. ಕಾಡಿನಲ್ಲಿ ನೀನು ಯಾವುದೂ ಗುಡಿಸಿಲನ್ನು ಕಂಡಿಲ್ಲವೆ? ” ಎಂದು ಜಿಂಕೆಯನ್ನು ಕೇಳಿದಳು. ಜಿಂಕೆ ಪಾಸ, ಯಾವ ಗುಡಿಸಿಲನ್ನೂ ಕಂಡಿರಲಿಲ್ಲ. ಅದರ ಕಣ್ಣಿನಿಂದ ನೀರು ಧಾರಾಕಾರವಾಗಿ ಹರಿಯಿತು. ಆಗ್ಕ ಅದರ ದುಃಖ ವನ್ನು ನೋಡಲಾರದೆ ಮಲ್ಲಿಕಾದೇನಿ ಅಲ್ಲಿ ಪ್ರತ್ಯಕ್ಷವಾದಳು. ಅವಳನ್ನು ನೋಡಿ ಅವರಿಬ್ಬರೂ ಆನಂದಗೊಂಡರು. ಜಿಂಕೆ ಸಂತೋಷದಿಂದ ಅವಳ ಕೈೈನೆಕ್ಕಿ ಅವಳ ಮೈಮೇಲೆ ತನ, ,ತಲೆ ಉಜ್ಜಿತು. ಸುಶೀಲೆ ತನ್ನ ಒಡತಿಯ ಮೇಲಿನ ಶಾಪವನ್ನು ಕಳೆಯಬೇಕೆಂದು ಮಲ್ಲಿಕಾದೇನಿಯನ್ನು ಪ್ರಾರ್ಥಿಸಿದಳು. ಅದಕ್ಕೆ ಆ ದೇವಿ “ಇಲ್ಲ ನಾನು ಇವಳನ್ನು ಮೊದಲಿನ ರೂಪಕ್ಕೆ ತರಲಾರೆ. ಆದರೆ ಇವಳು ಪ್ರತಿ ರಾತ್ರಿ ಜಿಂಕೆಯ ಆಕಾರವನ್ನು ಬಿಟ್ಟು ತನ್ನ ರೂಪವನ್ನು ಹೊಂದುವಂತೆ ಜಳ ಹರಿಣೀ ಮಾಡಬಲ್ಲೆ. ಇದನ್ನು ಸಂತೋಷದಿಂದ ಮಾಡುತ್ತೇನೆ. ಆದರೆ ಹೆಗಲಾದ ಗಳಿಗೆಯೆ ಇವಳು ಪುನಃ ಜಿಂಕೆಯಾಗಬೇಕು? ಎಂದಳು. ಸದಾ ಜಿಂಕೆಯಾಗಿರುವುದಕ್ಕಿಂತ ರಾತ್ರಿಯಾದರೂ ತನ್ನ ಆಕಾರ ವನ್ನೆ ಪಡೆಯುವುದು ಎಷ್ಟೋ ವಾಸಿಯೆಂದು ಜಿಂಕೆ ಮಲ್ಲಿಕಾದೇವಿಯ ಕಾಲಿನ ಮೇಲೆ ತನ್ನ ತಲೆಯನ್ನು ಇಟ್ಟಿತು. ಆಗ ಮಲ್ಲಿಕಾದೇವಿ “ ಈ ಎದುರಿಗೆ ಕಾಣುವ ಕಾಲುದಾರಿಯನ್ನು ಅನುಸರಿಸಿ ಹೋಗಿರಿ. ಒಂದು ಚಿಕ್ಕ ಗುಡಿಸಿಲು ಸಿಕ್ಚುತ್ತದೆ. ಅಲ್ಲಿ ನೀವು ಈ ವನವಾಸ ಮುಗಿಯುವವರೆಗೆ ವಾಸಮಾಡಬಹುದು ” ಎಂದು ಹೇಳಿ ಕಣ್ಮರೆಯಾದಳು. ಅನಂತರ ಸುಶೀಲೆ ಆ ಜಿಂಕೆಯನ್ನು ಕರೆದುಕೊಂಡು ಮಲ್ಲಿಕಾ ದೇವಿ ಹೇಳಿದ ಕಾಲುದಾರಿಯಲ್ಲಿ ಹೋದಳು. ಅಲ್ಲಿ ಒಂದು ಮರದ ಗುಡಿಸಿಲು ಸಿಕ್ಕಿತು. ಗುಡಿಸಿಲ ಬಾಗಿಲಿನಲ್ಲಿ ಒಬ್ಬ ಮುದುಕಿ ಬುಟ್ಟಿ ಹೆಣೆಯುತ್ತಾ ಕುಳಿತಿದ್ದಳು. “ ಅಮ್ಮಾ, ನನಗೂ ನನ್ನ ಜಿಂಕೆಗೂ ಇರುವುದಕ್ಕೆ ಇಷ್ಟು ಸ್ಥಳ ಕೊಡುವೆಯ? ಎಂದು ಸುಶೀಲೆ ಅವಳನ್ನು ಕೇಳಿದಳು. “ಆಗಲಿ, ಕಂದ. ನಿನ್ನ ಜಿಂಕೆಯೊಡನೆ ನೀನೂ ಒಳಗೆ ಬಾ” ಎಂದು ಆ ಮುದುಕಿ ಅವರನ್ನು ಒಂದು ಚೆಲುವಾದ ಕೋಣೆಯೊಳಕ್ಕೆ ಕರೆದೊಯ್ದಳು. ಅಲ್ಲಿ ಎರಡು ಚಿಕ್ಕ ಹಾಸಿಗೆ ಹಾಸಿತ್ತು. ಕೋಣೆ ಬಹಳ ಚೊಕ್ಕಟವಾಗಿತ್ತು. ರಾತ್ರಿಯಾದ ಕೂಡಲೆ ಇಚ್ಛಾದೇವಿಗೆ ಜಿಂಕೆಯ ರೂಪ ಹೋಯಿತು. ಅವಳು ತನ್ನ ಸಖಿಯನ್ನು ತಬ್ಬಿಕೊಂಡು ಮುತ್ತಿಟ್ಟಳು. ಇಬ್ಬರಿಗೂ ಹಗಲೆಲ್ಲಾ ತಿರುಗಿ ಆಯಾಸವಾಗಿತ್ತು. ಊಟವಾದ ಒಡ ನೆಯೆ ಇಬ್ಬರೂ ನಿದ್ದೆಹೋದರು. ಬೆಳಗಾಗುವ ವೇಳೆಗೆ ಏನೋ ಬಾಗಿಲು ಕೆರೆಯುವ ಶಬ್ದವನ್ನು ಕೇಳಿ, ಸುಶೀಲೆ ಎಚ್ಚರಗೊಂಡಳು. ಎದ್ದು ನೋಡಿದಳು. ಜಿಂಕೆ ಬಾಗಿಲು ತೆರೆಯೆಂದು ಕೇಳುವಂತೆ ಅಲ್ಲಿ ಹರಿಣೀ ೫೫ ನಿಂತಿತ್ತು. ಸುಶೀಲೆ ಬಾಗಿಲು ತೆರೆದಳೊ ಇಲ್ಲವೊ, ಜಿಂಕೆ ಕಾಡಿಗೆ ಓಡಿ ಹೋಯಿತು. ಅತ್ತ ಮಹಾಶೂರನೂ ಅವನ ರಾಯಭಾರಿಯೂ ಮನೆಬಿಟ್ಟು ಅದೃಷ್ಟವಶದಿಂದ ಅದೇ ಕಾಡಿಗೆ ಬಂದರು, ಮಹಾಶೂರನು ಸೆಕೆಯಲ್ಲಿ ಸವಾರಿಮಾಡಿ ಬಂದಿದ್ದುದರಿಂದ ದಣಿ ದಿದ್ದನು. ದಣಿವಾರಿಸಿಕೊಳ್ಳಲು ಮರದ ನೆರಳಿನಲ್ಲಿ ಮಲಗಿದನು. ರಾಯಭಾರಿ ಇಬ್ಬರಿಗೂ ಆಹಾರ ಹುಡುಕಲು ಹೊರಟನು. ಹತ್ತು ಹೆಜ್ಜೆ ಹೋಗುವುದರೊಳಗೆ ಅವನಿಗೆ ಮುದುಕಿಯ ಗುಡಿಸಿಲು ಸಿಕ್ಕಿತು. ಮುದುಕಿ ಇನ್ನೂ ಬಾಗಿಲಲ್ಲಿಯೇ ಕುಳಿತಿದ್ದಳು. ರಾಯಭಾರಿ ಅವಳನ್ನು ಆಹಾರ ಬೇಡಿದನು. ಅವಳು ಗುಡಿಸಿಲಿನೊಳಕ್ಕೆ ಹೋಗಿ, ಒಂದು ಬುಟ್ಟಿಯ ತುಂಬ ಹಣ್ಣುಹಂಪಲು ತಂದುಕೊಟ್ಟಳು. “ ಬೇಕಾದರೆ, ನೀನೂ ನಿನ್ನ ಯಜಮಾನನೂ ಇಲ್ಲಿಯೆ ಬಂದು ತಂಗಬಹುದು? ಎಂದಳು. ರಾಯಭಾರಿ ಗುಡಿಸಿಲು ಚೊಕ್ಕಟವಾಗಿದ್ದುದನ್ನು ನೋಡಿ, ಮುದುಕಿಯ ಆತಿಥ್ಯವನ್ನು ಸ್ವೀಕರಿಸಿ, ರಾಜಕುಮಾರನನ್ನು ಕರೆತರಲು ಹೋದನು. ಅವನು ರಾಜಕುಮಾರನನ್ನು ಕರೆದುತಂದಾಗ್ಯ ಮುದುಕಿ ಅವರನ್ನು ಒಂದು ಕೋಣೆಗೆ ಒಯ್ದಳು. ಆ ಕೋಣೆ ಸುಶೀಲೆಗೂ ಅವಳ ಜಿಂಕೆಗೂ ಬಿಟ್ಟುಕೊಟ್ಟದ್ದ ಕೋಣೆಯ ಪಕ್ಕದಲ್ಲಿತ್ತು. ಎರಡು ಕೋಣೆಗಳಿಗೂ ನಡುವೆ ಇದ್ದ ಗೋಡೆ ಬಹಳ ತೆಳುವಾಗಿತ್ತು. ರಾಜಕುಮಾರನಿಗೆ ರಾತ್ರಿಯೆಲ್ಲ ನಿದ್ದೆಯೇ ಬರಲಿಲ್ಲ. ಸೂರ್ಯೋ ದಯವಾದ ಕೂಡಲೆ ಕಾಡಿನಲ್ಲಿ ತಿರುಗಾಡಲು ಹೋದನು. ಗುರಿ ಯಿಲ್ಲದೆ ಅಲೆದಾಡುತ್ತಾ, ಜಿಂಕೆಯು ಕ್ಲೇಮವಾಗಿರುವೆನೆಂದು ತಿಳಿದು ಮಲಗಿದ್ದ ಕಾವಲಿಗೆ ಬಂದನು. ಅವನ ಕೈಯಲ್ಲಿ ಯಾವಾಗಲೂ ಬಿಲ್ಲು ಬಾಣ ಸಿದ ವಾಗಿರುತ್ತಿತ್ತು. ಅವನು ಜಿಂಕೆಗೆ ಒಂದು ಬಾಣ ಬಿಟ್ಟಿ ನು. ಜಿಂಕೆ ಎದ್ದು ಓಡಿತು. ಅಷ್ಟು ರಮಣೀಯವಾದ ಜಿಂಕೆಯನ್ನು ಮಹಾಶೂರನು ಅದು ವರೆಗೆ ಕಂಡಿರಲಿಲ್ಲ. ಅದನ್ನು ಹಿಡಿಯಲೇಬೇಕೆಂದು ಥಿಶ್ಚಯಿಸಿ ಬಾಣದ ೫೬ ಹರಿಣೀ ಒಂದೆ ಬಾಣ ಬಿಟ್ಟಿ ನು. ಅದನ್ನು ಕಾಡಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಅಟ್ಟಿ ಸಿಕೊಂಡುಹೋದನು. ಅದು ಸಾಮಾನ್ಯ ಜಿಂಕೆಯಾಗಿದ್ದಿದ್ದರೆ ಸುಲಭವಾಗಿ ಸಿಕ್ಕಿಬಿಡುತ್ತಿತ್ತು. ಆದರೆ ಆ ಜಿಂಕೆ ಯನ್ನು ಮಲ್ಲಿಕಾದೇವಿ ತನ್ನ ರಕ್ಷಣೆಗೆ ತೆಗೆದುಕೊಂಡಿದ್ದಳು. ಅದರಿಂದೆ ಅದು ತಪ್ಪಿಸಿಕೊಂಡು ಓಡಿಹೋಯಿತು. ರಾಜಕುಮಾರನು ಪುನಃ ಆ ದಿನ ಅದನ್ನು ಕಾಣಲಿಲ್ಲ. ರಾತ್ರಿ ಯಾಯಿತು. ಇಚ್ಛಾದೇವಿ ತನ್ನ ಸ್ತ್ರೀರೂಪವನ್ನು ಪಡೆದಳು. ತನ್ನ ಸಖಿಯನ್ನು ಕುರಿತು, “ಅಯ್ಯೋ, ಆ ಏಡಿಯೂ ಕಾಡು ಮೃಗಗಳೂ ಮಾತ್ರ ನನಗೆ ಆಗದವರೆಂದು ತಿಳಿದುಕೊಂಡಿದ್ದೆ. ಆದರೆ ಈ ದಿನ ಒಬ್ಬ ಯುವಕನು ಬೇಟೆಯಾಡುತ್ತಾ ನನ್ನ ಬೆನ್ನಟ್ಟಿ ಬಂದನು. ಅವನು ಹೇಗಿದ್ದನೆಂದು ನಿಂತು ನೋಡಲು ಕೂಡ ನನಗೆ ಸಮಯ ಸಿಕ್ಕಲಿಲ್ಲ” ಎಂದಳು. ಸುಶೀಲೆ ತನ್ನ ಒಡತಿಯ ಕ್ಷೇಮಕ್ಕಾಗಿ ಚಿಂತೆಗೊಂಡು, “ರಾಜ ಕುಮಾರಿ, ನೀನು ಇನ್ನು ಇಲ್ಲಿಂದ ಹೊರಗೆ ಹೋಗತಕ್ಕುದಲ್ಲ” ಎಂದಳು. ಅದಕ್ಕೆ ಇಚ್ಛಾದೇವಿ " ನಾನು ಹೋಗಲೇಬೇಕು. ಜಿಂಕೆಯ ರೂಪ ಬಂದಮೇಲೆ ಜಿಂಕೆಯಂತೆ ನಡೆದುಕೊಳ್ಳ ಬೇಕು. ಅದಕ್ಕೆ ಕಾಡೇ ಸರಿಯಾದ ಸ್ಥಳ” ಎಂದು ತಿಳಿಸಿದಳು. ಅಷ್ಟರವೇಳೆಗೆ ರಾಜಕುಮಾರನೂ ತನ್ನ ಆ ದಿನದ ಬೇಟೆಯನ್ನು ತನ್ನ ರಾಯಭಾರಿಗೆ ವಿವರಿಸುತ್ತಿದ್ದನು. “ನಾನು ಒಂದುನೂರು ಸಲ ಅದಕ್ಕ ಗುರಿಯಿಟ್ಟ. ಆದರೂ ಅದು ಬಹಳ ಚಾಕಚಕ್ಕದಿಂದ ತಪ್ಪಿಸಿ ಕೊಂಡಿತು. ನಾಳೆ ಪುನಃ ಅದನ್ನು ಹುಡುಕುತ್ತೇನೆ. ಸಿಕ್ಕಿದರೆ ಅದನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ” ಎಂದನು. ಅದರಂತೆ ರಾಜಕುಮಾರನು ಮಾರನೆಯ ಬೆಳಗ್ಗೆ ಆ ಜಿಂಕೆಯನ್ನು ಹುಡುಕುತ್ತ ಹೊರಟನು. ಜಿಂಕೆ ಅವನಿಗಿಂತ ಮುಂಚೆಯೇ ಕಾಡಿಗೆ ಹೋಗಿತ್ತು. ಆದರೂ, ಅವನು ಎಷ್ಟೇ ದೂರ ಹೋದರೂ, ಜಿಂಕೆ ಹರಿಣೇ ೫೭ ಅವನ ಕಣ್ಣಿಗೆ ಬೀಳಲಿಲ್ಲ. ಅಲೆದೂ ಅಲೆದೂ ಆಯಾಸವಾಗಿ ಅಲ್ಲಿಯೇ ಮರಗಳ ಕೆಳಗೆ ಮಲಗಿ ನಿದ್ದೆಹೋದನು. ಆನವೇಳೆಗೆ ಜಿಂಕೆ ಅವನು ಇದ್ದ ಅಲ್ಲಿಗೇ ಬಂದಿತು. ಅವನನ್ನು ದೃಷ್ಟಿಸಿ ನೋಡಿತು. ತಾನು ಅರಮನೆಯಲ್ಲಿ ಇದ್ದಾಗ ತನ್ನ ಚಿತ್ರವನ್ನು ಕಳುಹಿಸಿದ ರಾಜಕುಮಾರನು ಅವನೇ ಎಂದು ಗುರುತು ಹಿಡಿಯಿತು. ಎಚ್ಚರವಿಲ್ಲದೆ ಮಲಗಿದ್ದ ಅವನನ್ನು ನೋಡುತ್ತಾ ಅಲ್ಲಿಯೆ ಕುಳಿತು ಕೊಂಡಿತು. ಸ್ವಲ್ಪ ಹೊತ್ತಾದಮೇಲೆ ಮೆಲ್ಲನೆ ತನ್ನ ಮುಂಗಾಲು ಚಾಚಿ ಅವನನ್ನು ಮುಟ್ಟಿ ತು. ರಾಜಕುಮಾರನಿಗೆ ಎಚ್ಚರವಾಯಿತು. ತಾನು ಎಷ್ಟು ಹುಡುಕಿ ದರೂ ಕಾಣದಿದ್ದ ಜಿಂಕೆಯನ್ನು ಕಂಡನು. ಏಳಬೇಕೆಂದು ಅವನು ಕೈಯೂರಿದಾಗ ಜಿಂಕೆ ಪಣಕ್ಕನೆ ಹಾರಿ ಮಾಯವಾಯಿತು. ಅವನೂ ಅಷ್ಟೇ ವೇಗದಿಂದ ಅದರ ಹಿಂದೆ ಓಡಿದನು. ಜಿಂಕೆಯೂ ಓಡಿತು. ಆದರೆ ಕೊನೆಗೆ ದಣಿದು ಮುಂದೆ ಓಡಲಾರದೆ ಒಂದುಕಡೆ ಬಿದ್ದು ಕೊಂಡಿತು. ರಾಜಕುಮಾರನು ಅಲ್ಲಿಗೆ ಬರುವವೇಳೆಗೆ ಜಿಂಕೆಗೆ ಅರ್ಧ ಜೀವವಾಗಿತ್ತು. ತನಗೆ ಸಾವು ನಿಶ್ಚಯವೆಂದು ಅದು ತಿಳಿದಿತ್ತು. ಆದರೆ ಅದನ್ನು ಕೊಲ್ಲುವ ಬದಲು ಅವನು ಅದರ ಮೈಯನ್ನು ಸವರಿದನು. “ಚೆಲುವು ಹರಿಣೀ, ಹೆದರಬೇಡ. . ನಾನು ನಿನ್ನನ್ನು ಮನೆಗೆ ಕರೆದುಕೊಂಡುಹೋಗಿ ಕಾಪಾಡುತ್ತೇನೆ” ಎಂದು ಮೃದುವಾಗಿ ಮಾತನಾಡಿದನು. ಕೊಂಬೆಗಳನ್ನು ಕತ್ತರಿಸಿ ಒಂದು ಮೆಂಚ ಮಾಡಿದನು. ಮೃದುವಾದ ಎಲೆಗಳನ್ನು ಅದರ ಮೇಲೆ ಹಾಸಿ ಜಿಂಕೆಯನ್ನು ಮಲಗಿಸಿ ದನು. ಎಳೆಯ ಹುಲ್ಲನ್ನು ಆರಿಸಿ ಕಿತ್ತು ತಿನ್ಸಿಸಿದನು. ತಾನು ಆಡಿದ ಮಾತು ಅದಕ್ಕೆ ಅರ್ಥವಾಗುವಂತೆ ಕಂಡುಬಂದುದರಿಂದ ಬಹಳ ಹೊತ್ತು ಅದರೊಡನೆ ಮಾತನಾಡಿದನು. ರಾತ್ರಿ ಹತ್ತಿರ ಬಂದಂತೆಲ್ಲ ಜಿಂಕೆಗೆ ಭಯ ಹೆಚ್ಚ ತೊಡಗಿತು. ತನ್ನ ಪ್ರೀತಿಯ ಹೆಣ್ಣು ಹಗಲು ಜಿಂಕೆಯಾಗಿರುವಳೆಂದು” ತಿಳಿದರೆ ಅನನು ಏನೆಂದುಕೊಳ್ಳುತ್ತಾ ನೋ ಎಂದು ಚಿಂತಿಸಿತು. ಆದರೆ ಆ ವೇಳೆಗೆ ೫೮ ಹರಿಣೀ ಅದ್ಭಷ್ಟವಶದಿಂದ ಅವನು ಅದಕ್ಕೆ ನೀರು ತರಲುಹೋದನು. ಜಿಂಕೆ ಸದ್ದುಮಾಡದೆ ಎದ್ದು ಜೀಗಬೇಗೆ a ಗುಡಿಸಿಲನ್ನು ಸೇರಿಕೊಂಡಿತು. ಅಲ್ಲಿ ತನ್ನ ಸಖಿಯ ಹತ್ತಿರ “ ನನ್ನ ಪ್ರಿಯನು ಈ ಕಾಡಿನಲ್ಲಿಯೇ ಇದ್ದಾನೆ. ನೆನ್ನೆ ಯೂ ಈ ಹೊತ್ತೂ ನನ್ನ ಬೆನ್ನಟ ಸ ದವನು ಅವನೇ” ನಿಷ ಹೇಳಿಕೊಂಡಿತು. ಅದೇ ರಾತ್ರಿ ರಾಜಕುಮಾರನು ತನ್ನ ರಾಯಭಾರಿಗೆ ಆ ಕೃತಫ್ಲ ವಾದ ಜಿಂಕೆಯ ವಿಷಯ ಹೇಳುತ್ತಿದೆ ನನು. ಅವನ ಕೋಪವನ್ನು ಕಂಡು ರಾಯಭಾರಿ ನಗುತ್ತ, “ಹೀಗೆ ನಂಬಿಕೆಗೆ ದ್ರೋಹ ಮಾಡಿದ ಆ ಜಿಂಕೆ ಯನ್ನು ನೀನು ಶಿಕ್ಷಿಸಲೇ ಬೇಕು” ಎಂದನು. “ ಅದಕ್ಕಾಗಿಯಾದರೂ ನಾನು ಈ ಕಾಡಿನಲ್ಲೇ ನಿಲ್ಲುತ್ತೇನೆ. ಅದು ಮುಗಿದನಂತರ ನಾವು ಮುಂದೆ ಹೋಗೋಣ” ಎಂದು ರಾಜಕುಮಾರನು ದೃಢೆನಿಶ್ಚಯದಿಂದ ಹೇಳಿದನು. ಮಾರನೆಯ ಬೆಳೆಗ್ಗೆ, ಸುಶೀಲೆ ಎಂದಿನಂತೆ ಬಾಗಿಲು ತೆರೆದಳು. ಜಿಂಕೆ ಕಾಡಿಗೆ ಓಡಿಹೋಯಿತು. ಸ್ವಲ್ಪ ಸಮಯದ ಮೇಲೆ ಜಿಂಕೆ ಯನ್ನು ಶಿಕ್ಷಿಸಬೇಕೆಂದು ರಾಜಕುಮಾರನೂ ಕಾಡಿಗೆ ಹೋದನು. ಕಾಡಿನ ಒಂದು ಹೊಸ ಭಾಗಕ್ಕೆ ಹೋದರೆ ರಾಜಕುಮಾರನ ಕಣ್ಣಿಗೆ ಬೀಳದಿರಬಹುದೆಂದು ಜಿಂಕ ಚಿಂತಿಸಿತು. ಕಾಡಿನಲ್ಲಿ ಹಿಂದ ಜಿಂಕೆ ಯನ್ನು ಕಂಡ ಸ್ಥಳಗಳಲ್ಲದೆ ಬೇರೆಯ ಸ್ಥಳಕ್ಕೆ ಹೋದರೆ ಅದನ್ನು ಕಾಣ ಬಹುದೆಂದು ರಾಜಕುಮಾರನು ಎಣಿಸಿದನು. ಹಾಗಾಗಿ ಕಾಡಿನಲ್ಲಿ ಬೇಗನೆ ಇಬ್ಬರೂ ಒಬ್ಬರನ್ನೊಬ್ಬರು ಕಂಡರು. ಕಂಡ ಕ್ಷಣ ಜಿಂಕೆ ಓಡಿತು. ರಾಜಕುಮಾರನೂ ಕಂಡ ಕ್ಷಣ ಬಾಣ ಬಿಟ್ಟನು. ಈ ಸಲ ಬಾಣ ತಗುಲಿ ಜಿಂಕೆ ಹುಲ್ಲಿನ ಮೇಲೆ ಬಿತ್ತು. ಬಾಣ ಬಿಟ್ಟ ಒಡನೆಯೆ ಅವನಿಗೆ ಮರುಕ ಹುಟ್ಟಿತು. ಬಿಲ್ಲನ್ನು ಬಿಸಾಡಿ, ಜಿಂಕೆಯ ಗಾಯಕ್ಕೆ ಉಪಚಾರ ನಡಸಿದನು. ಅದರ ಗಾಯ ವನ್ನು ನೋಡಿ ಅತ್ತನು. ಅದನ್ನು ತಾನು ಪ್ರೀತಿಸುವೆನೆಂದು ಪುನಃ ಹರಿಣೀ ೫೯ ಪುನಃ ಹೇಳಿದನು. ಹಿಂದಿನ ದಿವಸ ತಪ್ಪಿಸಿಕೊಂಡು ಹೋದುದಕ್ಕೆ ಅದನ್ನು ಆಕ್ಷೇಪಿಸಿದನು. ಪುನಃ ತಪ್ಪಿಸಿಕೊಳ್ಳದಿರಲೆಂದು ಕತ್ತಿಗೆ ಒಂದು ಬಳ್ಳಿ ಯನ್ನು ಕಟ್ಟಿದನು. ಅವನು ಅದನ್ನು ಗುಡಿಸಿಲಿಗೆ ಕರೆದೊಯ್ಯಲು ಯತ್ನಿಸಿದಾಗ ಬಿಡಿಸಿಕೊಳ್ಳಲು ಆ ಜಿಂಕೆ ಬಹಳ ಒದ್ದಾಡಿತು. ರಾಜಕುಮಾರನು ತಾನೊಬ್ಬನೇ ಅದನ್ನು ತಡೆಯಲಾರದೆ, ಸಹಾಯಕ್ಕೆ ತನ್ನ ರಾಯಭಾರಿ ಯನ್ನು ಕೂಗಿಕೊಂಡನು. ಆ ಕೂಗನ್ನು ಕೇಳಿದವನು ರಾಯಭಾರಿ ಮಾತ್ರವಲ್ಲ, ಸುಶೀಲೆಯೂ ಕೇಳಿದಳು. ಅವಳೂ ಅಲ್ಲಿಗೆ ಓಡಿಬಂದು, ರಾಜಕುಮಾರನ ಕ್ಸೈಯಿಂದ ಜಿಂಕೆಯನ್ನು ಬಿಡಿಸಿಕೊಂಡು ಕರೆ ದೊಯ್ಯಲು ಯತ್ತಿಸಿದಳು. ಆಗ ರಾಜಕುಮಾರನು “ ಅಮ್ಮಾ ನೀವು ಹೀಗೆ ಕಳ್ಳತನ ಮಾಡಬಾರದು. ಈ ಜಿಂಕೆ ನನ್ನದು” ಎಂದು ಮರ್ಯಾದೆಯಿಂದ ಅವಳನ್ನು ತಡೆದನು. ಅದಕ್ಕೆ ಸುಶೀಲೆ “ಸ್ವಾಮಿ, ನೀವು ತಪ್ಪು ತಿಳಿದಿದ್ದೀರೆಂದು ನನಗೆ ಎನ್ಸಿಸುತ್ತದೆ. ಈ ಜಿಂಕೆ ನನ್ನದು. ಬೇಕಾದರೆ ನೋಡಿ” ಎಂದು ಜಿಂಕೆಯ ಕತ್ತಿನಿಂದ ಬಳ್ಳಿ ಯನ್ನು ಕಳಚಿ, “ಬಾ, ನನ್ನ ಮುದ್ದು ಹರಿಣೀ, ಬಾ” ಎಂದು ತೋಳುಗಳನ್ನು ಚಾಚಿದಳು. ಜಿಂಕೆ ಬಂದು ಅವಳ ತೋಳುಗಳಲ್ಲಿ ಸೇರಿಕೊಂಡಿತು. ರಾಜ ಕುಮಾರನು ಅವರಿಬ್ಬರಿಗೂ ಇದ್ದ ಸಲುಗೆಯನ್ನು ನೋಡಿ ಜಿಂಕೆಯನ್ನು ಅವಳಿಗೆ ಕೊಡಲು ಒಪ್ಪಿದನು. ಸುಶೀಲೆ ಜಿಂಕೆಯೊಡನೆ ಗುಡಿಸಿಲಿಗೆ ಹೋದಳು. ರಾಜಕುಮಾರನೂ ರಾಯಭಾರಿಯೂ ಅವರ ಹಿಂದೆಯೇ ಹೋದರು. ಅವರೂ ತಾವಿದ್ದ ಗುಡಿಸಿಲಿಗೇ ಹೋದುದನ್ನು ಕಂಡು ಅವರಿಗೆ ಕುತೂಹಲವಾಯಿತು. ಅವರು ಯಾರೆಂದು ಅಲ್ಲಿದ್ದ ಮುದುಕಿ ಯನ್ನು ಕೇಳಿದರು. ಅವಳು ತನಗೆ ಗೊತ್ತಿಲ್ಲವೆಂದುಬಿಟ್ಟಳು. ೬೦ ಹರಿಣೀ ಆದರೆ ರಾಯಭಾರಿಯ ಕಣ್ಣು ಬಹಳ ಚುರುಕಾಗಿತ್ತು. ಅವನು "ಸ್ವಾಮಿ, ನಾನು ಈ ಹೆಂಗುಸನ್ನು ನೋಡಿದ್ದೇನೆ. ಇವಳು ಇಚ್ಛಾ ದೇವಿಯ ಪ್ರಿಯಸಖಿಯಾಗಿದ್ದವಳು” ಎಂದನು. "ನನಗೆ ಪುನಃ ಆ ಹೆಸರು ಹೇಳಬೇಡ. ಆ ದುಃಖವನ್ನು ಮರೆ ಯುವುದಕ್ಟ್ರೋಸ್ಕರವೇ ನಾನು ಈ ಕಾಡಿಗೆ ಬಂದದ್ದು” ಎಂದು ರಾಜ ಕುಮಾರನು ಕಣ್ಣಿನಲ್ಲಿ ನೀರು ತುಂಬಿಕೊಂಡು ಹೇಳಿದನು. ರಾಯಭಾರಿ ಅಷ್ಟಕ್ಕೆ € ಸುಮ್ಮನಾಗಲಿಲ್ಲ. ಅದನ್ನು ಇನ್ನೂ ಪರೀಕ್ಷೆಮಾಡಬೇಕೆಂದು ಎರಡೂ ಕೊಠಡಿಗಳ ನಡುವೆಯಿದ್ದ ತೆಳುವಾದ ಗೋಡೆಯಲ್ಲಿ ಒಂದು ಸಣ್ಣ ರಂಧ್ರ) ಕೊರೆದು ನೋಡಿದನು. ಅಲ್ಲಿ ಅತ್ಯಂತ ಸುಂದರಿಯಾದ “ರಾಜಕುಮಾರಿಯನ್ನು ಕಂಡು ವಿಸ ಸಯ ಗೊಂಡನು. ಅವಳ ತಲೆಗೂದಲು ನೆಲದವರೆಗೂ ಇಳಿಬಿದ್ದಿತ್ತು. ಕಂಪು ಕೆನ್ಸೈ ಹಾಲುಗಲ್ಲ ಫಳಫಳನೆ ಕಣ್ಣು ಕಂಡುಬಂದಿತು. ಅವಳ ತೋಳಿನ ಗಾಯದಿಂದ ಹರಿಯುತ್ತಿ ದ್ದ ರಕ ಕ್ಷವನ್ನು ಸುಶೀಲೆ ತಡೆದು ಕಟ್ಟು ತ್ರಿ ದ್ದ ಛು, ರಾಯಭಾರಿ ಆ ದೃಶ್ಯವನ್ನು ನೋಡುತ್ತಿದ್ದಾಗಲೇ ಆ ರಾಜ ಕುಮಾರಿ “ ಅಯ್ಯೋ ಬಿಡು, ಸಖಿ. ಹೀಗೆ ಬದುಕಿರುವುದಕ್ಕಿಂತ ಸಾಯುವುದೇ ವಾಸಿ. ಹಗಲೆಲ್ಲಾ ಜಿಂಕೆಯಾಗಿದ್ದು, ಪ್ರಿಯನನ್ನು ಕಂಡರೂ ಅವನೊಡನೆ ಮಾತನಾಡಲಾರದೆ, ನನ್ನ ಶಾಪವನ್ನು ತಿಳಿಸ ಲಾರದೆ ಬದುಕಿರುವುದಕ್ಕಿಂತ ಸಾವೇ ವಾಸಿ” ಎಂದಳು. ಆ ಮಾತು ಕೇಳಿ ರಾಯಭಾರಿಗೆ ಹಿಡಿಸಲಾರದಷ್ಟು ಆನಂದವಾ ಯಿತು. ಕಣ್ಣಿ ರು ಸುರಿಸುತ್ತಾ ಕಿಟಿಕಿಯ ಬಳಿಯಲ್ಲಿ ಕುಳಿತಿದ್ದ ರಾಜ ಕುಮಾರನನ್ನು. ಕರೆದು, “ ಸ್ವಾಮಿ, ಈ ರಂಧ್ರದ ಮಲಕ 'ನೋಡ ಬೇಕು. ತಮ್ಮ ಇಚ್ಛಾದೇವಿ ಅಲ್ಲಿದ್ದಾರೆ? ಎಂದನು. ರಾಜಕುಮಾ ರನು ನೋಡಿದನು. ತನ್ನ ಕಣ್ಣುಗಳನ್ನು ತಾನೇ ನಂಬಲಾರದೆ ಹೋದನು. ಕೊನೆಗೆ, ತಾನು ನೋಡಿದುದು ನಿಜನೇ ಎಂಬುದನ್ನು ತಿಳಿಯು ವುದಕ್ಕಾಗಿ ಹೋಗಿ ಸಕ್ಕದ ಕೋಣೆಯ ಬಾಗಿಲು ತಟ್ಟದನು. ಹರಿಣೀ ೬೧ ಸುತೀಲೆಯು ಮುದುಕಿ ಬಂದಿರಬಹುದೆಂದು ಬಾಗಿಲು ತೆರೆದಳು. ರಾಜ ಕುಮಾರನು ಬಂದುದನ್ನು ಕಂಡು, ನಮಸ್ಕಾರಮಾಡಿದಳು. ರಾಜ ಕುಮಾರನು ಇಚ್ಛಾದೇವಿಯನ್ನು ಕಂಡನು. ಅವಳೂ ಅವನನ್ನು ಕಣ್ಣಾರೆ ಕಂಡಳು. ಯಾರೂ ಏನೂ ಮಾತನಾಡಲಿಲ್ಲ. ರಾತ್ರಿ ಕಳೆದು ಹೆಗಲಾಯಿತು. ಇಚ್ಛಾದೇವಿ ಪುನಃ ಜಿಂಕೆ ಯಾಗಲಿಲ್ಲ. ಅವಳಿಗೆ ಬಹೆಳ ಆನಂದವಾಯಿತು. ಆಗ ತಾನು ಏಡಿಯ ಶಾಪದಿಂದ ಪಟ್ಟ ಪಾಡೆಲ್ಲವನ್ನೂ ತನ್ನ ರಾಜಕುಮಾರನಿಗೆ ತಿಳಿಸಿದಳು. ಅವಳು ತನ್ನ ಕತೆಯನ್ನು ಕೊನೆಗಾಣಿಸುವ ವೇಳೆಗೆ ಸರಿಯಾಗಿ ಗುಡಿಸಿಲ ಮುದುಕಿ ಬಂದು, “ಮಕ್ಕಳೆ ನಿಮ್ಮ ಶಾಸ ಇಲ್ಲಿಗೆ ಮುಗಿಯಿತು” ಎಂದಳು. ಆಗ್ಯ್ಗ ಅವಳೇ ಮಲ್ಲಿಕಾದೇವಿಯೆಂದು ಎಲ್ಲರಿಗೂ ಗೊತ್ತಾಯಿತು. ಕೃಶಾಂಗಿಯೂ ಅವಳ ತಾಯಿಯೂ ತನಗೆ ಮೋಸಮಾಡಲು ಯತ್ನಿಸಿದುದನ್ನು ಮಹಾಶೂರನು ರಾಜಕುಮಾರಿಗೆ ಹೇಳಿದನು. ನಿಜ ಸ್ಥಿತಿಯನ್ನು ತಿಳಿಯದೆ ತನ್ನ ತಂದೆ ಇಚ್ಛಾದೇವಿಯ ತಂದೆಯೊಡನೆ ಯುದ್ಧಮಾಡಲು ನಿಶ್ಚಯಿಸಿರುವುದನ್ನೂ ತಿಳಿಸಿದನು. ಬೇಗನೆ ಹೋಗಿ ತನ್ನ ತಂದೆಯನ್ನು ತಡೆಯಬೇಕೆಂದು ಎದ್ದನು. ಆವೇಳೆಗೆ ಅವನ ತಂದೆಯೇ ಸಕಲ ಸೇನೆಯೊಡನೆ ಅದೇ ಕಾಡಿಗೆ ಬಂದನು. ಮಹಾಶೂರನನ್ನು ಪುನಃ ಕಂಡು ಎಲ್ಲರಿಗೂ ಆನಂದ ವಾಯಿತು. ರಾಜನಂತೂ ಆನಂದ ಅಧಿಕವಾಗಿ ಮೂಕನಂತೆ ನಿಂತು ಬಿಟ್ಟನು. ರಾಜಕುಮಾರನು ತಂದೆಗೆ ನಮಸ್ಕಾರಮಾಡಲು ಮುಂದೆ ಹೋದಾಗ, ಮಲ್ಲಿಕಾದೇವಿ ಇಚ್ಛಾ ದೇನಿಯ ಗಾಯದ ಮೇಲೆ ತನ್ನ ಕೈ ಯಿಟ್ಟಳು. ಅದು ಆಗಲೆ ಗುಣವಾಯಿತು. ಮಲ್ಲಿಕಾದೇನಿಯ ಪ್ರಭಾವದಿಂದ ರಾಜಕುಮಾರಿಗೂ ಸುಶೀಲೆಗೂ ಒಳ್ಳೆಯ ಉಡುಪು ಸಿದ್ಧವಾಯಿತು. ಅವರಿಗಾಗಿ ಒಂದು ದಿವ್ಯವಾದ ರಥವೂ ಪ್ರತ್ಯಕ್ಷ ವಾಯಿತು. ರಾಜನು ಇಚ್ಛಾದೇವಿಯನ್ನು ವಿಶ್ವಾಸದಿಂದ ಮಾತ ೬೨ ಹರಿಣೀ ನಾಡಿಸಿದನು. ರಾಜಕುಮಾರನೊಡನೆ ಅವಳ ವಿನಾಹವು ಬೇಗನೆ ನಡೆಯಬೇಕೆಂದೂ, ತನ್ನ ರಾಜ್ಯಕ್ಕೆ ಅವನೇ ರಾಜನಾಗಬೇಕೆಂದೂ ಇನ್ನ ಪಟ್ಟನು. ಇಚ್ಛಾದೇವಿಯೂ ಮರ್ಯಾದೆಯಿಂದ ಮಾವನಿಗೆ ಉತ್ತರಕೊಟ್ಟಳು. ಕೃಶಾಂಗಿಯನ್ನೂ ಅವಳ ತಾಯಿಯನ್ನೂ ಕ್ಷಮಿಸಬೇಕೆಂದು ಕೇಳಿ ಕೊಂಡಳು. ರಾಜನೂ ಅದಕ್ಕೆ ಒಪ್ಪಿದನು. ಎಲ್ಲರೂ ಊರಿಗೆ ತೆರಳಿದರು. ಮದುನೆ ವಿಶೇಷ ವೈಭವದಿಂದ ನಡೆಯಿತು. ಇಚ್ಛಾದೇವಿ ಹುಟ್ಟದ ದಿವಸೆ ಬಂದಿದ್ದ ಆರು ಜನ ಗಂಧರ್ವಕನ್ಯೆಯರೂ ಮದುವೆಗೆ ಬಂದಿದ್ದರು. ಎಲ್ಲರೂ ಅವಳಿಗೆ ಎಲ್ಲಾ ಸೌಭಾಗ್ಯಗಳನ್ನೂ ಅನು ಗ್ರಹಿಸಿದರು. ಈ ನಡುವೆ, ರಾಜಕುಮಾರನೊಡನೆ ವನವಾಸಹೋಗಿದ್ದ ರಾಯ ಭಾರಿ ತಾನು ಸುಶೀಲೆಯನ್ನು ಮದುವೆಯಾಗಲು ಅಪ್ಪಣೆ ಕೇಳಿದನು. ರಾಜಕುಮಾರನು ಸಂತೋಷದಿಂದ ಅವನಿಗೆ ಅಪ್ಪಣೆ ಕೊಟ್ಟು, ರಾಜ್ಯದ ಒಂದು ಭಾಗಕ್ಕೆ ಅವನನ್ನು ಮುಖ್ಯಾಧಿಕಾರಿಯಾಗಿ ನೇಮಿಸಿದನು. ಹೀಗೆ, ಮಹಾಶೂರನು ಇಚ್ಛಾದೇನಿಯೊಡನೆಯೂ, ಅವನ ರಾಯಭಾರಿಯು ಸುಶೀಲೆಯೊಡನೆಯೂ ಸುಖವಾಗಿದ್ದರು. ರಾಯನರಿ ೧ ಹಿಂದೆ ಒಂದು ಸಲ ಸುಗ್ಗಿ ಯಕಾಲ ಬಂದಾಗ ಮೃಗರಾಜನಾದ ಸಿಂಹ ಕಾಡಿನಲ್ಲಿ ಸಭೆ ನಡಸಿತು. ಆ ಸಭೆಗೆ ಕಾಡಿನ ಎಲ್ಲಾ ಪ್ರಾಣಿ ಗಳೂ ಬಂದೇತೀರಬೇಕೆಂದು ಆಜ್ಞೆ ಮಾಡಿತು. ಬರದೆ ಹಿಂದೆ ಉಳಿದ ವರಿಗೆ ತೀಕ್ಷ ನಾದ ಶಿಕ್ಷೆ ವಿಧಿಸುಪೆನೆಂದು ಡಂಗುರ ಹೊಯಿಸಿತು. A ಹುಯಿಸಿದ ಕೆಲವೇ ದಿನಗಳಲ್ಲಿ ಕಾಡಿನ ಪ್ರಾಣಿಗಳೆಲ್ಲವೂ ಸಿಂಹವಿದ್ದಲ್ಲಿಗೆ ಬರತೊಡಗಿದವು. ಹುಲಿ, ಚಿರತೆ ಕಿರುಜ ಆನೆ ಖಡ್ಗ ಮೃಗ, ಕರಡಿ, ಕೋಳ, ಜಿಂಕೆ, ಕಾಡುಕೋಣ ಮೊದಲಾದ ದೊಡ್ಡ ಪ್ರಾಣಿಗಳೂ ಆಡು, ಟಗರು, ಮೇಕೆ, ನಾಯಿ ಬೆಕ್ಕು, ಮೊಲ, ಅಳಿಲು ಮುಂತಾದ ಸಣ್ಣ ಪ್ರಾಣಿಗಳೂ ಗುಂಪುಗುಂಪಾಗಿ ಬಂದು ಸೇರಿದುವು. ತಾವೇ ಬರಲು ಆಗದಿದ್ದ ಪ್ರಾಣಿಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿ ಸಿದ್ದುವು. ಆದರೆ ಕಾಡಿನ ನರಿಗಳಲ್ಲೆಲ್ಲ ಪ್ರಸಿದ್ಧವಾದ ರಾಯನರಿಯು ತಾನೂ ಬರಲಿಲ್ಲ, ತನ್ನ ಪ್ರತಿನಿಧಿಯನ್ನೂ ಕಳುಹಿಸಲಿಲ್ಲ. ಏಕೆಂದರೆ ತಾನು ಬಂದರೆ ತನ್ನ ಕೆಟ್ಟ ಕೆಲಸ ಗಳಿಗೆ ತಕ್ಕ ಶಿಕ್ಷೆಯಾಗುವು ದೆಂದು ಅದಕ್ಕೆ ಚೆನ್ನಾಗಿ ಗೊತ್ತಿ ಜತ ಸಿಂಹೆದ ಸಭೆ ಸೇರಿತು. ಸಭೆಗೆ ಬಂದ ಪ್ರತಿಯೊಂದು ಪ್ರಾಣಿಯೂ ರಾಯನರಿಯ ಮೇಲೆ ಒಂದೊಂದು ದೂರು ತಂದಿತ್ತು. ತಮ್ಮ ತಮ್ಮ ದೂರುಗಳನ್ನು ಹೇಳಿಕೂಳ್ಳಲು ಸಿಂಹವು ಅಪ್ಪಣೆ ಕೊಟ್ಟಾಗ ಚ ಭಾರಿ ತೋಳ ಮೊದಲು ಎದ್ದಿತು. "ಮಹಾಪ್ರಭು! ರಾಯನರಿ ನನಗೆ ಬಹಳ ಅನ್ಯಾಯಮಾಡಿದೆ. ದಯಮಾಡಿ ನನ್ನಮೇಲೆ ಕನಿಕರ ತೋರಿಸಿ ಆ ರಾಯನರಿಯನ್ನು ಶಿಕ್ಷಿಸಬೇಕು. ಅದು, ಒಂದುಸಲ ನಾನು ಮನೆಯಲ್ಲಿಲ್ಲದಾಗ ಬಂದು, ನನ್ನ ಮಕ್ಕಳ ಕಣ್ಣುಗಳನ್ನು ಚುಚ್ಚಿ ಕುರುಡುಮಾಡಿಬಿಟ್ಟಿ ತು. ತಡೆ ಯುವುದಕ್ಕೆ ಬಂದ ನನ್ನ ಹೆಂಡತಿಯ ತಲೆಯಮೇಲೆ ಬಲವಾಗಿ ಏಟು ೬೪ ರಾಯನರಿ ಹೊಡೆಯಿತು. ಆ ರಾಯನರಿ ಮಾಡಿದ ಇನ್ನೂ ಇತರ ಅನ್ಯಾಯ ಗಳನ್ನು ವಿವರಿಸುವುದಕ್ಕೆ ಹೊತ್ತೇ ಸಾಲದು” ಎಂದು ತೋಳ ಪ್ರಾರಂಭಿಸಿತು. ತೋಳ ತನ್ನ ಮಾತನ್ನು ಇನ್ನೂ ಮುಗಿಸಿರಲಿಲ್ಲ. ಅಷ್ಟರಲ್ಲಿಯೆ ಒಂದು ಗಡವನಾಯಿ ಮುಂದೆ ಬಂದು "ಮಹಾರಾಜ! ನನ್ನ ದೂರನ್ನೂ ಲಾಲಿಸಬೇಕು. ಕಳೆದ ಚಳಿಗಾಲದಲ್ಲಿ ಆಹಾರ ಸಿಕ್ಕುವುದೇ ಕಷ್ಟ ವಾಗಿತ್ತಂಬುದು ತಮಗೂ ತಿಳಿದೇ ಇದೆ. ಆಗ ಒಂದು ದಿನ ನಾನು ಬಹಳ ಕಷ್ಟಪಟ್ಟು ಒಂದು ದೋಸೆಯ ಚೂರನ್ನು ಸಂಪಾದಿಸಿದ್ದೆ. ಅದನ್ನು ಆ ರಾಯನರಿ ನನ್ನಿಂದ ಕಿತ್ತುಕೊಂಡುಬಿಟ್ಟಿ ತು. ಅದನ್ನು ಶಿಕ್ಷಿಸಬೇಕ್ಕು ಮಹಾರಾಜ” ಎಂದು ಬೇಡಿಕೊಂಡಿತು. ನಾಯಿ ಆ ಮಾತು ಹೇಳಿತೊ ಇಲ್ಲವೊ, ಪ್ರಾಣಿಗಳ ಗುಂಪಿನಿಂದ ಒಂದು ಕರಿಯ ಬೆಕ್ಕು ಸಿಕ್ರಿಂದು ಸದ್ದುಮಾಡುತ್ತ ನೆಗೆದು ನಾಯಿಯ ಪಕ್ಕದಲ್ಲಿ ನಿಂತಿತು. ಅಲ್ಲಿ ನಿಂತುಕೊಂಡು, ನಾಯಿಯನ್ನು ನುಂಗಿ ಬಿಡುವಂತೆ ನೋಡುತ್ತಾ ಸಿಂಹದ ಕಡೆ ತಿರುಗಿ “ಮೃಗರಾಜ, ಇಲ್ಲಿ ಸೇರಿರುವ ಮೃಗಗಳೆಲ್ಲ ರಾಯನರಿಯ ಮೇಲೆ ದೂರು ಹೇಳಲು ಸಿದ್ಧ ವಾಗಿವೆ. ಆದರೆ ಪ್ರತಿ ಪ್ರಾಣಿಯೂ ಮೊದಲು ತಾನು ತನ್ನನ್ನು ಪರೀಕ್ಷೆ ಮಾಡಿಕೊಳ್ಳಲಿ. ರಾಯನರಿಯ ಪಾಪಗಳಿಗಿಂತ ಹೆಚ್ಚಿನ ಪಾಪಗಳು ಅವುಗಳಲ್ಲಿಯೇ ಕಂಡುಬರುತ್ತವೆ. ತನ್ನ ದೋಸೆಯನ್ನು ರಾಯನರಿ ಕಿತ್ತುಕೊಂಡಿತೆಂದು ನಾಯಿ ಹೇಳಿತಲ್ಲ ಆ ದೋಸೆ ಇದಕ್ಕೆಲ್ಲಿ ಸಿಕ್ಕಿ ತೆಂದು ನಾನು ಕೇಳುತ್ತೇನೆ. ಈ ನಾಯಿ ನನ್ನ ದೋಸೆಯನ್ನಲ್ಲವೆ ಕಿತ್ತುಕೊಂಡದ್ದು? ನಾನು ಅದನ್ನು ಊರಿನಲ್ಲಿ ಮನೆಯವರೆಲ್ಲ ಮಲಗಿರು ವಾಗ ಕಷ್ಟಪಟ್ಟು ಸಂಪಾದಿಸಿಕೊಂಡು ಬರಲಿಲ್ಲವೆ? ಆದರೂ ನಾಯಿಯ ಮೇಲೆ ನಾನೇನು ದೂರು ತಂಜೆನೆ? ? ಎಂದಿತು. ಆ ಕರಿಯಬೆಕ್ಕಿನ ಆಕ್ಷೇಪಣೆಗೆ ಉತ್ತರ ಹೇಳಲು ಒಂದು ಕಿರುಬ ಮುಂದೆ ಬಂದು, “ಏನೆಂದೆ, ಬೆಕ್ಸೈ? ರಾಯನರಿಯ ಮೇಲೆ ದೂರು ಹೇಳ ಬಾರದು ಎನ್ನುವೆಯೊ? ರಾಯನರಿಯಂತಹೆ ಕಳ್ಳನೂ ಕೊಲೆಪಾತ ಕನೂ ಜಗತ್ತಿನಲ್ಲೆ ಇಲ್ಲವೆಂಬುದು ಎಲ್ಲರಿಗೂ ಗೊತ್ತು. ರಾಯನರಿಗೆ ರಾಯನರಿ ೬೫% ಯಾವಪ್ರಾಣಿಯನ್ನು ಕೆಂಡರೆ ವಿಶ್ವಾಸವಿದೆ? ರಾಜನಾದ ಸಿಂಹೆವನ್ನು ಕಂಡರೂ ಅದಕ್ಕೆ ಭಯವಿಲ್ಲ. ಒಂದು ಕೋಳಿಯ ಕಾಲು ಸಿಕ್ಚುವು ದಾದರೆ ಆದು ಏನು ಮಾಡುವುದಕ್ಕೂ ಹೇಸುವುದಿಲ್ಲ. ನೆನ್ನೆ ತಾನೆ ಮಹಾ ಸ್ವಾಮಿಯವರ ಸೇವಕನಾದ ಈ ಮೊಲಕ್ಕೆ ರಾಯನರಿ ಏನುಮಾಡಿ ತೆಂದು ಹೇಳುತ್ತೇನೆ. ಮೊಲಕ್ಕೆ ಸಂಗೀತ ಹಾಡಲು ಹೇಳಿಕೊಡುತ್ತೇ ನೆಂದು ನಂಬಿಸಿ, ರಾಯನರಿ ಅದನ್ನು ತನ್ನ ತೊಡೆಯ ಮೇಲೆ ಕೂರಿಸಿ ಕೊಂಡಿತು. ಮೊಲ ಹಾಡಲು ಪ್ರಯತ್ನಿಸುತ್ತಿದ್ದಾಗ ರಾಯನರಿ ಅದರ ಕತ್ತು ಹಿಡಿದು ಬಲವಾಗಿ ಹಿಸುಕತೊಡಗಿತು. ಆ ವೇಳೆಗೆ ನಾನು ಅಲ್ಲಿಗೆ ಬರದೆ ಇದ್ದಿದ್ದರೆ ಮೊಲದ ಕತೆ ಮುಗಿದುಹೋಗುತ್ತಿತ್ತು. ನನ್ನ ಮುಖ ಕಂಡು ರಾಯನರಿ ಮೊಲವನ್ನು ಬಿಟ್ಟು ಓಡಿಹೋಯಿತು. ಮೊಲದ ಕತ್ತು ನೋಡಿ; ಇನ್ನೂ ಗಾಯ ಹಾಗೆಯೇ ಇದೆ. ಮಹಾಸ್ವಾಮಿ, ತಮ್ಮ ನಿಯಮಗಳನ್ನು ಲಕ್ಷಿಸದೆ ಕಾಡಿನ ರೆಮ್ಮದಿಗೆ ಭಂಗತಂದಿರುವ ರಾಯನರಿಯನ್ನು ಹೀಗೇ ಶಿಕ್ಷಿಸದೆ ಬಿಡಬಾರದು? ಎಂದಿತು. ಆ ಮಾತಿಗೆ ತೋಳ ಚಪ್ಪಾಳೆ ತಟ್ಟಿ,“ ಚೆನ್ನಾಗಿ ಹೇಳಿದೆ, ಕಿರುಬ. ಕಾಡಿನಲ್ಲಿ ನಾವು ನೆಮ್ಮದಿಯಿಂದ ಇರಬೇಕಾದರೆ ರಾಯರರಿಗೆ ತಕ್ಕ ಶಿಕ್ಷೆಯಾಗಲೇಬೇಕು” ಎಂದು ಕೂಗಿಕೊಂಡಿತು. ಆಗ, ರಾಯನರಿಯ ಹತ್ತಿರದ ಸಂಬಂಧಿಯಾದ ಒಂದು ಮುದಿ ಹೋತ ಗಂಭೀರವಾಗಿ ಎದ್ದು, “ತೋಳ, ನಿನಗೆ ಹೊಟ್ಟಿಯಕಿಚ್ಚು ಹೆಚ್ಚು. ಅನ್ಯಾಯ ಮಾಡುವುದರಲ್ಲಿ ರಾಯನರಿಗಿಂತ ನೀನೇನು ಕಡಮೆ? ನೀನು ರಾಯನರಿಯನ್ನು ಎಷ್ಟು ಸಲ ಕಚ್ಚಿಲ್ಲ? ಪರಚಿಲ್ಲ? ನೀನು ರಾಯನರಿಗೆ ಮಾಡಿದ ಮೀನಿನ ಮೋಸ ಮರೆತುಬಿಟ್ಟೆ ಯೇನು? ರಾಯನರಿ ಮೀನಿನ ಗಾಡಿಯ ಮೇಲೆ ಹತ್ತಿ ಮೀನುಗಳನ್ನು ಎಸೆದಾಗ, ನೀನು ಹಿಂದುಗಡೆ ಬಂದು ಆ ಮೀನುಗಳೆಲ್ಲವನ್ನೂ ತಿಂದೆಯೇ ಹೊರತು, ರಾಯನರಿಗೆ ಏನಾದರೂ ಕೊಟ್ಟಿಯ? ಹೌದು, ಹೌದು, ನೀನು ತಿನ್ನ ಲಾಗದ ಮೀನುಮೂಳೆಗಳನ್ನು ಮಾತ್ರ ಕೊಟ್ಟಿ. ಇನ್ನೊಂದು ಸಲ, ರಾಯನರಿ ಬಹಳ ಕಷ್ಟಪಟ್ಟು ಸಂಪಾದಿಸಿದ ಹಂದಿಯ ಮಾಂಸವನ್ನೂ ಹೀಗೆಯೇ ನೀನೊಬ್ಬನೇ ನುಂಗಿಬಿಡಲಿಲ್ಲವೆ? ನಿನಗೆ ರಾಯನರಿಯ 5 ೬೬ ರಾಯನರಿ ಮೇಲೆ ದೂರುಹೇಳುವ ಥೈರ್ಯ ಬಂದದ್ದೆ ಅಶ್ಚರ್ಯ!” ಎಂದು ಹೇಳ್ತಿ ಮೊಲದ ಕಡೆ ತಿರುಗಿ, “ ಮೊಲಕ್ಕೆ ಕತ್ತಿನ ಬಳಿ ಗಾಯವಾಯಿತಂತೆ! ಅದಕ್ಕೆ ರಾಯನರಿಯನ್ನು ಶಿಕ್ಷಿಸಬೇಕಂತೆ! ಶಿಷ್ಯನು ಸರಿಯಾಗಿ ಪಾಠ ಕಲಿಯದೆ ಹೋದರೆ ಗುರು ಅವನನ್ನು ಶಿಕ್ಷಿಸಬಾರದೆ?? ಎಂದು ನಾಯಿ ಯನ್ನು ಕುರಿತ್ಕು “ ಕಳ್ಳನಿಂದ ಕದ್ದ ವಸ್ತುವನ್ನು ಕಿತ್ತುಕೊಂಡರೆ ಅದನ್ನು ಅಪರಾಧವೆಂದು ಹೇಳಬಹುದೆ? ನಾಯಿ ಬಾಯಿ ಮುಚ್ಚಿ ಕೊಂಡಿದ್ದರೆ ಚೆನ್ನಾಗಿರುತ್ತಿತ್ತು” ಎಂದು ರಾಯನರಿಯ ಪರವಾಗಿ ನಾಲ್ಕು ಮಾತ ನಾಡಿತು. ಹೋತ ಹೀಗೆ ಮಾತನಾಡುತ್ತಿರುವಾಗಲೇ ಸಿಂಹದ ಸಭೆಗೆ ಒಂದು ಕೆಂಪು ಹುಂಜ ಬಂದಿತು. ಅದು ಒಂದು ಕೋಳಿಯ ಹೆಣವನ್ನು ಹೊತ್ತುಕೊಂಡು ಬಂದಿತು. ಆ ಹೆಣದ ಪಕ್ಕದಲ್ಲಿ ಇನ್ನೆರಡು ಕೋಳಿಗಳು ಕಣ್ಣೀರು ಸುರಿಸುತ್ತಾ ಬಂದವು. ಅವು ಆ ಸತ್ತ ಕೋಳಿಯ ಅಕ್ಕ ತಂಗಿಯರು. ಆ ಸತ್ತ ಕೋಳಿ ರಾಯನರಿಯ ಬಾಯಿಗೆ ಸಿಕ್ಕಿ ಪ್ರಾಣ ಬಿಟ್ಟಿತ್ತು. ಕೆಂಪು ಹುಂಜ ತಾನು ಹೊತ್ತ ಹೆಣವನ್ನು ಸಿಂಹದ ಮುಂಡೆ ಇಳಿಸಿ “ವನರಾಜ್ಕ ನನ್ನ ಗೋಳನ್ನು ಲಾಲಿಸಬೇಕು. ಈಗ ಆರು ತಿಂಗಳ ಹಿಂದೆ ನನಗೆ ಎಂಟು ಗಂಡುಮಕ್ಕಳೂ ಏಳು ಹೆಣ್ಣುಮಕ್ಕಳೂ ಇದ್ದರು. ಅವರೆಲ್ಲರೂ ಒಂದೇ ಅಂಗಳದಲ್ಲಿ ಆಟವಾಡುತ್ತಿದ್ದರು. ಅಂಗಳದ ಸುತ್ತ ಎತ್ತರವಾದ ಗೋಡೆಯಿತ್ತು, ಆರು ನಾಯಿಗಳ ಕಾವಲಿತ್ತು. ಒಂದು ದಿನ ರಾಯರರಿ ಸಂನ್ಯಾಸಿಯ ಬಟ್ಟೆ ಹಾಕಿಕೊಂಡು ತಮ್ಮ ಹೆಸರು ಹೇಳಿ ನನಗೊಂದು ಪತ್ರ ತಂದಿತು. ಆ ಪತ್ರಕ್ಕೆ ತಮ್ಮ ಮುದ್ರೆ ಒತ್ತಿತ್ತು. ದೇಶದ ಪ್ರಾಣಿಗಳಿಗೆಲ್ಲಾ ತಾವು ಅಭಯವನ್ನು ದಯಪಾಲಿಸಿದಂತೆಯೂ ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಕೊಲ್ಲದಂತೆ ಆಜ್ಞೆಮಾಡಿದಂತೆಯೂ ಅದರೊಳಗೆ ಒಕ್ಕಣೆಯಿತ್ತು. ಆ ಪತ್ರದ ಸಾರಾಂಶದಿಂದ ನನಗೆ ಪರಮಾನಂದವಾಯಿತು. ನಾನು 'ಭಯಭೀತಿಯಿಲ್ಲಡೆ ನನ್ನ ಮಕ್ಕಳನ್ನೂ ಕರೆದುಕೊಂಡು ಅಂಗಳದಿಂದ ಹೊರಗೆ ತಿರುಗಾಡಲು ಹೋದೆ. ಆದರೆ ಆ ಪಾಹಿ ರಾಯನರಿ ಅಲ್ಲಿಯೇ ರಾಯನರಿ ೬೭ ಪೊದೆಗಳಲ್ಲಿ ಹೊಂಚುಹಾಕುತ್ತಿದ್ದು, ನನ್ನ ಒಬ್ಬ ಮಗನನ್ನು ಕೊಂಡು ಹೋಯಿತು. ಅಲ್ಲಿಂದ ಮೊದಲಾಗಿ ಆಗಿಂದ ಆಗ್ಗೆ ಒಂದೊಂದನ್ನು ಆಹುತಿ ತೆಗೆದುಕೊಳ್ಳುತ್ತಿದೆ. ನನಗೆ ಇದ್ದ ಹದಿನೈದು ಮಕ್ಕಳಲ್ಲಿ ನೆನ್ನೆಗೆ ನಾಲ್ಕಾರು ಮಾತ್ರ ಉಳಿದಿದ್ದವು. ನೆನ್ನೆ ಇನ್ನೂ ಒಬ್ಬ ಮಗಳು ರಾಯನರಿಯ ಬಾಯಲ್ಲಿ ಪ್ರಾಣ ಒಪ್ಪಿಸಿದಳು. ನಾಯಿಗಳು ಅವಳ ದೇಹವನ್ನು ಮಾತ್ರ ತಂದುವು. ಮಹಾಸ್ಟಾಮಿಯವರು ಗಮನಿಸಬೇಕು” ಎಂದು ಗೋಳಾಡಿತು. ಆಗ ಮೃಗರಾಜನಾದ ಸಿಂಹವು “ ಕೇಳಿದೆಯ, ಹೋತ್ತ ನಿನ್ನ ಸಂಬಂಧಿಯಾದ ರಾಯನರಿಯ ಚರಿತ್ರೆಯನ್ನು?” ಎಂದು ಹಂಗಿಸ್ಕಿ “ ಹುಂಜ, ನೀನು ವ್ಯಥೆ ಪಡಬೇಡ, ನಿನ್ನ ದೂರನ್ನು ವಿಚಾರಿಸಿ ಪರಿಹಾರ ಕೊಡಿಸುತ್ತೇವೆ. ನಿನ್ನ ಮಗಳನ್ನು ಸಕಲ ವೈಭವಗಳೊಡನೆ ಮಣ್ಣು ಮಾಡಿಸುತ್ತೇವೆ. ನಿನ್ನ ಮಗಳನ್ನು ಕೊಂದವನಿಗೆ ತಕ್ಕ ಶಿಕ್ಷೆ ವಿಧಿಸು ತ್ತೇನೆ ಎಂದು ಸಂತ್ಸೆ ಸಿ ರಾಯನರಿಯನ್ನು ಸಭೆಗೆ ಕರೆಸಬೇಕೆಂದು ನಿಶ್ಚಯಿಸಿತು. ರಾಯನರಿಯನ್ನು ಕರೆಯುವ ಕಾರ್ಯಕ್ಕಾಗಿ ಯಾರನ್ನು ಕಳುಹಿಸ ಬೇಕೆಂಬುದನ್ನು ಕುರಿತು ಬಹಳ ಚರ್ಚೆಯಾಯಿತು. ಕೊನೆಗೆ ತಕ್ಕ ಮಟ್ಟಿಗೆ ದೊಡ್ಡಮೃಗವಾದ ಕೂದಲುಕರಡಿಯನ್ನು ಕಳುಹಿಸಬೇಕೆಂದು ಎಲ್ಲ ಪ್ರಾಣಿಗಳೂ ತೀರ್ಮಾನಿಸಿದುವು. ೨ ಮಾರನೆಯ ಬೆಳಗ್ಗೆ ಕರಡಿ ರಾಯನರಿಯನ್ನು ಹುಡುಕಿಕೊಂಡು ಹೊರಟತು. ರಾಯನರಿಯ ಮನೆಗೆ ಅದು ಬಂದಾಗ್ಯ ಮನೆಬಾಗಿಲು ಮುಚ್ಚಿತ್ತು. ಎಷ್ಟು ತಟ್ಟದರೂ ಯಾರೂ ಬಾಗಿಲು ತೆಗೆಯಲಿಲ್ಲ. ಕಡೆಗೆ ಕರಡಿ “ ಬಾಗಿಲು ತೆಗೆ, ರಾಯನರಿ. ಬಂದಿರುವವನು ನಾನೊಬ್ಬನೇ, ನಿನ್ನ ಸೋದರಮಾವ, ಕರಡಿ, ಮಹಾರಾಜನಾದ ಸಿಂಹವು ನಿನ್ನನ್ನು ಸಭೆಗೆ ಬರಬೇಕೆಂದು ಕರೆಯುತ್ತದೆ. : ನೀನಾಗಿಯೆ ಬರುವುದಿಲ್ಲವಾದುದರಿಂದ ನಿನ್ನನ್ನು ಕರೆದುಕೊಂಡು ಬರಲು ನನ್ನನ್ನು ೬೮ ರಾಯನರಿ ಕಳುಹಿಸಿದೆ. ನೀನು ಈಗಲೂ ಬರದೆ ಹೋದರೆ ನಿನಗೆ ಮರಣದಂಡನೆ ಯಾದೀತು” ಎಂದು ಕೂಗಿ ಹೇಳಿತು. ರಾಯನರಿ ಬಾಗಿಲಿನ ಆಚೆ ನಿಂತುಕೊಂಡೇ ಎಲ್ಲಾ ಕೇಳಿತು. ಹಾಗೆಯೇ ಒಂದು ಗಳಿಗೆ ನಿಂತ್ಕು, ಕರಡಿಗೂ ಅವಮಾನಮಾಡಿ ಕಳುಹಿ ಸುವ ಉಪಾಯವನ್ನು ಯೋಚಿಸಿತು. ಉಪಾಯ ಹೊಳೆದನಂತರ ಬಾಗಿಲು ತೆಗೆದು, “ ಬ್ಯಾ ಮಾವ. ಬಾ. ಪಾಷ, ಬಾಗಿಲಲ್ಲಿ ಎಷ್ಟು ಹೊತ್ತು ಕಾದಿದ್ದೆ ಯೊ! ನಿನ್ನ ಧ್ವನಿ ಕೇಳಿಸಿದಾಗ ನಾನು ದೇವರ ಸ್ತೋತ್ರ ಹೇಳುತ್ತಿದ್ದೆ. ಆದ್ದರಿಂದ ಬಾಗಿಲು ತೆಗೆಯುವುದು ತಡ ವಾಯಿತು. ಬಾ. ಒಳಗೆ ಬಾ. ಇದೇನು? ನನ್ನನ್ನು ಕರೆಯುವುದಕ್ಕೆ ರಾಜನು ನಿನ್ನನ್ನು ಕಳುಹಿಸಬೇಕಾಯಿತೆ? ಆದರೂ ಈ ಹೊತ್ತು ನಾನು ನಿನ್ನೊಡನೆ ಬರುವಂತಿಲ್ಲ. ಮೈಗಾಗದ ಏನೇನೋ ಪದಾರ್ಥಗಳನ್ನು ತಿಂದು ನನಗೆ ಅಜೀರ್ಣವಾಗಿಬಿಟ್ಟದೆ ೫ ಎಂದಿತು. ಅಂತಹದು ಏನನ್ನು ನೀನು ತಿಂದೆ?” ಎಂದು ಕರಡಿ ಕೊಂಚ ಆಸೆಯಿಂದ ಕೇಳಿತು. “ ಅಂತಹದು ಏನೂ ಇಲ್ಲ ಮಾವ. ಬಹಳ ಸಾಮಾನ್ಯವಾದ ಪದಾರ್ಥ. ಬೇರೆ ಯಾರೂ ತಿನ್ನದುದನ್ನು ನಾವು ಬಡವರು ತಿನ್ನಬೇಕು ತಾನೆ. ಎಲ್ಲಿಯೋ ಒಂದಿಷ್ಟು ಜೇನು ಸಿಕ್ಕಿತು. ತಿಂದುಬಿಟ್ಟಿ. ಅದೇ ಮೈ ಗಾಗಲಿಲ್ಲ, ನೋಡು” ಎಂದು ನರಿ ಹೊಟ್ಟೆ ನೋವು ಬಂದಂತೆ ನಟಸಿತು. ಜೇನಿನ ಹೆಸರು ಕೇಳಿ ಕರಡಿಯ ಬಾಯಿಯಲ್ಲಿ ನೀರು ಒಡೆಯಿತು. “ ಜೇನನ್ನು ಕುರಿತು ಹಾಗೆಲ್ಲಾ ಹೀನವಾಗಿ ಮಾತನಾಡಬೇಡ. ಜೇನಿ ಗಿಂತ ದೊಡ್ಡವಸ್ತು ಜಗತ್ತಿನಲ್ಲೆ ಇಲ್ಲ. ನನಗೆ ಜೇನು ಒಂದಿಷ್ಟು ಕೊಡು, ಸಾಯುವವರೆಗೆ ನಾನು ನಿನ್ನ ಗುಲಾಮನಾಗಿರುತ್ತೇನೆ ” ಎಂದು ಕರಡಿ ಹೇಳಿತು. “ಇಷ್ಟು ಜೇನು ಏಕ್ಕೆ ಮಾವ? ಅಷ್ಟು ಜೇನು ಅಲ್ಲಿದೆ. ನಿನ್ನಂತಹ ವರು ಸಾವಿರ ಜನಕ್ಕೆ ಸಂತರ್ಪಣೆ ಮಾಡಿಸುವಷ್ಟು ಇದೆ. ಬೇಕಾದರೆ ರಾಯನರಿ ೬% ಹೇಳು, ತಂದು ಕೊಡುತ್ತೇನೆ” ಎಂದು ರಾಯನರಿ ಹೊರಡಲು ಎದ್ದಿ ತು. ಕರಡಿ ಅದನ್ನು ತಡೆದು, “ ನೀನು ಹೇಳಿದಷ್ಟು ಜೇನಿರುವುದು ಅಸಾಧ್ಯ. ಸಾವಿರ ಜನಕ್ಕೆ ಸಂತರ್ಪಣೆ ಮಾಡಿಸುವುದೆಂದರೆ ಎಷ್ಟು ಜೇನು ಬೇಕು, ಏನು ಕತೆ!” ಎಂದು ಜೇನನ್ನು ಮನಸ್ಸಿನಲ್ಲಿಯೇ ಸವಿಯುತ್ತಾ ನಿಂತುಕೊಂಡಿತು. ರಾಯನರಿ, ಕರಡಿಯ ಗಮನ ಜೇನಿನಲ್ಲಿ ಮುಳುಗಿದುದನ್ನು ಕಂಡು ಒಳಗೊಳಗೆಯೆ ನಗುತ್ತಾ "ಇಲ್ಲ ಮಾವ. ಇಲ್ಲಿಯೆ ಹತ್ತಿರ ದಲ್ಲಿ ಒಬ್ಬ ತೋಟಗಾರನಿದ್ದಾನೆ. ಅವನ ಹತ್ತಿರವಿರುವ ಜೇನು ಹತ್ತು ವರ್ಷ ತಿಂದರೂ ಮುಗಿಯುವಂತಿಲ್ಲ. ತೋರಿಸುತ್ತೇನೆ, ಬಾ” ಎಂದು ಕರಡಿಯನ್ನೂ ಹಿಂದೆ ಕರೆದುಕೊಂಡು ಹೋಯಿತು. ರಾಯನರಿ ಹೇಳಿದ ತೋಟದ ಮಧ್ಯದಲ್ಲಿ ಒಂದು ಅರಳಿಮರದ ಬುಡ ಬಿದ್ದಿತ್ತು. ಅದನ್ನು ಮಧ್ಯದಲ್ಲಿ ಸೀಳಿ ಬೆಣೆ ಸಿಕ್ಕಿಸಿದ್ದರು. ಮರ ಮಧ್ಯದಲ್ಲಿ ಬಾಯಿ ಬಿಟ್ಟುಕೊಂಡಿತ್ತು. ರಾಯನರಿ ಕರಡಿಗೆ ಅದನ್ನು ತೋರಿಸಿ, “ ಮಾವ, ತೋಟಗಾರನು ಇದರೊಳಗೆ ತುಂಬ ಜೇನು ತುಂಬಿ ಇಟ್ಟಿದ್ದಾನೆ. ನೀನು ಬೇಕಾದಷ್ಟು ತೆಗೆದುಕೊಳ್ಳಬಹುದು. ಆದರೆ ಮಾತ್ರ ಅಜೀರ್ಣವಾಗುವಷ್ಟು ತಿನ್ನಬೇಡ” ಎಂದಿತು. ಕರಡಿ ಹಿಂದುಮುಂದು ನೋಡಲಿಲ್ಲ. ಜೇನು ತಿನ್ನುವ ದುರಾಸೆ ಯಿಂದ ರಾಯನರಿಯ ಮಾತಿಗೆ ಮರುಳಾಗಿ ಆ ಮರದ ಸೀಳಿನಲ್ಲಿ ಮುಖವಿಟ್ಟತು. ಅದೇ ಸಮಯವನ್ನು ಕಾಯುತ್ತಿದ್ದ ನರಿ ಅಲ್ಲಿ ಸಿಕ್ಕಿ ಸಿದ್ದ ಬೆಣೆಯನ್ನು ಕಿತ್ತು ಬಿಟ್ಟಿತು. ಕರಡಿಯ ತಲೆ ಆ ಮರದ ಸೀಳಿನಲ್ಲಿ ಬಲವಾಗಿ ಸಿಕ್ಕಿಕೊಂಡುಬಿಟ್ಟತು. ಕರಡಿ ಎಷ್ಟೆಷ್ಟೋ ಎಳೆದಾಡಿತು. ಆದರೂ ಅದಕ್ಕೆ ಬಿಡುಗಡೆಯಾಗಲಿಲ್ಲ. ಅದರ ಕೋಪದ ಕೂಗೂ ಒದ್ದಾಟವೂ ಹೆಚ್ಚಾಯಿತು. ರಾಯನರಿ “ ಒದ್ದಾಡಬೇಡ, ಮಾವ. ಜೇನು ಚೆನ್ನಾಗಿದೆಯೆ? ನಿದಾನವಾಗಿ ತಿನ್ನು. ಮನೆಗೂ ಒಂದಿಷ್ಟು ಎತ್ತಿಕೊಂಡು ಹೋಗು, ೭೦ ರಾಯನರಿ ಬಕಾಸುರನಂತೆ ನೀನೇ ಎಲ್ಲ ತಿಂದುಬಿಡುವೆಯ ?? ಎಂದು ಅಣಕಿಸುತ್ತಾ ಪಕ್ಕದಲ್ಲಿ ಕುಳಿತಿತ್ತು. ಕರಡಿಯ ಗದ್ದಲ ಕೇಳಿ ತೋಟಗಾರನು ಬಂದನು. ಆಗ ನರಿ ತಾನು ಅಲ್ಲಿರಬಾರದೆಂದು ಮನೆಯ ಕಡೆಗೆ ಓಡಿಹೋಯಿತು. ತೋಟಿ ಗಾರನೂ ತೋಟದ ಇತರ ಕಾವಲಿನನರೂ ಓಡಿ ಬಂದರು. ಪ್ರತಿ ಯೊಬ್ಬನ ಕೈಯಲ್ಲೂ ಗುದ್ದಲಿ, ಹಾಕೆ, ಸಲಿಕ್ಕೆ ಮಚ್ಚು, ಕುಡುಗೋಲು ಮುಂತಾದ ಆಯುಧನಿತ್ತು. ಅವರು ಬರುವ ಸದ್ದನ್ನೂ ಅವರು ಕೂಗುವ ಕೂಗನ್ನೂ ಕೇಳಿ ಕರಡಿ ಬಲವಾಗಿ ಒದ್ದಾಡಿ, ಕಡೆಗೆ ತಲೆಯನ್ನು ಬಿಡಿಸಿ ಕೊಂಡಿತು. ಅದರೆ ಬಿಡಿಸಿಕೊಳ್ಳುವುದರಲ್ಲಿ ತನ್ನ ಎರಡು ಕಿವಿಗಳ ಜೊತೆಗೆ ತಲೆಯ ಚರ್ಮದಲ್ಲಿ ಅರ್ಧದಷ್ಟನ್ನೂ ಕಳೆದುಕೊಂಡಿತು. ತೋಟಿದವರೆಲ್ಲಾ ಅದಕ್ಕೆ ಆಳಿಗೊಂದು ಏಟು ಹೊಡೆದರು. ಕರಡಿಗೂ ರೋಷ ಮಿತಿಮೀರಿತು. ಅದು ಆ ಗುಂಪಿನ ಮೇಲೆ ತಿರುಗಿಬಿದ್ದಾಗ ಅವರಲ್ಲಿ ಒಬ್ಬನು ಪಕ್ಕದ ನದಿಗೆ ಮಗುಚಿಕೊಂಡನು. ಅವನನ್ನು ಮೇಲೆತ್ತುವುದರಲ್ಲಿ ಮಿಕ್ಕವರು ಮಗ್ಗರಾಗಿದ್ದಾಗ, ಕರಡಿ ತಾನು ಬದುಕಿದುದೆ ಭಾಗ್ಯವೆಂದುಕೊಂಡು ಕಾಡಿಗೆ ಓಡಿಹೋಯಿತು. ಕರಡಿಯನ್ನು ಆ ಇರುಕಿನಲ್ಲಿ ಸಿಕ್ಕಿಸಿ ಹೋದ ರಾಯನರರಿ ಮನೆಗೆ ಹೋಗುವ ಮಾರ್ಗದಲ್ಲಿ ಒಂದು ಕೋಳಿ ಕದ್ದಿ ತು. ಅದನ್ನು ನದಿಯ ತೀರಕ್ಕೆ ತಂದು ತಿನ್ನು ತ್ತಾ ಕುಳಿತಿದ್ದಾಗ “ಕರಡಿಯೂ ಕಿವಿಗಳನ್ನು ಕಳೆದ ಕೊಂಡು ಅಲ್ಲಿಗೆ. ಬಂದಿತು. ನರಿ ಅದನ್ನು ಪುನಃ ಅಣಕಿಸುತ್ತಾ. ೬ ಏನು ಮಾವ? ಜೇನುತುಪ್ಪ ಚೆನ್ನಾಗಿತ್ತೆ? ತೋಟಗಾರ ಅದಕ್ಕೆ ಬೆಲೆ ಕೇಳಿದನೇನು? ಕಾಸುಕೊಡುವುದು ಮರೆತುಬಿಟ್ಟು ಕಿವಿಗಳನ್ನು ಕೊಟ್ಟಹಾಗಿದೆ! ನಿನ್ನ ಮೂಗನ್ನು ಮಾರಾಟಮಾಡುವುದಕ್ಕೂ ಜು ಇಷ್ಟ ಪಟ್ಟ ರೆ ಇನ್ನೊ ಎ ಕಡೆ ಕರೆದುಕೊಂಡು ಹೋಗುತ್ತೇನೆ” ಎಂದಿತು. ಕರಡಿಗೆ ಕೋಪದಿಂದ ಮಾತೇ ಹೊರಡಲಿಲ್ಲ. ರಾಜನಿಗೆ ಹೇಳಿ ನರಿಯನ್ನು ನಿರ್ಮೂಲಮಾಡಿಸುತ್ತೇನೆಂದು ಮನಸ್ಸಿನಲ್ಲಿಯೆ ಎಂದು ಕೊಂಡು, ಮಾತನಾಡದೆ ಕಾಡಿಗೆ ಹೋಯಿತು. ಕಾಡಿನಲ್ಲಿ ಯಾವ ಪ್ರಾಣಿಗೂ ಅದರ ಗುರುತೇ ಸಿಕ್ಕಲಿಲ್ಲ. ಇದು ಯಾವುದೋ ಹೊಸ ರಾಯನರಿ ೭೧ ಪ್ರಾಣಿಯೆಂದು ಎಲ್ಲಾ ಆಶ್ಚರ್ಯಪಟ್ಟಿವು. ಕಡೆಗೆ; ಅದು ತನ್ನ ಕಾಡಿನ ಕೂದಲುಕರಡಿಯೆಂದು ಸಿಂಹ ಗುರುತು ಹಿಡಿಯಿತು. “ ನಾನು ಕಳುಹಿಸಿದ ಕರಡಿಯನ್ನು ಹೀಗೆ ಅವಮಾನಪಡಿಸಿದವನು ಯಾರು?” ಎಂದು ಸಿಂಹ ಗರ್ಜಿಸಿತು. "ಬೇರೆ ಯಾರು, ಮಹಾಸ್ವಾಮಿ? ಆ ಪಾಪಿ, ರಾಯನರಿ!” ಎಂದು ಕರಡಿಯೆಂದಿತು. 4 ರಾಯನರಿಯನ್ನು ಹೇಗೆ ಶಿಕ್ಷಿಸಬೇಕೆಂದು ಸಿಂಹದ ಸಭೆಯಲ್ಲಿ ಪುನಃ ತುಂಬಾ 40 ಸಜ ಶಿಕ್ಷ ಸುವುದಕ್ಕೆ ಮೊದಲು ರಾಯನರಿ ತಮಗೆ ಕೈವಶವಾಗಬೇಕಾದುದರಿಂದ, ಮಸಡ ಹೇಗಾದರೂ ಯಾರಾದರೂ ಕರೆದುತರಬೇಕೆಂದು Ao ಈ ಎರಡ ನೆಯ ಸಲ ದೂತನಾಗಿ ಹೋಗುವ ಭಾರ ಕರಿಚೆಕ್ಕಿನ ಮೇಲೆ ಬಿತ್ತು, ರಾಯನರಿಯನ್ನು ಕರೆತರಲು ಬೆಕ್ಕು ಹೋಗಬೇಕೆಂದು ಎಲ್ಲಾ ಪ್ರಾಣಿಗಳೂ ಒಪ್ಪಿದರೂ, ಬೆಕ್ಕು ಎದು. ನಿಂತು, « ಮಹಾಪ್ರಭು! ನನಗಿಂತ ದೊಡ್ಡವರು ಯಾರನ್ನಾದರೂ “ಕಳುಹಿಸುವುದು ಮೇಲೆಂದು ನನಗೆ ತೋರುತ್ತದೆ. ನಾನೋ ಸಣ್ಣ ಪ್ರಾಣಿ, ಶಕ್ತಿ ಕಡಿಮೆ. ಕೂದಲು ಕರಡಿಯಂತಹೆ ಆಜಾನುಬಾಹುವಿಗೇ ಇಂತಹ ಅವಸ್ಥೆ ಯಾಗಿರುವಾಗ ನಾನು ಹೋಗಿ ಸಾಧಿಸಿಕೊಂಡು ಬರಲು ಹೇಗೆ ಸಾಧ್ಯ? ಎಂದಿತು. ಅದಕ್ಕೆ ಸಿಂಹವು “ ಮಹಾಮಾರ್ಜಾಲ್ಕ ನಿನ್ನ ದೇಹೆಬಲ ಕ್ಕೊ ಸ್ಪ ರ ನಿನ್ನ ನ್ನು ನಾವು ಕಳುಹಿಸುತ್ತಿಲ್ಲ. ನಿನ್ನ ಬುದ್ದಿಬಲಕ್ಕಾಗಿ ನಿನ್ನ ನ ಕಳುಹಿಸುತ್ತಿ ದ್ದೆ ವೆ” ಎಂದಿತು. ಕರಿಬೆಕ್ಕು ರಾಜನ ಮಾತಿಗೆ ಎದುರು ಹೇಳಲಾರದೆ “ಮಹಾ ರಾಜರ ಅಪ್ಪಣೆ ಹೇಗೋ ಹಾಗೆ ನಾನು ಸೇವಕ ನಡೆಯುತ್ತೇನೆ. ಪ್ರಭು ಗಳ ಪ್ರಭಾವದಿಂದ ನಾನು ಹೋದ ಕೆಲಸ ಕೃಗೂಡಬೇಕು >” ಎಂದು ಹೇಳಿ, ಕಾಡನ್ನು ಬಿಟ್ಟು ರಾಯನರಿಯ ಮನೆಗೆ ಹೊರಟಿತು. ೭೨ ರಾಯನರಿ ಕರಿಬೆಕ್ಕು ಬಂದಾಗ ರಾಯನರಿ ತನ್ನ ಮನೆಬಾಗಿಲಲ್ಲೆ ನಿಂತಿತ್ತು. " ನಮಸ್ಕಾರ, ರಾಯಣ್ಣ. ದೊರೆ ನಿನ್ನನ್ನು ಬರಹೇಳಿದ್ದಾನೆ. ಈ ಸಲವಾದರೂ ನೀನು ಬರದೆಹೋದರೆ ನಿನ್ನನ್ನು ಕಲ್ಲುಗಾಣದಲ್ಲಿ ಅರೆಸಿಬಿಡುತ್ತಾನೆ” ಎಂದು ಕರಿಬೆಕ್ಟು ತಿಳಿಸಿತು. ಅದಕ್ಕೆ ರಾಯನರಿ, “ ತಮ್ಮಯ್ಯ, ಅರಸನು ಆಜ್ಞೆ ಮಾಡಿದ ಮೇಲೆ, ನೀನು ಬಂದು ಕರೆದ ಮೇಲೆ, ನಾನು ಬರದೆ ಹೋದೇನೆ? ಆದರೂ, ಈಗತಾನೆ ಬಂದಿರುವೆ; ಸ್ಪಲ್ಪ ವಿಶ್ರಮಿಸಿಕೊ. ನನ್ನ ಈ ಬಡನುನೆಯ ಆತಿಥ್ಯವನ್ನು ಸ್ವೀಕರಿಸು. ಈ ರಾತ್ರಿ ಇಲ್ಲಿ ನಿಲ್ಲು. ನಾಳೆ ಬೆಳಗ್ಗೆ ಇಬ್ಬರೂ ಅರಸನ ಬಳಿಗೆ ಹೋಗೋಣ. ನಿನ್ನ ಜೊತೆಯಲ್ಲಿ ಬರಲು ನನಗೆ ಏನೂ ಹೆದರಿಕೆಯಿಲ್ಲ. ಆದರೆ ನೆನ್ನೆ ಆ ಕೂದಲುಕರಡಿ ಬಂದಿ ತ್ರಲ್ಲ--ಅದರ ಗದರುಮುಖಕ್ಕೆ ಹೆದರಿಕೊಂಡೇ ನಾನು ನೆನ್ನೆ ಬರಲಿಲ್ಲ. ಆದರೆ ನಿನ್ನೊಡನೆ ಬರುವುದಕ್ಕೆ ನನಗೇನು ಹೆದರಿಕೆ, ತಮ್ಮಯ್ಯ? ೆ ಎಂದು ನಯವಾಗಿ ಮಾತನಾಡಿತು. ಬೆಕ್ಕು ನರಿಯ ಮಾತಿಗೆ ಬೇಗ ಮರುಳಾಗಲಿಲ್ಲ. “ನೀನು ಬಹಳ ವಿಶ್ವಾಸದಿಂದ ನಿಲ್ಲಹೇಳಿದರೂ ಈಗಲೇ ಹೊರಡುವುದೇ ಮೇಲೆಂದು ನನಗೆ ಎನ್ಸಿಸುತ್ತದೆ. ಬೆಳದಿಂಗಳು ಬೇಕಾದ ಹಾಗಿದೆ, ಬಾ? ಎಂದಿತು. ಅದಕ್ಕೆ ನರಿ “ ರಾತ್ರಿಯಲ್ಲಿ ನಾಯಿಗಳ ಕಾಟ ಹೆಚ್ಚು. ಆದ್ದ ರಿಂದ ಹಗಲುಬೆಳಕಿನಲ್ಲಿಯೇ ಹೊರಡೋಣ” ಎಂದು ಬೆಕ್ಕಿನ ಮನ ಸ್ಪನ್ನು ಬದಲಾಯಿಸಿತು. ಬೆಕ್ಕು ಆ ರಾತ್ರಿ ಅಲ್ಲಿಯೆ ನಿಲ್ಲಲು ಒಪ್ಪಿತು. ನರಿ ಅದು ನಿಂತು ದಕ್ಕೆ ಸಂತೋಷಪಡುತ್ತ, “ ರಾತ್ರಿಯ ಊಟಕ್ಕೆ ನಿನಗೆ ಜೇನುತುಪ್ಪ ಆಗಬಹುದು ತಾನೆ?” ಎಂದು ಕೇಳಿತು. "ಜೇನು ಗೀನು ನನಗೆ ರುಚಿಸುವುದಿಲ್ಲ. ನನಗೆ ಇನ್ನೇನು ಇಲ್ಲ ದಿದ್ದರೂ, ಬೇಡ; ಒಂದು ಸಣ್ಣ ಇಲಿಯಮರಿ ಆದರೆ ಸಾಕು” ಎಂದು ಬೆಕ್ಕು ಹೇಳಿತು. ರಾಯನರಿ ೩೩ ಅದಕ್ಕೆ ರಾಯನರಿ, “ ಒಂದು ಇಲಿಯಮರಿಯೆ? ಇಲಿಗಳು, ಇಲಿ ಮರಿಗಳು, ಹೆಗ್ಗಣಗಳು--ಇವುಗಳ ಪ್ರಪಂಚವೇ ಇಲ್ಲಿದೆ. ಇಲ್ಲಿಂದ ಅರ್ಥ ಹರಿದಾರಿದೂರದಲ್ಲಿ ಒಂದು ಮನೆಯಿದೆ. ಅಲ್ಲಿರುವ ಇಲಿಗಳನ್ನು ತಿಂದು ಮುಗಿಸುವ ತಮ್ಮಯ್ಯ ಈ ಲೋಕದಲ್ಲೇ ಇಲ್ಲ” ಎಂದಿತು. ಬೆಕ್ಕಿನ ಬಾಯಿಯಲ್ಲಿ ನೀರು ಧಾರಾಕಾರವಾಗಿ ಸುರಿಯತೊಡ ಗಿತು. “ರಾಯಣ್ಣ, ಆ ಇಲಿಗಳ ಬಿಲ ತೋರಿಸು; ನಾನು ಸಾಯುವ ವರೆಗೂ ನಿನ್ನ ಗುಲಾಮನಾಗಿರುತ್ತೇನೆ. ನೀನು ನನ್ನ ತಾಯಿತಂದೆ ಬಂಧುಬಳಗವೆಲ್ಲವನ್ನೂ ಕೊಂದಿದ್ದರೂ ಸರಿಯೆ, ಆ ಇಲಿಗಳ ಬಿಲ ತೋರಿಸು; ನೀನು ಮಾಡಿದ್ದನ್ನೆಲ್ಲಾ ನಾನು ಮರೆತುಬಿಡುತ್ತೇನೆ” ಎಂದು ಬೇಡಿಕೊಂಡಿತು. ನರಿ ಅದನ್ನು ತಾನು ಹೇಳಿದ ಮನೆಗೆ ಕರೆದುಕೊಂಡುಹೋಯಿತು. ಆ ಮನೆಯ ಸುತ್ತ ಒಂದು ಸಣ್ಣ ಮಣ್ಣುಗೋಡೆ ಇತ್ತು. ಆ ಗೋಡೆಯಲ್ಲಿ ಒಂದು ಬಿಲವಿತ್ತು. ಹಿಂದಿನ ರಾತ್ರಿ ತಾನೆ ನರಿ ಆ ಮನೆಗೆ ಆ ಬಿಲದಿಂದ ನುಗ್ಗಿ ಒಂದು ಕೋಳಿ ಕದ್ದುಕೊಂಡುಹೋಗಿತ್ತು. ಕೋಳಿ ಕಳೆದು ಕೊಂಡುದರಿಂದ ಮನೆಯವನು ಸಿಟ್ಟಾಗಿ, ಕಳ್ಳನನ್ನು ಹಿಡಿಯಬೇಕೆಂದು ಬಿಲದ ಬಳಿ ಒಂದು ಬೋನು ಇಟ್ಟಿದ್ದನು. ಅದು ನರಿಗೂ ತಿಳಿದಿತ್ತು. ಆ ಬೋನಿನಲ್ಲಿ ಬೆಕ್ಕನ್ನು ಬೀಳಿಸಬೇಕೆಂದೇ ನರಿ ಅದನ್ನು ಕರೆದು ಕೊಂಡುಬಂದಿತ್ತು. ಬಿಲದ ಹತ್ತಿರ ಬಂದಾಗ, ನರಿ, “ತಮ್ಮಯ್ಯ, ಇದೊ ಈ ಬಿಲ ದೊಳಗೆ ಹೋಗು. ಬೇಕಾದಷ್ಟು ಇಲಿಗಳನ್ನು ಭಕ್ಷಿಸು. ಆದರೆ ಬಹಳ ಮಿತಿಮೀರಿ ತಿನ್ನಬೇಡ. ಬಿಲದಿಂದ ಹೊರಗೆ ಬರಲಾರದಷು ಮ್ಫೆ ದಪ್ಪನಾದೀತು. ಬೇಗ ಬಂದುಬಿಡು” ಎಂದು ಬೆಕ್ಕನ್ನು ಒಳಕ್ಕೆ ತಳ್ಳಿತು. ಬೆಕ್ಕೂ ಒಳಕ್ಕೆ ಹಾರಿತು. ಹಾರಿದೊಡನೆ ಬೋನಿನಲ್ಲಿ ಸಿಕ್ಕಿ ಬಿತ್ತು. ಬಿಡಿಸಿಕೊಳ್ಳಲು ಒದ್ದಾಡಿತ್ಕು ಕೂಗಾಡಿತು. ಮನೆಯವರಿಗೆಲ್ಲ ಎಚ್ಚರವಾಯಿತು. ಅವರು ತಮ್ಮ ಕೋಳಿಯ ಕಳ್ಳ ಸಿಕ್ಕಿತೆಂದು ಕೂಗುತ್ತಾ ಎದ್ದು ಬಂದರು. ೭೪ ರಾಯನರಿ ನರಿ ಮಾತ್ರ ಹೊರಗಡೆಯೆ ನಿಂತು, “ತಮ್ಮಯ್ಯ, ಇಲಿ ಚೆನ್ನಾ ಗಿದೆಯೆ? ನಿನಗೆ ತೃಷ್ತಿಯಾಯಿತೆ? ಊಟಮಾಡುವಾಗ ಸಂಗೀತವನ್ನೂ ಹೇಳುವುದು ನಿಮ್ಮವರ ಸಂಪ್ರದಾಯವೊ? ಆಗಲಿ, ಆಗಲಿ” ಎಂದು ಅಣಕಿಸುತ್ತಾ, ಮನೆಯವರು ಎದ್ದುಬಂದ ಸದ್ದು ಕೇಳಿ ತನ್ನ ಮನೆಗೆ ಓಡಿಹೋಯಿತು. ಬೆಕ್ಕಿನ ಕತೆ ಮುಗಿಯಿತೆಂದು ಅದು ಧೈರ್ಯ ದಿಂದಿತ್ತು. ಮನೆಯವರು ಬಂದಾಗ ಬೆಕ್ಕು ಬೆದರಿ ಒದ್ದಾಡಿತು. ಹತ್ತಿರ ಬಂದ ಮನೆಯ ಯಜಮಾನನನ್ನು ಚೆನ್ನಾಗಿ ಸರಚಿಬಿಟ್ಟಿ ತು. ಅವನು ಮೂರ್ಳತನಾದನು. ಅವನ ಉಪಚಾರದಲ್ಲಿ ಮಿಕ್ಕವರು ಮಗ್ಗ ರಾಗಿರುವಾಗ ಬೆಕ್ಕು ಹೇಗೆ ಹೇಗೋ ಮಾಡಿ ಬೋನಿನಿಂದ ತಪ್ಪಿಸಿ ಕೊಂಡಿತು. ಅದರ ಮೈಯೆಲ್ಲ ರಕ್ತಮಯವಾಗಿತ್ತು. ಅದರ ಒಂದು ಕಾಲು ಕೊಂಚ ಮುರಿದುಹೋಗಿತ್ತು. ಹಾಗೆಯೇ ಕುಂಟಕೊಂಡೇ ಕರಿಬೆಕ್ಕು ಕಾಡನ್ನು ಸೇರಿತು. ಕರಿಬೆಕ್ಕಿಗೆ ಆದ ಗತಿಯನ್ನು ಕಂಡು ಸಿಂಹೆದ ಸೈರಣೆ ಮಿತಿ ಮಾರಿತು. ತಾನೇ ಹೋಗಿ ರಾಯನರಿಯನ್ನು ಬೇಟೆಯಾಡಿ ಹಿಡಿದು ತರಬೇಕೆನ್ನುವಷ್ಟು ಸಿಟ್ಟು ಬಂದಿತು. ಆಗ ರಾಯನರಿಯ ಸಂಬಂಧಿ ಯಾದ ಮುದಿಹೋತ ಎದ್ದು, “ಮಹಾಸ್ವಾಮಿ, ಈ ಕೂದಲು ಕರಡಿ, ಕರಿ ಬೆಕ್ಕುಗಳ ಮಾತಿನ ಆಧಾರದ ಮೇಲೆ ರಾಯನರಿಯನ್ನು ಕುರಿತು ತೀರ್ಮಾನಕ್ಕೆ ಬರುವುದು ಬೇಡ. ಎರಡುಸಲ, ಬರಬೇಕೆಂದು ಅದನ್ನು ಕರೆದುದಾಯಿತು. ಇನ್ನೊಂದುಸಲ ಕರೆಯುವುದರಲ್ಲಿ ಏನು ನಷ್ಟ? ಮಹಾಸ್ವಾಮಿಯವರು ಅಪ್ಪಣೆ ಕೊಡುವುದಾದರೆ ಈ ಸಲ ರಾಯನರಿ ಯನ್ನು ಕರೆಯಲು ನಾನು ಹೋಗುತ್ತೇನೆ” ಎಂದು ಪ್ರಾರ್ಥಿಸಿತು. ಸಿಂಹೆವು ಹಾಗೆಯೇ ಆಗಲೆಂದು ಅದನ್ನು ಕಳುಹಿಸಿಕೊಟ್ಟಿ ತು. ಲ ಮುದಿಹೋತ ರಾಯನರಿಯ ಮನೆಗೆ ಬಂದಾಗ, ರಾಯನರಿ ತನ್ನ ಹೆಂಡತಿ ಮಕ್ಕಳೂಡನೆ ಆಟವಾಡುತ್ತಿತ್ತು. ಮುದಿಹೋತನನ್ನು ಕಂಡರೆ ರಾಯೆನರಿ ೭೫ ರಾಯನರಿಗೆ ಕೊಂಚ ವಿಶ್ವಾಸನಿತ್ತು. ಆದ್ದರಿಂದ ಅದನ್ನು ತನ್ನ ಮನೆಯೊಳಕ್ಕೆ ಕರೆದುಕೊಂಡುಹೋಗಿ ಕೂಡಿಸಿಕೊಂಡಿತು. ಆಗ ಮುದಿಹೋತ ನರಿಯ ಹೆಂಡತಿ ಮಕ್ಕಳನ್ನು ನಿಶ್ವಾಸದಿಂದ ಮಾತನಾಡಿಸಿ, ನರಿಯನ್ನು ಕುರಿತು “ಎರಡುಸಲ ಹೇಳಿಕಳುಹಿಸಿದರೂ ನೀನು ಬರಲಿಲ್ಲವೆಂದು ಸಿಂಹಕ್ಕೆ ಸಿಟ್ಟಾಗಿದೆ. ಪ್ರತಿ ಪ್ರಾಣಿಯೂ ನಿನ್ನ ಮೇಲೆ ಒಂದೊಂದು ದೂರು ಹೇಳುತ್ತಿದೆ. ನಿನ್ನನ್ನು ಕರೆಯುವುದಕ್ಕೆ ಬಂದಿರುವುದು, ಇದು ಮೂರನೆಯ ಸಲ. ನಿನಗೆ ನಾನು ಏನೂ ಬುದ್ಧಿ ಹೇಳಬೇಕಾಗಿಲ್ಲ. ಇನ್ನು ಒಂದು ದಿನ ನೀನು ತಡಮಾಡಿದರೂ ನಿನ್ನ ಜೀವಕ್ಕೆ ಅಪಾಯ. ಆದ್ದರಿಂದ ಈಸಲ ನನ್ನೊಡನೆ ಬಂದುಬಿಡು. ಬಂದು ನಿನ್ನ ಬುದ್ಧಿವಂತಿಕೆಯಿಂದ ನಿನ್ನ ಶತ್ರುಗಳ ಬಾಯಿಮುಚ್ಚೆ ನಿನ್ನ ಜೀವವುಳಿಸಿಕೊ” ಎಂದಿತು. ಅದಕ್ಕೆ ರಾಯನರಿ “ತಾತಯ್ಯ, ನೀನು ಹೇಳುವುದು ಸರಿ. ನಾನು ನಿನ್ನೊಡನೆ ಬರುತ್ತೇನೆ. ನನ್ನ ಮೇಲಿನ ದೂರುಗಳಿಗೆ ನಾನು ಏನೂ ಉತ್ತರ ಕೊಡಬೇಕಾಗಿಲ್ಲ. ಆದರೆ ರಾಜನ ಹಿತಕ್ಟ್ರೋಸ್ಕರ ಅವನ ಸುತ್ತಮುತ್ತಿನ ಚಾಡಿಕೋರರನ್ನು ಓಡಿಸುವುದಕ್ಕಾಗಿ ಬರುತ್ತೇನೆ. ನನಗೆ ಎಷ್ಟೋ ಜನ ಶತ್ರುಗಳು ಇದ್ದಾರೆ. ಆದರೆ ನನ್ನನ್ನು ಅವರು ಏನು ಮಾಡಿಯಾರು?” ಎಂದು ತನ್ನ ಹೆಂಡತಿಯ ಕಡೆ ತಿರುಗಿ, ಮಕ್ಕಳನ್ನು ಜೋಪಾನವಾಗಿ ನೋಡಿಕೊ. ಕೊನೆಯ ಮರಿಯ ನಾಯಿಕೆಮ್ಮಲಿಗೆ ಏನಾದರೂ ಔಷಧಮಾಡು. ಜೋಪಾನ?” ಎಂದು ಹೇಳಿ ಹೊರಟಿತು. ರಾಯನರಿ ಮುದಿಹೋತನೊಡನೆ ಅರ್ಧದಾರಿ ನಡೆದು ಆದಾಗ್ಯ ಅಲ್ಲೆ ನಿಂತು, “ಅಜ್ಜ, ಅಜ್ಜ, ನನಗೆ ಹೆದರಿಕೆಯಾಗುತ್ತಿದೆ. ನಿಜವಾಗಿ ನಾನು ಎಷ್ಟೋ ಪ್ರಾಣಿಗಳಿಗೆ ಅನ್ಯಾಯಮಾಡಿದ್ದೇನೆ. ಮೊನ್ನೆತಾನೆ ಕೂದಲುಕರಡಿ ಕಿವಿಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ನೆನ್ನೆ ಕರಿಬೆಕ್ಕನ್ನು ಬೋನಿನಲ್ಲಿ ಸಿಕ್ಕಿಸಿದೆ. ಕೆಂಪುಹುಂಜಕ್ಕೂ ಅದರ ಮಕ್ಕಳಿಗೂ ಅಪಾರವಾದ ಹಾನಿ ಮಾಡಿದೆ. ಇದನ್ನೆಲ್ಲಾ ಜ್ಞಾನಿಸಿ ಆ ಬ್ಯ ಕೊಂಡರೆ, ದೊರೆಯ ಮುಂದೆ ಬರುವ ಧೈರ್ಯ ನನಗೆ ಇಲ್ಲ” ಎಂದಿತು. ೭೬ ರಾಯನರಿ ಪುನಃ, “ಆದರೆ ಎಲ್ಲಾ ಪ್ರಾಣಿಗಳಿಗಿಂತಲೂ ನಾನು ತೋಳಕ್ಕೆ ಹೆಚ್ಚು ತೊಂದರೆ ಕೊಟ ಸದ್ದೇ. ES ಗಂಟಿ ಬಾರಿಸುವುದನ್ನು ಹೇಳಿಕೊಡುತ್ತೇನೆಂದು ಅದರ ಕತ್ತಿಗೆ ದೊಡ್ಡ ಗಂಟಿ ಕಟ್ಟಿದೆ. ಅದರ ಸದ್ದು ಕೇಳಿ ಊರವರೆಲ್ಲ ಬಂದು ಅದನ್ನು ಸಾಯಬಡಿದರು. ಇನ್ನೊಂದು ಸಲ ಅದನ್ನು ಕೋಳಿ ಕದಿಯುವುದಕ್ಕೆ ಕರೆದುಕೊಂಡುಹೋಗಿದ್ದೆ. "ನಾನು ಕೋಳಿಯನ್ನು ತರುತ್ತೇನೆ. ಅದುವರೆಗೆ ನೀನು ಇಲ್ಲಿ ಮಲಗಿ ವಿಶ್ರಮಿಸಿಕೊ' ಎಂದು ಹೇಳಿ, ನಾನು ತಿಂದ ಕೋಳಿಯ ಮೂಳೆಗಳನ್ನು 8 ಮುಂದೆ ರಾಶಿಮಾಡಿ, ಮನೆಯವರು ಎಚ್ಚ ರಗೊಳ್ಳು ವಂತೆ ಗಲಾಟೆ ಮಾಡಿಜಿ. ಮನೆಯವರು ಎದ್ದುಬಂದು ತೋಕಕ್ಕೆ ಜತ ಸುಲಿದು ಬಿಟ್ಟ ರು. ಇನ್ನೂ ಮೂರುನಾಲ್ಕು ಸಲ ಹೀಗೆಯೇ ಅದನ್ನು ಕಷ್ಟ ಕ್ರೈ ಕೆಡನಿದ್ದೇನೆ' ಚ ಹೇಳಿಕೊಂಡು ನಿಟ್ಟುಸಿರುಬಿಟ್ಟ ತು. ಕಡೆಗೆ “ತಾತಯ್ಯ, ನಾನು ಮಾಡಿದ ಪಾಪಕಾರ್ಯಗಳನ್ನೆಲ್ಲಾ ನಿನಗೆ ತಿಳಿಸಿದ್ದೇನೆ. ಇದಕ್ಕೆ ತಕ್ಕ ಪ್ರಾಯಶ್ಚಿತ್ತ ಏನು, ಹೇಳು?” ಎಂದು ಕೇಳಿತು. ನರಿಯನ್ನು ಬೈಯುವುದರಿಂದ ಏನೂ ಕಾರ್ಯಸಾಧನೆಯಾಗುವು ದಿಲ್ಲವೆಂದು ಹೋತನಿಗೆ ಗೊತ್ತಿತ್ತು. ಉಪಾಯದಿಂದಲೇ ಅದನ್ನು ಒಲಿಸಬೇಕೆಂದುಕೊಂಡು, “ಅಪ್ಪ, ಇದೊ ಈ ಹುಲ್ಲೆಸಳು ತೆಗೆದುಕೊ. ಇದರಿಂದ ಮೂರುಸಲ ನಿನ್ನ ಮೈ ಮುಟಿ ಕೊ. ಅನಂತರ ಇದನ್ನು ನೆಲದ ಮೇಲಿಟ್ಟು ಮೂರುಸಲ ದಾಟು. ಕಡೆಗೆ ಅದಕ್ಕೆ ಬಂದು ನಮಸ್ಕಾರ ಹಾಕು” ಎಂದಿತು. ಸಂತೋಷದಿಂದ ನರಿ ಹೋತ ಹೇಳಿದ ಪ್ರಾಯಶ್ಚಿತ್ತವನ್ನು ಮಾಡಿತು. ಆಗ ಹೋತ, “ಇನ್ನಾದರೂ ಮುಂದೆ ಹೊಸ ಪಾಪ ಕಾರ್ಯಗಳನ್ನು ಮಾಡದ ಹಾಗೆ ಎಚ್ಚರದಿಂದಿರು” ಎಂದು ಬುದ್ಧಿ ಹೇಳಿತು. ನರಿ ಹಾಗೆಯೇ ನಡೆದುಕೊಳ್ಳುವೆನೆಂದು ಪ್ರಮಾಣಮಾಡಿತು. ಆದರೆ ಹೋಗುವ ದಾರಿಯಲ್ಲಿ ಒಂದು ಕೊಬ್ಬಿದ ಕೋಳಿಮರಿಯ ಮೇಲೆ ರಾಯನರಿಯ ಕಣ್ಣು ಬಿತ್ತು. ರಾಯನರಿಯೇನೋ ಮಿಂಚಿ ನಂತೆ ಹಾರಿತಾದರೂ ಕೋಳಿ ತನ್ಪಿಸಿಕೊಂಡಿತು. ಹೋತದ ಮುಖ ರಾಯನರಿ ಕೇ ನೋಡಲಾರದೆ ರಾಯರರಿ ನಾಚಿಕೆಯಿಂದ ತಲೆತಗ್ಗಿ ಸಿಕೊಂಡಂತೆ ಮುಂದೆ ಹೋಯಿತು. ದಾರಿಯಲ್ಲಿ ಒಬ್ಬರೂ ಮಾತನಾಡಲಿಲ್ಲ. ೫ ಸಿಂಹ ಸಭೆ ನಡಸುತ್ತಿದ್ದ ಸ್ಥಳಕ್ಕೆ ಹೆತ್ತಿರ ಬಂದಂತೆಲ್ಲಾ ರಾಯ ನರಿಯ ಹೆದರಿಕೆ ಹೆಚ್ಚಾಯಿತು. ನಿಜವಾಗಿಯೂ ಅದರ ನಾಲ್ಕೂ ಕಾಲು ನಡುಗುತ್ತಿತ್ತು. ತಾನು ಮಾಡಬಾರದ ಪ ಪಾಪಗಳನ್ನೆಲ್ಲ ಮಾಡಿ ರುವೆನೆಂದು ಅದರ ಎದೆ ಹೊಡೆದುಕೊಳು ತ್ತಿತ್ತು. ಘಮ್‌ ಮುದಿಹೋತ ರಾಯನರಿಯನ್ನು ಕರೆದುಕೊಂಡು ಬಂದಿತೆಂಬ ಸುದ್ದಿ ಕಾಡುಕಿಚ್ಚಿ ನಂತೆ ಮೃಗಗಳಲ್ಲಿ ಹಬ್ಬಿ ಕೊಂಡಿತು. ಸಣ್ಣ ಪ್ರಾಣಿ ಗಳಿಂದ ದೊಡ್ಡ ಪ್ರಾಣಿಗಳ ವರೆಗೆ ಎಲ್ಲವೂ ರಾಯನರಿಯ ಮೇಲೆ ದೊರೆಗೆ ದೂರು. ಹೇಳಲು ಸಿದ್ಧವಾಗಿ ಬಂದುವು. ರಾಯನರಿ ಅವುಗಳ ನಡುವೆ ತಲೆಯೆತ್ತಿಕೊಂಡೇ ಬಂದಿತು. ಇಷ್ಟು ಧೈರ್ಯವಾಗಿ ಬರುತ್ತಿರುವುದರ ಮೇಲೆ ಹೇಗೆ ತಾನೆ ದೂರು ಹೇಳು ವುಜಂದು ಮಿಕ್ಕ ಪ್ರಾಣಿಗಳೇ ಸಂಕೋಚಪಡುವಂತೆ ಠೀವಿಯಿಂದ ಬಂದಿತು. ಕ ಮೃಗರಾಜನ ಪೀಠದ ಮುಂದೆ ನಿಂತು ನಮಸ್ಕಾರ ಮಾಡಿ, “ಮಹಾಪ್ರಭು, ನಾನು ತಮ್ಮ ಪಾದಸೇವಕನೆಂದು ಬಿನ್ನವಿಸು ತ್ತೇನೆ. ತಮ್ಮ ಸೇವೆಯೇ ಸದಾ ನನ್ನ ಸ್ಮರಣೆಯಲ್ಲಿದ್ದರೂ ನನ್ನ ಮೇಲೆ ಇಲ್ಲಸಲ್ಲದುದನ್ನು ಹೇಳಿ ನನ್ನ ನಾಶಕ್ಕೆ ಹಾತೊರೆಯುತ್ತಿರುವ ಅನೇಕ ಪ್ರಾಣಿಗಳು ಇಲ್ಲಿನೆ. ಆದರೆ ಮಹಾಸ್ವಾಮಿಯವರು ಅವರ ಜಾಡಿ ಮಾತುಗಳಿಗೆ ಕೆನಿಗೊಡುವುದಿಲ್ಲನೆಂದು ನಾನು ಥ್ಛರ್ಯವಾಗಿದ್ದೇನೆ” ಎಂದು ಮೊದಲುಮಾಡಿತು. ಆದರೆ ಸಿಂಹ ಅದರ ಮಾತು ಮುಂದುವರಿಯಲು ಅವಕಾಶ ಕೊಡಲಿಲ್ಲ. “ಮುಚ್ಚುಬಾಯಿ, ಮೋಸಗಾರ. ಮಿಕ್ಕ ಪ್ರಾಣಿಗಳಿಗೆ ಮೋಸ ಮಾಡಿದಂತೆ ನನಗೂ ಮೋಸಮಾಡಬಹುದೆಂದು ತಿಳಿದಿರುವೆ ಯೇನು? ನಿನ್ನ ಮೋಸಕ್ಕೆ ನಾವು ಒಳಗಾಗುವವರಲ್ಲವೆಂದು ನಿನಗೆ ತಿಳಿ ದಿರಲಿ. ನಾನು ಕಾಡಿನ ಪ್ರಾಣಿಗಳಿಗೆ ನೀಡಿರುವ ಅಭಯವನ್ನು ನೀನು ೭೮ ರಾಯನರಿ ಹೆಜ್ಜೆ ಹೆಜ್ಜೆಗೂ ಮುರಿದಿರುನೆ. ಕಪಟ, ನನ್ನ ಆಜ್ಞೆ ಗೆ ವಿರುದ್ಧ ನಾಗಿ ನನ್ನ ಪ್ರಜೆಗಳನ್ನು ಪೀಡಿಸುವ ನೀನು ನನ್ನ ಸೆ ಸಾಡುವನಸೆಂದರೆ ಹೇಗೆ ಒಪ್ಪೀತು?” ಎಂದು ರೇಗಿತು. ನರಿ ತನ್ನ ತಪ್ಪನ್ನು ಕಳೆದುಕೊಳ್ಳುವುದಕ್ಕಾಗಿ "ಸಾರ್ವಭೌಮ, ನಿನ್ನ ಪ್ರಜೆಗಳನ್ನು ನಾನು ಬುದ್ಧಿ ಪೂರ್ವಕವಾಗಿ ಹೀಡಿಸಿಯೇನೆ? ನೀನು 'ದೂಶಕಾರ್ಯಕ್ಕಾಗಿ ಕಳುಹಿಸಿದ ಕರಡಿ ತನ್ನ ಕರ್ತವ್ಯವನ್ನು ಮರೆತು ತೋಟಗಾರನ ಜೇನನ್ನು ಕದಿಯುವುದಕ್ಕೆ ಹೋಗಿ ಕಿವಿಗಳನ್ನು ಕಳೆದು ಕೊಂಡದ್ದು ನನ್ನ ತಪ್ಪೆ? ಅದರಂತೆಯೇ ಬಂದ ಬೆಕ್ಕು ಕೂಡ್ಕ ಬೇಡ ಬೇಡವೆಂದು ಎಷ್ಟು ಬೇಡಿಕೊಂಡರೂ ಇಲಿ ಹಿಡಿಯುವುದಕ್ಕೆ ಹೋಗಿ, ಸಿಕ್ಕಿಬಿದ್ದು, ಕಾಲು ಮುರಿದುಕೊಂಡರೆ, ಅದಕ್ಕೆ ನಾನೇ ಹೊಣೆ? ವನ ರಾಜ, ನೀನೋ ಸ್ವಾಮಿ; ನಾನೋ ಸೇವಕ. ನಿನ್ನ ಕರುಣೆಯಿಂದ ನಾನು ಬದುಕಬೇಕಲ್ಲದೆ ನನಗೆ ಬೇರೆ ಬಲವಿಲ್ಲ. ಸರ್ವಸಮರ್ಥನಾದ ನೀನು ನನ್ನನ್ನು ನಿನುಬೇಕಾದರೂ ಮಾಡಬಹುದು. ಹಾಲಲದ್ದು, ನೀರಲದ್ದು. ನನ್ನ ಜೀವ ನಿನ್ನ ಕೈಯಲ್ಲಿದೆ? ಎಂದಿತು. ನರಿಯ ಮಾತಿಗೆ ಸಿಂಹೆವು ಉತ್ತರ ಕೊಡುವ ಮೊದಲೇ ಕರಡಿ, ಬೆಕು, ತೋಳ, ಮೊಲ, ಕಿರುಬ, ಹೆಂದಿ, ಒಂಟಿ, ಕೋಣ ಮೊದಲಾದ ಅನೇಕ ಪ್ರಾಣಿಗಳು ತಮ್ಮತಮ್ಮ ಸರಿವಾರಸಮೇತವಾಗಿ ಬಂದು ರಾಯ ನರಿಗೆ ಶಿಕ್ಷೆಯಾಗಿಯೇ ತೀರಬೇಕಂದು ಮೊರೆಯಿಟ್ಟಿ ವು. ಸಿಂಹವು ಅವುಗಳ ಮೊರೆಗೆ ಕಿವಿಕೊಟ್ಟು ರಾಯನರಿಯನ್ನು ವಿಚಾರಣೆಗೆ ಗುರಿ ಪಡಿಸಿತು. ಸಿಂಹೆ ಆರಿಸಿದ ಪ್ರಾಣಿಗಳೆಲ್ಲ ಸೇರಿ, ರಾಯನರಿಯ ಮೇಲಿನ ಆರೋಪಣೆಗಳನ್ನೆಲ್ಲಾ ಸಂತತ ಕೊನೆಗೆ ರಾಯನರಿಗೆ ಮರಣ ದಂಡನೆಯನ್ನು ವಿಧಿಸಲಾಯಿತು. ಕುತ್ತಿಗೆಗೆ ಹೆಗ್ಗ ಬಿಗಿದು ಜೀವ ಹೋಗುವವರೆಗೆ ಅದನ್ನು ನೇತುಹಾಕಬೇಕೆಂದು ತೀರ್ಮಾನವಾಯಿತು. ಆಗ ರಾಯನರಿಯನ್ನು ವಿಶ್ವಾಸದಿಂದ ಕಾಣುತ್ತಿದ್ದ ಮುದಿ ಹೋತನೇ ಮೊದಲಾದ ಕೆಲವು ಪ್ರಾಣಿಗಳು ಅದರ ಅಂತ್ಯಕಾಲವನ್ನು ರಾಯನರಿ ೭೯ ನೋಡಲಾರದೆ ಸಿಂಹದ ಸಭೆಯಿಂದ ಎದ್ದು ಹೋದುವು. ಅಷ್ಟು ಪ್ರಾಣಿ ಗಳು ತನ್ನ ಸಭೆಯನ್ನು ಬಿಟ್ಟು ಹೋದುದನ್ನುನೋಡಿ, ರಾಯನರಿಯನ್ನು ಕೊಲ್ಲಲು ಸಿಂಹವೂ ಕೊಂಚ ಹಿಂದುಮುಂದು ನೋಡಿತು. ಆದರೂ ಕಡೆಗೆ ರಾಯನರಿಗೆ ಮರಣದಂಡನೆಯೇ ಸ್ಪಿರವಾಯಿತು. ತೋಳವೂ ಕರಡಿಯೂ ಸೇರಿ ರಾಯನರಿಯನ್ನು ವಧ್ಯಸ್ಥಾನಕ್ಕೆ ಕರೆದೊಯ್ದುವು. ಕತ್ತಿಗೆ ಬಿಗಿಯುವ ಹಗ್ಗವನ್ನು ಹಿಡಿದುಕೊಂಡು ಕರಿ ಬೆಕ್ಳು ಮುಂದೆ ಓಡಿತು. ರಾಜನೂ ರಾಣಿಯೂ ಪರಿವಾರದವರೂ ವಧ್ಯಸ್ಥಾನದ ಮುಂದಿ ತಮಗಾಗಿ ಏರ್ಪಡಿಸಿದ್ದ ಪೀಠಗಳಲ್ಲಿ ಕುಳಿತರು. ಛ ೬ ರಾಯನರಿಯ ಕುತ್ತಿಗೆಗೆ ನೇಣು ಸಿದ್ದವಾಯಿತು. ಆದರೂ ರಾಯನರಿ ನಿರಾಶೆಸಡಲಿಲ್ಲ. ಏನಾದರೂ ಉಪಾಯಮಾಡಿ ಈ ಗಂಡಾಂತರದಿಂದಲೂ ಪಾರಾಗುವೆರೆಂದು ಯೋಟಿಸಿ, “ಮೃಗರಾಜ, ನನ್ನ ಸಾವು ಸಮೀಪವಾಯಿತು. ನನ್ಸಿಂದ ಇನ್ನು ಯಾವ ಪ್ರಾಣಿಗೂ ಏನೂ ತೊಂದರೆಯಾಗುವುದಿಲ್ಲ... ನಾಳೆಯಿಂದ ಎಲ್ಲರೂ ನಿಶ್ಚಿಂತೆ ಯಿಂದಿರಬಹುದು. ನಾನು ಸಾಯುವುದಕ್ಕೆ ಹೇಗೂ ಸಿದ್ಧನಾಗಿದ್ದ £ನೆ. ಸಾಯುವುದಕ್ಕೆ ಮೊದಲ್ಕು ನನ್ನ್ನ ಮನಸ್ಸಿನಲ್ಲಿ ಇದುವರೆಗೆ ಮುಚ್ಚಿ ಟ್ಟಿದ್ದ ಹಲವು ಮಾತುಗಳನ್ನಾಡಲು ಅಪ್ಪಣೆ ಕೊಡಬೇಕೆಂದು ಬೇಡು ತ್ತೇನೆ” ಎಂದಿತು. ರಾಜನ ಅಪ್ಪಣೆ ಪಡೆದು, "ಸಾಯುವವನ ಬಾಯಲ್ಲಿ ಸುಳ್ಳು ಬರ ಬಾರದು, ಮಹಾಸ್ವಾಮಿ. ಆದುದರಿಂದ ಇದ್ದುದನ್ನು ಇದ್ದಂತೆ ಹೇಳು ತ್ತೇನೆ. ಚಿಕ್ಕಂದಿನಲ್ಲಿ ನಾನು ಹಸುವಿನಂತೆ ಸಾಧುವಾಗಿದ್ದೆ. ಕುರಿಮರಿ ಗಳೂಡನೆ ಕುರಿಮರಿಯಂತೆಯೇ ಕುಣಿದಾಡುತ್ತಿದ್ದೆ. ಆದರೆ ಒಂದು ದಿನ ಆಟಕ್ಕಾಗಿ ಒಂದು ಮರಿಯನ್ನು ಕಚ್ಚಿದೆ. ರಕ್ತದ ರುಚಿ ನಾಲಗೆಗೆ ಹತ್ತಿತು. ಅಲ್ಲಿಂದ ಮುಂದೆ ಕುರಿಯನ್ನು ಕಂಡರೆ ಕಚ್ಚುವ ಅಭ್ಯಾಸ ಬಿದ್ದಿತು. ಕುರಿಯಿಂದ ಪ್ರಾರಂಭವಾದ ಈ ಚಾಳಿ ಕೋಳಿ, ಮೊಲ್ಕ ಮೀನು ಅಳಿಲು ಮುಂತಾದವುಗಳಿಗೂ ಮುಂದುವರಿಯಿತು. ಇದು ಲಂ ರಾಯನರಿ ಕ್ಕೇ ನಿಂತಿದ್ದರೆ ನಾನು ಬದುಕಿಕೊಳ್ಳುತ್ತಿ ದ್ವಿ. ಈ ತೋಳದ ಸ್ನೇಹ ಇನ್ನ "ನಗೆ ತೊಡಗಿತೋ ಅಂದಿನಿಂದ ನನ್ನ “ತನ ಸಿ SN ಅದನ್ನು ಈಗ ಹೇಳಿಕೊಂಡು ಏನೂ ಪ್ರಯೋಜನವಿಲ್ಲ. ನಾನಂತೂ ಸಾಯುವೆನು. ತೋಳವನ್ನೇಕೆ ಬೈಯಲಿ? ಆದರೂ ಈ ತೋಳ ನನಗೆ ಪ್ರೋತ್ಸಾಹ ಕೊಡದೆ ಇದ್ದಿದ್ದರೆ ನಾನು ಕಳ್ಳತನ ಕೊಲೆಗಳಿಗೆ ಇಳಿಯು ತ್ರಲೇ ಇರಲಿಲ್ಲ. ನನಗೇನು ಚಿನ್ನ ಬೆಳ್ಳಿಗಳಿಗೆ ಕೊರತೆಯೆ? ಮುತ್ತು ಮಾಣಿಕಕ್ಕೆ ದರಿದ್ರವೆ? ನನಗೇನು ಕಡಿಮೆ? ಈ ತೋಳದ ಮಾತು ಕೇಳಿಕೊಂಡು ನಾನು ಈ ಗತಿಗೆ ಬಂದುದಾಯಿತು?' ಎಂದು ನಿಟ್ಟುಸಿರು ಬಿಟ್ಟಿ ತು. ರಾಯನರಿ ಚಿನ್ನ, ಬೆಳ್ಳಿ, ಮುತ್ತು, ಮಾಣಿಕಗಳ ಮಾತನ್ನು ಎತ್ತಿದಾಗ ಸಿಂಹದ ಕಿವಿ ನೆಟ್ಟ ಗಾಯಿತು. "ರಾಯನರಿ, ಈ ನಿನ್ನ ಐಶ್ವರ್ಯವೆಲ್ಲ ಎಲ್ಲಿದೆ? ” ಎಂದು ಬಾಯಿಬಿಟ್ಟು ಕೊಂಡು ಕೇಳಿತು. ರಾಯನರಿ ಅದರ ಪ್ರಶ್ನೆಗೆ ನೇರನಾದ ಉತ್ತರ ಕೊಡದೆ, "ಐಶ್ಚರ್ಯವೆಂದರೆ ನಾನು ಸಂಪಾದಿಸಿದುದಲ್ಲ, ನಾನು ಕದ್ದುದು. ಆದರೂ ನಾನು ಅದನ್ನು ಕದಿಯದಿದ್ದಿದ್ದರೆ ಮಹಾಸ್ವಾಮಿಯವರ ಜೀವಕ್ಕೆ ಅಪಾಯವಾಗುತ್ತಿತ್ತು” ಎಂದಿತು. ತನ್ನ ಗಂಡನ ಜೀವಕ್ಕೆ ಅಪಾಯವಾಗುತ್ತಿತ್ತೆಂಬ ಸುದ್ದಿ ಕೇಳಿ ಕಾತರಳಾಗಿ ಸಿಂಹಿ "ರಾಯನರಿ, ನೀನು ಹೇಳಿದುದೇನು? ವಿಶದ ಪಡಿಸು'' ಎಂದು ಆಜ್ಞೆಮಾಡಿತು. ಸಿಂಹೆವೂ ಅದಕ್ಕೆ ಮಾತನಾಡಲು ಅಫ್ಸಣೆ ಕೊಟ್ಟಿತು. ರಾಯರರಿ ಕಣು ನ್ಸ್ಸ ಒರಸಿಕೊಳ್ಳುತ್ತ ""ಸಾಮ್ರಾಜ್ಞಾ, ನಾನು ಏನು ಹೇಳಲಿ! ನಮ್ಮ ಸಾಮ್ರಾ ಟನನ್ನು ಕೊಲ್ಲಲು ಅವನ ಸ್ವಂತ ಪ್ರಜೆಗಳೆ ಪ್ರಯತ್ನಿಸುತ್ತಿದ್ದರು. ಈ ಪ್ರಯತ್ನ ದಲ್ಲಿ ನನ್ನ EA ಸೇರಿದ್ದ ನೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ. ಆದರೆ ರಾಜ ಭಕ್ತಿಯ ಮುಂದೆ ಹಿತೃಭಕ್ತಿ ಅಷ್ಟೇನೂ ದೊಡ್ಡದಲ್ಲ. ನಾನು ಹೇಳಿದ ಐಶ್ವರ್ಯ ನನ್ನ ತಂದೆಗೆ ನೆಲದಲ್ಲಿ ಸಿಕ್ಕಿತು. ಅದು ಸಿಕ್ಕಿದೊಡನೆ ರಾಯನರಿ ೪೧ ಅವನಿಗೆ ತಲೆ ತಿರುಗಿತು. ತನ್ನಷ್ಟು ದೊಡ್ಡ ಪ್ರಾಣಿ ಕಾಡಿನಲ್ಲಿ ಬೇರಾವುದೂ ಇಲ್ಲವೆಂದು ಅವನು ಭಾವಿಸತೊಡಗಿದನು. ತನಗೆ ಸಿಕ್ಕಿದ ಐಶ್ವರ್ಯದಿಂದ 60 ದೊಡ್ಡ ಸ್ಥೆ ಸೈನ್ಯವನ್ನು ಸಿದ್ಧ ಗೊಳಿಸಿ, ಮೃ ಸ ಸಿಂಹವನ್ನು ಕೊಂದು, ಈ ರ ಪಟ್ಟ ಕಟ್ಟಿ ಬೇಕೆಂದು ನನ್ನ ತಂದೆ ಇಲ್ಲಿ ನಿಂತಿರುವ ಮುದಿಹೋತ, ಕರಿಬೆಕ್ಕು ತ್ಯ ಕಿರುಬ ಗಳೊಡನೆ ಮಂತ್ರಾಲೋಚನೆ ಮಾಡಿದನು. ಅವನೇನೋ ತಾನು ಯೋಚಿಸಿದ್ದಂತೆಯೇ ನಡೆಸಿ ಬಿಡುತ್ತಿದ್ದನು. ಆದರೆ ಆ ಆಲೋಚನೆ ಯನ್ನು ಮುದಿಹೋತ ತನ್ನ ಹೆಂಡತಿಗೆ ತಿಳಿಸಿತು. ಅದು ನನ್ನ ಹೆಂಡತಿಗೆ ತಿಳಿಸಿತು. ಅದರಿಂದ ನಾನು ಸಕಾಲದಲ್ಲಿ ತಿಳಿದೆ. ಮಹಾಸ್ತಾಮಿಯವರ ಮೇಲಿನ ಪ್ರೀತಿಗೌರವಗಳಿಂದ ನಾನು ಈ ಪ ಪ್ರಯತ್ನವನ್ನು ಹೇಗಾದರೂ ಮುರಿಯಬೇಕೆಂದು ಸದಾ ಮೂರುಕಾಲವೂ ನನ್ನ ತಂದೆಯನ್ನು ಹಿಂಬಾಲಿಸುತ್ತಿ ದ್ದಿ. ಅವನು ಐಶ್ವರ್ಯವನ್ನು ಹೂತಿಟ್ಟ ದ್ಚಸ್ನ ಕಳ ಒಂದು ದಿನ ನನಗೆ ಗೊತ್ತಾ ಯಿತು. ಆಗ pa ನನ್ನ ಹೆಂಡತಿ ಜಾ "ಯಾರಿಗೂ ಗೊತ್ತಿಲ್ಲದಂತೆ ರಾತ್ರಿಯೆಲ್ಲಾ ಕೆಲಸ ಮಾಡಿ ಆ ಇಶ್ವರ್ಯವಷ್ಟನ್ನೂ ಬೇರೆ ಕಡೆಗೆ ನಾಗಿಸಿಟ್ಟೆವು. ಆವೇಳೆಗೆ ನನ್ನ ತಂಡೆ” ಸ್ಪ ನೃವನ್ನೆಲ್ಲಾ ಸಿದ್ಧಪಡಿಸಿಕೊಂಡು, ಅದಕ್ಕೆ ಸಂಬಳ ಕೊಡಬೇಕೆಂದು ಶಾನು ಐಶ್ವರ್ಯ ವನ್ನು ಹೊಳಿಟ್ಟಿದ್ದಸ್ಥೆ ಸ್ಥಳಕ್ಕೆ ಬಂದನು. ಬಂದು, ಅಲ್ಲಿ ಏನೂ ಕಾಣಿಸದೆ ಬಹುವಾಗಿ ದುಃಖಪ ಟ್ವನು. ಕಡೆಗೆ ದುಃಖವನ್ನು "ತಾಳಲಾರದೆ ನೇಣು ಹಾಕಿಕೊಂಡು ಸತ ನು ಹೀಗೆ, ಮಹಾಸ್ತಾ ಬ ತಕ ಜೀವವನ್ನು ಉಳಿಸುವುದಕ್ಕೊ (ಸ್ಮರ ನಾನು ನನ್ನ ತಂದೆಯ ಸಾವಿಗೆ ಕ ಕ ನನ್ನ ತಂದೆ ಕಟ್ಟ 1 ಮಾಡಿದುದಕ್ಕೆ ಸತ್ತರೆ, ನಾನು ಒಳ್ಳೆ ಯ ಕೆಲಸ ಸ ಜಬ ಇನ್ನು ಹೆಚ್ಚು ಹೇಳಿ ಏನು ಪ್ರಯೋಜನ? ನಾನು ಸಾವಿಗೆ ಸಿದ್ದನಾಗಿದ್ದೇನೆ, ಮಹಾಸ್ವಾಮಿ” ಎಂದಿತು. ನರಿಯ ಗುಣಾಕಾರ ಸರಿಯಾಗಿತ್ತು. ನರಿಯನ್ನು ಕೊಲ್ಲುವ ಬದಲು ನಯವಾಗಿ ಅದರ ಐಶ್ವರ್ಯವನ್ನು ಅಸಹೆರಿಸಬೇಕೆಂದು ಸಿಂಹ ಲೆಕ್ಕಾ ಚಾರಮಾಡಿ, ಅದನ್ನು ಹತ್ತಿರ ಕರೆದು, “ ರಾಯನರಿ, ನಿನ್ನಂತಹೆ 6 ಟಿ ರಾಯನರಿ ನರಿಯ ಮಾತಿಗೆ ಕಾಸಿನ ಬೆಲೆ ಕೂಡ ಕೊಡಬಾರದು. ಆದರೂ ನಾನು ನಿನ್ನ ನ್ನು ನಂಬುತ್ತೇನೆ. ನನಗೋಸ್ತ ರ ನೀನು ಅಂದು ಅಪಹರಿಸಿದ ಐಶ್ವರ್ಯವನ್ನು ನನಗೆ ತೋರಿಸು. ನಾನು ನಿನ್ನನ್ನು ಕ್ಷಮಿಸಿ ಜೀವ ನೊಂದಿಗೆ ಬಿಡುತ್ತೇನೆ? ಎಂದಿತು. ಅದಕ್ಕೆ ನರಿ “ ಸ್ವಾಮಿ, ನಾನು ಕೊಡುವುದೇನು ಬಂದಿತು; ಟ್ರ ಐಶ್ವರ್ಯ ತಮ್ಮದು. ತಮಗಾಗಿ ನಾನು ಅದನ್ನು ಕಾಯ್ದಿ ರಿಸಿದ್ದೇನೆ. ಗಂಗಾನದಿಯ ಎಡ ದಡದಲ್ಲಿ ಒಂದು ಕಾಡಿದೆ. ಆ ಕಾಡಿನಲ್ಲಿ ಎರಡು ಅರಳಿ ಮರಗಳಿವೆ. ಅವುಗಳ ನಡುವೆ ಆ ಐಶ್ವರ್ಯವನ್ನೆಲ್ಲ ನಾನು ಹೂತಿ ಟ್ರದ್ದೇನೆ. ನನ್ನ ಮಾತಿನಲ್ಲಿ ತಮಗೆ ನಂಬಿಕೆಯಿಲ್ಲದಿದ್ದರೆ, ಮ ಮೊಲವನ್ನು ಕೇಳಿ” ಎಂದು ಹೇಳಿ, ಆ ಮೊಲವನ್ನು ಕರೆದು, “ ಮೊಲ, ನಿನಗೆ ಗಂಗಾ ನದಿ ಗೊತ್ತಲ್ಲವೆ? ಎಂದಿತು. ಮೊಲ ಗೊತ್ತಿದೆಯೆಂದಿತು. “ ಗಂಗಾ ನದಿಯ ಎಡದಡದ ಕಾಡು ಗೊತ್ತಲ್ಲನೆ? ಎಂದು ಪುನಃ ನರಿ ಕೇಳಿತು. ಮೊಲ ಗೊತ್ತಿದೆಯೆಂದಿತು. “ಆ ಕಾಡಿನಲ್ಲಿ ಎರಡು ಅರಳಿ ಮರಗಳಿ ರುವುದು ಗೊತ್ತಲ್ಲವೆ?” ಎಂದು ಮತ್ತೆ ನರಿ ಕೇಳಿತು. ಮೊಲ ಗೊತ್ತಿ ದೆಯೆಂದಿಶು. ಸರಿ ನೀನು ಇನ್ನು ಹೋಗು?” ಎಂದು ನರಿ ಮೊಲವನ್ನು ಆಚ ಕಳುಹಿಸಿ, " ನೋಡಿದಿರಾ, ಸ್ವಾಮಿ. ನಾನು ಸುಳ್ಳು ಹೇಳಿಯೇನೆ ? ಆ ಐಶ್ವ ರ್ಯವಷ್ಟ ನ್ಪೂ ನಾನು ತಮಗೆ ಒಪ್ಪಿಸಿದು ದಕ್ಕೆ ಸ ಸಾಕ್ಷಿ” ಎಂದು ತ್‌ ಹುಲ್ಲಿನ ಎಸಳನ್ನು ಎತ್ತಿ ಹ ಸ ಕೈಯಲ್ಲಿ. ಇರಿಸಿತು. ಸಿಂಹಕ್ಕೆ ತನ್ನ ಕೈಗೆ ಆ ಐಶ್ವರ್ಯ ಬಂದಸ್ಟೆ ಸ್ಟೇ ಸಂತೋಷ ವಾಯಿತು. “ಎಲ್ಲಿಯ ಬಟು ಸೆರೆಯನ್ನು “ಡಿಸಿ ಸಿಂಹೆ ಅದನ್ನು ತನ್ನ ಪಕ್ಕದ ಪೀಠದಲ್ಲಿ ಕುಳ್ಳಿರಿಸಿಕೊಂಡಿತು. ಅದೇ ಸಮಯ ದಲ್ಲಿ 8 ತನ್ನ ಜೀವವುಳಿಸಿದ ಕೃತಜ್ಞ ತೆಗಾಗಿ ಸಿಂಹ ಅದಕ್ಕೆ ಅನೇಕ ಬಿರುದುಗಳನ್ನು ಕೊಟ್ಟು ಮರ್ಯಾದೆಮಾಡಿತು. ಕಾಚು ಹೀಗೆ ಅನೇಕ ನಿಧದಲ್ಲಿ. ಅರಸನಿಂದ ಉಪಚಾರ ಪಡೆದರೂ, ಒಳಗೊಳ ಗೆಯೆ ನಗುತ್ತಿತ್ತು. ರಾಯಸೆರಿ ಲಲ್ಲಿ ಮರಣದಂಡನೆಗೆ ಗುರಿಯಾಗಿದ್ದ ರಾಯನರಿ ಬಿಡುಗಡೆ ಪಡೆ ದುದೂ ಅಲ್ಲದೆ ಅರಸನಿಂದ ಮನ್ನಣೆ ಸಡೆದುದನ್ನೂ ಕಂಡು ತೋಳವೂ ಕರಡಿಯೂ ಸಹಿಸಲಾರದೆ ಪುನಃ ಅರಸನಿಗೆ ದೂರು ಹೇಳಿಕೊಂಡನು. ಸಿಂಹವು ತೋಳ ಕರಡಿಗಳೆರಡನ್ನೂ ಸೆರೆಮನೆಗೆ ಸೇರಿಸುವಂತೆ ಆಜ್ಞೆ ಮಾಡಿತು. ಅವುಗಳಿಗೆ ಆದ ಗತಿ ಕಂಡು, ಮಿಕ್ಫ ಪ್ರಾಣಿಗಳು ಬಾಯಿ ಮುಚ್ಚಿಕೊಂಡವು. ಮಿಕ್ಕ ಪ್ರಾಣಿಗಳು ರಾಯನರಿಯ ಜೊತೆಯಲ್ಲಿ ಕೊಂಚ ದೂರ ಹೋಗಿ ಅದನ್ನು ' ಕಳುಹಿಸಿಬರಬೇಕೆಂದು ಸಿಂಹ ಆಜ್ಞೆ ಮಾಡಿತು. ಅದರಂತೆ ಕಾಡಿನ ಪ್ರಾಣಿಗಳಲ್ಲ ರಾಯನರಿಯನ್ನು ಕಳುಹಿಸಿಕೊಡಲು ಅದರ ಜೊತೆಯಲ್ಲಿ ಹೋದುವು. ೩ ಸ್ವಲ್ಪ ದೂರ ಹೋದ ಮೇಲೆ ಪ್ರಾಣಿಗಳೆಲ್ಲಾ ಒಂದೂಂದಾಗಿ ಹಂದೆ ಹಿಂದೆ ನಿಂತವು. ಒಂದು ಮೊಲ್ಕ ಒಂದು ಟಗರು ಮಾತ್ರ ನಡೆದ ದಾರಿಯ ನೆನಪೇ ಆಗದೆ ನರಿಯ ಜೊತೆಯಲ್ಲಿ ಮಾತನಾಡುತ್ತಾ ಹೋದುವು. ದಾರಿಯ ಉದ್ದಕ್ಕೂ ನರಿ ಏನೇನೋ ಕತೆ ಹೇಳುತ್ತಾ ನಡೆಯಿತು. ಕತೆ ಕೇಳುತ್ತಾ ಮೊಲ ಟಗರುಗಳೂ ನಡೆದುವು. ನಡೆದೂ ನಡೆದೂ ನರಿಯ ಮನೆಬಾಗಿಲಿಗೆ ಬಂದುವು. ಅಲ್ಲಿ ನರಿ, " ಟಿಗರೆ, ಬಹಳ ದೂರ ನಡೆದು ಬಂದೆ. ಈ ಕಲ್ಲು ಬೆಂಚಿನ ಮೇಲೆ ಕೊಂಚ ವಿಶ್ರಮಿಸಿಕೊ, ಈ ಮೊಲದ ಕೈಯಲ್ಲಿ ಅರಸ ನಿಗೆ ಒಂದು ಕಾಗದ ಕಳಿಸುತ್ತೇನೆ” ಎಂದು ಟಗರನ್ನು ಹೊರಗೆ ಕುಳ್ಳಿರಿಸಿ ಮೊಲವನ್ನು ಒಳಕ್ಕೆ ಕರೆದುಕೊಂಡು ಹೋಯಿತು. ಒಳಕ್ಕೆ ಹೋದ ಒಡನೆಯೆ ತನ್ನ ಹೆಂಡತಿಯನ್ನು ಕರೆದು “ ಲೇ ಆರಸ ನನ್ನನ್ನು ಅತಿಯಾಗಿ ಆದರಿಸಿ ಕಳುಹಿಸಿದ್ದಾನೆ. ಈ ಹೊತ್ತಿನ ಊಟಕ್ಕೆ ಈ ಮೊಲವನ್ನು ಕೊಟ್ಟಿದ್ದಾನೆ ಎಂದು ತಟಕ್ಕನೆ ಆ ಮೊಲವನ್ನು ಹಿಡಿದು ಅದರ ಕತ್ತು ಕೆವಿಚಿಬಿಟ್ಟಿತು. ನರಿಯೂ ಅದರ ಹೆಂಡತಿಯೂ ಮಕ್ಕಳೂ ಆ ಮೊಲವನ್ನು ಬೇಯಿಸಿ ತಿಂದುಬಿಟ್ಟುವು. ಲೆಳ ರಾಯನರಿ ಒಳಗೆ ಮೊಲಕ್ಕೆ ಈ ಗತಿಯಾಗುತ್ತಿದ್ದಷ್ಟು ಹೊತ್ತೂ, ಪಾಪ, ಟಗರು ಹೊರಗಡೆ ಕಲ್ಲುಬೆಂಚಿನ ಮೇಲೆ ಕಾಯ್ದುಕೊಂಡು ಕುಳಿತಿತ್ತು. ಕಟ್ಟಕಡೆಗೆ ನರಿ ಹೊರಗೆ ಬಂದು, “ ಹೊತ್ತಾಯಿತೆಂದು ಸಿಟ್ಟಾಗಬೇಡ್ಕ ಟಗರೆ. ಮೊಲ ಊಟಮಾಡಿಕೊಂಡು ಹೋಗುತ್ತೇನೆಂದಿತು. ಇಷ್ಟು ಹೊತ್ತೂ ಊಟಮಾಡಿತು. ಊಟವಾದ ಮೇಲೆ ಹಾಗೆಯೇ ನಿದ್ದೆ ಮಾಡುನೆನೆಂದಿತು. ಈಗ ನಿದ್ದೆ ಮಾಡುತ್ತಿದೆ. ನೀನು ಹೋಗುತ್ತಾ ಇರು. ಅದೂ ಬಂದು ಬಿಡುತ್ತದೆ. ಎಷ್ಟಾದರೂ ಮೊಲನಲ್ಲವೆ! ಬೇಗ ಬೇಗ ಓಡಿಬರುತ್ತದೆ. ನೀನು ಹೊರಡು” ಎಂದು ಹೇಳಿ, «4 ಬಗಕ್ಕೆ ಮೊಲದ ಕ್ಸೆಯಲ್ಲಿ ಅರಸನಿಗೆ ಏನೋ ಕಾಗದ ಕಳುಹಿಸುವೆ ನೆಂದು ಹೇಳಿದ್ದೆ. ಅದನ್ನು ನೀನೇ ತೆಗೆದುಕೊಂಡು ಹೋಗಿ ಅರಸನಿಗೆ ಕೊಡು. ಕಾಗದವನ್ನೂ ನೀನೇ ಬರೆದೆಯೆಂದು ಹೇಳಿಕೊಂಡುಬಿಡು. ಅದರಿಂದ ಅರಸನಿಗೆ ನಿನ್ನ ಮೇಲೆ ಇನ್ನೂ ನಿಶ್ವಾಸ ಹೆಚ್ಚಾಗುತ್ತದೆ )) ಎಂದು ಮೊಲದ ತಲೆಯನ್ನು ತುರುಕಿದ್ದ ಒಂದು ಚೀಲವನ್ನು ಕೊಟ್ಟು ಅದನ್ನು ಕಳುಹಿಸಿತು. ಅರಸನ ಅನುಗ್ರ ಹನನ್ನು ಸಂಪಾದಿಸಬೇಕೆಂಬ ಆಸೆಯಿಂದ ಟಗರು ವೇಗವಾಗಿ ಓಡಿ ಓಡಿ ಸಿಂಹದ ಸಮೀಪಕ್ಕೆ ಬಂದು, ತಾನು ತಂದ ಚೀಲವನ್ನು ಒಪ್ಪಿಸಿತು. “ ವನರಾಜ್ಕ ರಾಯನರಿ ನಿನಗೊಂದು ಪತ್ರವನ್ನು ಕಳುಹಿಸಿದೆ. ಅದರೊಳಗಿನ ಒಕ್ಕಣೆಯನ್ನು ರಾಯರರಿ ಹೇಳಿತಾದರೂ, ಅದನ್ನು ಮುದ್ದಾಗಿ ಬರೆದವನು ನಾನೇ?' ಎಂದು ಹೇಳಿಕೊಂಡಿತು. ಹೀಗೆ ಹೆಮ್ಮೆಯಿಂದ ಹೇಳಿಕೊಂಡು, ಚೀಲದೊಳಕ್ಕೆ ಕೈಹಾಕಿ ಮೊಲದ ತಲೆಯನ್ನು ಹೊರಗೆಳೆದು ನೋಡಿ ನಡುಗುತ್ತಾ ನಿಂತುಕೊಂಡಿತು. ರಾಯನರಿ ತನಗೆ ಕೂಡ ಮೋಸಮಾಡಿತೆಂದು ಸಿಂಹಕ್ಕೆ ನಾಚಿಕೆ ಯಾಯಿತು, ಸಿಟ್ಟೂ ಬಂದಿತು. ಒಡನೆಯೆ ಚಿರತೆಯನ್ನು ಕರೆಸಿ, ಸೆರೆ ಯಲ್ಲಿದ್ದ ತೋಳ ಕರಡಿಗಳನ್ನು ಬಿಡಿಸಿ “ ನೀವು ನಿರ್ದೊೋಹಿಗಳು. ರಾಯನರಿಯ ಮೋಸದ ಮಾತುಗಳಿಗೆ ಮರುಳಾಗಿ ನಾನು ನಿಮ್ಮನ್ನು ಶಿಕ್ಷಿಸದೆ. ಆದರೆ ಇಂದಿನಿಂದ ರಾಯನರಿಯನ್ನು ನೀವು ಎಲ್ಲಿ ಕಂಡರೆ ರಾಯೆನರಿ ೮೫ ನಿನೂ ಬೇಕಾದರೂ ಮಾಡಬಹುದೆಂದು ನಾನು ನಿಮಗೆ ಅಪ್ಪಣೆ ಕೊಟ್ಟಿದ್ದೇನೆ. ರಾಯನರಿಯ ಜೊತೆಯಲ್ಲಿ ಸೇರಿಕೊಂಡು ನಮ್ಮ ಮೊಲವನ್ನು ಸಾಯಿಸಿದ ಈ ಟಿಗರನ್ನೂ ನಿಮ್ಮ ವಶಕ್ಕೆ ಕೊಟ್ಟಿದ್ದೇನೆ” ಎಂದಿತು. ಅದೇ ವೇಳೆಗೆ ಒಂದು ಕಾಗೆ ಕಾಕಾಯೆಂದು ಕೂಗಿಕೊಳ್ಳುತ್ತ ಬಂದ್ರು “ ಮಹಾರಾಜ, ರಾಯನರಿಯಿಂದ ನಾನು ಹಾಳಾದೆ. ಈಗ ಸ್ವಲ್ಪ ಹೊತ್ತಿಗೆ ಮುಂಚೆ, ನಾನೂ ನನ್ನ ಹೆಂಡತಿಯೂ ಹೊಳೆಯ ಪಕ್ಕದ ಹುಲ್ಲುಗಾವಲಿನಲ್ಲಿ ಆಟವಾಡುತ್ತಿದೆ ವು. ರಾಯನರಿ ಅಲ್ಲೇ ಸತ್ತಂತೆ ಮಲಗಿತ್ತು. ನಾವು ಆ ದೇಹದ ಸುತ್ತಾ ಹಾರಾಡಿದೆವು. ದೇಹದಲ್ಲಿ ಜೀವವಿದ್ದಂತೆ ಇರಲಿಲ್ಲ. ಆಗ ನನ್ನ ಹೆಂಡತಿ ಹತ್ತಿರ ಹೋಗಿ ಅದು ಉಸಿರಾಡುತ್ತಿದೆಯೇ ಎಂದು ಮೂಗಿನ ಬಳಿ ನೋಡುತ್ತಿದ್ದಾಗ ಆ ರಾಯನರಿ ಬಾಯಿಬಿಟ್ಟು ಅದರ ತಲೆ ಕಡಿದುಬಿಟ್ಟಿ ತು. ನಾನು ಹಾರಿ ಹೋಗಿ ನನ್ನ ಜೀವವುಳಿಸಿಕೊಂಡೆ. ನನ್ನ ಹೆಂಡತಿ ರಾಯ ನರಿಯ ಬಾಯಿಗೆ ತುತ್ತಾದಳು?' ಎಂದು ಗೋಳಾಡಿತು. ಆ ಅನ್ಯಾಯವನ್ನು ಕೇಳಿ ಸಿಂಹಕ್ಕೂ ಸಿಟ್ಟು ಮಿತಿಮೀರಿತು. “ ಈ ರಾಯನರಿಯ ಅನೇಕ ಅನ್ಯಾಯಗಳನ್ನು ಸಹಿಸಿ ಸಹಿಸಿ ನಮಗೂ ಸಾಕಾಗಿ ಹೋಗಿದೆ. ಇನ್ನು ಮೂರು ದಿನಗಳೊಳಗಾಗಿ ಕಾಡಿನ ಮೃಗಗಳಲ್ಲಾ ಇಲ್ಲಿ ಬಂದು ಸೇರಲಿ. ಒಟ್ಟಾಗಿ ಹೋಗಿ ಈ ರಾಯನರಿ ಯನ್ನೂ ಅದರ ಸರ್ವ ಸಂತತಿಯನ್ನೂ ಧ್ವಂಸಮಾಡಿಬಿಡೋಣ'' ಎಂದು ಗರ್ಜಿಸಿತು. ರಾಯನರಿಯ ಮೇಲೆ ಇನ್ನೂ ವಿಶ್ವಾಸವಿಟ್ಟದ್ದ ಮುದಿಹೋತ ಆ ರಾಜಾಜ್ಞೆಯನ್ನು ಕೇಳಿತು. ಕೇಳಿ, ಸಕಾಲದಲ್ಲಿ ರಾಯನರಿಯನ್ನು ಎಚ್ಚರಿಸಬೇಕೆಂದು ಅದೇ ಸಂಜೆ ರಾಯನರಿಯ ಮನೆಗೆ ಹೋಯಿತು. ಲೆ ಅತ್ತ, ರಾಯನರಿ ಕಾಡಿನಲ್ಲಿ ಪಾರಿವಾಳಗಳನ್ನು ಹುಡುಕಿಕೊಂಡು ಹೊರಟಿತ್ತು. ಹಾಗೆ ಹುಡುಕಿಕೊಂಡು ಹೋಗುವಾಗ, ಒಂದು ಕಡೆ ಳ೬ ರಾಯನಕರಿ ಒಂದು ಬಡಕಲು ಕುದುರೆ ಕಣ್ಣೀರು: ಸುರಿಸುತ್ತಾ ಕುಳಿತಿದ್ದುದನ್ನು ರಾಯನರಿ ಕಂಡಿತು. ಕಂಡು, ಅದರ ಹತ್ತಿರ ಹೋಗಿ “ಅಯ್ಯಾ, ಏಕೆ ಅಳುತ್ತಿರುವೆ?” ಎಂದು ಕೇಳಿತು. ಸ ಅದಕ್ಕೆ ಆ ಕುದುರೆ “ಅಯ್ಯೋ! ನನ್ನ ಕತೆಯನ್ನು ಏನು ಹೇಳಲಿ? ಈ ಕಾಡಿನ ಆಚೆ ಒಂದು ಊರು ಇದೆ. ಅಲ್ಲಿ ಒಬ್ಬ ಗಾಡಿಯವ ನಿದ್ದಾನೆ. ನಾನು ಈಗ ಹತ್ತುವರ್ಷಗಳಿಂದ ಅವನ ಗಾಡಿಯೆಳೆಯು ತ್ತಿದ್ದ. ಈಚೆಗೆ ನನಗೆ ವಯಸ್ಸಾಯಿತು, ಶಕ್ತಿ ಕಡಿಮೆಯಾಯಿತು, ಮೊದಲಿನಂತೆ ಎಳೆಯಲಾಗುವುದಿಲ್ಲ. ಆದ್ದರಿಂದ ನನ್ನ ಯಜಮಾನನು, ನಾನು ಹಿಂದೆ ಮಾಡಿದ ಸೇವೆಯನ್ನೆಲ್ಲಾ ಮರೆತು ಈಗ ನನ್ನನ್ನು ಮನೆ ಯಿಂದ ಅಟ್ಟಿ ಬಿಟ್ಟಿ ದ್ದಾನೆ. ನನಗೆ ಒಂದು ಹುಲಿಯ ಬಲವಿದೆಯೆಂದು ತೋರಿಸಿಕೊಂಡರೆ ಪುನಃ ಮನೆಗೆ ಸೇರಿಸುತ್ತಾನಂತೆ. ಈ ಮುದಿವಯಸ್ಸಿ ನಲ್ಲಿ ನನಗೆ ಹುಲಿಯ ಬಲನೆಲ್ಲಿಂದ ಬರಬೇಕು? ಅಯ್ಯೋ! ನಾನೇನು ಮಾಡಲಿ?” ಎಂದು ಬಿಕ್ಕೆ ಬಿಕ್ಕಿ ಅಳತೊಡಗಿತು. ಆಗ ರಾಯನರಿ ಅದರ ಬೆನ್ನು ತಟ್ಟುತ್ತಾ “ಅಯ್ಯೋ! ಇಷ್ಟೇ ತಾನೆ! ಇದಕ್ಕೆ ಏಕೆ ಹೀಗೆ ಗೋಳಾಡಬೇಕು? ನಿನಗೆ ಹುಲಿಯ ಬಲವಿದೆ ಯೆಂಬುದನ್ನು ನಿನ್ನ ಯಜಮಾನನಿಗೆ ತೋರಿಸುವ ಭಾರ ನನ್ನದು. ನಾನು ಹೇಳಿದಂತೆ ನೀನು ಕೇಳು; ಸುಖವಾಗಿ ಪುನಃ ಮನೆ ಸೇರಿಕೊಳ್ಳ ಬಹುದು. ನೀನು ಇಲ್ಲಿ ಈ ಹುಲ್ಲಿನ ಮೇಲೆ ಮಲಗಿಕೊ. ನಿನ್ನ ಹತ್ತಿರ ಒಂದು ಹುಲಿ ಬಂದರೂ ಅಲ್ಲಾಡಬೇಡ » ಎಂದಿತು. ಕುದುರೆ ಅದು ಹೇಳಿದಂತೆಯೇ ಕೇಳುವೆನೆಂದು ಒಪ್ಪಿಕೊಂಡಿತು. | ಹೀಗೆ ಕುದುರೆಯನ್ನು ಒಪ್ಪಿಸ್ಕಿ ರಾಯನರಿ ಒಂದು ಹುಲಿಯನ್ನು ಹುಡುಕಿಕೊಂಡು ಹೊರಟಿತು. ಹತ್ತಿರದಲ್ಲಿಯೇ ಒಂದು ಗವಿಯಲ್ಲಿ ಒಂದು ಹುಲಿಯೂ ಸಿಕ್ಕಿತು. ರಾಯನರಿ ಅದಕ್ಕೆ ಬಗ್ಗಿ ನಮಸ್ಕಾರ ಮಾಡಿ, “ಹುಲಿರಾಯ, ಇಲ್ಲಿಯೇ ಹತ್ತಿರದಲ್ಲಿ ಒಂದು ಕುದುರೆ ಸತ್ತು ಬಿದ್ದಿದೆ. ನೀನು ಮೊದಲು ಬಂದು ಅದನ್ನು ತಿಂದರೆ ಉಳಿದ ಎಂಜಲನ್ನು ನಾನು ಆ ಮೇಲೆ ತಿನ್ನುತ್ತೇನೆ” ಎಂದಿತು. ರಾಯನರಿ ಲೆ೭ ಹುಲಿ ತನ್ನ ಆಹಾರವು ತನಗೆ ಅನಾಯಾಸವಾಗಿ ಸಿಕ್ಕಿತೆಂದು ಸಂತೋಷಪಟ್ಟು ರಾಯನರಿಯ ಜೊತೆಯಲ್ಲಿ ಹೋಯಿತು. ಕುದುರೆ ಸತ್ತಹಾಗೆ ಬಿದ್ದುಕೊಂಡಿದ್ದ ಕಡೆಗೆ ಬಂದಾಗ, ರಾಯನರಿ “ಹುಲಿರಾಯ್ಕ ಇದು ದೊಡ್ಡ ಕುದುರೆ. ಇದನ್ನು ಇಲ್ಲಿಯೇ ತಿನ್ನುವುದಕ್ಕಿಂತ ನಿನ್ನ ಗವಿ ಯಲ್ಲಿ ತಿಂದರೆ ಹೆಚ್ಚು ಸೊಗಸು. ಒಂದು ಕೆಲಸ ಮಾಡೋಣ. ಈ ಕುದುರೆಯನ್ನು ಒಂದು ಹಗ್ಗದಿಂದ ನಿನ್ನ ನಡುವಿಗೆ ಬಿಗಿಯುತ್ತೇನೆ. ನೀನು ಇದನ್ನು ನಿನ್ನ ಗವಿಗೆ ಸುಲಭವಾಗಿ ಸಾಗಿಸಬಹುದು. ನಾನೂ ಹಿಂದುಗಡೆಯಿಂದ ತಳ್ಳುತ್ತೇನೆ” ಎಂದಿತು. ಹುಲಿ ಹಿಂದುಮುಂದು ನೋಡದೆ ರಾಯನರಿಯ ಮಾತಿಗೆ ಒಪ್ಪಿ ಕೊಂಡಿತು, ಕುದುರೆಯ ಹತ್ತಿರ ಬಂದು ನಿಂತುಕೊಂಡಿತು. ರಾಯನರಿ ಹುಲಿಯ ಸೊಂಟದ ಸುತ್ತ ಹಗ್ಗ ಹಾಕುವಂತೆ ನಟಸುತ್ತಾ ಅದರ ಹಿಂಗಾಲುಗಳೆರಡನ್ನೂ ಅಲ್ಲಾಡದಂತೆ ಹಗ್ಗದಿಂದ ಬಲವಾಗಿ ಬಿಗಿದು, ಹಗ್ಗದ ಇನ್ನೊಂದು ತುದಿಯನ್ನು ಕುದುರೆಯ ಸೊಂಟಕ್ಕೆ ಕಟ್ಟ ತು. ಕಟ್ಟ ಆದ ಮೇಲೆ ಕುದುರೆಯ ಬೆನ್ನು ಚಪ್ಪರಿಸಿ “ಹುಲಿಯ ಬಲದ ಫುದುರೆ, ಓಡು, ಓಡು, ಓಡು” ಎಂದು ಕೂಗಿತು. ಆ ಕೂಗು ಕೇಳಿದೊಡನೆ ಕುದುರೆ ನೆಗೆದೆದ್ದು ನಾಗಾಲೋಟದಿಂದ ಓಡಿತು. ಹಳ್ಳಕೊಳ್ಳ, ತಗ್ಗು ತಿಟ್ಟು, ನೀರುನೆಲ, ಕಲ್ಲುಮುಳ್ಳು ಏನನ್ನೂ ಲಕ್ಷಿಸದೆ ಹುಲಿಯನ್ನೂ ಎಳೆದುಕೊಂಡು ಕುದುರೆ ಓಡಿತು. ಅದು ಹಾಗೆ ಓಡಿ ಓಡಿ ತನ್ನ ಯಜಮಾನನ ಮನೆಗೆ ಬರುವ ವೇಳೆಗೆ ಆ ಹುಲಿ ಹೆಣ ವಾಗಿಹೋಗಿತ್ತು. ತನ್ನ ಮುದಿಕುದುರೆ ಒಂದು ಹುಲಿಯನ್ನು ಮನೆಯ ಬಾಗಿಲಿಗೆ ಎಳೆದುಕೊಂಡು ಬಂದುದನ್ನು ಕಂಡು ಕುದುರೆಯ ಯಜಮಾನನಿಗೆ ಬಹಳ ಸಂತೋಷವಾಯಿತು. ಅವನು ಅದನ್ನು ಪುನಃ ತನ್ನ ಮನೆಗೆ ಸೇರಿಸಿಕೊಂಡನು. ಹೀಗೆ ಉಪಾಯದಿಂದ ಒಂದು ಹುಲಿಯನ್ನು ಸಾಯಿಸಿ, ರಾಯ ನರಿ ಪುನಃ ಪಾರಿವಾಳಗಳನ್ನು ಹುಡುಕಿಕೊಂಡು ಹೊರಟತು. ಸ್ವಲ್ಪ ಸಮಯದಲ್ಲಿಯೇ ಅದಕ್ಕೆ ಎರಡು ಪಾರಿವಾಳ ಸಿಕ್ಕಿತು. ೮೮ ರಾಯನರಿ ೯ ರಾಯನರಿ ತಾನು ಹಿಡಿದು ತಂದ ಎರಡು ಪಾರಿವಾಳಗಳನ್ನು ಅಡುಗೆಗೆ ಸಿದ್ಧಗೊಳಿಸುತ್ತಿತ್ತು. ಆಗ ಅಲ್ಲಿಗೆ ಮುದಿಹೋತ ಬಂದು ರಾಜಾಜ್ಞೆಯನ್ನು ಅದಕ್ಕೆ ತಿಳಿಸಿತು. ಅದರಿಂದ ರಾಯನರಿ ಏನೂ ಚಿಂತೆಗೊಳ್ಳಲಿಲ್ಲ. “ಅಯ್ಯೋ, ಇಷ್ಟೇ ತಾನೆ. ಏನೂ ಹೆದರಬೇಕಾದ ಕಾರಣವಿಲ್ಲ. ಈ ರಾತ್ರಿ ಈ ಪಾರಿವಾಳಗಳನ್ನು ತಿಂದು ಸಂಶೋಷ ಪಡೋಣ. ನಾಳೆ ಬೆಳಗ್ಗೆ ಎದ್ದು ಹೋಗಿ ಸಿಂಹವನ್ನು ಕಾಣೋಣ. ಈ ಸಿಂಹವನ್ನು ನನ್ನ ಕಿರುಬೆಟ್ಟಿನ ಸುತ್ತ ಆಡಿಸುವ ಶಕ್ತಿ ನನ್ನಲ್ಲಿದೆ” ಎಂದು ಪಾರಿವಾಳಗಳನ್ನು ಅಡುಗೆಯ ಮನೆಗೆ ತೆಗೆದುಕೊಂಡು ಹೋಯಿತು. ರಾತ್ರಿ ಊಟವಾದ ಮೇಲೆ ಮಲಗಿರುವಾಗ ರಾಯನರಿ ಮುದಿ ಹೋತನನ್ನು ಕುರಿತು “ಸಿಂಹಕ್ಕಾದರೂ ನಾನೇನೂ ಹೆದರುವುದಿಲ್ಲ ಮಾವಯ್ಯ. ನಾನು ಒಂದು ಸಲ ದಾರಿತಪ್ಪಿ ದಂಡಕಾರಣ್ಯಕ್ಕೆ ಹೋಗಿದ್ದೆ. ಅಲ್ಲಿಯೂ ಹೀಗೆಯೇ ಒಂದು ಮಹಾಸಿಂಹವಿತ್ತು. ಅದು ನನ್ನನ್ನು ಹೆದರಿಸಲು ನೋಡಿತು. ಆದರೆ ಅದರ ದೇಹೆಬಲಕ್ಕಿಂತ ನನ್ನ ಬುದ್ಧಿಬಲವೇ ಹೆಚ್ಚೆಂದು ನಾನು ಅದಕ್ಕೆ ತೋರಿಸಿಕೊಟ್ಟು ಬಂದೆ. ನಿದ್ದೆ ಬರದೆ ಹೋದರೆ, ಆ ಕತೆ ಹೇಳುತ್ತೇನೆ. ಕೇಳುನೆಯ, ಮಾವಯ್ಯ?? ಎಂದಿತು. « ಹೇಳು, ಕೇಳೋಣ” ಎಂದಿತು ಮುದಿ ಹೋತ. ರಾಯನರಿ ತನ್ನ ಕತೆಯನ್ನು ಹೇಳಿತು: “ ದಂಡಕಾರಣ್ಯದಲ್ಲಿ ಒಂದು ಸಿಂಹವಿತ್ತೆಂದು ಹೇಳಿದೆನಷ್ಟೆ. ಆ ಸಿಂಹ ಒಂದು ದಿನ ನರಿಜಾತಿ ಯನ್ನೆಲ್ಲಾ ಹೀಯಾಳಿಸಿ ಏನೋ ಕೆಟ್ಟ ಮಾತನಾಡಿತು. ಆಗ ನಾನು ನನ್ನ ಅಸಮಾಧಾನವನ್ನು ಹೊರಗೆ ತೋರಿಸಿಕೊಳ್ಳದೆ, ಅದರ ಮಾತಿಗೆ ನಾನೂ ಸಮ್ಮತಿ ತೋರಿಸಿದಂತೆ ನಟಿಸಿದೆ. ಆದರೂ ಸಮಯ ಒದಗಿ ದಾಗ ಆ ಸಿಂಹವನ್ನು ಅದು ಆಡಿದ ಮಾತಿಗಾಗಿ ಸಂಹರಿಸಬೇಕೆಂದು ನಿಶ್ಚಯಮಾಡಿದೆ. ಆ ಸಿಂಹ ಹೇಳಿದ ಮಾತಿಗೆಲ್ಲಾ ನಾನು ಎದುರಾಡದೆ ರಾಯನರಿ ೮೯ ಹೊಗುಟ್ಟು ತ್ರಿದ್ದುದರಿಂದ ನಾನು ಆ ಸಿಂಹಕ್ಕೆ ಬಹು ಬೇಗನೆ ಬೇಕಾ ಇತ್‌ ಆ "ಸಿಂಹಕ್ಕೆ ನನ್ನ ಮಾತಿನಲ್ಲಿ ಛಿಶ್ಚಾಸ ಸಹುಟ್ಟುವ ವರೆಗೂ ಕಾಯ್ದುಕೊಂಡಿದ್ದು, ಕ ದಿನೇವ ಮೃಗರಾಜ, ನೀನು ಎಲ್ಲಾ ಮಾಂಸ ಗಳನ್ನೂ ತಿಂದಿರುವವನು. ಕುದುರೆಯ ಮಾಂಸ ಸದಷ್ಟು ಚಿನ್ನಾ ದ ಮಾಂಸ ಬೇರೆ ಉಂಟೆ?” ಎಂದು ಕೇಳಿದೆ. ಅದಕ್ಕೆ ಆ ಸಿಂಹ “ಕುದುರೆ ಎಂದರೆ ಏನು? ಅದು ಹೇಗಿದೆ?” ಎಂದು ಕೇಳಿತು ಆಗ ನಾನು ಈ ಸಿಂಹದ ಸಂಹಾರಕ್ಕೆ ಇದೇ ಸಮಯವೆಂದುಕೊಂಡು, “ಅಯ್ಯೋ, ಕುದುರೆಯನ್ನು ಕಂಡಿಲ್ಲವೆ, ನೀನು? ಕುದುರೆಯ ಮಾಂಸ ತಿನ್ನದ ಮೇಲೆ ಹುಟ್ಟ ಬದುಕಿರುವುದು ವ್ಯರ್ಥ”ನೆಂದೆ. ಅಂದಿನಿಂದ ಕುದುರೆಯ ಮಾಂಸ ತಿನ್ನಬೇಕೆಂದು ಆ ಸಿಂಹಕ್ಕೆ a ಹೆತ್ತಿ ತು. ಅದಕ್ಕೆ ಆಸೆ ಹೆಚ್ಚಾದುದನ್ನು ಕಂಡು, “ಕಾಡಿನ ಸಿ ಒಂದು ಸಟ್ಟಿ ಣವಿದೆ. ಅಲ್ಲಿ ಬೇಕಾದಷ್ಟು ಕುದುರೆಗಳಿವೆ” ಎಂದು ಹೇಳಿ ಅದನ್ನು ಕರೆದುಕೊಂಡು ಹೋಗಿ, ಆ ಪಟ್ಟಣದ ಅರಸನ ಕುದುರೆಗಳನ್ನು ಅದಕ್ಕೆ ಕಾಣಿಸಿದೆ. ಅದು ಮಿಂಚಿನಂತೆ ಹಾರಿ ಒಂದು ಕುದುರೆಯನ್ನು ಕಚ್ಚಿಕೊಂಡು ಬಂದು, ಕಾಡಿನಲ್ಲಿ ತಿಂದಿತು. ಅದೇ ಕುದುರೆಯ ಮಾಂಸದ ರುಚಿ ನಾಲಗೆಗೆ ಹತ್ತಿ ಮಾರನೆಯ ದಿನ ಇನ್ನೊಂದು ಕುದುರೆಯನ್ನು ಹೊತ್ತು ಕೊಂಡು ಬಂದಿತು. ಹೀಗೆಯೇ ನಾಲ್ಕು ದಿವಸ ನಡೆಯಿತು. ಹೀಗೆ ದಿನಕ್ಕೆ ಒಂದೊಂದು ಕುದುರೆ ಸಿಂಹದ ಬಾಯಿಗೆ ಬೀಳುವುದನ್ನು ತಿಳಿದು ಪಟ್ಟಣದ ರಾಜನು ಉಳಿದ ಕುದುರೆಗಳನ್ನು ಒಂದು ದೊಡ್ಡ ಲಾಯ ದಲ್ಲಿ ಕಟ್ಟಸಿದನು. ಆದರೂ ಆ ಸಿಂಹೆ ನನ್ನ ಪ್ರೋತ್ಸಾಹಕ್ಕೆ ಕಿವಿ ಕೊಟ್ಟು, ಲಾಯದೊಳಕ್ಕೂ ನುಗ್ಗಿ ಕುದುರೆಯನ್ನು ಕಚ್ಚಿಕೊಂಡು ಹಾರಿ ಬರುತ್ತಿತ್ತು. ಕಡೆಗೆ ರಾಜನು ಆ ಸಿಂಹದ ಹಾವಳಿಯನ್ನು ತಡೆಯ ಲಾರದ್ಕೆ ಅದನ್ನು ಕೊಲ್ಲುವುದಕ್ಕೆ ಒಬ್ಬ ಜೇಟಿಗಾರನನ್ನು ನೇಮಿಸಿದನು. ಅವನು ಸಿಂಹ ರಾತ್ರಿ ಬರುವುದನ್ನೇ ಕಾಯುತ್ತಾ ಬಿಲ್ಲುಬಾಣ ಹಿಡಿದು ಕುಳಿತಿದ್ದನು. ಎಂದಿನಂತೆ ಆ ರಾತ್ರಿಯೂ ಸಿಂಹ ಲಾಯದೊಳಕ್ಕೆ ಹಾರಿ ಬಂದಿತು. ಬೇಟೆಗಾರನು ಅದನ್ನು ಕಂಡು, “ ಈ ಸಿಂಹ ಮಿಂಚಿನಂತೆ ಹಾರಿಬಂದಿತು. ನನಗೆ ಇದರ ಮೇಲೆ ಬಾಣ ಬಿಡಲು ಆಗಲಿಲ್ಲ. ಇದು ೯೪೦ ರಾಯನರಿ ಹಿಂದಿರುಗಿ ಹಾರುವಾಗ ಒಂದು ಕುದುರೆಯನ್ನು ಕಚ್ಚಿ ಕೊಂಡು ಹಾರು ತೃದೆ. ಆದ್ದ ರಿಂದಆಗ ಇದರ ಮೇಗ ಕಡಿಮೆಯಾನಿರುತ್ತ ದೆ.ಆಸಮಯ ದಲ್ಲಿ ನಾನು ಬಾಣಬಿಟ್ಟು ಇದನ್ನು ಕೊಲ್ಲಬಹುದು” ಎಂದು ಬಿಲ್ಲನ್ನು ಎಳೆದು ಬಾಣಹೂಡಿ ಸ ; ನಾದನು. ಅವನು ಎಣಿಸಿದ್ದ ಂತೆಯೇ ib ಕುದುರೆಯನ್ನು ಕಚ್ಚಿ ಡು ಮೆಲ್ಲಗೆ ಹಾರಿತು. ಬೇಟಿಗಾರನು ಅದೇ ಸಮಯದಲ್ಲಿ 'ಬಾಣ ಬಟ್ಟ ನು. ಬಾಣ ತಾಗಿ, ಸಿಂಹ ಅಲ್ಲಿಯೇ ಸತ್ತು ಬಿದ್ದಿತು.” ರಾಯನರಿ ಹೀಗೆಂದು ಹೇಳ್ತಿ “ಆದ್ದರಿಂದ, ನಾನು ಸಿಂಹ ಕಾದರೂ ಹೆದರುವೆನೆಂದು ನೀನು ತಿಳಿಯಬೇಡ. ನಾನು ಮೊದಲೇ ಹೇಳಿದಂತೆ ಸಿಂಹವನ್ನಾದರೂ ಕಿರುಬೆಟ್ಟನ ಸುತ್ತ ಆಡಿಸುವ ಶಕ್ತಿ ನನ್ನ ಲಿದೆ. ಆಗಲೇ ಅರ್ಥರಾತ್ರಿಯಾಯಿತು. ಬೆಳೆಗಾದಮೇಲೆ ಮುಂದಿನ ಕೆಲಸ. ಈಗ ಮಲಗಿಕೊಳ್ಳೋಣ? ಎಂದಿತು. ರಾಯನರಿ ಹೇಳಿದ ಕತೆ ಸುಳ್ಳು ಕತೆಯೆಂದು ಮುದಿಹೋತನಿಗೆ ಗೊತ್ತಿತ್ತು. ಆದರೂ ಇಂತಹ ಸುಳ್ಳುಗಳಿಂದಲೇ ರಾಯನರಿ ತನ್ನ ಕಾರ್ಯ ವನ್ನು ಸಾಧಿಸುವುದೆಂದೂ ಅದಕ್ಕೆ ಗೊತ್ತಿತ್ತು. ಆದ್ದರಿಂದ ಅದು ರಾಯ ನರಿಯ ಶಕ್ತಿ ಸಾಮರ್ಥ್ಯಗಳನ್ನು ಮಿತವಾಗಿ ಹೊಗಳಿ, ತಾನೂ ಮಲಗಿ ಕೊಂಡಿತು. ಬೆಳಗಾಯಿತು. ರಾಯರರಿ “ನಾನು ಬೇರೆ ದಾರಿಯಿಂದ ಸಿಂಹದ ಬಳಿಗೆ ಬರುತ್ತೇನೆ. ನೀನು ಬೇರೆ ದಾರಿಯಿಂದ ಹೋಗು” ಎಂದು ಮುದಿಹೋತನನ್ನು ಕಳುಹಿಸಿ, “ಇನ್ನು ಮೂರುನಾಲ್ಕು ದಿನಗಳಲ್ಲಿ ಬಂದುಬಿಡುತ್ತೇನೆ. ಮನೆಯಕಡೆ ನೋಡಿಕೊ” ಎಂದು ತನ್ನ ಹೆಂಡತಿಗೆ ಹೇಳಿ, ಹೊರಟತು. ೧೦ ರಾಯನರಿ ದಾರಿಯಲ್ಲಿ ಕಾಲ ಕಳೆಯದೆ ಬೇಗಬೇಗ ಹೋಗಿ ಸಿಂಹೆದ ಸಭೆಯನ್ನು ಸೇರಿತು. ಸೇರಿ, ಸಿಂಹೆದ ಸಿಂಹಾಸನದ ಮುಂದೆ ನಿಂತು ನಮಸ್ಕಾರಮಾಡಿ, “ಮಹಾಸ್ವಾಮಿ, ನಾನು ಈ ಕಾಡಿನಲ್ಲಿ ರಾಯನರಿ ೯೧ ಬದುಕುವುದೆ ಕಷ್ಟವಾಗಿಬಿಟ್ಟದೆ. ಇಲ್ಲಸಲ್ಲದುದನ್ನು ಸೃಷ್ಟಿಸಿಕೊಂಡು ಬರುವ ಈ ಪ್ರಾಣಿಗಳಿಂದ ಯಾವ ಗಳಿಗೆಯಲ್ಲಿ ಏನಾಗುವುದೋ ಎಂದು ನನಗೆ ಬಹಳ ಭಯವಾಗಿದೆ” ಎಂದು ಮೊದಲುಮಾಡಿತು. ಅದಕ್ಕೆ ಸಿಂಹ ಒಂದು ಗರ್ಜನೆ ಗರ್ಜಿಸ್ಕಿ “ಸಾಕು, ಸಾಕು, ರಾಯನರಿ. ನಿನ್ನ ನಿಷಯನೆಲ್ಲಾ ನನಗೆ ಗೊತ್ತು. ಈ ಸಲ ನಿನ್ನ ಮಾತುಗಳಿಗೆ ಯಾರೂ ಮರುಳಾಗುವುದಿಲ್ಲ. ಇದುವರೆಗೆ ನೀನು ಮಾಡಿದ ಅನ್ಯಾಯಗಳಿಗೆ ಈ ಹೊತ್ತೇ ಕೊನೆ. ನೀನು ಸದ್ಯದಲ್ಲಿಯೇ ಸಾಯ್ಕ ಬೇಕಾಗಿರುವುದರಿಂದ ನಿನ್ನ ಹತ್ತಿರ ಹೆಚ್ಚು ಮಾತನಾಡುವುದು ವ್ಯರ್ಥ” ಎಂದಿತು. ಆದರೂ ರಾಯನರಿ ತನಗೆ ಉಂಟಾದ ಭಯವನ್ನು ಹೊರಗೆ ತೋರಿಸದೆ, “ಮಹಾಸ್ವಾಮಿ, ಸಾಯುನೆನೆಂಬ ಹೆದರಿಕೆ ನನಗೆ ಸ್ವಲ್ಪವೂ ಇಲ್ಲ. ಹುಟ್ಟಿದವನು ಎಂದಿದ್ದರೂ ಸಾಯಲೇಬೇಕೆಂದು ಹಿರಿಯರೆಲ್ಲರೂ ಹೇಳುತ್ತಾರೆ. ಆದರೆ ಅನ್ಯಾಯವಾದ ಆರೋಸಣೆಗಳಿಗೆ ಗುರಿಯಾಗಿ ಸಾಯಬಾರದೆಂದು ತಮ್ಮಿಂದ ನ್ಯಾಯವಿಮರ್ಶೆಯನ್ನು ಅಸೇಕ್ಷಿಸು ತ್ತೇನೆ. ನಾನು ಯಾವಾಗಲೂ ನ್ಯಾಯಕ್ಕಾಗಿಯೆ ಹೊಡೆದಾಡುವವನು. ಆದರೆ ಅದನ್ನು ನಾನೇ ಹೇಳಿಕೊಳ್ಳ ಬಾರದು” ಎಂದಿತು. ಸಹೋ! ನಿನಗೆ ನ್ಯಾಯನಿಮರ್ಶೆಯ ಬುದ್ಧಿಯೂ ಇದೆಯೊ ?” ನಿಂದು ಸಿಂಹ ಅದನ್ನು ಹಂಗಿಸಿತು. “ಮಹಾಸ್ವಾಮಿಯವರು, ತಮ್ಮ ಅನೇಕ ಕಾರ್ಯಗಳ ಮಧ್ಯೆ, ಈ ಬಡ ಸೇವಕನ ಅಲ್ಪಸೇವೆಯನ್ನು ಮರೆತಿರುವುದು ಸಹಜವಾಗಿಯೇ ಇದೆ. ಅದನ್ನು ನಾನೇ ಹೇಳಿಕೊಳ್ಳಬಾರದಾದರೂ ಹೇಳುತ್ತೇನೆ. ಎರಡು ವರ್ಷದ ಕೆಳಗೆ, ಒಬ್ಬ ಮನುಷ್ಯನೂ ಒಂದು ಹಾವೂ ತಮಗೆ ನ್ಯಾಯ ದೊರಕಬೇಕೆಂದು ಇದೇ ಸಭೆಗೆ ಬಂದರು. ಆ ಹಾವು ಯಾವುದೋ ಬಲೆಯಲ್ಲಿ ಸಿಕ್ಕೆ ಬಿದ್ದಿತ್ತಂತೆ. ದಾರಿಯಲ್ಲಿ ಹೋಗುತ್ತಿದ್ದ ಆ ಮನುಷ್ಯ ನನ್ನು ಕಂಡು ತನ್ನನ್ನು ಬಿಡಿಸಬೇಕೆಂದು ಬೇಡಿಕೊಂಡಿತಂತೆ. ಅದು ತನ್ನನ್ನು ಕಚ್ಛುವುದಿಲ್ಲವೆಂದು ಆ ಮನುಷ್ಯನು ಅದರಿಂದ ಮಾತು ತೆಗೆದು ೪೨ ರಾಯನರಿ ಕೊಂಡು, ಅದನ್ನು ಬಲೆಯಿಂದ ಬಿಡಿಸಿದನು. ಬಿಡಿಸಿದೊಡನೆ ಹಾವು ಅವನನ್ನು ಕಚ್ಚಲು ಬಂದಿತು. "ಕಚ್ಚುವುದು ಹಾವುಗಳ ಸ್ವಭಾವ? ಎಂದಿತು. ಕಡೆಗೆ ಆ ಮನುಷ್ಯನು "ಬೇರೆ ಯಾರನ್ನಾದರೂ ಕೇಳೋಣ. ಅವರು ಕಚ್ಚಬಹುದೆಂದರೆ ನೀನು ಕಚ್ಚು? ಎಂದನು. ಹಾವೂ ಅದಕ್ಕೆ ಒಪ್ಪಿತು. ಆಗ ದಾರಿಯಲ್ಲಿ ಬಂದ ಒಂದು ಕಾಗೆಯನ್ನು ಕೇಳಲು, ಅದು ("ಹಾವು ಮನುಷ್ಯನನ್ನು ಕಚ್ಚುವುದೇ ನ್ಯಾಯ'ವೆಂದಿತು. ಮನುಷ್ಯನು ಸತ್ತರೆ ತಾನು ಅವನ ಕಣ್ಣುಗಳನ್ನು ಕಿತ್ತು ತಿನ್ನಬಹುದೆಂದು ಕಾಗೆ ಆಸೆಸಡುತ್ತಿತ್ತು. ಅದೇ ದಾರಿಯಲ್ಲಿ ಬರುತ್ತಿದ್ದ ಈ ತೋಳವೂ ಈ ಕರಡಿಯೂ "ಹಾವು ಮನುಷ್ಯನನ್ನು ಕಚ್ಚುವುದೇ ನ್ಯಾಯ'ವೆಂದುವು. ಕಡೆಗೆ ಅವರಿಬ್ಬರೂ ಈ ಸಭೆಯ ಮುಂದೆ ಬಂದರು. ಅವರ ನ್ಯಾಯವನ್ನು ತೀರಿಸಿಕೊಡಬೇಕೆಂದು ಮಹಾಸ್ವಾಮಿಯವರು ನನಗೆ ಆಜ್ಞೆ ಮಾಡಿದಿರಿ. ನನಗೆ ಕೂಡ ಅದು ಸುಲಭವಾದ ಕಾರ್ಯವಾಗಿರಲಿಲ್ಲ. ಕಚ್ಚುವುದೇನೋ ಹಾವಿನ ಧರ್ಮವಾದರೂ ಉಪಕಾರಮಾಡಿದವನನ್ನು ಕಚ್ಚಬಹುದೇ ಎಂಬುದು ನನಗೂ ದೊಡ್ಡ ಸಮಸ್ಯೆಯಾಗಿಬಿಟ್ಟಿ ತ್ತು. ಆಗ್ಗ ಹಾವು ಮೊದಲು ಯಾವ ಸ್ಥಿತಿಯಲ್ಲಿತ್ತೋ ನೋಡಬೇಕೆಂದು ಹೇಳಿ, ಅದನ್ನು ಬಿಲದಲ್ಲಿ ಸೇರಿಸಿದೆ... ಅನಂತರ ಆ ಮನುಷ್ಯನನ್ನು ಕುರಿತು "ಹಾವು ಮನುಷ್ಯನನ್ನು ಕಚ್ಚುವುದೇನೋ ನ್ಯಾಯವೆ. ಬೇಕಾದರೆ ನೀನು ಹಾವನ್ನು ಪುನಃ ಬಿಡಿಸಬಹುದು” ಎಂದೆ. ಆಗ ಅವನು ನನ್ನ ತೀರ್ಪನ್ನು ಹೊಗಳುತ್ತಾ ಹೋದನು. ತಾವೂ ನನ್ನ ತೀರ್ಪನ್ನು ಬಹಳವಾಗಿ ಹೊಗಳಿದಿರಿ” ಎಂದು ರಾಯನರಿಯೆಂದಿತು. ಅದಕ್ಕೆ ಸಿಂಹವು “ ಅದಿರಲಿ. ಅದೆಲ್ಲಾ ಹಿಂದಿನ ಮಾತಾಯಿತು. ನೀನು ಈ ದಿನ ಈ ಕಾಗೆಯ ಹೆಂಡತಿಯನ್ನು ಏಕ ಸಾಯಿಸಿಡೆ? ಎಂದು ಕೇಳಿತು. ಅದಕ್ಕೆ ರಾಯನರಿ "" ಮಹಾಸ್ವಾಮಿ, ಆ ವಿಷಯವನ್ನು ಕುರಿತು ಮಾತನಾಡುವುದಕ್ಕಾಗಿಯೇ ನಾನು ಇಲ್ಲಿಗೆ ಬಂದದ್ದು. ನನ್ನ ಮೇಲೆ ಈ ಆರೋಹಣೆ ಬಂದಿದೆಯೆಂದು ತಿಳಿದ ಒಡನೆಯೇ ನಾನು ಇಲ್ಲಿಗೆ ಓಡಿ ಬಂದಿದ್ದೇನೆ. ಹೋದದಿನ ಬೆಳಗ್ಗೆ ಈ ಕಾಗೆ ಪೆಚ್ಚುಮೋರೆ ಹಾಕಿಕೊಂಡು ರಾಯನರಿ ೯ ನನ್ನ ಮನೆಗೆ ಬಂದಿತ್ತು. "ಏಕೆ ದುಃಖಪಡುತ್ತಿರುವೆ?' ಎಂದು ನಾನು ಕೇಳಿದುದಕ್ಕೆ " ನನ್ನ ಹೆಂಡತಿ ಸತ್ತುಹೋದಳು' ಎಂದಿತು. “ಅವಳಿಗೆ ನಾಗಿತು ಸ ಕೇಳಿದೆ. ಅದಕ್ಕೆ ಈ ಕಾಗೆ "ಒಂದು ಹಳಸಿದ ಹೆಗ್ಗಣ ತಿಂದದ್ದು ಮೈ ಗಾಗದೆ ಸತ್ತುಹೋದಳು' ಎಂದಿತು. ಈಗ ಯಾರ ಮಾತನ್ನೋ ಕೇಳಿಕೊಂಡು, ನಾನು ಅವಳನ್ನು ಕೊಂದೆನೆಂದು ಸುಳ್ಳು ಹೇಳುತ್ತಿದೆ. ನಾನೇನಾದರೂ ಹಾಗೆ ಅದನ್ನು ಕೊಂದಿದ್ದಿದ್ದರೆ ನಾನಾಗಿಯೇ ಸನ್ನಿಧಿಗೆ ಬಂದು ಮುಖಶೋರಿಸುತ್ತಿದ್ದೆನೇ ಎಂಬುದನ್ನು ತಾವು ಪರ್ಯಾಲೋಚಿಸಬೇಕು?' ಎಂದಿತು. ಸಿಂಹ ಪರ್ಯಾಲೋಚಿಸಿತು. ಏನು ಉತ್ತರ ಹೇಳುವುದಕ್ಕೂ ಅದಕ್ಕೆ ತೋಚಲಿಲ್ಲ. ಕಡೆಗೆ, ಅದೆಲ್ಲಾ ಸರಿಯೆ. ಆದರೆ ಮೊಲದ ತಲೆಯನ್ನು ಟಗರಿನ ಕೈಯಲ್ಲಿ ಕಳುಹಿಸಿದೆಯಲ್ಲ. ಮೊಲವನ್ನು ಏಕೆ ಕೊಂದೆ??' ಎಂದು ಗರ್ಜಿಸಿತು. ನರಿಯ ಮುಖ ಒಂದು ಗಳಿಗೆ ಮಂಕಾಯಿತು. ಅದರ ಮುಖ ದಲ್ಲಿ ಕಂಡುಬಂದ ತೀವ್ರವಾದ ದುಃಖವನ್ನು ಕಂಡು ಕಾಡಿನ ಪ್ರಾಣಿಗ ಕಿಲ್ಲಾ "ಅಯ್ಯೋ ಪಾಪ ' ಎಂದವು. ಸಿಂಹ ಕೂಡ ನರಿಯ ಮುಖದ ದುಃ ಖವನ್ನು ನೋಡಲಾರದೆ 'ಬೇರೆ ಕಡೆ ತಿರುಗಿಕೊಂಡಿತು. ಆಗ್ಕ ಅಲ್ಲಿ ನೆರೆದಿದ್ದವರ ಮೇಲೆ ತನ್ನ ನಟನೆ ಹೇಗೆ ಪರಿಣಾಮ ವಾಯಿತೆಂಬುದನ್ನು ಕಂಡು, ಜಟ "" ಮಹಾಸ್ವಾಮಿ, ಏನು ಹೇಳಿದಿರಿ? ಟಬ ಮೊಲದ ತಲೆ ತಂದಿತೆ? ಅಯ್ಯೋ, ಮುದ್ದು ಮೊಲವೆ? ನಿನಗೆ ಈ ದುರ್ಮರಣ ಪ್ರಾಪ್ತಿಯಾಯಿತೆ? ಮಹಾಸ್ವಾಮಿ, ಆ ಟಗರನ್ನು ಇಲ್ಲಿ ಕರೆಯಿಸಿರಿ? ನಾನು ಮೂರು ಮಹಾವಸ್ತುಗಳನ್ನು ಒಂದು ಚೀಲದಲ್ಲಿಟ್ಟು ಅದರ ಕೈಯಲ್ಲಿ ಕಳುಹಿಸಿದೆ. ಅದನ್ನು ಅದು ಏನು ಮಾಡಿತೆಂದು ಕೇಳೋಣ?” ಎಂದಿತು. ಅದಕ್ಕೆ ಸಿಂಹ "" ಟಗರಿನ ಕೈಯಲ್ಲಿ ಮೂರು ಮಹಾವಸ್ತುಗಳನ್ನು ಕಳುಶಿಸಿದೆಯ? ತಾನು ತಂದ ಚೀಲದಲ್ಲಿ ತಾನೇ ಬರೆದ ಒಂದು ಪತ್ರ ವಿದೆಯೆಂದು ಟಿಗರು ಹೇಳಿತ್ತು ಆದರೆ ಪತ್ರದ ಬದಲು ಮೊಲದ ತಲೆ ೯೪ ರಾಯನರಿ ಯಿದು ದರಿಂದ್ಕ್ಗ ನಿನ್ನೊ ಡನೆ ಟಿಗರೂ ಸೇರಿ ಮೊಲವನ್ನು ಹೊಂದಿರ ತ; ನಾನು ಟಗರಿನ ತಲೆ ಕಡಿಯಿಸಿಬಿಟ್ಟಿ 2. Rs ಆ ಮಾತು ಕೇಳಿ, ರಾಯನರಿ ಒಂದು ಕೊಡ್ಡ ನಿಟ್ಟುಸಿರು ಬಿಟ್ಟು, «ಅಯ್ಯೋ, ಟಗರೂ ಸತ್ತುಹೋಯಿತೇ! ಎಂತಹ ಅಪಾರವಾದ ನಷ್ಟ ವಾಯಿತು! ಮಹಾಸ್ತ್ವಾಮಿಯವರಿಗಾಗಿ ನಾನು ಕಳುಹಿಸಿದ ಆ ಮೂರು ಮಹಾವಸ್ತುಗಳನ್ನು ಇನ್ನೆಲ್ಲಿ ಹುಡುಕುವುದು? ಆ ಮೂರರಲ್ಲಿ ಒಂದು, ಅಚ್ಚಚಿನ್ನದ ಉಂಗುರ. ಅದರ ಒಳಗಡೆಯಲ್ಲಿ ಮೂರು ಹೆಸರು ಕೆತ್ತಿತ್ತು. ಅದನ್ನು ಹಾಕಿಕೊಂಡವರಿಗೆ ಯಾವ ಯುದ್ಧದಲ್ಲಿಯೂ ಸೋಲಾಗುತ್ತಿರ ಲಿಲ್ಲ ಯಾರಿಂದಲೂ ಪ್ರಾಣಹಾನಿಯಾಗುತ್ತಿರಲಿಲ್ಲ. ಎರಡನೆಯದು, ಒಂದು ಚಿನ್ನದ ಬಾಚಣಿಗೆ. ಅದರ ಪ್ರತಿಯೊಂದು ಹಲ್ಲಿನ ಮೇಲೆಯೂ ರಾಮಾಯಣ ಭಾರತದ ಕಥಾಭಾಗಗಳನ್ನು ಕೆತ್ತಿದ್ದರು. ಅಂತಹ ಬಾಚಣಿಗೆ ಲೋಕದಲ್ಲಿ ಬೇರೊಂದು ಇಲ್ಲ. ನಾನು ಕಳುಹಿಸಿದ ಮೂರ ನೆಯ ಮಹಾವಸ್ತುವೆಂದರ್ಕೆ ಒಂದು ಚಿನ್ನದ ಕನ್ನಡಿ. ಲೋಕದಲ್ಲಿ ನಡೆ ಯುವ ಯಾವ ಸಂಗತಿಯನ್ನಾದರೂ ಅದರೊಳಗೆ ಕಾಣಬಹುದಾಗಿತ್ತು. ಇಂತಹ ಅಮೂಲ್ಯವಾದ ಮೂರು ಮಹಾವಸ್ತುಗಳನ್ನು ಹುಡುಕಿ ತಂದು ತಮಗೆ ಒಪಿ ಸುವ ವರೆಗೂ ನನ್ನ ಮನಸ್ಸಿಗೆ ಸಮಾಧಾನನಿಲ್ಲ. ಪಾಸ, ಅನ್ಯಾಯವಾಗಿ ಸ ಸತ್ತು ಹೋದ ಮೊಲವನ್ನು ಪುನಃ ಬದುಕಿಸುವುದು ಮೃಗಮಾತ್ರವಾದ ನನ್ನಿಂದ ಸಾಧ್ಯವಿಲ್ಲ. ಆದರೂ ಮಹಾಸ್ವಾಮಿ ಯವರಿಗೆಂದು ಕೊಟ್ಟು ಕಳುಹಿಸಿದ ಒಡವೆಗಳನ್ನು ಹುಡುಕಿ ತಂದು ಮಹಾಸ್ವಾಮಿಯವರಿಗೆ ಒಪ್ಪಿ ಫಸುವುದಕ್ಕೆ ನಾನು ನನ್ನ ಜೀವವನ್ನಾದರೂ ಕೊಟ್ಟಿ (ನು? ಎಂದಿತು. ನರಿ ಆಡಿದ ಆ ಮಾತಿಗೆ ಕಾಡಿನ ಮೃಗಗಳೆಲ್ಲ ಮೆಚ್ಚಿ ಕೊಂಡವು. ಸಿಂಹೆವೂ ಮೆಚ್ಚಿಕೊಂಡು, " ನಿನ್ನ ಮಾತು ನನಗೆ ಮಂದಟ್ಟಾಯಿತು, ರಾಯನರಿ. ನಿನ್ನಂತಹ ರಾಜಭಕ್ತನನ್ನು ಪಡೆದಿರುವ ನಾನೇ ಧನ್ಯ. ನಿನ್ನನ್ನು ಇದೊ, ಬಿಡುಗಡೆ ಮಾಡಿರುತ್ತೇನೆ. ನೀನು ಹೋಗಿ, ಆ ಮೂರು ಮಹಾವಸ್ತುಗಳನ್ನು ಹುಡುಕಿ ತಂದು ನಮಗೆ ಒಪ್ಪಿಸಲು ನಾನು ನಿನಗೆ ಅಫ್ಪಣೆಕೊಡುಕ್ತೇನೆ? ಎಂದಿತು., ರಾಯನರಿ ೯೫ ೧೧ ನರಿಯ ನಯವಾದ ಮಾತುಗಳಿಗೆ ಸಿಂಹ ಪುನಃ ಮರುಳಾದು ದನ್ನು ಕಂಡು, ತೋಳ ತಿರುಗಿ ಸ್ರತಿಭಟಿಸಿತು. “ ಮಹಾಸ್ವಾಮಿ, ಈ ರಾಯನರಿಯ ಮಾತನ್ನು ಎಷ್ಟು ಸಲ ನಂಬುವುದು? ಎಷ್ಟು ಸಲ ಇದರ ಮೋಸವನ್ನು ಸಹಿಸುವುದು? ಈ ರಾಯನರಿಯ ಅನೇಕ ಅನ್ಯಾಯ ಗಳಲ್ಲಿ, ಇದುವರೆಗೆ ತಮ್ಮ ಕಿವಿಗೆ ಬೀಳದಿರುವ ಒಂದನ್ನು ತಿಳಿಸುತ್ತೇನೆ, ಲಾಲಿಸಬೇಕು. ಒಂದು ಸಲ ನಾನೂ ಈ ನರಿಯೂ ಕಾಡಿನಲ್ಲಿ ಒಟ್ಟಿಗೆ ಹೋಗುತ್ತಿದ್ದೆವು. ದೂರದಲ್ಲಿ ಒಂದು ಕಾಡುಕುದುರೆ ತನ್ನ ಮರಿ ಯೊಡನೆ ನಿಂತಿತ್ತು. ನನಗೆ ಆಗ ಬಹಳ ಹೆಸಿವಾಗುತ್ತಿತ್ತು. ಆ ಕಾಡು ಕುದುರೆಯ ಮರಿಯನ್ನು ಕೊಂಡುಕೊಂಡು ತಿನ್ನಬೇಕೆಂದು ಆಸೆಯಾ ಯಿತು. ಅದರ ಬೆಲೆಯನ್ನು ಕೇಳಿ ತಿಳಿದುಕೊಂಡು ಬರುವಂತೆ ಈ ನರಿ ಯನ್ನು ಕಳುಹಿಸಿದೆ. ಈ ನರಿ ಹೋಗಿ ಆ ಕಾಡುಕುದುರೆಯ ಹತ್ತಿರ ಏನೇನೋ ಮಾತನಾಡಿಕೊಂಡು ಬಂದ್ಕು " ಕಾಡುಕುದುರೆ ತನ್ನ ಮರಿ ಯನ್ನು ಮಾರಿಬಿಡುತ್ತದಂತೆ. ಬೆಲೆ ದೊಡ್ಡಕುದುರೆಯ ಹಿಂಗಾಲಿನಲ್ಲಿ ಬರೆದಿಡೆಯಂತೆ' ಎಂದಿತು. ನಾನು ಬೆಲೆಯೆಷ್ಟೋ ತಿಳಿಯೋಣವೆಂದು ದೊಡ್ಡ ಕುದುರೆಯ ಹಿಂಗಾಲಿನ ಹತ್ತಿರ ಹೋದಾಗ, ಕುದುರೆ ನನ್ನನ್ನು ಬಲವಾಗಿ ಒದ್ದು ಬಿಟ್ಟತು. ನಾನು ಅಲ್ಲಿಯೇ ಮೂರ್ಛೆ ಬಿದ್ದು ಬಿಟ್ಟಿ. ಆಗ ಈ ನರಿ ಬಂದು "ಏನು ತೋಳ? ಮರಿಯ ಬೆಲೆಯನ್ನು ಸದ್ಯದಲ್ಲಿ ಬರೆದಿದ್ದರೋ? ಗದ್ಯದಲ್ಲಿ ಬರೆದಿದ್ದರೋ?? ಎಂದು ಅಣಕಿಸಿತು? ಎಂದಿತು. « ಅದಕ್ಕೆ ನಾನೇನು ಮಾಡಲಿ, ಮಹಾಪ್ರಭು? ಕಾಡುಕುದುರೆ ಹೇಳಿದ ಮಾತನ್ನು ನಿಜವೆಂದೇ ನಂಬಿ ನಾನು ತೋಳಕ್ಕೆ ತಿಳಿಸಿದೆ. ಅದು ಒದೆಯುವುದೆಂದು _ನಾನೇನು ಕನಸು ಕಂಡಿದ್ದೆನೆ?” ಎಂದು ರಾಯನರಿ ಹೇಳಿತು. ಅದಕ್ಕೆ ತೋಳ. ಪುನಃ "ಅದೂ ಹೋಗಲಿ. ನನ್ನ ಹೆಂಡತಿಗೆ ಮೀನು ಹಿಡಿಯುವುದು ಕಲಿಸುತ್ಲೇನೆಂದು ನೀನು ಕರೆದುಕೊಂಡು ಳಾ ರಾಯನರಿ ಹೋದುದನ್ನು ನಾನು ಇನ್ನೂ ಮರೆತಿಲ್ಲ. ಮಹಾಸ್ವಾಮಿ, ಚಳಿಗಾಲದಲ್ಲಿ ಒಂದು ಬೆಳಗಿನ ಜಾವ ಈ ನರಿ ಮೀನು ಹಿಡಿಯುವುದು ಕಲಿಸುತ್ತೇನೆಂದು ನನ್ನ ಹೆಂಡತಿಯನ್ನು ಕರೆದುಕೊಂಡುಹೋಯಿತು. ಪಾಪ, ಅವಳೂ ಇದರ ಮಾತು ನಂಬಿಕೊಂಡು ಹೋದಳು. ನರಿ ಅವಳನ್ನು ಮಧ್ಯಾಹ್ನದ ವರೆಗೂ ಚಳಿನೀರಿನಲ್ಲಿ ನಿಲ್ಲಿಸಿಬಿಟ್ಟು, ಮೂರು ತಿಂಗಳ ಕಾಲ ಅವಳಿಗೆ ನೆಗಡಿ ಬರುವಂತೆ ಮಾಡಿತ್ತು” ಎಂದಿತು. ರಾಯನರಿ ಅದಕ್ಕೂ ಉತ್ತರ ಹೇಳಬೇಕೆಂದು ಎದ್ದಿತು. ಆದರೆ ಅಷ್ಟರಲ್ಲೆ ತೋಳದ ಹೆಂಡತಿ ಮುಂದೆ ಬಂದ್ರು “ಸುಮ್ಮನೆ ಬಾಯಿ ಬಡಿಯಬೇಡ್ಕ ರಾಯನರಿ. ನೀನು ಮಾಡಿದ ಇನ್ನೊಂದು ಅನ್ಯಾಯ ವನ್ನು ನಾನು ಹೇಳುತ್ತೇನೆ. ಆ ದಿವಸ ಬಾವಿಯ ಬಳಿ ನಡೆದುದನ್ನು ಮರೆತುಬಿಟ್ಟಿ ಯೇನು? ಬಾವಿಯ ರಾಟಿಯಮೇಲೆ ಒಂದು ಹಗ್ಗ ವಿತ್ತು, ಆ ಹಗ್ಗದ ಎರಡು ಕೊನೆಗೂ ಎರಡು ಬಾನಿ ಕಟ್ಟಿತ್ತು. ಒಂದು ಭಾನಿ ಕೆಳಗೆ ಹೋದರೆ, ಇನ್ನೊಂದು ಮೇಲೆ ಬರುತ್ತಿತ್ತು. ಆ ದಿವಸ ನಾನು ಅಲ್ಲಿ ಬಂದಾಗ ನೀನು ಕೆಳಗಿನ ಬಾನಿಯಲ್ಲಿ ಕುಳಿತು ನರಳುತ್ತಿದ್ದೆ. ನನ್ನನ್ನು ಕಂಡು "ಕಳಗಡೆ ಮೀನು ಹಿಡಿದು ತಿನ್ನುತ್ತಿದ್ದೇನೆ' ಎಂದೆ. "ನಾನೂ ಬರಲೆ? ಎಂದು ನಾನು ಕೇಳಿದಾಗ, "ಮೇಲಿನ ಬಾನಿಗೆ ದುಮುಕು' ಎಂದು ನೀನು ಹೇಳಿದೆ. ನಿನ್ನ ಮಾತು ನಂಬಿಕೊಂಡು ನಾನೂ ಮೇಲಿನ ಬಾನಿಗೆ ದುಮುಕಿದೆ. ನಾನು ನಿನಗಿಂತ ಹೆಚ್ಚು ಭಾರವಾದ್ದರಿಂದ ನಾನು ಕುಳಿತಿದ್ದ ಬಾನಿ ಕೆಳಗೆ ಇಳಿಯಿತು, ನೀನು ಕುಳಿತಿದ್ದ ಬಾನಿ ಮೇಲೆ ಬಂದಿತು. ಆಗ ನೀನು ಆ ಬಾನಿಯಿಂದ ಹಾರಿ ಓಡಿಹೋದೆ. ನಾನು ಎರಡು ದಿವಸ ಆ ಬಾನಿಯಲ್ಲಿಯೇ ಇರಬೇಕಾಯಿತು” ಎಂದಿತು. ಆಮೇಲೆ ತೋಳ ನರಿಯನ್ನು ಕುರಿತು ನೀನು ನಮಗೆ ಅನೇಕ ಸಲ ಮೋಸಮಾಡಿದ್ದೀಯೆ. ನಮ್ಮನ್ನು ಅನೇಕ ಸಲ ಅಣಕಿಸಿದ್ದೀಯೆ. ನಮಗೂ ನಿನ್ನ ನೀಡೆಯನ್ನು ಸಹಿಸಿ ಸಹಿಸಿ ಸಾಕಾಗಿದೆ. ಇನ್ನುಮುಂದೆ ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಮಾತ್ರ ಬದುಕಿರಬೇಕು. ಥಿನ್ನಂ ತಹೆ ಕಸಟಿಯೂ ವಿಶ್ವಾಸಘಾತಕನೂ ಬೇರೊಬ್ಬರಿಲ್ಲವೆಂದು ಜಗತ್ತಿಗೆ ರಾಯನರಿ ೯೭ ತೋರಿಸುವುದಕ್ಕಾಗಿ ನಾನು ನಿನ್ನೊಡನೆ ನಾಳೆ ರಾಜನ ಎದುರಿಗೆ ಮಲ್ಲಯುದ್ಧಮಾಡಲು ಸಿದ್ದನಾಗಿದ್ದೇನೆ. ನ್ಯಾಯವು ನಿನ್ನ ಕಡೆ ಇದೆ ಯೆಂಬ ಧೈರ್ಯ ನಿನಗೆ ಇದ್ದರೆ ನಾಳೆ ಮಲ್ಲಯುದ್ಧಕ್ಕೆ ಒಪ್ಪಿಕೊ ಎಂದು ಮಲ್ಲಯುದ್ದ ಕ್ಪೈ ಕರೆಯಿತು. ನರಿಯೂ ಹಾಗೆಯೆ ಆಗಲೆಂದು ಒಪ್ಪಿತು. ಮಾರನೆಯ ದಿವಸ ನಂಹದೆ ಎದುರಿಗೆ ತೋಳನಿಗೂ ರಾಯನರಿಗೂ ಮಲ್ಲಯುದ್ಧವಾಗ ಬೇಕೆಂದು ನಿಶ್ಚಯವಾಯಿತು. ೧೨ ರಾಯನರಿ ಅದೇ ರಾತ್ರಿ ಹೋಗಿ ತನ್ನ ಮೈಮೇಲಿನ ಕೂದಲ ನ್ನೆಲ್ಲಾ ನುಣ್ಣಗೆ ಬೋಳಿಸಿಬಿಟ್ಟತು. ಮಾರನೆಯ ಬೆಳಗ್ಗೆ ಮೈಗೆಲ್ಲಾ ಚೆನ್ನಾಗಿ ಎಣ್ಣೆ ಬಳಿದುಕೊಂಡು ಮಲ್ಲಯುದ್ಧಕ್ಕೆ ಸಿದ್ದವಾಗಿ ಬಂದು ನಿಂತುಕೊಂಡಿತು. ಮಲ್ಲಯುದ್ಧ ಮೊದಲಾಯಿತು. ತೋಳ ನರಿಯನ್ನು ಹಿಡಿಯಬೇಕೆಂದಾಗಲೆಲ್ಲಾ ನರಿ ಅದರ ಹಿಡಿತದಿಂದ ನುಣಿಚಿಕೊಳ್ಳು ತ್ತಿತ್ತು. ನರಿಯ ಬಾಲವನ್ನು ಹಿಡಿಯ ಬೇಕೆಂದು ತೋಳ ಕ್ಸ ಚಾಚಿದರೆ, ನರಿ ತನ್ನ ಬಾಲವನ್ನು ಹಿಂಗಾಲುಗಳ ಮಧ್ಯ ಸಿಕ್ಕಿಸಿಕೊಂಡು ಅಖಾಡದ ಸುತ್ತಲೂ ಓಡುತ್ತಿತ್ತು. ತೋಳ ತನ್ನ ಬೆನ್ನಟ್ಟಬಂದರೆ, ನರಿ ತನ್ನ ಹಿಂಗಾಲುಗಳಿಂದ ದೂಳು ಎಬ್ಬಿಸಿಬಿಡು ತ್ತಿತ್ತು. ತೋಳದ ಕಣ್ಣುತುಂಬ ದೂಳು ತುಂಬಿಕೊಂಡುಬಿಡುತ್ತಿತ್ತು. ತೋಳ ಕಣ್ಣುಜ್ಜಿ ಕೊಳ್ಳಲು ನಿಂತಾಗ, ನರಿ ಅದರ ತಲೆಯ ಮೇಲೆ ಪಟಸಟಪಟಪಟಿಯೆಂದು ಕುಟ್ಟಿ ಬಿಡುತ್ತಿತ್ತು. ತೋಳ ಪುನಃ ನರಿಯನ್ನು ಅಟ್ಟ ಸಿಕೊಂಡುಹೋಗುತ್ತಿತ್ತು. ಹೀಗೆಯೇ ಬಹಳ ಹೊತ್ತು ನಡೆಯಿತು. ಕಡೆಗೆ ತೋಳದ ಸಿಟ್ಟು ಮಿತಿಮಾರಿತು. ತೋಳ ಸಮಯ ನೋಡಿಕೊಂಡಿದ್ದು ರಾಯರರಿಗೆ ಒಂದು ಬಲವಾಗಿ ಅಪ್ಪಳಿಸಿತು. ರಾಯನರಿಗೂ ಆ ಏಟು ತಡೆಯಲಾಗ ಲಿಲ್ಲ. ಅದು ದೊಪ್ಪನೆ ಕೆಳಗೆ ಬಿದ್ದು ಬಿಟ್ಟಿತು. ತೋಳ್ಕ ಅದು ಏಳ ಲಾಗದಂತೆ ಅದರ ಮೇಲೆ ಮಲ್ಪಗಿಕೊಂಡುಬಿಟ್ಟಿ ತು. ೪೮ ರಾಯನರಿ ಕೊಂಚಹೊತ್ತಿನಲ್ಲಿಯೇ ರಾಯನರಿಗೆ ಮೂರ್ಛೆ ತಿಳಿಯಿತು. ತನ್ನ ಮೇಲೆ ತೋಳ ಕುಳಿತುಬಿಟ್ಟಿದ್ದುದನ್ನು ಅದು ಕಂಡಿತು. ಹೇಗಾದರೂ ಉಪಾಯದಿಂದ ತಪ್ಪಿಸಿಕೊಳ್ಳ ಬೇಕೆಂದು "ಅಯ್ಯಾ, ನಾನೂ ನೀನೂ ಬಹಳ ವರ್ಷಗಳಿಂದ ಸ್ಟೇಹಿತರಲ್ಲವೆ? ಇನ್ನುಮುಂದೆಯೂ ಹಾಗೆಯೆ ಇರೋಣ. ಈಯೊಂದು ಸಲ ನನ್ನನ್ನು ಕ್ಷಮಿಸಿಬಿಡು. ಇನ್ನುಮುಂದೆ ನಾನು ಏನು ಕದ್ದು ತಂದರೂ ನಿನಗೆ ಮೊದಲು ಅರ್ಥ ಒಪ್ಪಿಸುತ್ತೇನೆ. ನಿನ್ನ ಮನೆಯಲ್ಲಿ ಮುಸುರೆ ತಿಕ್ಕುವುದಕ್ಕೆ ನನ್ನ ಹೆಂಡತಿಯನ್ನು ಕಳಿಸು ತ್ತೇನೆ. ನನ್ನ ಮಕ್ಕಳು ಬಂದು ನಿನ್ನ ಮನೆಯಲ್ಲಿ ಕಸ ಗುಡಿಸುತ್ತಾರೆ. ನಾನು ನಿನ್ನ ಮನೆಗೆ ನೀರು ಹೊತ್ತುಹಾಕುತ್ತೇನೆ. ಈಯೊಂದು ಸಲ ನನ್ನನ್ನು ಕ್ಷಮಿಸು? ಎಂದು ಬೇಡಿಕೊಂಡಿತು. ನರಿಯನ್ನು ಮೆಟ್ಟಿ ಬಿಟ್ಟೆ ನೆಂದು ತೋಳ ಹೆಮ್ಮೆಯಿಂದ ಕೊಂಚ ಕೊಂಚವಾಗಿ ಮೈಮರೆಯುತ್ತಿತ್ತು. ಅದನ್ನೇ ಕಾಯುತ್ತಿದ್ದ ರಾಯನರಿ ತಟಕ್ಕನೆ ತಿರುಗಿ ಅದರ ಕತ್ತಿನಬಳಿ ಕಚ್ಚಿ ಹಿಡಿದು ಅಖಾಡದ ಸುತ್ತಲೂ ಅದನ್ನು ಎಳೆದೂ ಎಳೆದೂ ಸಾಯಿಸಿಬಿಟ್ಟಿ ತು. ಮಲ್ಲಯುದ್ಧದಲ್ಲಿ ರಾಯನರಿಯೇ ಗೆದ್ದುಬಂದಿತು. ೧೩ ದೇಹಬಲದಲ್ಲಿ ಅಷ್ಟು ದೊಡ್ಡದಲ್ಲದಿದ್ದರೂ ತನ್ನ ಬುದ್ಧಿಬಲದಿಂದ ರಾಯನರಿ ಗೆದ್ದು ಬಂದುದನ್ನು ಗಮನಿಸಿ, ಮೃಗರಾಜನಾದ ಸಿಂಚವು, ಅದನ್ನು ಮನ್ನಿಸಿ ತನ್ನ ಮಂತ್ರಿಯನ್ನಾಗಿ ಮಾಡಿಕೊಂಡಿತು. '' ಅಂದಿ ನಿಂದ ರಾಯನರಿಯ ಮೇಲೆ ದೂರು ತರುವ ಥೈರ್ಯ ಯಾವ ಪ್ರಾಣಿಗೂ. ಉಂಟಾಗಲಿಲ್ಲ. ರಾಯನರಿ ಕಾಡಿನ ರಾಯನಿಗಿಂತ ತಾನೇ ಒಂದು ಕ್ಸ ಮೇಲಾಗಿ ತನ್ನ ಹೆಂಡತಿ ಮಕ್ಕಳೊಡನೆ ಸುಖವಾಗಿ ಇತ್ತು.